Modi Wave ಅಧ್ಯಯನ ವರದಿಯಲ್ಲಿ ಮೋದಿ ಜನಪ್ರಿಯತೆ ಬಹಿರಂಗ, ಹೊಸ ದಾಖಲೆ ನಿರ್ಮಾಣ!

Published : May 30, 2022, 07:05 PM IST
Modi Wave ಅಧ್ಯಯನ ವರದಿಯಲ್ಲಿ ಮೋದಿ ಜನಪ್ರಿಯತೆ ಬಹಿರಂಗ, ಹೊಸ ದಾಖಲೆ ನಿರ್ಮಾಣ!

ಸಾರಾಂಶ

ಕೊರೋನಾ ಬಳಿಕ ಮೋದಿ ಹೆಚ್ಚಾಯ್ತು ಮೋದಿ ಜನಪ್ರಿಯತೆ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗೆ ಉತ್ತರ ಅಗತ್ಯ ಎಂದ ಜನ ಕೋವಿಡ್ ನಿರ್ವಹಣೆಯಲ್ಲಿ ಭಾರತವೇ ಟಾಪ್, ಅಧ್ಯಯನ ವರದಿ

ನವದೆಹಲಿ(ಮೇ.30): ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಜನಪ್ರೀಯತೆ ಹೊಸ ದಾಖಲೆ ನಿರ್ಮಿಸಿದೆ. ಕೊರೋನಾ ಆರಂಭವಾದ ಬಳಿಕ ಮೋದಿ ಜನಪ್ರೀಯತೆ ಮತ್ತಷ್ಟು ಹೆಚ್ಚಿದೆ. ಅಪ್ರೂವಲ್ ರೇಟಿಂಗ್ಸ್ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಶೇಕಡಾ 67ಕ್ಕೆ ಏರಿಕೆಯಾಗಿದೆ. 

ಅಪ್ರೂವಲ್ ರೇಟಿಂಗ್ಸ್‌ನ ಲೋಕಲ್ ಸರ್ಕಲ್ ಸರ್ವೆಯಲ್ಲಿ 64,000 ಮಂದಿ ಮತ ಚಲಾಯಿಸಿದ್ದಾರೆ. ಈ ಪೈಕಿ ಶೇಕಡಾ 67ರಷ್ಟು ಮಂದಿ ಮೋದಿ ಜನಪ್ರೀಯತೆ ದೇಶ ವಿದೇಶದಲ್ಲಿ ಹೆಚ್ಚಾಗಿದೆ ಎಂದಿದ್ದಾರೆ. 2020ರಲ್ಲಿ ಇದೇ ಸಮೀಕ್ಷೆಯಲ್ಲಿ ಮೋದಿ ಜನಪ್ರಿಯತೆ ಶೇಕಡಾ 62ರಷ್ಟಿತ್ತು. ಕೊರೋನಾ ನಿರ್ವಹಣೆ, ದೇಶದ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಬದಲಾವಣೆ, ಲಸಿಕೆ ಸೇರಿದಂತೆ ಹಲವು ಯೋಜನೆಗಳಿಂದ ಮೋದಿ ವರ್ಚಸ್ಸು ಹೆಚ್ಚಾಗಿದೆ ಎಂದು ಜನ ಸಮೀಕ್ಷೆಯಲ್ಲಿ ಹೇಳಿದ್ದಾರೆ.

8 ವರ್ಷಗಳ ಪ್ರಧಾನಿ ಪಯಣ, ಸಾಮಾನ್ಯನಿಂದ ವಿಶ್ವನಾಯಕನವರೆಗೆ ಮೋದಿ ಜರ್ನಿ

ಮೂರನೇ ಅಲೆಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ನಿರ್ವಹಿಸಿತ್ತು. ಇದೀಗ ಮತ್ತೊಂದು ಅಲೆ ಬಂದರೂ ಸರ್ಕಾರ ನಿರ್ವಹಿಸುವಷ್ಟು ಸನ್ನದ್ಧವಾಗಿದೆ. ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಕೋವಿಡ್ ರೀತಿಯ ಸಾಂಕ್ರಾಮಿಕ ರೋಗ ಎದುರಿಸಲು ಭಾರತ ಇತರ ಎಲ್ಲಾ ದೇಶಗಳಿಗಿಂತ ಹೆಚ್ಚು ತಯಾರಾಗಿದೆ ಎಂದು ಸಮೀಕ್ಷೆಯಲ್ಲಿ ಜನ ಹೇಳಿದ್ದಾರೆ. ಆದರೆ ಸದ್ಯ ಎದ್ದಿರುವ ಹಣದುಬ್ಬರ, ಬೆಲೆ ಏರಿಕೆ ಸಮಸ್ಯೆಗಳನ್ನು ನಿಭಾಯಿಸುಲ್ಲಿ ಮೋದಿ ಸರ್ಕಾರ ಎಡವಿಡೆ ಎಂದು ಶೇಕಡಾ 47 ರಷ್ಟು ಮಂದಿ ಹೇಳಿದ್ದಾರೆ.

