ಲಂಕಾದಿಂದ ಕಚ್ಚತೀವು ದ್ವೀಪ ಮರಳಿ ಪಡೆಯಲು ಮೋದಿ ಸರ್ಕಾರ ಯತ್ನ, ಅಣ್ಣಾಮಲೈ ಹೇಳಿಕೆ ಸಂಚಲನ!

By Suvarna News  |  First Published Apr 1, 2024, 9:30 PM IST

ಲೋಕಸಭಾ ಚುನಾವಣೆ ಹೊತ್ತಲ್ಲಿ ಕಚ್ಚತೀವು ದ್ವೀಪ ಭಾರಿ ಕೋಲಾಹಲ ಸೃಷ್ಟಿಸಿದೆ. ಕಾಂಗ್ರೆಸ್ ಸರ್ಕಾರ ಶ್ರೀಲಂಕಾಗೆ ನೀಡಿದ ಭಾರತದ ದ್ವೀಪವನ್ನು ಮೋದಿ ಸರ್ಕಾರ ಮರಳಿ ಪಡೆಯಲ ಪ್ರಯತ್ನಿಸುತ್ತಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಈ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ.
 


ಚೆನ್ನೈ(ಏ.01) ಲೋಕಸಭಾ ಚುನಾವಣೆ ಕಣ ರಂಗೇರಿದೆ. ಇದರ ನಡುವೆ ಕಚ್ಚತೀವು ದ್ವೀಪ ವಿವಾದ ಭುಗಿಲೆದ್ದಿದೆ. ಈ ದ್ವೀಪವನ್ನು 1974ರಲ್ಲಿ ಇಂದಿರಾ ಗಾಂಧಿ ಶ್ರೀಲಂಕಾಗೆ ಅಧಿಕೃತವಾಗಿ ನೀಡಿದ್ದಾರೆ. ಈ ಮಾಹಿತಿ ಆರ್‌ಟಿಐನಡಿ ಬಹಿರಂಗವಾಗಿದೆ. ಅಣ್ಣಾಮಲೈ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ದ ಮುಗಿಬಿದ್ದಿದ್ದಾರೆ. ಇತ್ತ ಕಾಂಗ್ರೆಸ್ ಮೋದಿ ಸರ್ಕಾರದಲ್ಲಿ ನಡೆದಿರುವ ಭಾರತ-ಬಾಂಗ್ಲಾದೇಶ ಒಪ್ಪಂದವನ್ನು ಕದೆಕಿದ್ದಾರೆ. ಹೀಗಾಗಿ ಕಚ್ಚತೀವು ಭಾರಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ನೀಡಿದ  ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಈ ದ್ವೀಪವನ್ನು ಶ್ರೀಲಂಕಾದಿಂದ ಮರಳಿ ಪಡೆಯಲು ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಅಂದಿನ ಕಾಂಗ್ರೆಸ್ ಸರ್ಕಾರ, ಭಾರತದ ದ್ವೀಪವನ್ನು ಶ್ರೀಲಂಕಾಗೆ ನೀಡಲು ಅತೀವ ಉತ್ಸುಕವಾಗಿತ್ತು. ಪ್ರಧಾನಿ ಇಂದಿರಾ ಗಾಂಧಿ ಈ ದ್ವೀಪವನ್ನು ಅಂದಿನ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಮಾತುಕತೆ ನಡೆಸಿ ಶ್ರೀಲಂಕಾಗೆ ನೀಡಿದ್ದರು. ಕಚ್ಚತೀವು ದ್ವೀಪ ತಮಿಳುನಾಡು ಮೀನುಗಾರರಿಗೆ ಎಷ್ಟು ಮುಖ್ಯ ಅನ್ನೋದು ಕರುಣಾನಿಧಿಗೆ ತಿಳಿದಿತ್ತು. ಆದರೆ ಕಾಂಗ್ರೆಸ್ ತಾಳಕ್ಕೆ ತಕ್ಕಂತೆ ಕುಣಿದು, ದೇಶದ ಹಿತಾಸಕ್ತಿಗೆ ಧಕ್ಕೆ ತಂದಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ.

