ಕೊವಿಡ್ ಲಸಿಕೆ ಪಡೆದ ಮೋದಿ ತಾಯಿ; ಅರ್ಹರು ವ್ಯಾಕ್ಸಿನ್ ಹಾಕಿಸಲು ಪ್ರಧಾನಿ ಮನವಿ!

By Suvarna NewsFirst Published Mar 11, 2021, 2:41 PM IST
Highlights

ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ತಾಯಿ ಕೊರೋನಾ ಲಸಿಕೆ ಪಡೆದಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ(ಮಾ.11): ಕೊರೋನಾ ವಿರುದ್ಧ ಭಾರತ ಜನವರಿ 16 ರಿಂದ ಭಾರತದಲ್ಲಿ ಲಸಿಕೆ ಅಭಿಯಾನ ಆರಂಭಿಸಿದೆ. ಈ ಮೂಲಕ ದೇಶದಿಂದ ಕೊರೋನಾ ಹೊಡೆದೊಡಿಸಲು ಅವಿರತ ಪ್ರಯತ್ನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ದೇಶದ ಹಲವು ಗಣ್ಯರು ಈಗಾಗಲೇ ಕೋವಿಡ್ ಲಸಿಕೆ ಪಡೆದಿದ್ದಾರೆ. ಇದೀಗ ಮೋದಿ ತಾಯಿ ಹೀರಾಬೆನ್ ಮೋದಿ ಲಸಿಕೆ ಪಡೆದಿದ್ದಾರೆ.

ಕೋವಿಡ್ ಲಸಿಕೆ 3ನೇ ಹಂತದ ಅಭಿಯಾನ: ಏಮ್ಸ್‌ನಲ್ಲಿ ಲಸಿಕೆ ಪಡೆದ ಮೋದಿ

ತಾಯಿ ಲಸಿಕೆ ಪಡೆದಿರುವುದನ್ನು ಸ್ವತಃ ಮೋದಿ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ಅರ್ಹರು ಲಸಿಕೆ ಪಡೆಯಲು ಮನವಿ ಮಾಡಿದ್ದಾರೆ.  ನನ್ನ ತಾಯಿ ಇಂದು COVID-19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಈ ವಿಚಾರ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಲಸಿಕೆ ಪಡೆಯಲು ಅರ್ಹರಾಗಿರುವ ನಿಮ್ಮ ಸುತ್ತಮುತ್ತಲಿನ ಜನರನ್ನು ಪ್ರೇರೇಪಿಸಲು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

 

Happy to share that my mother has taken the first dose of the COVID-19 vaccine today. I urge everyone to help and motivate people around you who are eligible to take the vaccine.

— Narendra Modi (@narendramodi)

ದಪ್ಪ ಚರ್ಮದ ರಾಜಕಾರಣಿಗಳಿಗೆ ಯಾವ ಸೂಜಿ? ಆಸ್ಪತ್ರೆಯಲ್ಲಿ ಮೋದಿ ಹಾಸ್ಯಚಟಾಕಿ

ಮಾರ್ಚ್ 1 ರಿಂದ ಭಾರತದಲ್ಲಿ 60 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಂದಿಗೆ ಲಸಿಕೆ ಹಾಕಲಾಗುತ್ತಿದೆ. 100 ವರ್ಷ ಪೂರೈಸಿರುವ ಹೀರಾ ಬೆನ್ ಮೋದಿ ಇದೀಗ ಲಸಿಕೆ ಪಡೆದಿದ್ದಾರೆ.  

click me!