ಇನ್ನು ಶೇಕಡಾ 7 ರಷ್ಟು ಮಂದಿ ನಿರುದ್ಯೋಗ ಸಮಸ್ಯೆಯನ್ನು ನಿಭಾಯಿಸಲು ಮೋದಿ ಸರ್ಕಾರ ಯಾವುದೇ ಯೋಜನೆ ರೂಪಿಸಿಲ್ಲ ಎಂದಿದ್ದಾರೆ. ಬೆಲೆ ಏರಿಕೆ ಮೋದಿ ಸರ್ಕಾರಕ್ಕೆ ತೀವ್ರ ತಲೆನೋವಾಗಿದೆ. ಗೋಧಿ ರಫ್ತು ನಿರ್ಬಂಧ ಸೇರಿದಂತೆ ಹಲವು ನಿರ್ಧಾರಗಳನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಆದರೆ ಅಗತ್ಯವಸ್ತುಗಳ ಬೆಲೆ ಕಡಿಮೆಯಾಗಿಲ್ಲ. ಇದು ಮುಂಬರುವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಲೆನೋವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಕಳೆದ 3 ವರ್ಷದಲ್ಲಿ ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆ ತೀವ್ರವಾಗಿದೆ ಎಂದು ಶೇಕಡಾ 73 ರಷ್ಟು ಮಂದಿ ಹೇಳಿದ್ದಾರೆ. ಶೇಕಡಾ 44 ರಷ್ಟು ಮಂದಿ, ಕೇಂದ್ರ ಸರ್ಕಾರ ಮಾಲಿನ್ಯ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದಿದ್ದಾರೆ. ಇನ್ನು ಶೇಕಡಾ 60 ರಷ್ಟು ದೇಶದಲ್ಲಿ ಕೋಮುಸೌಹಾರ್ಧತೆ ಸ್ಥಾಪಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದಿದ್ದಾರೆ. ಶೇಕಡಾ 33 ರಷ್ಟು ಮಂದಿ ದೇಶದಲ್ಲಿ ಕೋಮುಸೌಹಾರ್ಧತೆಯನ್ನು ಕೇಂದ್ರ ಹಾಳುಮಾಡಿದೆ ಎಂದಿದೆ.

ಮೋದಿಗೆ ಪುಟ್ಟ ಪೋರನ ಸರ್ಪ್ರೈಸ್, ಮಕ್ಕಳೊಂದಿಗೆ ಮಗುವಾಗ್ತಾರೆ ಪ್ರಧಾನಿ!

ಶೇಕಡಾ 50 ರಷ್ಟು ಮೋದಿ ಸರ್ಕಾರದ ಆಡಳಿತದಲ್ಲಿ ಭಾರತದಲ್ಲಿ ಉದ್ಯಮ ನಡೆಸುವುದು, ಉದ್ಯಮ ಸ್ಥಾಪಿಸಿವುದು ಸುಲಭವಾಗಿದೆ ಎಂದಿದ್ದಾರೆ.

21ನೇ ಶತಮಾನದಲ್ಲಿ ವಿಶ್ವಾದ್ಯಂತ ನಾಯಕತ್ವದ ವ್ಯಾಖ್ಯೆ ಬದಲಾಗುತ್ತಿದೆ. ಉದಾರವಾದಿ ನಾಯಕರುಗಳಿಗಿಂತ ಕಟುವಾಗಿ ಮಾತನಾಡುವ, ಸ್ಪಷ್ಟವಾಗಿ ತಮ್ಮ ವಿಚಾರಗಳನ್ನು ಪ್ರಸ್ತುತ ಮಾಡುವ ನಾಯಕರುಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರಗಳ ವಿರುದ್ಧ ಆಡಳಿತ ವಿರೋಧಿ ಅಲೆ ಏಳುವ ಭಾರತದಲ್ಲಿ ಮೋದಿ 13 ವರ್ಷ ಮುಖ್ಯಮಂತ್ರಿ ಆದ ಮೇಲೂ, 8 ವರ್ಷ ಪ್ರಧಾನಿ ಆದ ಮೇಲೂ ಜನಪ್ರಿಯತೆ ಮತ್ತು ವರ್ಚಸ್ಸು ಕಟ್ಟಾಮತ್ತು ತಟಸ್ಥ ಮತದಾರರಲ್ಲಿ ದೊಡ್ಡ ದಾಗಿ ಇಳಿಮುಖ ಆಗದೇ ಇರಲು ಮುಖ್ಯ ಕಾರಣ ಕಠೋರ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ. ಹಾಗಾಗಿಯೇ ಅವರು ಸದ್ಯದ ಮಟ್ಟಿದೆ ದೇಶದ ನಂ.1 ನಾಯಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್