Tap to resize

Latest Videos

ಶ್ರೀಲಂಕಾಗೆ ಸ್ನೇಹದ ಸಂಕೇತವಾಗಿ ದ್ವೀಪ ಬಿಟ್ಟು ಕೊಟ್ಟೆವು: ಕಚತೀವು ದ್ವೀಪದ ಬಗ್ಗೆ ಖರ್ಗೆ ಸಮರ್ಥನೆ

ಕಚ್ಚತೀವು ದ್ಪೀಪವನ್ನು ಶ್ರೀಲಂಕಾದಿಂದ ಮರಳಿ ಪಡೆಯುವತೆ ಬಿಜೆಪಿ ವಿದೇಶಾಂಗ ಸಚಿವೆ ಎಸ್ ಜೈಶಂಕರ್‌ಗೆ ಮನವಿ ನೀಡಿದೆ. ಕೇಂದ್ರ ಮೋದಿ ಸರ್ಕಾರ ಈ ದ್ವೀಪವನ್ನು ಮರಳಿ ಪಡೆಯಲು ಪ್ರಯತ್ನ ನಡೆಸುತ್ತಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ. 

ಕಚ್ಚತೀವು ಕುರಿತು ಟ್ವೀಟ್ ಮೂಲಕ ಆಕ್ರೋಶಹೊರಹಾಕಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್‌ ಎಷ್ಟು ಕಠೋರ ಮನಸ್ಸಿನಿಂದ ಭಾರತದ ಭೂಭಾಗವನ್ನು ಮತ್ತೊಂದು ದೇಶಕ್ಕೆ ಬಿಟ್ಟುಕೊಟ್ಟಿದೆ ಎಂಬುದನ್ನು ಈ ಪ್ರಕರಣ ಬಯಲು ಮಾಡಿದೆ. ಆ ಪಕ್ಷ ಭಾರತವನ್ನು ರಕ್ಷಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದರು.

ಕಚ್ಚತೀವು ದ್ವೀಪ ಶ್ರೀಲಂಕಾಗೆ ನೀಡಿ ಭಾರತಕ್ಕೆ ದ್ರೋಹ ಬಗೆದ ಕಾಂಗ್ರೆಸ್, ಬಿಜೆಪಿ ಸುದ್ದಿಗೋಷ್ಠಿ!

ಕಚ್ಚತೀವು ದ್ವೀಪ ಉಳಿಸಿಕೊಳ್ಳಲು ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಆಸಕ್ತಿ ಇರಲಿಲ್ಲ. ತಮ್ಮ ಹಿತಾಸಕ್ತಿಯೇ ಮುಖ್ಯವಾಗಿತ್ತು. 1960ರಲ್ಲಿ ಲೋಕಸಭೆಯಲ್ಲಿ ಜವಾಹರ್‌ಲಾಲ್ ನೆಹರೂ ಇದೇ ಕಚ್ಚತೀವು ಕುರಿತು ಉತ್ತರ ನೀಡಿದ್ದರು. ‘ಕಚತೀವು ಎಂಬಂತಹ ಸಣ್ಣ ದ್ವೀಪದ ಕುರಿತು ತಕರಾರು ತೆಗೆಯಲು ನಮಗೆ ಆಸಕ್ತಿ ಇಲ್ಲ. ಭಾರತವು ಆ ಪ್ರದೇಶದ ಮೇಲೆ ಹಕ್ಕು ಸಾಧಿಸುವುದನ್ನು ಕೈಬಿಡುತ್ತದೆ’ ಎಂದು ಘೋಷಿಸಿದರು. 1968ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಕಚ್ಚತೀವು ದ್ವೀಪ ಶ್ರೀಲಂಕಾಗೆ ನೀಡಲು ಕಾನೂನು ಪ್ರಕ್ರಿಯೆ ಆರಂಭಿಸಿ 1974ರಲ್ಲಿ ಲಂಕಾಗೆ ನೀಡಲಾಯಿತು.

click me!