Andhra Pradeshಕ್ಕೆ ಅಮರಾವತಿ ಒಂದೇ ರಾಜಧಾನಿ : ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ!

Suvarna News   | Asianet News
Published : Nov 22, 2021, 01:46 PM ISTUpdated : Nov 22, 2021, 01:47 PM IST
Andhra Pradeshಕ್ಕೆ ಅಮರಾವತಿ ಒಂದೇ ರಾಜಧಾನಿ :  ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಣೆ!

ಸಾರಾಂಶ

*ಮೂರು ರಾಜಧಾನಿಗಳ ಪ್ರಸ್ತಾವನೆಯನ್ನು ಕೈ ಬಿಟ್ಟ ಜಗನ್‌ ಸರ್ಕಾರ *ಆಂಧ್ರಪ್ರದೇಶಕ್ಕೆ ಅಮರವಾತಿ ಒಂದೇ ರಾಜಧಾನಿ :  *ನಿರ್ಧಾರವನ್ನು ಹೈಕೋರ್ಟ್‌ಗೆ ತಿಳಿಸಿದ ಎಸ್.ಶ್ರೀರಾಮ್ 

ಅಮರಾವತಿ(ನ.22):  2020ರ ಜುಲೈನಲ್ಲಿ ಆಂಧ್ರಪ್ರದೇಶಕ್ಕೆ (Andhra Pradesh) ಮೂರು  ರಾಜಧಾನಿ ಮಾಡುವ ಸರ್ಕಾರದ ಪ್ರಸ್ತಾವನೆಗೆ ಆಂಧ್ರ ಪ್ರದೇಶ ರಾಜ್ಯಪಾಲ ಬಿಸ್ವಾಭೂಷಣ್ ಹರಿಚಂದನ್ ಅಂಕಿತ ಹಾಕಿದ್ದರು. ಆದರೆ ಈಗ  ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಸೋಮವಾರ ರಾಜ್ಯಕ್ಕೆ ಅಮರಾವತಿ (Amarawati) ಒಂದೇ ರಾಜಧಾನಿ  ಎಂದು ಘೋಷಿಸಿದ್ದಾರೆ. ಅಡ್ವೊಕೇಟ್ ಜನರಲ್ ಎಸ್.ಶ್ರೀರಾಮ್ (S Shriram) ಅವರು ರಾಜಧಾನಿ ಅಮರಾವತಿ ಕುರಿತು ನಡೆಯುತ್ತಿರುವ ವಿಚಾರಣೆಯಲ್ಲಿ ಮುಖ್ಯಮಂತ್ರಿಗಳ ನಿರ್ಧಾರವನ್ನು ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಈ ಘೋಷಣೆಯೊಂದಿಗೆ ಮೂರು ರಾಜಧಾನಿ ಮಸೂದೆಯನ್ನು (Capitals Bill) ಹಿಂಪಡೆದು ಹೈಕೋರ್ಟ್‌ಗೆ ನಿರ್ಧಾರವನ್ನು ತಿಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ವೈಎಸ್‌ಆರ್ ಕಾಂಗ್ರೆಸ್ ಸರ್ಕಾರವು ರಾಜ್ಯಕ್ಕೆ ಮೂರು ವಿಭಿನ್ನ ರಾಜಧಾನಿಗಳನ್ನು ಪ್ರಸ್ತಾಪಿಸಿತ್ತು. ಅಮರಾವತಿ  ಶಾಸಕಾಂಗ ರಾಜಧಾನಿ (Legislative Capirtal), ವಿಶಾಖಪಟ್ಟಣಂ ಕಾರ್ಯಾಂಗ ರಾಜಧಾನಿ (Executive) ಮತ್ತು ಕರ್ನೂಲ್ ನ್ಯಾಯಾಂಗ (Judiciary) ರಾಜಧಾನಿ. ಕಳೆದ ವರ್ಷ, ಕೇಂದ್ರ ಗೃಹ ಸಚಿವಾಲಯವು ಆಂಧ್ರಪ್ರದೇಶದ ಹೈಕೋರ್ಟ್‌ಗೆ ರಾಜ್ಯದ ರಾಜಧಾನಿಯನ್ನು ರಾಜ್ಯ ಸರ್ಕಾರವೇ ನಿರ್ಧರಿಸುವ ವಿಷಯ ಎಂದು ತಿಳಿಸಿತ್ತು ಮತ್ತು ಅದರಲ್ಲಿ ಕೇಂದ್ರದ ಪಾತ್ರವಿಲ್ಲ ಎಂದು ಹೇಳಿತ್ತು

ಅಧ್ಯಯನ ಮಾಡಲು  ತಜ್ಞರ ಸಮಿತಿ!

