ಹವಾಮಾನ, ಅಪೌಷ್ಠಿಕತೆ ನಿವಾರಣೆಗೆ ವಿಶೇಷ ಲಕ್ಷಣದ 35 ಬೆಳೆ ತಳಿ ಬಿಡುಗಡೆ ಮಾಡಿದ ಮೋದಿ!

By Suvarna News  |  First Published Sep 28, 2021, 7:18 PM IST
  • ವಿಶೇಷ ಗುಣಲಕ್ಷಣಗಳಿರುವ 35 ಬೆಳೆ  ತಳಿ ದೇಶಕ್ಕೆ ಸಮರ್ಪಣೆ
  • ರೈತರ ಮೌಲ್ಯವರ್ಧನೆ, ಇತರ ಕೃಷಿ ಆಯ್ಕೆಗಳಿಗೆ ಉತ್ತೇಜನ 
  • ಕೃಷಿ ವಿಶ್ವವಿದ್ಯಾಲಯಗಳಿಗೆ  ಪ್ರಶಸ್ತಿ ವಿತರಿಸಿದ ಪ್ರಧಾನಿ

ನವದೆಹಲಿ(ಸೆ.28): ದೇಶದಲ್ಲಿ ರೈತರ(Farmers) ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ(Narendra Modi) ದೇಶದ ರೈತರು ಎದುರಿಸುತ್ತಿರುವ ಹವಾಮಾನ ಬದಲಾವಣೆ, ಅಪೌಷ್ಠಿಕತೆ ನಿವಾರಣೆಗೆ ವಿಶೇಷ ಲಕ್ಷಣದ 35 ಬೆಳೆಗಳ ತಳಿಯನ್ನು(Crop) ದೇಶಕ್ಕೆ ಸಮರ್ಪಿಸಿದ್ದಾರೆ.  ವಿಡಿಯೋ ಕಾನ್ಫೆರೆನ್ಸ್ ಮೂಲಕ ಹೊಸ ತಳಿಗಳನ್ನು ಮೋದಿ ಬಿಡುಗಡೆ ಮಾಡಿದ್ದಾರೆ. 

ವರ್ಷಗಳ ಹಿಂದೆ ಕಂಡಿದ್ದ ಮೋದಿ ಕನಸು: ಇದು ಆರೋಗ್ಯ ರಹಸ್ಯದ ಕತೆ

Tap to resize

Latest Videos

undefined

ರಾಯ್‌‌ಪುರದ  ರಾಷ್ಟ್ರೀಯ ಜೈವಿಕ ಒತ್ತಡ ನಿರ್ವಹಣಾ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕ್ಯಾಂಪಸ್‌ನ್ನು  ಮೋದಿ ದೇಶಕ್ಕೆ ಸಮರ್ಪಿಸಿದರು.  ಇದೇ ವೇಳೆ ಪ್ರಧಾನಿ ಮೋದಿ ಕೃಷಿ ವಿಶ್ವವಿದ್ಯಾಲಯಗಳಿಗೆ ಹಸಿರು ಕ್ಯಾಂಪಸ್ ಪ್ರಶಸ್ತಿ ಪ್ರದಾನಮಾಡಿದರು.  ಹೊಸ ವಿಧಾನದಲ್ಲಿ ಕೃಷಿ ಮಾಡುತ್ತಿರುವ ರೈತರೊಂದಿಗೆ ಸಂವಾದ ನಡೆಸಿದರು.  

ಜಮ್ಮು ಮತ್ತು ಕಾಶ್ಮೀರದ(Jammu and Kashmir) ಗಂದೇರ್ ಬಾಲ್ ನ ಜೈತೂನ್ ಬೇಗಂ ಅವರೊಂದಿಗೆ ಮಾತನಾಡಿದ ಪ್ರಧಾನಮಂತ್ರಿಯವರು, ನವೀನ ಕೃಷಿ ಪದ್ಧತಿಗಳನ್ನು ಕಲಿಯುವ ಅವರ ಪಯಣ ಮತ್ತು ಇತರ ರೈತರಿಗೆ ಅವರು ಹೇಗೆ ತರಬೇತಿ ನೀಡಿದರು ಎಂಬುದರ ಕುರಿತು ಮಾಹಿತಿ ಪಡೆದುಕೊಂಡರು.  ಕಣಿವೆ ರಾಜ್ಯದಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ  ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆಯೂ ಮಾತನಾಡಿದರು. ಕ್ರೀಡೆಯಲ್ಲಿಯೂ ಜಮ್ಮು ಕಾಶ್ಮೀರದ ಬಾಲಕಿಯರು ಉತ್ತಮವಾಗಿ  ಪ್ರದರ್ಶನ ನೀಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಸಣ್ಣ ಹಿಡುವಳಿಗಳನ್ನು ಹೊಂದಿರುವ ರೈತರ ಅಗತ್ಯಗಳ ಪೂರೈಕೆ ಸರ್ಕಾರದ ಆದ್ಯತೆಯಾಗಿದೆ ಮತ್ತು ಅವರು ನೇರವಾಗಿ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

E-Auction ನಲ್ಲಿ ನೀವೂ ಖರೀದಿಸಬಹುದು CA ಭವಾನಿ ದೇವಿ ಬಳಸಿದ ಖಡ್ಗ..!

