ಕ್ರೈಸ್ತ ಮಿಷನರಿಗಳಿಗಿಂತ ದಕ್ಷಿಣದ ಹಿಂದು ಶ್ರೀಗಳ ಸೇವೆ ಅಧಿಕ: ಮೋಹನ್‌ ಭಾಗವತ್‌

By Kannadaprabha News  |  First Published Apr 8, 2023, 5:42 AM IST

ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಕ್ರೈಸ್ತ ಮಿಷನರಿಗಳಿಗಿಂತ ದಕ್ಷಿಣ ಭಾರತದ ರಾಜ್ಯಗಳ ಹಿಂದೂ ಸ್ವಾಮೀಜಿಗಳೇ ಜನರಿಗೆ ಹೆಚ್ಚಿನ ಸೇವೆ ಒದಗಿಸಿದ್ದಾರೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. 


ಜೈಪುರ (ಏ.08): ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಕ್ರೈಸ್ತ ಮಿಷನರಿಗಳಿಗಿಂತ ದಕ್ಷಿಣ ಭಾರತದ ರಾಜ್ಯಗಳ ಹಿಂದೂ ಸ್ವಾಮೀಜಿಗಳೇ ಜನರಿಗೆ ಹೆಚ್ಚಿನ ಸೇವೆ ಒದಗಿಸಿದ್ದಾರೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಇಲ್ಲಿ ನಡೆದ ಆರ್‌ಎಸ್‌ಎಸ್‌ನ ರಾಷ್ಟ್ರೀಯ ಸೇವಾ ಸಂಗಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ‘ಸೇವೆಯು ಆರೋಗ್ಯಕರ ಸಮಾಜವನ್ನು ರೂಪಿಸಲು ಸಾಧ್ಯವಾಗುತ್ತದೆ. ಸಮಾಜದ ಯಾವುದೇ ವರ್ಗ ವಂಚಿತವಾಗಿದ್ದರೆ ದೇಶದ ಒಳಿತಿಗಾಗಿ ಆ ವರ್ಗವನ್ನು ಎತ್ತಿ ಹಿಡಿಯಬೇಕು. ಸೇವೆ ಎಂದ ತಕ್ಷಣ ದೇಶದ ಬುದ್ಧಿಜೀವಿಗಳು ಮಿಷನರಿಗಳನ್ನು ಉಲ್ಲೇಖಿಸುತ್ತಾರೆ. 

ಮಿಷನರಿಗಳು ಪ್ರಪಂಚಾದ್ಯಂತ ಶಾಲೆ, ಆಸ್ಪತ್ರೆ ಸೇರಿದಂತೆ ಅನೇಕ ಸಂಸ್ಥೆಗಳನ್ನು ನಡೆಸುತ್ತಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಹಿಂದೂ ಸಮುದಾಯ ಏನು ಮಾಡುತ್ತಿದೆ? ದಕ್ಷಿಣ ರಾಜ್ಯಗಳ ಹಿಂದೂ ಸ್ವಾಮೀಜಿಗಳು ಮಿಷನರಿಗಳಿಗಿಂತ ಹೆಚ್ಚು ಸೇವೆ ಮಾಡಿದ್ದಾರೆ’ ಎಂದರು. ‘ಚೆನ್ನೈಯಲ್ಲಿ ಹಿಂದೂ ಸೇವಾ ಮೇಳವನ್ನು ಆಯೋಜಿಸಲಾಯಿತು. ಈ ವೇಳೆ ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆ ಮಾತನಾಡುವ ಪ್ರಾಂತ್ಯಗಳಲ್ಲಿ ಹಿಂದೂ ಮುನಿಗಳು, ಆಚಾರ್ಯರು, ಸನ್ಯಾಸಿಗಳ ಸಮಾಜ ಸೇವೆ ಮಿಷನರಿಗಳಿಂತ ಹಲವು ಪಟ್ಟು ಹೆಚ್ಚಿದೆ ಎಂಬುದು ತಿಳಿದು ಬಂದಿದೆ. 

Tap to resize

Latest Videos

ಆದರೆ ಅವರು ಹೆಚ್ಚು, ಇವರು ಹೆಚ್ಚು ಎಂದು ನಾನು ಯಾವುದೇ ಸ್ಪರ್ಧೆಯ ಬಗ್ಗೆ ಮಾತನಾಡುತ್ತಿಲ್ಲ. ಇದು ಸೇವೆಯ ಅಳತೆಗೋಲಾಗದು. ಸೇವೆ ಎಂಬುದು ಸೇವೆ. ಸೇವೆ ಯಾವುದೇ ಸ್ಪರ್ಧೆಯ ವಿಷಯವಲ್ಲ. ಸೇವೆ ಎಂಬುದು ಮನುಷ್ಯನ ನೈಸರ್ಗಿಕ ಭಾವನೆಯಾಗಿದೆ’ ಎಂದರು. ಅಲ್ಲದೇ ‘ನಾವೆಲ್ಲರೂ ಸಮಾದ ಭಾಗ. ನಾವೆಲ್ಲರೂ ಸೇರಿ ಸಮಾಜ. ನಾವೆಲ್ಲ ಒಗ್ಗಟ್ಟಾಗಿಲ್ಲವೆಂದರೆ ನಾವು ಅಪೂರ್ಣ. ಸಮಾಜದಲ್ಲಿ ಅನಗತ್ಯವಾದ ತಾರತಮ್ಯವಿದೆ. ದುರದೃಷ್ಟವಶಾತ್‌ ನಮಗೆ ಈ ಪರಿಸ್ಥಿತಿ ಬಂದಿದ್ದು, ಇದು ಮತ್ತು ಅಸಮಾನತೆ ನಮಗೆ ಬೇಡ’ ಎಂದರು.

ಕಾಂಗ್ರೆಸ್‌ ಬಂಡಾಯ ತೀವ್ರ: 2ನೇ ಟಿಕೆಟ್‌ ಪಟ್ಟಿ ಪ್ರಕಟ ಬೆನ್ನಲ್ಲೇ ತಲೆನೋವು

ಮಾನವ ದೇಹವನ್ನು ಉದಾಹರಣೆಯಾಗಿ ನೀಡಿ ಮಾತನಾಡಿದ ಭಾಗವತ್‌,‘ದೇಹದಲ್ಲಿ ಕಾಲು ನೋವು ಕಾಣಿಸಿಕೊಂಡಾಗ, ನೋವಿನ ಮೇಲೆ ಕೇಂದ್ರೀಕರಿಸಿ ದೇಹದ ಎಲ್ಲ ಭಾಗಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಅದೇ ರೀತಿ ಸಮಾಜದ ಯಾವ ವರ್ಗವೂ ಹೊರಗುಳಿಯದಂತೆ ಸೇವೆ ಮಾಡಬೇಕು. ಸೇವೆಯು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುತ್ತದೆ. ಅದಕ್ಕೂ ಮುನ್ನ ವ್ಯಕ್ತಿಯನ್ನು ಸ್ವಾಸ್ಥ್ಯನಾಗಿ ಮಾಡುತ್ತದೆ’ ಎಂದರು.

click me!