2018 ರಲ್ಲಿ ಸಲ್ಲಿಸಲಾದ ಅರ್ಜಿದಾರ ಪೊಟ್ಲೂರಿ ಶ್ರೀನಿವಾಸ ರಾವ್ (Potluri Srinivasa Rao) ಮತ್ತು ಪ್ರತಿವಾದಿಗಳಾದ ಯೂನಿಯನ್ ಆಫ್ ಇಂಡಿಯಾ (Uninon of India) ಮತ್ತು ಇತರರ ನಡುವಿನ ಪ್ರಕರಣದಲ್ಲಿ, ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ಟಿ. ಹೆಡಾವು ಎಪಿ ಹೈಕೋರ್ಟ್‌ನಲ್ಲಿ ಪ್ರತಿವಾದವನ್ನು ಸಲ್ಲಿಸಿದ್ದರು. 

INS Visakhapatnam: ಕಡಲ ಕಾನೂನು ಉಲ್ಲಂಘಿಸುತ್ತಿರುವ ಚೀನಾ : ರಾಜನಾಥ್‌ ಆಕ್ರೋಶ!

ಆಂದ್ರಪ್ರದೇಶದ  ಮರುಸಂಘಟನೆ ಕಾಯಿದೆ (Andhra Pradesh Reorganisation  Act), 2014 ರ ಸೆಕ್ಷನ್ 6 ರ ಅನ್ವಯ, ಕೇಂದ್ರ ಸರ್ಕಾರವು ಮಾರ್ಚ್ 28, 2014 ರಂದು ಕೆ.ಸಿ ಶಿವರಾಮಕೃಷ್ಣನ್‌ ಅವರ ಅಧ್ಯಕ್ಷತೆಯಲ್ಲಿ ಆಂಧ್ರಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿಗಾಗಿ ಪರ್ಯಾಯಗಳನ್ನು ಅಧ್ಯಯನ ಮಾಡಲು  ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಪ್ರತಿ-ಅಫಿಡವಿಟ್ ಉಲ್ಲೇಖಿಸಿಲಾಗಿತ್ತು. ಸಮಿತಿಯು ಅದೇ ವರ್ಷದ ಆಗಸ್ಟ್ 30 ರಂದು ತನ್ನ ವರದಿಯನ್ನು ಸಲ್ಲಿಸಿತು. ಅದನ್ನು ಎರಡು ದಿನಗಳ ನಂತರ ಸೆಪ್ಟೆಂಬರ್ 1 ರಂದು ಆಂಧ್ರಪ್ರದೇಶ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅಫಿಡವಿಟ್ನಲ್ಲಿ ರಾಜ್ಯ ಸರ್ಕಾರವು ಏಪ್ರಿಲ್ 23, 2015 ರಂದು ರಾಜಧಾನಿಯನ್ನು ಅಮರಾವತಿ ಆಯ್ಕೆ ಮಾಡಲು ಸೂಚಿಸಿ (Notification) ಆದೇಶವನ್ನು ಹೊರಡಿಸಿದೆ ಎಂದು ಉಲ್ಲೇಖಿಸಿತ್ತು. ಜತೆಗೆ 'ರಾಜ್ಯದ ರಾಜಧಾನಿಯನ್ನು ಆಯಾ ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ ಎಂದು ಉಲ್ಲೇಖಿಸಲಾಗಿತ್ತು.

ಅಮರಾವತಿಯನ್ನು  ರಾಜಧಾನಿಯಾಗಿ ಬಿಜೆಪಿ ಬೆಂಬಲಿಸುತ್ತದೆ 

ಏತನ್ಮಧ್ಯೆ, ಆಂಧ್ರಪ್ರದೇಶದ ಬಿಜೆಪಿ (BJP) ನಾಯಕ ವೈಎಸ್ ಚೌಧರಿ (Y S Chowdary) ಕಳೆದ ವಾರ ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ಘೋಷಿಸುವ ಬೇಡಿಕೆಯನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. "ಬಿಜೆಪಿ ಪರವಾಗಿ, ನಾವು ಆಂಧ್ರಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಬೆಂಬಲಿಸುವ ನಿರ್ಣಯವನ್ನು ಅಂಗೀಕರಿಸಿದ್ದೇವೆ, ಯಾವುದೇ ಅಧಿಕಾರವಿಲ್ಲದೆಯೇ ರಾಜ್ಯದಲ್ಲಿ ಮೂರು ರಾಜಧಾನಿಗಳು ಎಂದು ವೈಎಸ್‌ಆರ್‌ಸಿಪಿ ಸರ್ಕಾರ ಘೋಷಿಸಿತು.  ರಾಜಧಾನಿ ಅಭಿವೃದ್ಧಿಗೆ ಭೂಮಿ ನೀಡಿದ ಸ್ಥಳೀಯ ರೈತರನ್ನು ಬೆಂಬಲಿಸುವ ಸಲುವಾಗಿ, ಬಿಜೆಪಿ ಅವರನ್ನು ಬೆಂಬಲಿಸುತ್ತದೆ ಮತ್ತು ಅಮರಾವತಿ ರಾಜಧಾನಿಯಾಗಿ ಉಳಿಯಲಿದೆ ಎಂದು ಚೌಧರಿ ಹೇಳಿದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಮಿಳುನಾಡಿನಲ್ಲಿ 97 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್, SIR ಶಾಕ್
14 ವರ್ಷಗಳಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ ಎಷ್ಟು? ಈ ವಲಸೆಗೆ ಏನು ಕಾರಣ?