Amit Shah ಭೇಟಿಗೆ ನಕಾರ : ಕೇಂದ್ರ ಗೃಹ ಸಚಿವಾಲಯದ ಮುಂದೆ ಟಿಎಂಸಿ ಧರಣಿ!

By Suvarna NewsFirst Published Nov 22, 2021, 2:55 PM IST
Highlights

*ಸಾಯೋನಿ ಘೋಷ್ ಕಾರ್ಯಕರ್ತರನ್ನು  ನಿಂದಿಸಿದ ಆರೋಪ
*ಪೊಲೀಸ್ ಠಾಣೆಗೆ ಬಿಜೆಪಿ ಕಾರ್ಯಕರ್ತರ ದಾಳಿ 
*ಭಾನುವಾರ ನಟಿ ಸಾಯೋನಿ ಘೋಷ್‌  ಬಂಧನ
*ವರದಿ ಸಲ್ಲಿಸಲು ಶಾ ಭೇಟಿಗೆ ತೆರಲಿದ್ದ ಟಿಎಂಸಿ  
*ಗ್ರಹ ಸಚಿವರ ಭೇಟಿಗೆ ಸಿಗದ ಅವಕಾಶ : TMC ಧರಣಿ

ನವದೆಹಲಿ(ನ.22): ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (Trinamoola Congress) ಸೋಮವಾರ, ನವೆಂಬರ್ 22ರಂದು  ತ್ರಿಪುರಾದಲ್ಲಿ ತನ್ನ ಸದಸ್ಯರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ಗೃಹ ಸಚಿವಾಲಯದ (Ministry of Home Affairs) ಹೊರಗೆ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಟಿಎಂಸಿ ನಾಯಕರು 'ನಾವು ಜಯಿಸುತ್ತೇವೆ (We Shall Overcome)' ಎಂಬ ಹಾಡುಗಳನ್ನು ಹಾಡಿದ್ದೂ ಘಟನೆಯ ಕುರಿತು ಬಿಜೆಪಿ (BJP) ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ತೃಣಮೂಲ ಯುವ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಬಂಗಾಳಿ ನಟಿ ಸಾಯೋನಿ ಘೋಷ್‌ (Saayoni Gosh) ಅವರನ್ನು ಭಾನುವಾರ ಬಂಧಿಸಲಾಗಿತ್ತು. ಜತೆಗೆ ಸಾಯೋನಿ ಮೇಲೆ ಕೊಲೆ ಯತ್ನದ ಸೆಕ್ಷನ್‌ಗಳ ಅನ್ವಯ ತ್ರಿಪುರಾ ಪೊಲೀಸರು ಪ್ರಕರಣ ದಾಖಲಿಸಿದ್ದರು. 

ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹರಿಹಾಯಲು ಅವರು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಇದೀಗ ರಾಜಕೀಯ(Politics) ಬಣ್ಣ ಪಡೆದುಕೊಂಡಿದೆ. ತ್ರಿಪುರಾದಲ್ಲಿ ನಡೆದ ಬಿಜೆಪಿ(BJP) ಹಾಗೂ ಟಿಎಂಸಿ(TMC) ಕಾರ್ಯಕರ್ತರ ನಡುವಿನ ಜಟಾಪಟಿ ಬೆನ್ನಲ್ಲೇ ಇದೀಗ ತ್ರಿಪುರ ಬಿಜೆಪಿಯ(Tripura Bjp) ಈ ನಡೆ ರಾಜಕೀಯ ಪ್ರೇರಿತ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ವರದಿ ಸಲ್ಲಿಸಲು ಟಿಎಂಸಿ, ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿ ಮಾಡುವಂತೆ ಕೋರಿದೆ. ಆದಾಗ್ಯೂ, ಅದರೆ ಗೃಹ ಸಚಿವ ಅಮಿತ್‌ ಶಾ ಭೇಟಿ ನಿರಾಕರಿಸಿದ್ದಾರೆ. ತ್ರಿಪುರಾದಲ್ಲಿ ನವೆಂಬರ್ 25 ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಿಗದಿಯಾಗಿದೆ ಎಂಬುದು ಉಲ್ಲೇಖನೀಯ.

ಕಾರ್ಯಕರ್ತರನ್ನು ಅಪಹಾಸ್ಯ ಮಾಡಿದ ಸಾಯೋನಿ!

