ಕಠ್ಮಂಡು: ನೇಪಾಳದ ಪ್ರಧಾನಿ ಶೇರ್ ಬದೂರ್ ದೆವುಬಾ ಆಹ್ವಾನದ ಮೇರೆಗೆ ನೇಪಾಳಕ್ಕೆ ಪ್ರವಾಸ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ನೇಪಾಳದ ಪ್ರಧಾನಿ ಜೊತೆ ಮಾಯಾ ದೇವಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಭಗವಾನ್ ಬುದ್ಧನ ಜನ್ಮಸ್ಥಳವಾದ ಬೌದ್ಧ ಧರ್ಮದ ಪವಿತ್ರ ಸ್ಥಳಗಳಲ್ಲಿ ಒಂದಾದ ಲುಂಬಿನಿಗೆ ಬುದ್ಧಪೂರ್ಣಿಮೆ ದಿನ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಇಂದು (ಮೇ.16) ನೇಪಾಳಕ್ಕೆ ಆಗಮಿಸಿದ್ದಾರೆ. ಈ ಭೇಟಿಯ ವೇಳೆ ಜಲವಿದ್ಯುತ್, ಅಭಿವೃದ್ಧಿ ಮತ್ತು ಸಂಪರ್ಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಲು ಅವರು ನೇಪಾಳ ಪ್ರಧಾನಿ ಬಹದ್ದೂರ್ ದೇವುಬಾ ಅವರೊಂದಿಗೆ ಸಭೆ ನಡೆಸಿದ್ದಾರೆ.
ಉತ್ತರ ಪ್ರದೇಶದ ಕುಶಿನಗರದಿಂದ ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮೋದಿ ಮತ್ತು ಅವರ ಪರಿವಾರದವರು ನೇಪಾಳಕ್ಕೆ ಆಗಮಿಸಿದರು. ನೇಪಾಳದಲ್ಲಿ ಬಂದಿಳಿದೆ. ಬುದ್ಧ ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ ನೇಪಾಳದ ಅದ್ಭುತ ಜನರ ನಡುವೆ ಇರಲು ಸಂತೋಷವಾಗಿದೆ. ಲುಂಬಿನಿಯಲ್ಲಿನ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ ಎಂದು ನೇಪಾಳಕ್ಕೆ ತೆರಳಿದ ನಂತರ ಮೋದಿ ಟ್ವೀಟ್ ಮಾಡಿದ್ದರು.
ಕಾಶ್ಮೀರವನ್ನು ಬಿಟ್ಟು ಹೊರಡಿ, ಪಂಡಿತರ ಮನೆಗೆ ಉಗ್ರರಿಂದ ಎಚ್ಚರಿಕೆ ಪತ್ರ..!
ಲುಂಬಿನಿಗೆ ಆಗಮಿಸಿದ ಮೋದಿ ಅವರನ್ನು ನೇಪಾಳ ಪ್ರಧಾನಿ ದೇವುಬಾ ಸ್ವಾಗತಿಸಿದರು. ನಂತರ ಪವಿತ್ರ ಮಾಯಾದೇವಿ ದೇವಸ್ಥಾನದಲ್ಲಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಮೋದಿ ಐತಿಹಾಸಿಕ ದೇವಾಲಯಕ್ಕೆ ಭೇಟಿ ನೀಡಿದಾಗ ದೇವುಬಾ ಅವರ ಜೊತೆಗಿದ್ದರು. ಲುಂಬಿನಿಯ ಪವಿತ್ರ ಮಾಯಾ ದೇವಿ ದೇವಾಲಯದಲ್ಲಿ ಪ್ರಾರ್ಥನೆಯೊಂದಿಗೆ ನೇಪಾಳ ಭೇಟಿಯನ್ನು ಪ್ರಾರಂಭಿಸುತ್ತಿದ್ದೇನೆ' ಎಂದು ಪ್ರಧಾನ ಮಂತ್ರಿಗಳ ಕಚೇರಿ (PMO) ಟ್ವೀಟ್ ಮಾಡಿದೆ.
