
ಲಕ್ನೋ(ಸೆ.04) ಕೊರೋನಾ ನರ್ತನಕ್ಕೆ ನಲುಗಿದ್ದ ಉತ್ತರ ಪ್ರದೇಶದಲ್ಲಿ ಸದ್ಯ ಡೆಂಗ್ಯೂ ಅಟ್ಟಹಾಸ ಆರಂಭಿಸಿದೆ. ಡೆಂಗ್ಯೂ ಹೊಡೆತಕ್ಕೆ ಈವರೆಗೆ 50 ಮಕ್ಕಳು ಸೇರಿ ಒಟ್ಟು 60 ಮಂದಿ ಮೃತಪಟ್ಟಿದ್ದಾರೆ.
ಹೌದು ಪಶ್ಚಿಮ ಉತ್ತರ ಪ್ರದೇಶ ಭಾಗದಲ್ಲಿ ಡೆಂಗ್ಯೂ ತೀವ್ರವಾಗಿ ಬಾಧಿಸುತ್ತಿದ್ದು, ಕಳೆದ 10 ದಿನಗಳಿಂದ ಈ ರೋಗಕ್ಕೆ ಬಾಧಿಸುತ್ತಿರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಲ್ಲದೇ ಶೇ 50 ರಷ್ಟು ಪ್ರಕರಣ ಫರಿದಾಬಾದ್ ಭಾಗದಿಂದ ವರದಿಯಾಗುತ್ತಿವೆ ಎಂಬುವುದು ಉಲ್ಲೇಖನೀಯ.
ಈವರೆಗೆ 200 ಸ್ಯಾಂಪಲ್ಸ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಫರಿದಾಬಾದ್, ಮಥುರಾ, ಪ್ರಯಾಗ್ ರಾಜ್‌ನಲ್ಲಿ ಡೆಂಗ್ಯೂ ಉಲ್ಬಣಗೊಂಡಿದೆ. ಪ್ರಯಾಗ್ ರಾಜ್ ಸುತ್ತಮುತ್ತ ಒಟ್ಟು 34 ಪ್ರಕರಣಗಳು ವರದಿಯಾಗಿವೆ ಎಂಬುವುದು ಮತ್ತೊಂದು ಆಘಾತಕಾರಿ ವಿಚಾರ.
ಇನ್ನು ಡೆಂಗ್ಯೂ ಹಾವಳಿ ಮಧ್ಯೆ ಆರು ಮಂದಿಯ ತಂಡ ಜ್ವರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಸೋಮವಾರ ವರದಿ ನೀಡುವ ಸಾಧ್ಯತೆ ಇದೆ.
ಇನ್ನು ಡೆಂಗ್ಯೂ ಹರಡುತ್ತಿರುವ ಬಗ್ಗೆ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕಿ ಪ್ರಯಾಂಕಾ ಗಾಂಧಿ 100ಕ್ಕೂ ಹೆಚ್ಚು ಮಂದಿ ಸಾವಿನ ಕದ ತಟ್ಟಿದ್ದಾರೆ. ಈ ಕೂಡಲೇ ನೆರವಿಗೆ ಯುಪಿ ಸರ್ಕಾರ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