ನವದೆಹಲಿ(ಮೇ.30): ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸೈನಿಕರ ಜಮಾವಣೆಯಿಂದ ಸಾಧ್ಯವಿಲ್ಲ. ನೆರೆ ರಾಷ್ಟ್ರಗಳ ಜೊತೆಗೆ ಮಾತುಕತೆ ಮೂಲಕ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ, ನ್ಯಾಷನಲ್ ಕಾನ್ಫೆರೆನ್ಸ್ ನಾಯಕ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಚಿತ್ರಣ ಬದಲಾಗಿದೆ. ಆದರೆ ಇಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆ, ಉಗ್ರರ ದಾಳಿಗೆ ಕಡಿವಾಣ ಬಿದ್ದಿಲ್ಲ. ಇದೀಗ ಇದೇ ವಿಚಾರ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಪಾರೂಖ್ ಅಬ್ದುಲ್ಲಾ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ನಡೆದ ಮುಸ್ಲಿಮ್ ಚಿಂತಕರ ಭೇಟಿ ಸಮಾರಂಭದಲ್ಲಿ ಅಬ್ದುಲ್ಲಾ ಈ ಮಾತುಗಳನ್ನಾಡಿದ್ದಾರೆ.
ಉಗ್ರ ಯಾಸಿನ್‌ಗೆ ಶಿಕ್ಷೆಯಾದರೆ ಭಾರತದ ವಿರುದ್ಧ ಘೋಷಣೆ, ಭಯೋತ್ಪಾದಕರಿಗೆ ಬಹುಪರಾಕ್
ಕಾಶ್ಮೀರದಲ್ಲಿ ಹೆಚ್ಚುವರಿ ಸೇನೆ ನಿಯೋಜನೆ, ಭದ್ರತೆ ಹೆಚ್ಚಿಸುವುದರಿಂದ ಶಾಂತಿ ಸಾಧ್ಯವಿಲ್ಲ, ಕಾಶ್ಮೀರಿ ಜನರ ಹೃದಯ ಗೆಲ್ಲಬೇಕು, ನೆರೆ ರಾಷ್ಟ್ರದ ಜೊತೆ ಮಾತುಕತೆ ನಡೆಸಬೇಕು. ಹೀಗಾದಲ್ಲಿ ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಇದರ ನಡುವೆ ನಾವು ಭಾರತೀಯ ಮುಸ್ಲಿಮರು, ನಮ್ಮ ಮೇಲೆ ನಂಬಿಕೆ ಇಡಿ, ನಾವು ರಷ್ಯಾ, ಚೈನಾದಿಂದ ಬಂದಿಲ್ಲ ಎಂದು ಫಾರೂಖ್ ಅಬ್ದುಲ್ಲಾ ಅಲ್ಪಸಂಖ್ಯಾತ ದಾಳ ಉರುಳಿಸಿದ್ದಾರೆ. ಈ ಮೂಲಕ ಅಲ್ಪಸಂಖ್ಯಾತರ ಮೇಲೆ ಕೇಂದ್ರ ಸರ್ಕಾರ ದಾಳಿ ಮಾಡುತ್ತಿದೆ ಎಂದು ತಮ್ಮ ಮೇಲಿನ ಇಡಿ ವಿಚಾರಣೆಯನ್ನು ರಾಜಕೀಯ ಸ್ಪರ್ಶ ನೀಡಿದ್ದಾರೆ. 112 ಕೋಟಿ ರೂಪಾಯಿ ಅಕ್ರಮ ಹಣವ್ಯವಹಾರ ಆರೋಪ ಪಾರೂಖ್ ಅಬ್ದುಲ್ಲಾ ಮೇಲಿದೆ.
ಕ್ರಿಕೆಟ್ ಹಣ ದುರ್ಬಳಕೆ: ಫಾರೂಖ್ ಅಬ್ದುಲ್ಲಾ ಗೆ ಇ.ಡಿ. ಸಂಕಷ್ಟ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಅಧ್ಯಕ್ಷರಾಗಿದ್ದ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾಗೆ ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ಸಮನ್ಸ್ ಜಾರಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 31ರಂದು ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ.
