ರೈಲು ಸಿಕಂದರಾಬಾದ್‌ನಿಂದ ಬೆಳಿಗ್ಗೆ 11.30 ಕ್ಕೆ ಹೊರಡುತ್ತದೆ ಮತ್ತು ರಾತ್ರಿ 9 ಗಂಟೆಗೆ ತಿರುಪತಿ ರೈಲು ನಿಲ್ದಾಣ ತಲುಪಲಿದೆ. ಸಿಕಂದರಾಬಾದ್-ತಿರುಪತಿ ರೈಲು ಎರಡು ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡಲಿದ್ದು, 10 ನಿಲುಗಡೆಗಳನ್ನು ಹೊಂದಲಿದೆ.
ಹೈದರಾಬಾದ್ (ಏಪ್ರಿಲ್ 8, 2023): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಿಕಂದರಾಬಾದ್ ಹಾಗೂ ತಿರುಪತಿ ನಡುವೆ ನೂತನ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ಮೂಲಕ ವೆಂಕಟೇಶ್ವರನ ದರ್ಶನ ಮಾಡುವರಿಗೆ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಅವರು ವಿವಿಧ 11 ಸಾವಿರ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ‍್ಯಕ್ರಮಗಳಿಗೂ ಚಾಲನೆ ನೀಡಲಿದ್ದಾರೆ.
ಈ ಪೈಕಿ ಸಿಕಂದರಾಬಾದ್‌ನಲ್ಲಿ (Secunderabad) 720 ಕೋಟಿ ವೆಚ್ಚದ ರೈಲು ನಿಲ್ದಾಣದ (Railway Station) ಪುನರಾಭಿವೃದ್ಧಿಗೆ (Renovation) ಶಂಕುಸ್ಥಾಪನೆ ನಡೆಸಲಿದ್ದಾರೆ. ಬಳಿಕ ಸಿಕಂದರಾಬಾದ್ - ಮಹಬೂಬ್‌ನಗರ (Mahbubnagar) ನಡುವಿನ 84 ಕಿ.ಮೀ. ವಿದ್ಯುದೀಕೃತ ಜೋಡಿ ಮಾರ್ಗ ಲೋಕಾರ್ಪಣೆಗೊಳಿಸಲಿದ್ದಾರೆ. ನಂತರ ಬೀಬಿನಗರದಲ್ಲಿ ಏಮ್ಸ್ ಆಸ್ಪತ್ರೆಗೆ (AIIMS Hospital) ಗುದ್ದಲಿ ಪೂಜೆ ನೆರವೇರಿಸಿ, 7850 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ (National Highway) ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಇದನ್ನು ಓದಿ: 100 ಕಿ.ಮೀ. ದೂರದ ನಗರಗಳ ಮಧ್ಯೆ ವಂದೇ ಮೆಟ್ರೋ ರೈಲು: ಬೆಂಗಳೂರು, ತುಮಕೂರು, ರಾಮನಗರಕ್ಕೆ ಲಭ್ಯ..?
ಹೈದರಾಬಾದ್ ಭೇಟಿ ನಂತರ ಅವರು ತಮಿಳುನಾಡಿಗೆ ಭೇಟಿ ನೀಡಲಿದ್ದು, ಅಲ್ಲಿ 2400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಏರ್‌ಪೋರ್ಟ್‌ನ (Airport) ಹೊಸ ಟರ್ಮಿನಲ್ (Terminal) ಉದ್ಘಾಟಿಸಲಿದ್ದಾರೆ. ಬಳಿಕ, ಸಂಜೆ ಮೈಸೂರಿಗೆ (Mysuru) ತೆರಳಿ ಅಲ್ಲಿಯೇ ತಂಗಲಿದ್ದಾರೆ.
