
ಹೂಗ್ಲಿ(ಮೇ.12) ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದೇಶದ ಮೂಲೆ ಮೂಲೆಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದ ಮೋದಿಗೆ ಅಚ್ಚರಿ ಗಿಫ್ಟ್ ಸಿಕ್ಕಿದೆ. ಭಾಷಣದ ನಡುವೆ ಉಡುಗೊರೆ ಸ್ವೀಕರಿಸಿದ ಮೋದಿ, ಪ್ರತಿಯಾಗಿ ರಿಟರ್ನ್ ಗಿಫ್ಟ್ ನೀಡುವುದಾಗಿ ತಿಳಿಸಿದ್ದಾರೆ. ಹೌದು ಹೂಗ್ಲಿ ಬಿಜೆಪಿ ಸಮಾವೇಶದಲ್ಲಿ ಇಬ್ಬರು ಪ್ರಧಾನಿ ಮೋದಿ ಹಾಗೂ ಮೋದಿ ತಾಯಿ ಹೀರಾಬೆನ್ ಮೋದಿ ಚಿತ್ರ ಬಿಡಿಸಿ ಫ್ರೇಮ್ ಹಾಕಿ ತಂದಿದ್ದರು. ಈ ಉಡುಗೊರೆ ಗಮಮಿಸಿದ ಮೋದಿ, ಭದ್ರತಾ ಸಿಬ್ಬಂದಿಗಳಲ್ಲಿ ಉಡುಗೊರೆ ಸಂಗ್ರಹಿಸಲು ಹೇಳಿದ್ದಾರೆ. ಇದೇ ವೇಳೆ ತಾಯಂದಿರ ದಿನ ನನ್ನ ತಾಯಿ ಜೊತೆಗಿನ ಚಿತ್ರ ಬಿಡಿಸಿ ತಂದಿರುವ ನಿಮಗೆ ಧನ್ಯವಾದ. ಪ್ರತಿಯಾಗಿ ನಿಮಗೆ ಪತ್ರ ಬರೆಯುವುದಾಗಿ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಳಾದ ಹೂಗ್ಲಿಯಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಮೋದಿ, ಇಬ್ಬರು ಯುವಕರು ಮೋದಿ ಹಾಗೂ ತಾಯಿ ಹೀರಾಬೆನ್ ಮೋದಿ ಚಿತ್ರ ಬಿಡಿಸಿ ತಂದಿದ್ದರು. ಮೋದಿ ಭಾಷಣದುದ್ದಕ್ಕೂ ಫೋಟೋವನ್ನು ಎರಡು ಕೈಗಳಿಂದ ಎತ್ತಿ ಹಿಡಿದು ಮೋದಿ ಗಮನಸೆಳೆಯುವ ಪ್ರಯತ್ನ ಮಾಡಿದ್ದರು. ಕೆಲ ಹೊತ್ತು ಚಿತ್ರಗಳನ್ನು ಎತ್ತಿ ಹಿಡಿದ ಯುವಕರನ್ನು ಗಮನಿಸಿದ ಮೋದಿ, ಅಮ್ಮಂದಿರ ದಿನ ನನ್ನ ತಾಯಿ ಜೊತೆಗಿ ಚಿತ್ರ ಬಿಡಿಸಿ ತಂದಿರುವುದಕ್ಕೆ ಧನ್ಯವಾದ ಎಂದಿದ್ದಾರೆ.
ವಿಶೇಷ ಚೇತನ ಸಹೋದರಿಯರಿಗೆ ವ್ಯವಸ್ಥೆ ಮಾಡುವರೆಗೆ ಭಾಷಣ ಮಾಡಲ್ಲ, ಹೃದಯ ಗೆದ್ದ ಮೋದಿ ನಡೆ!'
ಪಾಶ್ಚಿಮಾತ್ಯರು ಇಂದು ತಾಯಂದಿರ ದಿನ ಆಚರಿಸುತ್ತಾರೆ. ನಾವು ಭಾರತೀಯರು, ವರ್ಷದ 365 ದಿನ ತಾಯಿಯನ್ನು ಪೂಜಿಸುತ್ತೇವೆ. ದುರ್ಗಾ ಮಾತೆ, ಕಾಳಿ ಮಾತೆ, ತಾಯಿ ಭಾರತ ಮಾತೆಯನ್ನು ವರ್ಷದ ಎಲ್ಲಾ ದಿನ ಪೂಜಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ. ತಾಯದಿಂದರ ದಿನ ಬಿಡಿಸಿ ತಂದಿರುವ ಚಿತ್ರವನ್ನು ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಕಮಾಂಡೋಗಳಿಗೆ ಸಂಗ್ರಹಿಸುವಂತೆ ಸೂಚನೆ ನೀಡಿದ್ದಾರೆ.
ನಿಮ್ಮ ಹೆಸರು ಹಾಗೂ ವಿಳಾಸ ಫೋಟೋ ಹಿಂದೆ ಬರೆದು ಕೊಡಿ. ನಿಮಗೆ ಪತ್ರ ಬರೆಯುವ ಪ್ರಯತ್ನ ಮಾಡುತ್ತೇನೆ. ಸುಂದರ ಚಿತ್ರ ಬಿಡಿಸಿ ನನಗೆ ನೀಡಿರುವುದಕ್ಕೆ ಧನ್ಯವಾದ ಎಂದು ಮೋದಿ ಹೇಳಿದ್ದಾರೆ. ಎರಡೂ ಚಿತ್ರಗಳು ಪ್ರಧಾನಿ ಮೋದಿ, ತಾಯಿ ಹೀರಾಬೆನ್ ಮೋದಿ ಜೊತೆಗಿನ ಫೋಟೋ ಆಗಿದೆ. ಪೆನ್ಸಿಲ್ ಆರ್ಟ್ ಮೂಲಕ ಬಿಡಿಸಿರುವ ಈ ಚಿತ್ರ ಇದೀಗ ಮೋದಿ ಕೈಸೇರಿದೆ.
ನಾನು ಡಾನ್ಸ್ ಮಾಡ್ತಿರೋದನ್ನ ನೋಡಿ ಎಂಜಾಯ್ ಮಾಡಿದೆ' ‘DICTATOR’ ಪೋಸ್ಟ್‌ಗೆ ಮೋದಿ ಪ್ರತಿಕ್ರಿಯೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