ಕಾಶ್ಮೀರಿ ಹಿಂದು ರಾಹುಲ್ ಭಟ್ ಹತ್ಯೆ ಮಾಡಿದ 3 ಭಯೋತ್ಪಾದಕರಿಗೆ ಗುಂಡಿಕ್ಕಿದ ಭಾರತೀಯ ಸೇನೆ!
2011-12ರಲ್ಲಿ ಬಿಸಿಸಿಐ, ಕಾಶ್ಮೀರ ಕ್ರಿಕೆಟ್ ಸಂಸ್ಥೆಗೆ 112 ಕೋಟಿ ರು. ನೀಡಿತ್ತು. ಇದರಲ್ಲಿ 46 ಕೋಟಿ ರು. ಅಕ್ರಮ ನಡೆದಿತ್ತು ಎನ್ನಲಾಗಿದೆ. ಆಗ ಅಬ್ದುಲ್ಲಾ ಜೆಕೆಸಿಎ ಅಧ್ಯಕ್ಷರಾಗಿದ್ದರು. ಹೀಗಾಗಿ ಅವರ ವಿಚಾರಣೆಗೆ ಸಮನ್ಸ್ ಜಾರಿ ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಈ ಹಿಂದೆ 2020ರಲ್ಲಿ ಅಬ್ದುಲ್ಲಾ ಅವರ 11.86 ಕೋಟಿ ರು. ಮೌಲ್ಯದ ಆಸ್ತಿಯನ್ನು ಇ.ಡಿ. ಜಪ್ತಿ ಮಾಡಿತ್ತು.
‘ಸಮನ್ಸ್ ಹೊಸತೇನಲ್ಲ. ಇದು ಭಾರತದಲ್ಲಿ ಎಲ್ಲಾ ವಿಪಕ್ಷಗಳಿಗೂ ಸಾಮಾನ್ಯವಾದುದಾಗಿದೆ. ಅವರು ಇ.ಡಿ.ಯೊಂದಿಗೆ ವಿಚಾರಣೆಯಲ್ಲಿ ಭಾಗಿಯಾಗಲಿದ್ದಾರೆ’ ಎಂದು ಅಬ್ದುಲ್ಲಾ ಅವರ ಪಕ್ಷ ನ್ಯಾಷನಲ್ ಕಾನ್ಫರೆನ್ಸ್ ಟ್ವೀಟ್ ಮಾಡಿದೆ.
ಕಾಶ್ಮೀರದಲ್ಲಿ 370ನೇ ವಿಧಿ ಮರುಜಾರಿಗೆ ರೈತ ಪ್ರತಿಭಟನೆ ರೀತಿ ಹೋರಾಟ ಮಾಡಬೇಕು ಎಂದು ಇದೇ ಫಾರೂಖ್ ಅಬ್ದುಲ್ಲಾ ಕಳೆದ ವರ್ಷ ಕರೆ ನೀಡಿದ್ದರು. ಕೃಷಿ ಕಾಯ್ದೆ ವಿರುದ್ಧ ಹೋರಾಡಿ ರೈತಲು ಬಲಿದಾನ ನೀಡಿದ ರೀತಿಯಲ್ಲೇ, ಸಂವಿಧಾನದ 370ನೇ ಮರುಜಾರಿಗಾಗಿ ಕಾಶ್ಮೀರಿಗಳು ಬಲಿದಾನ ಮಾಡಬೇಕಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರುಖ್ ಅಬ್ದುಲ್ಲಾ ವಿವಾದಿತ ಕರೆ ನೀಡಿದ್ದಾರೆ. ಪಕ್ಷದ ಸಂಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ 116ನೇ ಜಯಂತಿ ಕಾರ್ಯಕ್ರಮದಲ್ಲಿ ಪಕ್ಷದ ಯುವ ಘಟಕವನ್ನುದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿ ಮತ್ತು 35(ಎ) ಅನುಚ್ಛೇದವನ್ನು ಮರುಸ್ಥಾಪಿಸಲು ನಾವು ಭರವಸೆ ನೀಡಿದ್ದೇವೆ. ಇದಕ್ಕಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.