
ಧಾರ್(ಏ.01) ಮಧ್ಯಪ್ರದೇಶದ ಧಾರ್‌ನಲ್ಲಿರುವ ಭೋಜಶಾಲಾ ದೇಗುಲದಲ್ಲಿನ ಸರಸ್ವತಿ ದೇಗುಲದ ಧ್ವಂಸಗೊಳಿಸಿ ಕಮಲಾ ಮಸೀದಿ ನಿರ್ಮಿಸಲಾಗಿದೆ ಅನ್ನೋ ಹೋರಾಟದಲ್ಲಿ ಹಿಂದೂಗಳಿಗೆ ಮತ್ತೊಂದು ಗೆಲುವು ಸಿಕ್ಕಿದೆ. ವಿವಾದಿತ ಭೋಜಶಾಲಾ ಸಮೀಕ್ಷೆಗೆ ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕಮಲಾ ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿವಾದಿತ ಆವರಣ, ಯಾರಿಗೆ ಸೇರಿದ್ದು ಅನ್ನೋದು ಸಾಕ್ಷ್ಯಕ್ಕಾಗಿ ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸುತ್ತಿದೆ. ಇದಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇತ್ತೀಚೆಗೆ ಮಧ್ಯಪ್ರದೇಶ ಹೈಕೋರ್ಟ್ ಈ ವಿವಾದ ಅಂತ್ಯಗೊಳಿಸಲು ಭಾರತೀಯ ಪುರಾತತ್ವ ಇಲಾಖೆಗೆ ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು. ಇದರಂತೆ ಭಾರತೀಯ ಪುರಾತತ್ವ ಇಲಾಖೆ ದೇಗುಲ ಹಾಗೂ ಮಸೀದಿ ಆವರಣದಲ್ಲಿ ಸಮೀಕ್ಷೆ ನಡೆಸುತ್ತಿದೆ. ಆದರೆ ಹೈಕೋರ್ಟ್ ನೀಡಿದ ಆದೇಶ ಪೂಜಾ ಕಾಯ್ದೆಗೆ ವಿರುದ್ಧವಾಗಿದೆ. ಇದು ಹಿಂದೂ ದೇಗುಲವಲ್ಲ, ಕಮಲಾ ಮಸೀದಿ ಎಂದು ಮಸೀದಿ ಮುಸ್ಲಿಮ್ ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಭೋಜಶಾಲಾ ಮಸೀದಿ ಸಮೀಕ್ಷೆ: ಕಂದಕ ತೋಡಿ ಎಎಸ್‌ಐ ಸರ್ವೇ
ತಕ್ಷಣವೇ ಸಮೀಕ್ಷೆಗೆ ತಡೆ ಕೋರಬೇಕು. ಮಸೀದಿಯಲ್ಲಿ ಯಥಾ ಸ್ಥಿತಿ ಕಾಪಾಡಬೇಕು ಎಂದು ಮುಸ್ಲಿಮ್ ಸಮಿತಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ ಮುಸ್ಲಿಂ ಸಮಿತಿಯ ಮನವಿ ತರಿಸ್ಕರಿಸಿದ ಸುಪ್ರೀಂ ಕೋರ್ಟ್, ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿದೆ.
ಧಾರ್‌ನಲ್ಲಿ ಭೋಜ್‌ಶಾಲಾ ದೇಗುಲ ಸಮುಚ್ಚಯ ಮತ್ತು ಕಮಲ್ ಮೌಲಾ ಮಸೀದಿಯೇ ಸಮೀಕ್ಷೆಗೆ ಒಳಪಡಲಿರುವ ವಿವಾದಿತ ಕಟ್ಟಡ. ಸ್ವಾತಂತ್ರ್ಯ ಬಳಿಕ ಈ ವಿವಾದ ಮುಂದುವರಿದಿದೆ. ಇದು ಭೋಜ ರಾಜ ನಿರ್ಮಿಸಿದ ವಾಗ್ದೇವಿ (ಸರಸ್ವತಿ) ದೇಗುಲ ಎಂದು ಹಿಂದೂಗಳುು ತಮ್ಮ ವಾದ ಮಂಡಿಸಿದ್ದಾರೆ. ಇದಕ್ಕೆ ಸಾಕಷ್ಟು ಪುರಾವೆಗಲನ್ನು ನೀಡಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಆಡಳಿತದಲ್ಲಿ ಧ್ವಂಸಗೊಳಿಸಿ ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ವಾದ ಮಂಡಿಸಿದ್ದಾರೆ. ಇತ್ತ ಇದು ದೇಗುಲವಲ್ಲ, ಕಮಲಾ ಮಸೀದಿ ಎಂದು ಮುಸ್ಲಮರು ವಾದಿಸಿದ್ದಾರೆ.
ಭೋಜಶಾಲಾ ಮಸೀದಿ ಮೂಲತಃ ಸರಸ್ವತಿ ದೇಗುಲ: ಖ್ಯಾತ ಇತಿಹಾಸ ತಜ್ಞ ಮೊಹಮ್ಮದ್
ಈ ದೇಗುಲ ಕುರಿತು ಹಿಂದೂಗಳ ಪರ ವಕೀಲ ವಿಷ್ಣು ಶಂಕರ್ ಜೈನ್ ವಾದ ಮಂಡಿಸಿದ್ದಾರೆ. ಇದೇ ವಿಷ್ಣು ಶಂಕರ್ ಜೈನ್ ಕಾಶಿ ಹಾಗೂ ಮಥುರಾದಲ್ಲೂ ಹಿಂದೂಗಳ ಪರ ವಾದ ಮಂಡಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