ವಾರಣಾಸಿ(ಮೇ.30): ಗ್ಯಾನವಾಪಿ ಮಸೀದಿ ಆವರಣದಲ್ಲಿ ಹಿಂದೂ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಐವರು ಮಹಿಳೆಯರ ಅರ್ಜಿ ಪ್ರಶ್ನಿಸಿ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ವಾರಣಾಸಿ ಕೋರ್ಟ್ ವಿಚಾರಣೆಯನ್ನ ಜುಲೈ 4ಕ್ಕೆ ಮುಂದೂಡಿದೆ.
ಹಿಂದೂ ಮಹಿಳೆಯರು ಸಲ್ಲಿಸಿರುವ ಶೃಂಗಾರ ಗೌರಿ ವಿಗ್ರಹ ಪೂಜೆ ಹಾಗೂ ನಿರ್ವಹಣೆಯನ್ನು ಪ್ರಶ್ನಿಸಿ ಅಂಜುಮನ್ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದೆ.ಈ ಕುರಿತು ಹಿಂದೂ ಮಹಿಳೆಯರ ಪರ ವಾದ ಮಂಡಿಸಿದ ವಕೀಲ ವಿಷ್ಣು ಜೈನ್ ಹೇಳಿದ್ದಾರೆ.
ಪಿಎಫ್ಐ ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲು ಆಗ್ರಹಿಸಿದ ಸೂಫಿ ಇಸ್ಲಾಮಿಕ್ ಬೋರ್ಡ್!
ಮಸೀದಿ ಕಮಿಟಿ ಪರವಾಗಿ ವಾದಿಸಿದ ವಕೀಲರು, ಇದೀಗ ಹಿಂದೂ ಮಹಿಳೆಯರು ಕೇಳಿರುವ ಅವಕಾಶ 1991 ಪೂಜಾ ಕಾಯ್ದೆಗೆ ವಿರುದ್ಧವಾಗಿದೆ. ಹೀಗಾಗಿ ಐವರು ಮಹಿಳೆಯರು ಪೂಜೆಗೆ ಅವಕಾಶ ಕೋರಿದ್ದ ಅರ್ಜಿ ಕಾನೂನಿನಲ್ಲಿ ಯಾವುಗೇ ಮಾನ್ಯತೆ ಇಲ್ಲ ಎಂದಿದ್ದಾರೆ.
ಇಂದಿನ ವಿಚಾರಣೆಗೆ ಕೋರ್ಟ್ ಸಿಬ್ಬಂದಿಗಳು, ವಕೀಲರು ಸೇರಿ ಒಟ್ಟು 47 ಮಂದಿಗೆ ಮಾತ್ರ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿತ್ತು. ಇದರ ನಡುವೆ ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪಾರ್ಥನೆ ಹಾಗೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಇದು ನಮ್ಮ ಹಕ್ಕು ಎಂದು ಬ್ರಾಹ್ಮಣ ಮಹಾಸಭಾ, ತ್ವರಿತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಜುಲೈ 8ಕ್ಕೆ ವಿಚಾರಣೆ ನಡೆಸುವುದಾಗಿ ಸೂಚಿಸಿದೆ. ಗ್ಯಾನವಾಪಿ ಮಸೀದಿಯಲ್ಲಿ ಸಮೀಕ್ಷೆ ನಡೆದ ವೇಳೆ ಪತ್ತೆಯಾದ ಶಿವಲಿಂಗದ ಪೂಜೆಗೆ ಅವಕಾಶ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯನ್ನು ತ್ವರಿತ ನ್ಯಾಯಾಲಯಕ್ಕೆ ಹಸ್ತಾಂತರಿಸಲು ಕಳೆದವಾರ ವಾರಾಣಸಿ ಜಿಲ್ಲಾ ನ್ಯಾಯಾಲಯ ನಿರ್ಧರಿಸಿತ್ತು.
ಏತನ್ಮಧ್ಯೆ, ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸಲು ಮತ್ತು ಪೂಜಿಸಲು ಹಕ್ಕುಗಳನ್ನು ಕೋರಿ ಕೇಂದ್ರೀಯ ಬ್ರಾಹ್ಮಣ ಮಹಾಸಭಾ ತ್ವರಿತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಗ್ಯಾನವಾಪಿ ಶಿವಲಿಂಗ ಒಡೆದು ಕಾರಂಜಿ ನಿರ್ಮಾಣಕ್ಕೆ ಯತ್ನ!
