ಬಾಂಗ್ಲಾದೇಶದಲ್ಲಿ ಬಾಯ್ಕಾಟ್ ಭಾರತ ಅಭಿಯಾನ, ಪ್ರಧಾನಿ ಸವಾಲಿಗೆ ವಿಪಕ್ಷಗಳು ಮೌನ!

By Suvarna NewsFirst Published Apr 1, 2024, 8:12 PM IST
Highlights

ನಿಮ್ಮ ಅಭಿಯಾನಕ್ಕೆ ತಕ್ಕ ಹಾಗೆ ನಿಮ್ಮ ಪತ್ನಿ ಬಳಿ ಇರುವ ಭಾರತದ ಸೀರೆಯನ್ನು ಸುಟ್ಟು ಹಾಕಿ. ಯಾಕೆ ಜನಸಾಮಾನ್ಯರು ಮಾತ್ರ ಬಹಿಷ್ಕರಿಸಬೇಕು. ನೀವು ಮಾಡಿ ತೋರಿಸಿ ಎಂದು ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. 
 

ಢಾಕಾ(ಏ.01) ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ ವಿಪಕ್ಷಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ವಿಪಕ್ಷಗಳು ಬಾಯ್ಕಾಟ್ ಇಂಡಿಯಾ ಅಭಿಯಾನ ಆರಂಭಿಸಿದ್ದಾರೆ  ಭಾರತದ ಉತ್ಪನ್ನ, ಭಾರತದ ಆಹಾರ ಸೇರಿ ಹಲವು ದ್ವಿಪಕ್ಷೀಯ ಸಂಬಂಧಗಳೂ ಬಹಿಷ್ಕಾರದ ಅಭಿಯಾನ ಆರಂಭಿಸಲಾಗಿದೆ. ಈ ಕುರಿತು ಬಾಂಗ್ಲಾ ಪ್ರಧಾನಿ ಖಡಕ್ ಪ್ರತಿಕ್ರಿಯಿಸಿದ್ದು, ಈ ಅಭಿಯಾನ ಆರಂಭಿಸಿರುವ ನಾಯಕರು ಜನರಲ್ಲಿ ಬಾಯ್ಕಾಟ್ ಇಂಡಿಯಾ ಎಂದು ಹೇಳುತ್ತಿದ್ದಾರೆ. ಈ ನಾಯಕರ ಪತ್ನಿಯರಲ್ಲಿರುವ ಭಾರತದ ಸೀರೆಯನ್ನು ಸುಟ್ಟು ಹಾಕುತ್ತೀರಾ? ನೀವು ಬಾಯ್ಕಾಟ್ ಇಂಡಿಯಾ ಮಾಡಿ ತೋರಿಸಿ ಎಂದು ಶೇಕ್ ಹಸಿನಾ ಸವಾಲು ಹಾಕಿದ್ದಾರೆ.

ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಭಾರತದ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.  ಸತತ 4ನೇ ಭಾರಿ ಪ್ರಧಾನಿಯಾಗಿರುವುದು ಭಾರತದ ನೆರವಿನಿಂದ ಎಂದು ಬಾಂಗ್ಲಾದೇಶದ ವಿಪಕ್ಷಗಳು ಆರೋಪ ಮಾಡುತ್ತಿದೆ. ಭಾರತದ ತಾಳಕ್ಕೆ ತಕ್ಕಂತೆ ಸೇಕ್ ಹಸಿನಾ ಕುಣಿಯುತ್ತಿದ್ದಾರೆ ಅನ್ನೋ ಆರೋಪವನ್ನು ಮಾಡಿದೆ. ಈ ಮೂಲಕ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಅಲೆ ಸೃಷ್ಟಿಸಿ ಶೇಕ್ ಹಸಿನಾರಿಂದ ಅಧಿಕಾರ ಕಸಿದುಕೊಳ್ಳುವ ಯತ್ನದಲಿದೆ. 

