All Party Meeting;ಚಳಿಗಾಲ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ!

Published : Nov 22, 2021, 03:56 PM ISTUpdated : Nov 22, 2021, 03:58 PM IST
All Party Meeting;ಚಳಿಗಾಲ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ!

ಸಾರಾಂಶ

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಚಳಿಗಾಲ ಅಧಿವೇಶನಕ್ಕೂ ಮುನ್ನ ನಡೆಯಲಿರುವ ಸರ್ವಪಕ್ಷ ಸಭೆ ನವೆಂಬರ್ 28ಕ್ಕೆ ಬೆಳಗ್ಗೆ 11 ಗಂಟೆಗೆ ಮಹತ್ವದ ಸಭೆ  

ನವದೆಹಲಿ(ನ.22):  ಕೃಷಿ ಕಾಯ್ದೆ(Farm laws repeal) ವಾಪಸ್, ಅಚಲ ನಿರ್ಧಾರದಿಂದ ಹಿಂದೆ ಸರಿಯುವ ಮೂಲಕ ವಿಪಕ್ಷಗಳ ಬಾಯಿಗೆ ಆಹಾರವಾಗಿರುವ ಬಿಜೆಪಿ(BJP) ಇದೀಗ ಟೀಕೆಗಳಿಗೆ ಉತ್ತರಿಸದೆ ಮುಬರುವ ಚುನಾವಣೆಗಳತ್ತ(Election) ಚಿತ್ತಹರಿಸಿದೆ. ಇದರ ನಡುವೆ ಚಳಿಗಾಲದ ಅಧಿವೇಶನ(Winter Session) ಬಂದೇ ಬಿಟ್ಟಿದೆ. ಇದೀಗ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ(All-Party Meeting) ನಡೆಯಲಿದೆ. 

ಭಾನುವಾರ(ನ.28) ಬೆಳಗ್ಗೆ 11 ಗಂಟೆಗೆ ಸರ್ವಪಕ್ಷಗಳ ಸಭೆ ನಡೆಯಲಿದೆ. ಅಧಿವೇಶನಕ್ಕೂ ಮುನ್ನ ಎಲ್ಲಾ ಪಕ್ಷಗಳ ಜೊತೆ ಪ್ರಧಾನಿ ಮೋದಿ(PM Narendra Modi) ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಆದರೆ ಈ ಬಾರಿ ಮೋದಿ ಭಾಗವಹಿಸುವಿಕೆ ಖಚಿತತೆ ಇರಲಿಲ್ಲ. ಇದೀಗ ಮೋದಿ ಕಾರ್ಯಾಲಯ, ಮೋದಿ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷ ಸಭೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.

Belagavi Session; ಸುವರ್ಣ ಸೌಧದಲ್ಲಿ ಅಧಿವೇಶನ, ಗದ್ದಲ ಮಾಡಿದ್ರೆ ಜೋಕೆ! 

ಸರ್ವಪಕ್ಷಗಳ ಸಭೆಯಲ್ಲಿ ಸಂಪ್ರದಾಯದತೆ ಸುಗಮ ಕಲಾಪಕ್ಕೆ ಅನುವುಮಾಡಿಕೊಡುವಂತೆ ವಿಪಕ್ಷಗಳನ್ನು ಮೋದಿ ಕೇಳಿಕೊಳ್ಳಲಿದ್ದಾರೆ. ಇದೇ ವೇಳೆ ಆರೋಗ್ಯ ಚರ್ಚೆಗೆ ಒತ್ತು ನೀಡುವ ಕುರಿತು ಮೋದಿ ಮಾತನಾಡಲಿದ್ದಾರೆ. ವಿಪಕ್ಷಗಳ ಎಲ್ಲಾ ಪ್ರಶ್ನೆ ಹಾಗೂ ಟೀಕೆಗಳಿಗೆ ಉತ್ತರ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಮೋದಿ  ಸರ್ವಪಕ್ಷ ಸಭೆಯಲ್ಲಿ ಹೇಳಲಿದ್ದಾರೆ. ಸರ್ವಪಕ್ಷ ಸಭೆ ಯಾವುದೇ ಸಮಸ್ಯೆ ಇಲ್ಲದೆ ನಡಯೆಲಿದೆ. ಆದರೆ ಅಧಿವೇಶನ ಮಾತ್ರ ಈ ಹಿಂದಿನ ಎಲ್ಲಾ ಅಧಿವೇಶನಕ್ಕಿಂತ ಭಿನ್ನವಾಗಿರಲಿದೆ. ಕಾರಣ ಕೇಂದ್ರ ಬಿಜೆಪಿ(BJP Government) ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು, ಬಿಜೆಪಿ ನಿರ್ಧಾರಗಳು ತಪ್ಪು ಎಂದು ಬೊಟ್ಟು ಮಾಡಿ ತೋರಿಸಲು ಈ ಬಾರಿ ಹಲವು ನಿದರ್ಶನಗಳಿವೆ. 