ಗ್ಯಾನವಾಪಿ ಪ್ರಕರಣ ವಿಚಾಚರಣೆಯನ್ನು ಮೇ 30ಕ್ಕೆ ಮುಂದೂಡಿದ್ದ ಕೋರ್ಟ್
ವಾರಾಣಸಿ ಜಿಲ್ಲಾ ನ್ಯಾಯಾಲಯವು ಗುರುವಾರ ಗ್ಯಾನವಾಪಿ ಮಸೀದಿ- ಶೃಂಗಾರ ಗೌರಿ ದೇವಾಲಯದ ಪ್ರಕರಣದಲ್ಲಿ ಮುಸ್ಲಿಂ ಪಕ್ಷದವರ ವಾದವನ್ನು ಆಲಿಸಿತ್ತು. ಆದರೆ ವಿಚಾರಣೆ ಪೂರ್ಣಗೊಳ್ಳದ ಕಾರಣ ಮೇ 30 ರಂದು ವಿಚಾರಣೆಯನ್ನು ಮುಂದುವರೆಸುವುದಾಗಿ ಹೇಳಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡ ವಾರಣಾಸಿ ಕೋರ್ಟ್ ಇದೀಗ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿದೆ.
ಜಿಲ್ಲಾ ಸರ್ಕಾರಿ ವಕೀಲರಾದ ರಾಣಾ ಸಂಜೀವ್ ಸಿಂಗ್, ‘ನ್ಯಾಯಾಲಯವು ಮೇ 24 ಹಾಗೂ 26 ರಂದು ಗ್ಯಾನವಾಪಿ ಮಸೀದಿ ಪ್ರಕರಣದ ವಿಚಾರಣೆ ನಡೆಸಿದೆ. ಸುಪ್ರೀಂಕೋರ್ಚ್ ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ ಸ್ಥಳೀಯ ನ್ಯಾಯಾಲಯದ ಕೇಸನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.
ಗ್ಯಾನವಾಪಿ ಕೇಸ್‌ನಲ್ಲಿ ಕಕ್ಷಿದಾರ ಆಗಲು ಕೋರಿ ಬಿಜೆಪಿಗ ಅರ್ಜಿ
ಗ್ಯಾನವಾಪಿ ಮಸೀದಿ ಕುರಿತು ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾದ ದಿನವೇ, ದೆಹಲಿಯ ಬಿಜೆಪಿ ನಾಯಕ ಕೂಡ ಆಗಿರುವ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ಪ್ರಕರಣದಲ್ಲಿ ತಮ್ಮನ್ನು ಕಕ್ಷಿದಾರ ಎಂದು ಪರಿಗಣಿಸುವಂತೆ ಕೋರಿ ಸುಪ್ರೀಂಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದಾರೆ.
‘ನಾನು ಪ್ರಯಾಗರಾಜ್‌ನಲ್ಲಿ ಜನಿಸಿದ್ದೇನೆ. ವಾರಾಣಾಸಿಗೆ ನಿಯಮಿತವಾಗಿ ಹೋಗಿ ಮಹಾದೇವ, ಗೌರಿ ಮಾತೆಗೆ ಪೂಜೆ ಸಲ್ಲಿಸಿದ್ದೇನೆ. ಸೂರು, ಗೋಡೆ, ಕಂಬ, ಬುನಾದಿ ಧ್ವಂಸಗೊಳಿಸುವುದರಿಂದ ಹಾಗೂ ನಮಾಜ್ ಮಾಡುವುದರಿಂದ ದೇಗುಲದ ಧಾರ್ಮಿಕ ಗುಣಲಕ್ಷಣ ಬದಲಾಗುವುದಿಲ್ಲ. ವಿಗ್ರಹವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಬೇರೆ ದೇವಸ್ಥಾನಕ್ಕೆ ಸ್ಥಳಾಂತರ ಮಾಡುವವರೆಗೆ ದೇಗುಲ ಎಂಬುದು ದೇಗುಲವಾಗಿಯೇ ಇರುತ್ತದೆ’ ಎಂದು ವಾದಿಸಿದ್ದಾರೆ.