'ನಿಮ್ಮ ಹೆಂಡತಿಯರ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿ' ಬಾಂಗ್ಲಾ ಪ್ರಧಾನಿ ಕಿಡಿ

ಬಾಯ್ಕಾಟ್ ಭಾರತ ಅಭಿಯಾನ ತೀವ್ರಗೊಳ್ಳುತ್ತಿರುವಂತೆ ಶೇಕ್ ಹಸಿನಾ ಪ್ರತಿಕ್ರಿಯಿಸಿದ್ದಾರೆ. ಬಾಂಗ್ಲಾದೇಶದ ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ನಾಯಕರು ಭಾರತದ ಉತ್ಪನ್ನಕ್ಕೆ ಬಹಿಷ್ಕಾರ ಅಭಿಯಾನ ತೀವ್ರಗೊಳಿಸುತ್ತಿದ್ದಾರೆ. ಆದರೆ ನ್ಯಾಷನಲಿಸ್ಟ್ ಪಾರ್ಟಿ ನಾಯಕರ ಪತ್ನಿಯರ ಬಳಿ ಎಷ್ಟು ಭಾರತದ ಸೀರೆಗಳಿವೆ. ಅವುಗಳನ್ನು ಸುಟ್ಟು ಹಾಕುತ್ತೀರಾ? ನಾಯಕರು ತಮ್ಮ ಪತ್ನಿಯರ ಬಳಿ ಇರುವ ಭಾರತೀಯ ಸೀರೆಗಳನ್ನು ತಂದು ಅವರ ಕಚೇರಿ ಮುಂದೆ ಸುಟ್ಟುಹಾಕಲಿ. ಹೀಗೆ ಮಾಡಿದರೆ ಅದು ನಿಜವಾದ ಬಾಯ್ಕಾಟ್ ಇಂಡಿಯಾ ಅಭಿಯಾನ ಎಂದು ಶೇಕ್ ಹಸಿನಾ ಹೇಳಿದ್ದಾರೆ.

ಸದ್ಯ ಜನಸಾಮಾನ್ಯರಲ್ಲಿ ಬಾಯ್ಕಾಟ್ ಇಂಡಿಯಾ ಎಂದು ಹೇಳಿ, ತಾವು ಭಾರತದ ಉತ್ಪನ್ನ ಅನುಭವಿಸುತ್ತಿರುವುದು ಎಷ್ಟು ಸರಿ ಎಂದು ಶೇಕ್ ಹಸೀನಾ ಹೇಳಿದ್ದಾರೆ. ಪ್ರಮುಖವಾಗಿ ಶೇಕ್ ಹಸೀನಾ ಬಳಿ ಇರುವ ಬಹುತೇಕ ಸೀರೆಗಳು ಭಾರತದ ಪ್ರಮುಖ ನಾಯಕರು ಉಡುಗೊರೆಯಾಗಿ ನೀಡಿದ್ದಾರೆ. ಇದೇ ಸೀರೆಗಳನ್ನು ಪ್ರಮುಖ ಆಧಾರವಾಗಿಟ್ಟುಕೊಂಡು ವಿಪಕ್ಷಗಳು ಬಾಯ್ಕಾಟ್ ಇಂಡಿಯಾ ಅಭಿಯಾನ ತೀವ್ರಗೊಳಿಸಿದೆ.

ಬಾಂಗ್ಲಾ ಚುನಾವಣೆ: 5ನೇ ಅವಧಿಗೆ ಪ್ರಧಾನಿಯಾಗಿ ಮರು ಆಯ್ಕೆಯಾದ ಶೇಖ್‌ ಹಸೀನಾ

ಶೇಕ್ ಹಸಿನಾ ಭಾರತದ ಪರ ಒಲವು ಹೊಂದಿದ್ದಾರೆ. ಜೊತೆಗೆ ಭಾರತದ ಪ್ರಮುಖ ನಿರ್ಣಯಗಳಿಗೆ ಬೆಂಬಲ ನೀಡಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸಂಬಂಧ ಕೂಡ ಉತ್ತವಾಗಿದೆ. ಹಲುವ ಯೋಜನೆಗಳಿಗೆ ಜಂಟಿಯಾಗಿ ಚಾಲನೆ ನೀಡಲಾಗಿದೆ. ಶೇಕ್ ಹಸೀನಾ ಭಾರತವನ್ನು ಮೆಚ್ಚಿಸಲು ಆಡಳಿತ ನಡೆಸುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಿದೆ.
 

click me!