A timeless bond of friendship…
Prime Ministers and at the Maya Devi Temple in Lumbini. 🇮🇳 🇳🇵 pic.twitter.com/o5T6jEHd2e
PM Narendra Modi received by Nepal PM Sher Bahadur Deuba on his arrival at Lumbini
PM will visit Mahamayadevi Temple on today
(Video source: DD) pic.twitter.com/4TSOCIBu8T
ಲುಂಬಿನಿಗೆ ಒಂದು ದಿನದ ಭೇಟಿಯ ಭಾಗವಾಗಿ ಮೋದಿ ಮಾಯಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ. ಬುದ್ಧನ ಜನ್ಮಸ್ಥಳವನ್ನು ನಿಖರವಾಗಿ ಸೂಚಿಸುವ ದೇವಾಲಯದ ಆವರಣದಲ್ಲಿರುವ ಮಾರ್ಕರ್ ಸ್ಟೋನ್‌ನಲ್ಲಿ ನಾಯಕರು ಗೌರವ ಸಲ್ಲಿಸಿದರು. ಅವರು ಬೌದ್ಧ ಧಾರ್ಮಿಕ ವಿಧಿಗಳ ಪ್ರಕಾರ ನಡೆದ ಪೂಜೆಯಲ್ಲಿ ಪಾಲ್ಗೊಂಡರು ಎಂದು ಅದು ವಿದೇಶಾಂಗ ವ್ಯವಹಾರಗಳ ಇಲಾಖೆ ತನ್ನ ಟ್ವಿಟ್‌ನಲ್ಲಿ ಹೇಳಿದೆ. ಉಭಯ ನಾಯಕರು ದೇವಸ್ಥಾನದ ಪಕ್ಕದಲ್ಲಿರುವ ಅಶೋಕ ಸ್ತಂಭದ (Ashoka Pillar) ಬಳಿ ದೀಪಗಳನ್ನು ಬೆಳಗಿಸಿದರು. ಕ್ರಿಸ್ತಪೂರ್ವ 249 ರಲ್ಲಿ ಚಕ್ರವರ್ತಿ ಅಶೋಕನಿಂದ ಸ್ಥಾಪಿಸಲ್ಪಟ್ಟ ಸ್ತಂಭ ಇದಾಗಿದ್ದು, ಲುಂಬಿನಿಯು (Lumbini) ಭಗವಾನ್ ಬುದ್ಧನ ಜನ್ಮಸ್ಥಳ (birthplace of Lord Buddha) ಎಂಬುದಕ್ಕೆ ಎಂಬುದಕ್ಕೆ ಮೊದಲ ಶಿಲಾಶಾಸನವನ್ನು ಹೊಂದಿದೆ.
Buddha purnima 2022 ಬುದ್ಧ ಪೂರ್ಣಿಮೆಯಲ್ಲಿ ಭಾಗಿಯಾಗಲು ಇಂದು ಪ್ರಧಾನಿ ಮೋದಿ ನೇಪಾಳಕ್ಕೆ!
ನಂತರ, ಇಬ್ಬರು ನಾಯಕರು 2014 ರಲ್ಲಿ ಲುಂಬಿನಿಗೆ ಮೋದಿಯವರು ಉಡುಗೊರೆಯಾಗಿ ನೀಡಿದ ಬೋಧಗಯಾದಿಂದ ಬೋಧಿ ವೃಕ್ಷದ ಸಸಿಗೆ ನೀರುಣಿಸಿದರು ಮತ್ತು ದೇವಾಲಯದಲ್ಲಿದ್ದ ಸಂದರ್ಶಕರ ಪುಸ್ತಕಕ್ಕೆ ಸಹಿ ಹಾಕಿದರು. ಒಂದು ಸಮಯದ ಮೀತಿ ಇಲ್ಲದ ಸ್ನೇಹದ ಬಂಧ ಲುಂಬಿನಿಯ ಮಾಯಾ ದೇವಿ ದೇವಸ್ಥಾನದಲ್ಲಿ ಪ್ರಧಾನ ಮಂತ್ರಿಗಳು @narendramodi ಮತ್ತು @SherBDeuba," ಪ್ರಧಾನಿ ಮೋದಿ ಮತ್ತು ಅವರ ನೇಪಾಳದ ಸಹವರ್ತಿ ದೇವುಬಾ ಬೋಧಿ ವೃಕ್ಷದ ಸಸಿಗೆ ನೀರುಣಿಸುವ ಚಿತ್ರ ಎಂದು PMO ಟ್ವೀಟ್ ಮಾಡಿದೆ.
2014 ರಿಂದ ನೇಪಾಳಕ್ಕೆ ಪ್ರಧಾನಿಯವರ ಐದನೇ ಭೇಟಿ ಇದಾಗಿದೆ. ಮೋದಿ ಮತ್ತು ದೇವುಬಾ ಲುಂಬಿನಿಯಲ್ಲಿ ಕೂಡ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.