
ಗುವ್ಹಾಟಿ (ಸೆ.14) ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆರ್ಟಿಕಲ್ 370 ರದ್ದು ಸೇರಿದಂತೆ ಹಲವು ಐತಿಹಾಸಿಕ ಹಾಗೂ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಪ್ರಧಾನಿ ಮೋದಿ ಯಾರ ಮಾತಿಗೂ ಬಗ್ಗುವುದಿಲ್ಲ, ಜಗ್ಗುವುದಿಲ್ಲ. ಉಗ್ರರ ಬೆದರಿಕೆ ಇರಲಿ, ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತೆರಿಗೆ ಎಚ್ಚರಿಕೆಯೇ ಇರಲಿ ಮೋದಿ ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ. ಮೋದಿ ಯಾರ ಮಾತಿಗೂ ಬಗ್ಗಲ್ಲ, ಆದರೆ ಮೋದಿಯನ್ನೇ ಕಂಟ್ರೋಲ್ ಮಾಡಬಲ್ಲ ರಿಮೂಟ್ ಇದೆ. ಈ ಕುರಿತು ಸ್ಪತಃ ಮೋದಿಯೇ ಬಹಿರಂಗಪಡಿಸಿದ್ದಾರೆ.
ಮಣಿಪುರ ಬೇಟಿ ಬಳಿಕ ಇಂದು ಅಸ್ಸಾಂಗೆ ಬಂದಿಳಿದ ಪ್ರಧಾನಿ ಮೋದಿ, 18,530 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನನ್ನನ್ನು ಕಂಟ್ರೋಲ್ ಮಾಡಬಲ್ಲ ಏಕೈಕ ರಿಮೂಟ್ ಅಂದರೆ ಅದು 140 ಕೋಟಿ ಭಾರತೀಯರು. ಈ ರಿಮೂಟ್ ಕಂಟ್ರೋಲ್ ಬಿಟ್ಟು ಇನ್ಯಾವುದೇ ರಿಮೂಟ್ ನನ್ನನ್ನು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಭಾರತೀಯರೇ ಪ್ರಧಾನಿಯನ್ನು ಕಂಟ್ರೋಲ್ ಮಾಡುತ್ತಾರೆ. ಭಾರತೀಯ ಆಶೀರ್ವಾದವಿದ್ದರೆ ಮಾತ್ರ ಪ್ರಧಾನಿಯಾಗಲು, ಮುಂದುವರಿಯಲು ಸಾಧ್ಯ ಎಂದು ಮೋದಿ ಪರೋಕ್ಷವಾಗಿ ಹೇಳಿದ್ದಾರೆ.
ಹೆಲಿಕಾಪ್ಟರ್ ಪ್ರಯಾಣ ಅಸಾಧ್ಯ ಎಂದ ತಂಡ, ರಸ್ತೆ ಮೂಲಕ ಮಣಿಪುರದ ಚುರಚಂದಾಪುರಕ್ಕೆ ಮೋದಿ
ಶಿವನ ವಿರುದ್ಧ ಏನೇ ಹೇಳಿದರೂ ಆತ ಸಹಿಸಿಕೊಳ್ಳುತ್ತಾನೆ. ನಾನು ಶಿವನ ಭಕ್ತ. ನನ್ನ ವಿರುದ್ಧ ಮಾಡುವ ಟೀಕೆ, ಅಪಮಾನವನ್ನು ನಾನು ಸಹಿಸಿಕೊಳ್ಳುತ್ತೇನೆ. ಆದರೆ ಇತರರ ಮೇಲೆ ಮಾಡಿದರೆ ಜೋಕೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಅಸ್ಸಾಂ ಮಣ್ಣಿನ ಹೀರೋ, ಅಸ್ಸಾಂ ಹೆಮ್ಮೆ, ಗಾಯಕ, ಮಾಜಿ ಶಾಸಕ ಭುಪೇಂದ್ರ ಹಜಾರಿಕಾಗೆ ನಮ್ಮ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿತ್ತು. ಆದರೆ ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಕಾಂಗ್ರೆಸ್ ಅಧ್ಯಕ್ಷರು ಹಜರಿಕಾಗೆ ನೀಡಿದ ಪ್ರಶಸ್ತಿಗೆ, ಮೋದಿ ಕುಣಿಯುವ ಹಾಗೂ ಹಾಡುವ ಮಂದಿಗೆ ಭಾರತ ರತ್ನ ಕೊಡುತ್ತಿದೆ ಎಂದು ವ್ಯಂಗ್ಯವಾಡಿತ್ತು. ಈ ದೇಶದ ಕಲಾಭಿಮಾನಿಗಳು ಕಾಂಗ್ರೆಸ್ ಪ್ರಶ್ನೆ ಮಾಡಬೇಕಿದೆ. ಹಜರಿಕಾಗೆ ಭಾರತ ರತ್ನ ನೀಡಿದ್ದನ್ನು ಕಾಂಗ್ರೆಸ್ ವಿರೋಧಿಸಿದ್ದು ಯಾಕೆ ಎಂದು ಕೇಳಬೇಕು ಎಂದಿದ್ದಾರೆ.
ಕಾಂಗ್ರೆಸ್ ಎಲ್ಲರನ್ನೂ ಹೀಳಿಯಾಸುತ್ತೆ. ಅವರ ರಾಜಕೀಯಕ್ಕೆ ಎಲ್ಲರನ್ನೂ ಬಳಸಿಕೊಳ್ಳುತ್ತೆ, ಟೀಕೆ ಮಾಡುತ್ತೆ. ಇದಕ್ಕೆ ನನ್ನ ತಾಯಿ ಕೂಡ ಹೊರತಾಗಿರಲಿಲ್ಲ ಎಂದು ಮೋದಿ ಹೇಳಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್ ನನ್ನ ತಾಯಿ ವಿರುದ್ದ ಟೀಕೆ ಮಾಡಿದೆ. ತಾಯಿ ವಿಡಿಯೋಗಳನ್ನು ಎಐ ಮೂಲಕ ಸೃಷ್ಟಿಸಿ ಪೋಸ್ಟ್ ಮಾಡಿದೆ ಎಂದು ಮೋದಿ ಹೇಳಿದ್ದಾರೆ.
ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಈಶಾನ್ಯ ಭಾರತವನ್ನು ಕಡೆಗಣಿಸಿತ್ತು. ಬಿಜೆಪಿ ಸರ್ಕಾರ ಈಶಾನ್ಯ ಭಾರತದ ಅಭಿೃವದ್ಧಿ ಮಾಡುತ್ತಿದೆ ಎಂದಿದ್ದಾರೆ.
ಮಣಿಪುರದಲ್ಲಿ ಶಾಂತಿ ಪುನಃಸ್ಥಾಪಿಸುವ ಭರವಸೆ ನೀಡಿದ ಮೋದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