ಈ ಹಿನ್ನೆಲೆ ಭಾರತೀಯ ರೈಲ್ವೆ ಶೀಘ್ರದಲ್ಲೇ ಭಾರತದಲ್ಲಿ 13 ವಂದೇ ಭಾರತ್ ರೈಲುಗಳನ್ನು (Vande Bharat Train) ನಿರ್ವಹಿಸಲಿದೆ. ಭೋಪಾಲ್-ನವದೆಹಲಿ ಮಾರ್ಗದಲ್ಲಿ ಪ್ರಧಾನಮಂತ್ರಿಯವರು (Prime Minister) ಇತ್ತೀಚಿನ ವಂದೇ ಭಾರತ್ ರೈಲನ್ನು ಹಸಿರು ನಿಶಾನೆ ಕೊಟ್ಟಿದ್ದ ಒಂದು ವಾರದ ನಂತರ ಹೊಸ ಮಾರ್ಗದಲ್ಲಿ ರೈಲಿನ ಉದ್ಘಾಟನೆಯಾಗಿದೆ. ಈ ಹೊಸ ರೈಲಿನೊಂದಿಗೆ ಪ್ರಧಾನಮಂತ್ರಿಯವರು ದಕ್ಷಿಣ ಭಾರತದ ಎರಡನೇ ವಂದೇ ಭಾರತವನ್ನು ಚೆನ್ನೈ - ಕೊಯಮತ್ತೂರು ಮಾರ್ಗದಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಈ ಹೊಸ ರೈಲುಗಳು ಭಾರತದ ಸುಧಾರಿತ ರೈಲುಗಳ 12 ಮತ್ತು 13 ನೇ ಯೂನಿಟ್ ಆಗಿದೆ.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ಕಳಪೆ ಆಹಾರ ಪೂರೈಕೆ ಬಗ್ಗೆ ದೂರು: ನೆಟ್ಟಿಗರ ಆಕ್ರೋಶ; IRCTC ಪ್ರತಿಕ್ರಿಯೆ
ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ನಲ್ಗೊಂಡ, ಗುಂಟೂರು, ಓಂಗೋಲ್ ಮತ್ತು ನೆಲ್ಲೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದ್ದು, ನಗರಗಳ ನಡುವೆ 660 ಕಿಮೀ ಪ್ರಯಾಣವನ್ನು ಒಳಗೊಂಡಿದೆ. ಆದರೆ, ಉದ್ಘಾಟನಾ ರೈಲಿನ ಮಾರ್ಗವು ವಿಭಿನ್ನವಾಗಿರುತ್ತದೆ. ಈ ಮಾರ್ಗದ ಮೊದಲ ರೈಲು ನಲ್ಗೊಂಡ, ಮಿರ್ಯಾಲಗುಡ, ಪಿದುಗುರಳ್ಳ, ಗುಂಟೂರು, ತೆನಾಲಿ, ಬಾಪಟ್ಲ, ಚಿರಾಲ, ಓಂಗೋಳೆ, ನೆಲ್ಲೂರು ಮತ್ತು ಗುಡೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.
ರೈಲು ಸಿಕಂದರಾಬಾದ್‌ನಿಂದ ಬೆಳಿಗ್ಗೆ 11.30 ಕ್ಕೆ ಹೊರಡುತ್ತದೆ ಮತ್ತು ರಾತ್ರಿ 9 ಗಂಟೆಗೆ ತಿರುಪತಿ ರೈಲು ನಿಲ್ದಾಣ ತಲುಪಲಿದೆ. ಸಿಕಂದರಾಬಾದ್-ತಿರುಪತಿ ರೈಲು ಎರಡು ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡಲಿದ್ದು, 10 ನಿಲುಗಡೆಗಳನ್ನು ಹೊಂದಲಿದೆ. ಈ ರೈಲು 8 ಗಂಟೆ 30 ನಿಮಿಷಗಳ ಅವಧಿಯಲ್ಲಿ 660.77 ಕಿಲೋಮೀಟರ್‌ಗಳನ್ನು ಕ್ರಮಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ರೈಲು ಮೊದಲಿಗಿಂತ 3 ಗಂಟೆ 20 ನಿಮಿಷ ವೇಗವಾಗಿ ಚಲಿಸುತ್ತಿದೆ.
ಇದನ್ನೂ ಓದಿ: ಬರಲಿದೆ 220 ಕಿಮೀ ವೇಗದ ವಂದೇ ಭಾರತ್ ರೈಲು: ಭಾರತದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