ಜೋ ಬೈಡನ್ ಭೇಟಿಗಾಗಿ ಸೆಪ್ಟೆಂಬರ್ ಅಂತ್ಯಕ್ಕೆ ಪ್ರಧಾನಿ ಮೋದಿ ಅಮೆರಿಕ ಪ್ರಯಾಣ!

Published : Sep 04, 2021, 05:24 PM IST
ಜೋ ಬೈಡನ್ ಭೇಟಿಗಾಗಿ ಸೆಪ್ಟೆಂಬರ್ ಅಂತ್ಯಕ್ಕೆ ಪ್ರಧಾನಿ ಮೋದಿ ಅಮೆರಿಕ ಪ್ರಯಾಣ!

ಸಾರಾಂಶ

ಸೆಪ್ಟೆಂಬರ್ ಅಂತ್ಯಕ್ಕೆ ಪ್ರಧಾನಿ ಮೋದಿ ಅಮೆರಿಕ ಪ್ರಯಾಣ ಸಾಧ್ಯತೆ ಜೋ ಬೈಡನ್ ಅಧ್ಯಕ್ಷರಾದ ಬಳಿಕ ಮೊದಲ ನೇರ ಭೇಟಿಗೆ ಮಹೂರ್ತ ಫಿಕ್ಸ್ 2 ವರ್ಷದ ಬಳಿಕ ಅಮರಿಕ ಪ್ರಯಾಣ, ಕೊರೋನಾ ವರದಿ ಮೇಲೆ ಅಂತಿಮ ನಿರ್ಧಾರ

ನವದೆಹಲಿ(ಸೆ.04): ಕೊರೋನಾ ವಕ್ಕರಿಸಿದ ಬಳಿಕ ಅಂತಾರಾಷ್ಟ್ರೀಯ ಸಭೆ, ಮಹತ್ವದ ದ್ವಿಪಕ್ಷೀಯ ಮಾತುಕತೆಗಳು ವಿಡಿಯೋ ಕಾನ್ಫೆರನ್ಸ್ ಮೂಲಕ ನಡೆಯುತ್ತಿದೆ. ಪರಿಸ್ಥಿತಿ ಸದ್ಯ ತಿಳಿಗೊಂಡಿರುವ ಬೆನ್ನಲ್ಲೇ ಮಹತ್ವದ ದ್ವಿಪಕ್ಷೀಯ ಮಾತುಕತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತ ನಡೆದರೆ ಸೆಪ್ಟೆಂಬರ್ ಅಂತಿಮ ವಾರದಲ್ಲಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿಗಾಗಿ ವಾಶಿಂಗ್ಟನ್ ತೆರಳಲಿದ್ದಾರೆ.

ಆಫ್ಘನ್‌ ಪರಿಸ್ಥಿತಿ ನಿಗಾಕ್ಕೆ ಉನ್ನತ ಹಂತದ ತಂಡ ರಚಿಸಿದ ಮೋದಿ!

ಭಾರತದಲ್ಲಿ ಕೊರೋನಾ ನಿಧನಾವಾಗಿ ಏರಿಕೆಯಾಗುತ್ತಿದೆ. ಅತ್ತ ಅಮೆರಿಕದಲ್ಲಿ ಕೊರೋನಾ ಜೊತೆಗೆ ಪ್ರವಾಹ ಕೂಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಸೆಪ್ಟೆಂಬರ್ ಅಂತಿಮ ವಾರದಲ್ಲಿ ಕೊರೋನಾ ವರದಿ ಹಾಗೂ ಪ್ರತಿಕೂಲ ಹವಾಮಾನವಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಜೋ ಬೈಡನ್ ಭೇಟಿಗಾಗಿ ಅಮೆರಿಕ ಪ್ರಯಾಣ ಬೆಳೆಸಲಿದ್ದಾರೆ.

ವಾಶಿಂಗ್ಟನ್ ಪ್ರಯಾಣದಲ್ಲಿ ನರೇಂದ್ರ ಮೋದಿ  ವಿಶ್ವಸಂಸ್ಥೆಯ ಸಾಮಾನ್ಯ ಸಭೆ(UNGA)76ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ವಾಶಿಂಗ್ಟನ್‌ನಲ್ಲಿ ಬೈಡನ್ ಭೇಟಿ ಬಳಿಕ ನೇರವಾಗಿ ಮೋದಿ ನ್ಯೂಯಾರ್ಕ್‌ಗೆ ತೆರಳಿ UNGA ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಜೋ ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೋದಿ ನೇರವಾಗಿ ಭೇಟಿಯಾಗಿಲ್ಲ. ಮಾರ್ಚ್ ತಿಂಗಳಲ್ಲಿ ನಡೆದ G-7 ಶೃಂಗಸಭೆಯಲ್ಲಿ ಮೋದಿ ಹಾಗೂ ಜೋ ಬೈಡ್ ವಿಡಿಯೋ ಕಾನ್ಫೆರನ್ಸ್ ಮೂಲಕ ಮಾತುಕತೆ ನಡೆಸಿದ್ದರು. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಾಹಾಸ,  ಉಗ್ರರಿಗೆ ಚೀನಾ, ಪಾಕಿಸ್ತಾನದ ಬೆಂಬಲ ಸೇರಿದಂತೆ ಹಲವು ಮಹತ್ವದ ಬೆಳವ ಇದೀಗ ಮೋದಿ ಬೈಡನ್  ಭೇಟಿ ಮಹತ್ವದ ಪಡೆದುಕೊಂಡಿದೆ.

ಜಲಿಯನ್‌ವಾಲಾ ಬಾಗ್ ಧೈರ್ಯ, ಪ್ರೇರಣೆ ನೀಡಿದ ಮಣ್ಣು; ನವೀಕರಿಸಿದ ಸ್ಮಾರಕ ದೇಶಕ್ಕೆ ಅರ್ಪಿಸಿದ ಮೋದಿ!

ಮಾರ್ಚ್ ತಿಂಗಳಲ್ಲಿ ನಡೆದ  G-7 ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಲಂಡನ್ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಕೊರೋನಾ 2ನೇ ಅಲೆ ಕಾರಣ ಪ್ರಧಾನಿ ಪ್ರಯಾಣ ರದ್ದು ಮಾಡಲಾಯಿತು. ಇದೀಗ ಮತ್ತೆ ಮೋದಿ ಪ್ರವಾಸಕ್ಕೆ ತಯಾರಿ ನಡೆದಿದೆ.

ಡೋನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಂದರೆ 2019ರಲ್ಲ ಮೋದಿ ಅಮೆರಿಕ ಪ್ರಯಾಣ ಮಾಡಿದ್ದರು. ಹೌಸ್ಟನ್‌ನಲ್ಲಿ ಆಯೋಜಿಸಿದ್ದ ಹೌಡಿ ಮೋಡಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದರು. ಆಪ್ ಕಿ ಬಾರ್ ಟ್ರಂಪ್ ಸರ್ಕಾರ ಅನ್ನೋ ಘೋಷಣೆ ಭಾರಿ ಸಂಚಲನ ಸೃಷ್ಟಿಸಿತ್ತು. ಇದು ಮೋದಿ ಅಂತಿಮವಾಗಿ ಮೋದಿ ಅಮೆರಿಕ ಭೇಟಿಯಾಗಿದೆ. ಇದೀಗ 2 ವರ್ಷಗಳ ಬಳಿಕ ಮೋದಿ ಮತ್ತೆ ಅಮೆರಿಕ ಭೇಟಿ ನೀಡಲು ಮುಂದಾಗಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