ನಾವೇನು ಫ್ರಿಡ್ಜ್‌ನಲ್ಲಿಡಲು ಅಣುಬಾಂಬ್ ತಯಾರಿಸಿದ್ದೀವಾ? ಮಣಿಶಂಕರ್ ಎಚ್ಚರಿಕೆಗೆ ಯೋಗಿ ತಿರುಗೇಟು!

By Chethan KumarFirst Published May 12, 2024, 5:23 PM IST
Highlights

ಪಾಕಿಸ್ತಾನವನ್ನು ಗೌರವಿಸಿದ್ದರೆ ಅವರ ಬಳಿ ಅಣುಬಾಂಬ್ ಇದೆ. ಭಾರತದ ಮೇಲೆ ಹಾಕಿಬಿಡುತ್ತಾರೆ ಅನ್ನೋ ಕಾಂಗ್ರೆಸ್ ನಾಯಕ ಮಣಿಶಂಕರ್ ಆಯ್ಯರ್ ನೀಡಿದ ಎಚ್ಚರಿಕೆಗೆ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ. ನಮ್ಮ ಅಣುಬಾಂಬ್ ಫ್ರಿಡ್ಜ್‌ನಲ್ಲಿಡಲು ತಯಾರಿಸಿದ್ದೇವೆ ಎಂದುಕೊಂಡಿದ್ದೀರಾ? ಎಂದು ಯೋಗಿ ಪ್ರಶ್ನಿಸಿದ್ದಾರೆ.
 

ನವದೆಹಲಿ(ಮೇ.12)  ಲೋಕಸಭಾ ಚುನಾವಣೆಯಲ್ಲಿ ನಾಯಕರ ಕೆಲ ಹೇಳಿಕೆಗೆ ಭಾರಿ ವಿವಾದಕ್ಕೆ ಗುರಿಯಾಗಿದೆ. ಈ ಪೈಕಿ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ನೀಡಿದ ಎಚ್ಚರಿಕೆ ವಿವಾದ ಮಾತ್ರವಲ್ಲ, ಟೀಕೆಗೆ ಗುರಿಯಾಗಿತ್ತು. ಪಾಕಿಸ್ತಾನವನ್ನು ಭಾರತ ಗೌರವಯುತವಾಗಿ ಕಾಣದಿದ್ದರೆ, ಅವರು ಅಣುಬಾಂಬ್ ಹಾಕಿಬಿಡುತ್ತಾರೆ ಎಂಬ ಹೇಳಿಕೆಗೆ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ. ನಮ್ಮಲ್ಲಿರುವ ಅಣುಬಾಂಬ್ ಏನು ಫ್ರಿಡ್ಜ್‌ನಲ್ಲಿಡುತ್ತೇವೆ ಎಂದುಕೊಂಡಿದ್ದೀರಾ? ಇದು ಹೊಸ ಭಾರತ. ನಾವು ಯಾರ ಮೇಲೂ ದಾಳಿ ಮಾಡಲ್ಲ. ಆದರೆ ನಮ್ಮ ಮೇಲೆ ದಾಳಿ ಮಾಡಿದರೆ ನುಗ್ಗಿ ಹೊಡೆಯುತ್ತೇವೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಇಂಡಿಯಾ ಟಿವಿ ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಪಾಲ್ಗೊಂಡ ಯೋಗಿ ಆದಿತ್ಯನಾಥ್, ಮಣಿಶಂಕರ್ ಆಯ್ಯರ್ ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿದ್ದರೆ. ಇದು ಹೊಸ ಭಾರತ, ಯಾರ ಗೊಡ್ಡು ಬೆದರಿಕೆಗೆ ಹೆದರುವ ದೇಶವಲ್ಲ. ನಾವು ಅಣುಂಬಾಂಬ್‌ನ್ನು ಫ್ರಿಡ್ಜ್‌ನಲ್ಲಿ ಇಡಲು ತಯಾರಿಸಿಲ್ಲ. ನಾವು ಯಾರನ್ನೂ ಕೆಣಕುವುದಿಲ್ಲ, ಯಾರ ಮೇಲೂ ದಾಳಿ ಮಾಡುವುದಿಲ್ಲ. ಆದರೆ ನಮ್ಮನ್ನು ಕೆಣಕಿದರೆ ಅವರ ಮನೆಗೆ ನುಗ್ಗಿ ಹೊಡೆಯುತ್ತೇವೆ. ಇದು ಆಧುನಿಕ ಭಾರತ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Latest Videos

ಪಾಕ್ ಕೆಣಕಿದರೆ ನಮ್ಮ ಮೇಲೆ ಅಣುಬಾಂಬ್, ಬಿಜೆಪಿಗೆ ಎಚ್ಚರಿಕೆ ನೀಡಿ ವಿವಾದಕ್ಕೆ ಗುರಿಯಾದ ಮಣಿಶಂಕರ್!

ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಹೇಗಿದೆ ಅನ್ನೋ ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನ ಅವರ ಜನತೆಗೆ ಮೊದಲು ನ್ಯಾಯ ಒದಗಿಸಲಿ. ಆಧುನಿಕ ಭಾರತದ ಶಕ್ತಿ ಸಾಮರ್ಥ್ಯ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಈ ಹೇಳಿಕೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ಮಣಿಶಂಕರ್ ಇತ್ತೀಚಗೆ ನೀಡಿದ ಹೇಳಿಕೆ ಕಾಂಗ್ರೆಸ್‌ಗೆ ಮುಜುಗರ ತಂದಿತ್ತು. ಪಾಕಿಸ್ತಾನ ಅಣುಬಾಂಬ್ ಹೊಂದಿದ ರಾಷ್ಟ್ರ. ಸೌರ್ವಭೌಮ ಪಾಕಿಸ್ತಾನಕ್ಕೆ ಇತರ ದೇಶಗಗಳು ಗೌರವ ನೀಡುತ್ತದೆ. ಭಾರತ ಕೂಡ ಪಾಕಿಸ್ತಾನವನ್ನು ಗೌರವಯುತವಾಗಿ ಕಾಣಬೇಕು. ಗನ್ ಹಿಡಿದುಕೊಂಡು ಯುದ್ಧಕ್ಕೆ ನಿಲ್ಲುವುದಲ್ಲ. ಕಾರಣ ಪಾಕಿಸ್ತಾನವನ್ನು ಕೆಣಕಿದರೆ ಅವರ ಬಳಿ ಇರುವ ಅಣುಬಾಂಬ್ ನಮ್ಮ ಮೇಲೆ ಪ್ರಯೋಗಿಸುತ್ತಾರೆ. ಹೀಗಾಗಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದರು. ಈ ಹೇಳಿಕೆಗೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಯೋಗಿ ಆದಿತ್ಯನಾಥ್ ಖಡಕ್ ಉತ್ತರ ನೀಡಿದ್ದಾರೆ.

ಮಣಿಶಂಕರ್‌ ಅಯ್ಯರ್‌ 'ಪಾಕ್‌ ಅಣುಬಾಂಬ್‌' ಮಾತಿಗೆ ಪ್ರಧಾನಿ ಮೋದಿ ತಿರುಗೇಟು!

 

हमारे एटम बम फ्रिज में रखने के लिए हैं क्या! pic.twitter.com/boH7bjLHGe

— Yogi Adityanath (मोदी का परिवार) (@myogiadityanath)

 

click me!