ಭಾರತೀಯ ಮುಸ್ಲಿಮರನ್ನ ಅವರ ಪಾಡಿಗೆ ಬಿಟ್ಟು ಬಿಡಿ; ತಾಲಿಬಾನ್‌ಗೆ ಕೇಂದ್ರ ಸಚಿವ ನಖ್ವಿ ಸಂದೇಶ!

Published : Sep 04, 2021, 04:08 PM ISTUpdated : Sep 04, 2021, 04:15 PM IST
ಭಾರತೀಯ ಮುಸ್ಲಿಮರನ್ನ ಅವರ ಪಾಡಿಗೆ ಬಿಟ್ಟು ಬಿಡಿ; ತಾಲಿಬಾನ್‌ಗೆ ಕೇಂದ್ರ ಸಚಿವ ನಖ್ವಿ ಸಂದೇಶ!

ಸಾರಾಂಶ

ಕಾಶ್ಮೀರ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕಿದೆ ಎಂದಿದ್ದ ತಾಲಿಬಾನ್ ತಾಲಿಬಾನ್ ಉಗ್ರರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ನಖ್ವಿ ಭಾರತದಲ್ಲಿ ಬಾಂಬ್ ದಾಳಿ, ಕ್ರೌರ್ಯವಿಲ್ಲ, ನಿಮ್ಮ ಧ್ವನಿ ಅಗತ್ಯವಿಲ್ಲ ಎಂದ ಸಚಿವ

ನವದೆಹಲಿ(ಸೆ.04): ತಾಲಿಬಾನ್ ಉಗ್ರರು ಆಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ಸರ್ಕಸ್ ಮಾಡುತ್ತಿದ್ದಾರೆ. ಇದರ ನಡುವೆ ಭಾರತದ ಆಂತರಿಕ ವಿಚಾರಕ್ಕೆ ಕೈಹಾಕಿ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಕಾಶ್ಮೀರ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ತಾಲಿಬಾನ್ ಉಗ್ರರಿಗಿದೆ ಎಂಬ ತಾಲಿಬಾನ್ ಹೇಳಿಕೆಗೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿರುಗೇಟು ನೀಡಿದ್ದಾರೆ.ಭಾರತೀಯ ಮುಸ್ಲಿಮರನ್ನು ಅವರ ಪಾಡಿಗೆ ಬಿಟ್ಟು ಬಿಡಿ ಎಂದು ನಖ್ವಿ ತಾಲಿಬಾನ್ ಉಗ್ರರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಪಾಕ್ ಸೂಚನೆ ಬೆನ್ನಲ್ಲೇ ವರಸೆ ಬದಲಿಸಿದ ತಾಲಿಬಾನ್: ಕಾಶ್ಮೀರ ಮುಸ್ಲಿಮರಿಗೆ ಉಗ್ರರ ಬೆಂಬಲ!

ಭಾರತದ ಮುಸ್ಲಿಮರನ್ನು ಉಳಿಸಲು ಬಂದಿರುವ ತಾಲಿಬಾನ್ ಉಗ್ರರಿಗೆ ನಖ್ವಿ ದೇಶದಲ್ಲಿನ ಸೌಹಾರ್ಧತೆ, ಇಲ್ಲಿನ ನೀತಿ ನಿಯಮಗಳ ಕುರಿತು ವಿವರಿಸಿದ್ದಾರೆ. ಇಲ್ಲಿ ಧರ್ಮದ ಹೆಸರಿನಲ್ಲಿ ಯಾವುದೇ ಉಗ್ರ ಚಟುವಟಿಕೆ ದೌರ್ಜನ್ಯಗಳು ನಡೆಯುತ್ತಿಲ್ಲ. ಎಲ್ಲಾ ಧರ್ಮದವರು ಅನುಸರಿಸುವ ಏಕೈಕ ಧರ್ಮಗ್ರಂಥ ಸಂವಿಧಾನ. ಇಲ್ಲಿನ ಮಸೀದಿಗಳಲ್ಲಿ ಪ್ರಾರ್ಥಿಸುವ ಅಮಾಯಕರನ್ನು ಗುಂಡು, ಬಾಂಬ್‌ಗಳ ಮೂಲಕ ಕೊಲ್ಲುವುದಿಲ್ಲ. ಹುಡುಗಿಯರ ಶಾಲೆಗೆ ಹೋಗುವುದನ್ನು ತಡೆಯುವುದಿಲ್ಲ. ತಲೆ, ಕೈ ಕಾಲು ಕತ್ತರಿಸುವ ಸಂಪ್ರದಾಯಗಳು ಇಲ್ಲಿಲ್ಲ. ಇದು ಭಾರತ, ಇಲ್ಲಿ ನಿಮ್ಮ ಧ್ವನಿಯ ಅವಶ್ಯಕತೆ ಇಲ್ಲ ಎಂದು ನಖ್ವಿ ಹೇಳಿದ್ದಾರೆ.

ಭಾರತ ಹಾಗೂ ಆಫ್ಘಾನಿಸ್ತಾನಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಭಾರತದ ಮುಸ್ಲಿಮರ ತಾಲಿಬಾನ್ ಮಾತನಾಡಿರುವುದು ಒಳಿತು ಎಂದು ನಖ್ವಿ ಹೇಳಿದ್ದಾರೆ. ಭಾರತದ ಶಾಂತಿ ಸೌಹಾರ್ಧತೆ ಇದೆ. ಇದನ್ನು ಹಾಳುಮಾಡಲು ಯಾವುದೇ ಶಕ್ತಿಗೆ ಅವಕಾಶ ನೀಡುವುದಿಲ್ಲ ಎಂದು ನಿಖ್ವಿ ಹೇಳಿದ್ದಾರೆ.

ಪುಲ್ವಾಮಾ ದಾಳಿ ಕೋರರ ಜೊತೆ ಮಾತುಕತೆ; ಕಾಶ್ಮೀರ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕಿದೆ ಎಂದ ತಾಲಿಬಾನ್

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆ ಸರ್ಕಸ್ ನಡುವೆ ತಾಲಿಬಾನ್ ಮಾಧ್ಯಮ ವಕ್ತಾರ ಸುಹೈಲ್ ಶಾಹಿನ್ ಬಿಬಿಸಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರ ವಿಚಾರ ಕೆದಕಿ ಭಾರತದ ಆಕ್ರೋಶಕ್ಕೆ ಕಾರಣವಾಗಿದ್ದರು. ಆರಂಭದಲ್ಲಿ ಕಾಶ್ಮೀರ ಭಾರತದ ಆತಂರಿಕ ವಿಚಾರ ಎಂದಿದ್ದ ತಾಲಿಬಾನ್, ಸಂದರ್ಶನದಲ್ಲಿ ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ತಾಲಿಬಾನ್‌ಗಿದೆ ಎಂದಿತ್ತು.

ಕಾಶ್ಮೀರದಲ್ಲಿನ ಮುಸ್ಲಿಮರಿಗೆ ಅನ್ಯಾವಾಗುತ್ತಿದೆ. ಹೀಗಾಗಿ ಅವರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ. ಯಾವುದೇ ದೇಶವಾದರೂ ಮುಸ್ಲಿಮರಿಗೆ ಕಾನೂನಿಡಿ ವಿಶೇಷ ಮಾನ್ಯತೆ ನೀಡಬೇಕು. ಅವರ ಹಕ್ಕುಗಳಿಗಾಗಿ  ನಾವು ಹೋರಾಟ ಮಾಡುತ್ತೇವೆ ಎಂದು ತಾಲಿಬಾನ್ ಹೇಳಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!