ಆಗ್ರಾ(ಡಿ.12): ತನ್ನ ಅಪ್ಪನ ಹೆಜ್ಜೆ ಗುರುತುಗಳಲ್ಲಿ ಸಾಗಿ ತಾನೂ ಕೂಡ ಭಾರತೀಯ ವಾಯುಸೇನೆಯ ಪೈಲಟ್ ಆಗುವುದಾಗಿ ಐಎಎಫ್ ಹೆಲಿಕಾಪ್ಟರ್‌ನ ದುರಂತದಲ್ಲಿ ಮಡಿದ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್( Prithvi Singh Chauhan) ಅವರ 12 ವರ್ಷದ ಪುತ್ರಿ ಹೇಳಿದ್ದಾಳೆ. ಇತ್ತೀಚೆಗೆ ಡಿಸೆಂಬರ್ 8 ರಂದು ತಮಿಳುನಾಡಿನ ಕರೂರಿನಲ್ಲಿ ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್ ದುರಂತಕ್ಕೀಡಾಗಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಜನ ವಾಯುಸೇನೆಯ ವೀರ ಯೋಧರು ದುರಂತ ಸಾವಿಗೀಡಾಗಿದ್ದರು. ಇಲ್ಲಿಯ ತಾಜ್‌ಗಂಜ್ ಸ್ಮಶಾನದಲ್ಲಿ ತನ್ನ ಕುಟುಂಬ ಸದಸ್ಯರ ಸಮ್ಮುಖದಲ್ಲಿ ತನ್ನ ಸಹೋದರ 7 ವರ್ಷದ ಅವಿರಾಜ್(Aviraj) ಮತ್ತು ಸೋದರ ಸಂಬಂಧಿ ಪುಷ್ಪೇಂದ್ರ ಸಿಂಗ್ ಜೊತೆಗೆ ತನ್ನ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಬಳಿಕ ಮಾತನಾಡಿದ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಪುತ್ರಿ ಆರಾಧ್ಯ(Aradhya) ತಾನು ಕೂಡ ತಂದೆಯ ಮಾರ್ಗದಲ್ಲಿ ನಡೆದು ವಾಯುಸೇನೆ ಸೇರಿ ಪೈಲಟ್ ಆಗುವುದಾಗಿ ಹೇಳಿದರು.
ಪ್ರಸ್ತುತ ಆರಾಧ್ಯ 7ನೇ ತರಗತಿಯಲ್ಲಿ ಓದುತ್ತಿದ್ದಾಳೆ. ನನ್ನ ತಂದೆ ನನಗೆ ಅಂಕಗಳ ಬೆನ್ನು ಹತ್ತದೆ ಓದಿನತ್ತ ಗಮನಹರಿಸು ಎಂದು ಸಲಹೆ ನೀಡುತ್ತಿದ್ದರು. ನಾನು ಅಧ್ಯಯನದತ್ತ ಗಮನಹರಿಸಿದರೆ ಅಂಕಗಳು ತಾನಾಗಿಯೇ ಬರುವುದು ಎಂದು ಅವರು ನಂಬಿದ್ದರು, ಎಂದು ಆರಾಧ್ಯ ಹೇಳಿದರು. ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಅವರ ಕುಟುಂಬವು 2006 ರಲ್ಲಿ ಮಧ್ಯಪ್ರದೇಶದ(Madhya Pradesh) ಗ್ವಾಲಿಯರ್(Gwalior)ನಿಂದ ಆಗ್ರಾ(Agra)ಕ್ಕೆ ವಲಸೆ ಬಂದಿತ್ತು. ಪೃಥ್ವಿ ಅವರ ಅಂತ್ಯ ಸಂಸ್ಕಾರದ ವೇಳೆ ಸರ್ಕಾರಿ ಅಧಿಕಾರಿಗಳಲ್ಲದೇ ನೂರಾರು ಜನ ಸೇರಿ ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. 2000 ನೇ ಇಸವಿಯಲ್ಲಿ ಸೇವೆಗೆ ಸೇರಿದ್ದ ಪೃಥ್ವಿರಾಜ್ ದುರಂತ ನಡೆದಂದು ಕಾರ್ಯ ನಿಮಿತ್ತ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಬಿಪಿನ್ ರಾವತ್ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ತಮಿಳುನಾಡಿನ ಕೊಯಂಬತ್ತೂರಿನಿಂದ ಹೊರಟಿದ್ದರು.
Vijay Parv: ಹುತಾತ್ಮ ಬಿಪಿನ್ ರಾವತ್ ಕೊನೇ ವಿಡಿಯೋ ವೈರಲ್, ಯೋಧರಿಗೆ ಕೊಟ್ಟಿದ್ರು ಸಂದೇಶ!
