ವಿಶೇಷ ಚೇತನ ಸಹೋದರಿಯರಿಗೆ ವ್ಯವಸ್ಥೆ ಮಾಡುವರೆಗೆ ಭಾಷಣ ಮಾಡಲ್ಲ, ಹೃದಯ ಗೆದ್ದ ಮೋದಿ ನಡೆ!

ತೆಲಂಗಾಣ ಚುನವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಮತ್ತೆ ಎಲ್ಲರ ಹೃದಯ ಗೆದ್ದಿದ್ದಾರೆ. ಸಮಾವೇಶಕ್ಕೆ ಆಗಮಿಸಿದ ವಿಶೇಷ ಚೇತನ ಸಹೋದರಿಯರಿಗೆ ದಾರಿ ಬಿಡಿ, ಅವರನ್ನು ಮುಂದೆ ಕಳುಹಿಸಿ, ಅವರಿಗೆ ವ್ಯವಸ್ಥೆ ಮಾಡುವರೆಗೆ ಭಾಷಣ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಭಾಷಣದ ವೇಳೆ ವಿಶೇಷಚೇತನರನ್ನು ಗುರುತಿಸಿದ ಮೋದಿ ಹಾಗೂ ಅವರಿಗೆ ವ್ಯವಸ್ಥೆ ಕಲ್ಪಿಸಿದ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
 

PM Modi win hearts ask officials to accommodate specially abled womens in front row in Telangana rally ckm

ತೆಲಂಗಾಣ(ಮೇ.10) ಲೋಕಸಭಾ ಚುನಾವಣಾ ಪ್ರಚಾರ, ರ್ಯಾಲಿ, ಸಮಾವೇಶ, ಭಾಷಣದಲ್ಲಿ ಪ್ರಧಾನಿ ಮೋದಿ ನಡೆಗಳು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋಗಳು ವೈರಲ್ ಆಗಿದೆ. ಇದೀಗ ತೆಲಂಗಾಣದ ಮೆಹಬೂಬನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮೋದಿ ಮತ್ತೆ ಎಲ್ಲರ ಹೃದಯ ಗೆದ್ದಿದ್ದಾರೆ. ಭಾಷಣ ಮಾಡುತ್ತಿದ್ದ ಮೋದಿ ಸಮಾವೇಶದಲ್ಲಿ ಹಾಜರಾಗಿದ್ದ ವಿಶೇಷ ಚೇತನ ಸಹೋದರಿಯರತ್ತ ನೆಟ್ಟಿದೆ. ಹಿಂಭಾಗದಲ್ಲಿ ಪ್ರಯಾಸಪಡುತಿದ್ದ ವಿಶೇಷ ಚೇತನ ಸಹೋದರಿಯರಿಗೆ ದಾರಿ ಬಿಡಿ, ಅವರಿಗೆ ಮುಂಭಾಗದಲ್ಲಿ ವ್ಯವಸ್ಥೆ ಮಾಡಿ. ಅವರಿಗೆ ವ್ಯವಸ್ಥೆ ಮಾಡುವ ವರೆಗೆ ಭಾಷಣ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ವಿಶೇಷ ಚೇತನ ಸಹೋದರಿಯರು ನನಗೆ ಆಶೀರ್ವಾದ ನೀಡಲು ಇಲ್ಲಿಗೆ ಆಗಮಿಸಿದ್ದಾರೆ. ಅವರಿಗೆ ಮುಂದೆ ಬರಲು ಅವಕಾಶ ಮಾಡಿಕೊಡಿ. ಮುಂದೆ ನಿಂತಿರುವ ಪ್ರೀತಿಯ ಜನಗಳೇ ಅವರಿಗೆ ದಾರಿ ಬಿಡಿ. ವಿಶೇಷ ಚೇತನರು ಹಲವು ಗಂಟೆಗಳಿಂದ ಪ್ರಯಾಸ ಪಡುತ್ತಿದ್ದರೆ. ಅವರ ನೋವು ನೋಡಲು ಸಾಧ್ಯವಿಲ್ಲ. ಅವರಿಗೆ ಸಭೆಯ ಮುಂಭಾಗದಲ್ಲಿ ಆಸನ ವ್ಯವಸ್ಥೆ ಮಾಡಿ. ವಿಶೇಷ ಚೇತನರಿಗೆ ವ್ಯವಸ್ಥೆ ಕಲ್ಪಿಸುವವರಗೆ ನಾನು ಭಾಷಣ ಮುಂದುವರಿಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಮೋದಿ ನಡೆಯಿಂದ ರಾಮಮಂದಿರ ಅಪವಿತ್ರ, ಕಾಂಗ್ರೆಸ್ ಗೆದ್ದರೆ ಕಾಯಕಲ್ಪ; ವಿವಾದ ಸೃಷ್ಟಿಸಿದ ನಾಯಕ!

ಮೋದಿ ಈ ಮಾತುಗು ಹೇಳುತ್ತಿದ್ದಂತೆ ಹಿಂಭಾಗದಲ್ಲಿದ್ದ ವಿಶೇಷ ಚೇತನ ಯುವತಿಯರನ್ನು ಸಿಬ್ಬಂದಿಗಳು ಮುಂಭಾಗಕ್ಕೆ ಕರೆದುಕೊಂಡು ಬಂದಿದ್ದಾರೆ. ಮುಂಭಾಗದಲ್ಲಿ ಆಸನ ವ್ಯವಸ್ಥೆ ಮಾಡಿದ್ದರೆ. ಮೋದಿ ತಮ್ಮನ್ನು ಗುರುತಿಸಿ ಮುಂಭಾಗದಲ್ಲಿ ಆಸನ ವ್ಯವಸ್ಥೆ ಕಲ್ಪಿಸಿದ ಧನ್ಯತಾ ಭಾವ ಈ ವಿಶೇಷ ಚೇತನರಲ್ಲಿ ಎದ್ದುಕಾಣುತ್ತಿತ್ತು.ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮೋದಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ ಮೋದಿ ಭಾರತದ ಅವತಾರ ಪುರುಷ ಎಂದು ಬಣ್ಣಿಸಿದ್ದಾರೆ. ಮೋದಿ ಜನ ನಾಯಕ, ಜನರ ಪ್ರಧಾನಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ. 

 

 

ತೆಲಂಗಾಣದಲ್ಲಿ ಭರ್ಜರಿ ಪ್ರಚಾರ ಮಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಕಳೆದ 10 ವರ್ಷದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ. 2047ರ ವಿಕಸಿತ ಭಾರತ ಪರಿಕಲ್ಪನೆಯನ್ನು ಮೋದಿ ಜನತೆ ಮುಂದಿಟ್ಟಿದ್ದಾರೆ. ಬಡವರಿಗೆ ನಿವಾಸ ಕಲ್ಪಿಸುವ ಯೋಜನೆಯಲ್ಲಿ ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ. ಮುಂದಿನ ಅವಧಿಯಲ್ಲಿ ಎಲ್ಲರಿಗೂ ಸೂರು ಕಲ್ಪಿಸಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಬಿಜೆಪಿ ಅಭ್ಯರ್ಥಿಗಳನ್ನು ಭಾರಿ ಅಂತರದಲ್ಲಿ ಗೆಲ್ಲಿಸಲು ಜನತೆಗೆ ಮೋದಿ ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ- ರಾಹುಲ್ ಗಾಂಧಿ ಮುಖಾಮುಖಿ ಚರ್ಚೆಗೆ ಸಲಹೆ
 

Latest Videos
Follow Us:
Download App:
  • android
  • ios