ನ.29 ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ. ಕೃಷಿ ಕಾಯ್ದೆ ಹಿಂಪಡೆದ ಬಳಿಕ ಕೆಲವೇ ದಿನಗಳಲ್ಲಿ ನಡೆಯುತ್ತಿರುವ ಈ ಅಧಿವೇಶನ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ಕಾರಣ ಅಚಲ ನಿರ್ಧಾರದಿಂದ ಹಿಂದೆ ಸರಿಯದೆ ಸುಮಾರು 700ಕ್ಕೂ ಹೆಚ್ಚು ರೈತರ ಸಾವಿಗೆ(Farmers Protest), 500 ಹೆಚ್ಚು ಪೊಲೀಸರು(Tractror Rally) ಗಾಯಕ್ಕೆ ಕಾರಣವಾಗಿದ್ದ ಕೃಷಿ ಮಸೂದೆಯನ್ನು ಚುನಾವಣೆ ಬೆನ್ನಲ್ಲೇ ವಾಪಸ್ ಪೆಡದ ಕೇಂದ್ರದ ನಿರ್ಧಾರ ಅಧಿವೇಶನದಲ್ಲಿ ಭಾರಿ ಚರ್ಚಗೆ ಒಳಗಾಗಲಿದೆ. 

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: ಸ್ಪೀಕರ್‌ ಹೊರಟ್ಟಿ

ಕನಿಷ್ಠ ಬೆಂಬಲ ಬೆಲೆಗೆ(MSP) ಆಗ್ರಹಿಸಿ ರೈತರ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಕೃಷಿ ಮಸೂದೆ ಹಾಗೂ ಕನಿಷ್ಠ ಬೆಂಬಲ ಬೆಲೆ ಕಲಾಪವನ್ನು ನುಂಗಿ ಹಾಕಿದರೂ ಅಚ್ಚರಿ ಇಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ(Petrod Diesel Price), ಅಗತ್ಯವಸ್ತುಗಳ ಬೆಲೆ ಏರಿಕೆ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಸೇರಿದಂತೆ ಹಲವು ವಿಚಾರಗಳು ವಿಪಕ್ಷಗಳ ಬತ್ತಳಿಕೆಯಲ್ಲಿದೆ.  ಇತ್ತ ತೃಣಮೂಲ ಕಾಂಗ್ರೆಸ್ ತ್ರಿಪುರಾದಲ್ಲಿ(Tripura voilence) ನಡೆದ ಹಿಂಸಾಚಾರ ವಿಚಾರವನ್ನು ಮುಂದಿಟ್ಟುಕೊಂಡು ಸಂಸತ್ತಿನಲ್ಲಿ ಘರ್ಜಿಸಲಿದೆ.  

ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು(Amit shah) ಭೇಟಿಗೆ ಆಗ್ರಹಿಸಿ, ಗೃಹ ಸಚಿವರ ನಿವಾಸದ ಹೊರಗಡೆ ಹೋರಾಟ ಮಾಡುತ್ತಿರುವ ತೃಣಮೂಲ ಕಾಂಗ್ರೆಸ್ ಸಂಸದರು ಇದೇ ವಿಚಾರನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಬಿಜೆಪಿ ಆಡಳಿತ ವಿರುದ್ಧ ಅತೀ ದೊಡ್ಡ ಕಹಳೆ ಊದಲಿದ್ದಾರೆ.  ಇನ್ನು ಲಖೀಂಪುರದಲ್ಲಿ ರೈತರ ಪ್ರತಿಭಟನೆ ವೇಳೆ ಕೇಂದ್ರ ಸಚಿವರ ಮಗನ ಕಾರು ಹರಿದು ರೈತರ ಸಾವು, ಹಿಂಸಾಚಾರ ಘಟನೆಗಳು ಅಧಿವೇಶನದಲ್ಲಿ ಪ್ರತಿಧ್ವನಿಸಲಿದೆ. 

ಸರ್ವಪಕ್ಷಗಳ ಸಭೆ ನಡೆದ ಬಳಿಕ ಸಂಜೆ ಬಿಜೆಪಿ ಸಂಸದೀಯ ಕಾರ್ಯಕಾರಣಿ ಸಭೆ ನಡೆಯಲಿದೆ.ಮಧ್ಯಾಹ್ನ ಮೂರು ಗಂಟೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬಿಜೆಪಿ ಸಂಸದೀಯ ಕಾರ್ಯಕಾರಣಿ ಸಭೆ ನಡೆಯಲಿದೆ. NDA ಒಕ್ಕೂಟ ಸಭೆಯಲ್ಲಿ ಪಾಲ್ಗೊಳ್ಳಲಿದೆ. ಬಳಿಕ ವಿಪಕ್ಷಗಳ ಟೀಕೆ, ಸರ್ಕಾರವನ್ನು ಇಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ಕೌಂಟರ್ ಕೊಡುವ ನಿಟ್ಟಿನಲ್ಲೂ ಚರ್ಚೆಯಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!