ಈ ದುರಂತ ನಡೆಯುವ ವೇಳೆ ಐಎಎಫ್ ಹೆಲಿಕಾಪ್ಟರ್‌ನಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್(Bipin Rawat,), ಪತ್ನಿ ಮಧುಲಿಕಾ ರಾವತ್(Madhulika Rawat), ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ , ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್(Brigadier LS Lidder), ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್(Lieutenant Colonel Harjinder Singh), ಸ್ಕಾಡ್ರಾನ್ ಲೀಡರ್ ಕೆ ಸಿಂಗ್(Squadron Leader K Singh), JWO ದಾಸ್, JWO ಪ್ರದೀಪ್ ಎ, ಹವಿಲ್ದಾರ್ ಸತ್ಪಾಲ್ ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್(Lance Naik Vivek Kumar) ಹಾಗೂ ಲ್ಯಾನ್ಸ್ ನಾಯಕ್ ಸಾಯಿ ತೇಜ್ ವಾಯು ಸೇನೆಯ Mi-17V5 ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದಿದ್ದಾರೆ. ಅಪಘಾತದಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್(Group Captain Varun Singh). ಆದರೆ ತೀವ್ರವಾಗಿ ಗಾಯಗೊಂಡಿರುವ ವರುಣ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ತಮಿಳುನಾಡಿನ ಮಿಲಿಟರಿ ಆಸ್ಪತ್ರೆಯಿಂದ ವರುಣ್ ಸಿಂಗ್ ಅವರನ್ನು ಬೆಂಗಳೂರಿನ(Bengaluru) ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನೆ ಬಳಿಕ ಇದೀಗ ಹೆಲಿಕಾಪ್ಟರ್ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಟೇಕಾಫ್ ಆಗುವ ಮುನ್ನವೇ ಆ ಮಾರ್ಗದಲ್ಲಿ ವಿಚಕ್ಷಣಾ ವಿಮಾನಗಳನ್ನು ವಾಯುಪಡೆ ಕಳುಹಿಸಿದೆಯೇ ಎಂಬ ಚರ್ಚೆ ಆರಂಭವಾಗಿದೆ. ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ ಹದಿನಾಲ್ಕು ಮಂದಿ ಇದ್ದ ಹೆಲಿಕಾಪ್ಟರ್ ಟೇಕಾಫ್ ಆಗುವ ಮೊದಲು ಆ ಮಾರ್ಗದಲ್ಲಿ ಐಎಎಫ್‌ನ ಶೋಧ ವಿಮಾನವನ್ನು ಕಳುಹಿಸಲಾಗಿತ್ತು ಎಂದು ಸೂಲೂರ್ ಬೇಸ್ ಹೇಳುತ್ತದೆ.
IAF Helicopter Crash: ನನ್ನ ಮಗ ಗೆದ್ದು ಬರುತ್ತಾನೆ: ಕ್ಯಾ ವರುಣ್ ತಂದೆ ವಿಶ್ವಾಸ
ಪ್ರೋಟೋಕಾಲ್ ಪ್ರಕಾರ ನೀಲಗಿರಿಯ ಹವಾಮಾನ ಪರೀಕ್ಷೆಗಾಗಿ ಐಎಎಫ್‌ನ ಎರಡು ಹೆಲಿಕಾಪ್ಟರ್‌ಗಳನ್ನು ಮಾರ್ಗವನ್ನು ಅನ್ವೇಷಿಸಲು ಕಳುಹಿಸಲಾಗಿದೆ ಎಂದು ಸೂಲೂರು ವಾಯುನೆಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಲಿಕಾಪ್ಟರ್ ಪತನದ ಬಗ್ಗೆ ಮಾತನಾಡಿದ ಅಧಿಕಾರಿ, ಈ ಹೆಲಿಕಾಪ್ಟರ್‌ಗಳು ವೆಲ್ಲಿಂಗ್ಟನ್ ಹೆಲಿಪ್ಯಾಡ್‌ನಲ್ಲಿ ಇಳಿದಿವೆಯೇ ಅಥವಾ ಇಳಿಯದೆ ಹಿಂತಿರುಗಿವೆಯೇ ಎಂದು ನಮಗೆ ಖಚಿತವಿಲ್ಲ ಎಂದಿದ್ದಾರೆ. ಆದರೆ ಈ ಮಾತಿಗೆ ವ್ಯತಿರಿಕ್ತವಾಗಿ, ಮದ್ರಾಸ್ ರೆಜಿಮೆಂಟಲ್ ಸೆಂಟರ್‌ನ ಹಿರಿಯ ಸೇನಾಧಿಕಾರಿಯೊಬ್ಬರು ಎಂಐ -17 ವಿಶ್ವಾಸಾರ್ಹ ಹೆಲಿಕಾಪ್ಟರ್ ಆಗಿರುವುದರಿಂದ, ಸಣ್ಣ ಹೆಲಿಕಾಪ್ಟರ್‌ಗಳಿಂದ ಪ್ರಾಯೋಗಿಕವಾಗಿ ಯಾವುದೇ ಪ್ರಯೋಗವನ್ನು ನಡೆಸಲಾಗಿಲ್ಲ. ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