ಶನಿವಾರ(ನ.20) ಸಾಯೋನಿ ಘೋಷ್ ತ್ರಿಪುರಾದಲ್ಲಿ ತಮ್ಮ ವಾಹನದ ಮೂಲಕ ತೆರಳಿದ್ದಾರೆ. ಈ ವೇಳೆ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್(Biplab deb) ಅವರ ಸಮಾವೇಶ ನಡೆಯುತ್ತಿದ್ದ ದಾರಿಯಲ್ಲಿ ಸಾಗಿದ್ದಾರೆ. ದೇಬ್ ಭಾಷಣ ನಡೆಯುತ್ತದ್ದ ವೇಳೆ ಹೊರಗಡೆ ನಿಂತಿದ್ದ ಕಾರ್ಯಕರ್ತರನ್ನು ಘೋಷ್ ನಿಂದಿಸಿದ್ದಾರೆ. ಕಾರ್ಯಕರ್ತರನ್ನು ಅಪಹಾಸ್ಯ ಮಾಡಿದ ಸಾಯೋನಿ ಘೋಷ್ ವಿರುದ್ಧ ಕಾರ್ಯಕರ್ತ ಅಸಮಾಧಾನಗೊಂಡಿದ್ದಾರೆ.

ಕೊಲೆ ಯತ್ನ ಆರೋಪದಡಿ ತೃಣಮೂಲ ಯೂಥ್ ಕಾಂಗ್ರೆಸ್ ಅಧ್ಯಕ್ಷೆ ಬಂಧನ!

ಪೊಲೀಸ್ ಠಾಣೆಗೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಟಿಎಂಸಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ದಾಳಿ ವೇಳೆ ಸಾಯೋನಿ ಘೋಷ್ ಕೂಡ ಠಾಣೆಯಲ್ಲಿದ್ದರು. ಇದು ಗೂಂಡಾ ರಾಜ್ಯ ಎಂದು ಟಿಎಂಸಿ ಆರೋಪಿಸಿದೆ. ಪೊಲೀಸರ ಮುಂದೆ ಬಿಜೆಪಿ ಕಾರ್ಯಕರ್ತರು ಈ ರೀತಿ ಅಕ್ರಮ ಮಾಡಿದ್ದಾರೆ. ಹಲ್ಲೆ ಮಾಡಿದ್ದಾರೆ. ಆದರೆ ಪೊಲೀಸರು ಹಾಗೂ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳುವ ಬದಲು ಬೆಂಬಲಕ್ಕೆ ನಿಂತಿದೆ ಎಂದು ಟಿಎಂಸಿ ಆರೋಪಿಸಿದೆ.

ನಮಗೆ ಅಪಾಯಿಂಟ್‌ಮೆಂಟ್‌ ನೀಡಿಲ್ಲ : ಟಿಎಂಸಿ  ಸಂಸದ

ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಟಿಎಂಸಿ ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) , “ನಾವು ಅಪಾಯಿಂಟ್‌ಮೆಂಟ್‌ಗಾಗಿ ಪದೇ ಪದೇ ಗೃಹ ಸಚಿವರ ಕಚೇರಿಗೆ ಕರೆ ಮಾಡಿದ್ದೇವೆ, ಆದರೆ ಅದನ್ನು ನೀಡಲಿಲ್ಲ. ಇದಕ್ಕಾಗಿಯೇ ನಾವು ಗೃಹ ಮಂತ್ರಾಯಲದ ಹೊರಗೆ ಬಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. 

PM Modi in Lucknow: ಹಿರಿಯ ಪೋಲಿಸ್‌ ಅಧಿಕಾರಿಗಳ ಸಮ್ಮೇಳನದಲ್ಲಿ ಮೋದಿ, ಅಮಿತ್ ಶಾ, ದೋವಲ್ ಭಾಗಿ!

ಇದಕ್ಕೂ ಮೊದಲು, ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರೇನ್ (Derek O’Brien) ತಮ್ಮ ಸದಸ್ಯರ ಮೇಲೆ ಆಪಾದಿತ ದಾಳಿಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದರು. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಮೂರು ದಿನಗಳ ಪ್ರವಾಸಕ್ಕಾಗಿ ಸೋಮವಾರ ದೆಹಲಿಗೆ ಆಗಮಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

click me!