ಉತ್ತರ ಪ್ರದೇಶದ(Uttar Pradesh) ಬುಲಂದ್ ಶಹರ್ ನ ರೈತ ಮತ್ತು ಬೀಜ ಉತ್ಪಾದಕ  ಕುಲವಂತ್ ಸಿಂಗ್ ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು,  ವೈವಿಧ್ಯಮಯ ಬೀಜಗಳನ್ನು ಉತ್ಪಾದಿಸಲು ಹೇಗೆ ಸಾಧ್ಯವಾಯಿತು ಎಂದು ವಿಚಾರಿಸಿದರು. ಪೂಸಾದಲ್ಲಿನ ಕೃಷಿ ಸಂಸ್ಥೆಯ ವಿಜ್ಞಾನಿಗಳೊಂದಿಗಿನ ಸಂವಾದದಿಂದ ಅವರಿಗೆ ಹೇಗೆ ಪ್ರಯೋಜನವಾಗುತ್ತಿದೆ    ಮತ್ತು ಅಂತಹ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವುದರ ಬಗ್ಗೆ ರೈತರಲ್ಲಿ ಯಾವ ರೀತಿಯ ಪ್ರವೃತ್ತಿ ಇದೆ ಎಂದು ಪ್ರಧಾನಮಂತ್ರಿ ಕೇಳಿದರು. ಬೆಳೆಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡುತ್ತಿರುವ ರೈತನನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಮಾರುಕಟ್ಟೆ ಪ್ರವೇಶ, ಉತ್ತಮ ಗುಣಮಟ್ಟದ ಬೀಜಗಳು, ಮಣ್ಣಿನ ಆರೋಗ್ಯ ಕಾರ್ಡ್ ಗಳು ಮುಂತಾದ ಅನೇಕ ಉಪಕ್ರಮಗಳೊಂದಿಗೆ ರೈತರು ಉತ್ತಮ ಬೆಲೆ  ಪಡೆಯಲು ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಗೋವಾದ (Goa) ಬರ್ದೇಜ್ ನ  ದರ್ಶನಾ ಪೆಡೇನ್ಕರ್  ಅವರನ್ನು ವೈವಿಧ್ಯಮಯ ಬೆಳೆಗಳನ್ನು ಹೇಗೆ ಬೆಳೆಯುತ್ತೀರಿ ಮತ್ತು ವಿವಿಧ ಜಾನುವಾರುಗಳನ್ನು ಹೇಗೆ ಸಾಕುತ್ತೀರಿ ಎಂದು ಪ್ರಧಾನಮಂತ್ರಿ ಯವರು ವಿಚಾರಿಸಿದರು. ರೈತರು ಮಾಡಿದ ತೆಂಗಿನಕಾಯಿಯ ಮೌಲ್ಯವರ್ಧನೆಯ ಬಗ್ಗೆ ಅವರು ಕೇಳಿದರು. ಮಹಿಳಾ ಕೃಷಿಕರು ಉದ್ಯಮಿಗಳಾಗಿ ವಿಜೃಂಭಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಹೊಸ ಸಂಸತ್ ನಿರ್ಮಾಣ ಕಾರ್ಮಿಕರಿಗೆ ಲಸಿಕೆ, ಮಾಸಿಕ ಆರೋಗ್ಯ ತಪಾಸಣೆ ಕಡ್ಡಾಯ; ಪ್ರಧಾನಿ ಮೋದಿ!

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ 6-7 ವರ್ಷಗಳಲ್ಲಿ ಕೃಷಿಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಆದ್ಯತೆಯ ಆಧಾರದ ಮೇಲೆ ಬಳಸಲಾಗುತ್ತಿದೆ ಎಂದರು. "ಪೌಷ್ಟಿಕ ಬೀಜಗಳ ಮೇಲೆ ನಮ್ಮ ಗಮನ ಹೆಚ್ಚಾಗಿದೆ, ಹೊಸ ಪರಿಸ್ಥಿತಿಗಳಿಗೆ, ವಿಶೇಷವಾಗಿ ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಬೇಕು," ಎಂದು ಪ್ರಧಾನಮಂತ್ರಿ ಹೇಳಿದರು.

ಕಳೆದ ವರ್ಷ ಕೊರೊನಾ ಸಾಂಕ್ರಾಮಿಕ ರೋಗದ ನಡುವೆ ವಿವಿಧ ರಾಜ್ಯಗಳಲ್ಲಿ ನಡೆದ ಬೃಹತ್ ಮಿಡತೆ ದಾಳಿಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಭಾರತವು ಸಾಕಷ್ಟು ಪ್ರಯತ್ನಗಳನ್ನು ಮಾಡುವ ಮೂಲಕ ಈ ದಾಳಿಯನ್ನು ನಿಭಾಯಿಸಿತು, ರೈತರಿಗೆ ಹೆಚ್ಚಿನ ಹಾನಿಯಾಗದಂತೆ ಉಳಿಸಿತು ಎಂದು ಅವರು ಹೇಳಿದರು.

ಅಮೆರಿಕ ಪ್ರವಾಸದ 65 ಗಂಟೆಯಲ್ಲಿ 20 ಸಭೆ, ಮೋದಿ ದಣಿವರಿಯದ ಸೀಕ್ರೆಟ್ ಬಹಿರಂಗ!

ಕೃಷಿಗೆ ಮತ್ತು ಕೃಷಿಕರಿಗೆ ಸುರಕ್ಷತಾ ನೆಲೆ ಸಿಕ್ಕಾಗಲೆಲ್ಲಾ ಅವರ ಬೆಳವಣಿಗೆ ತ್ವರಿತವಾಗುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಭೂಮಿಯ ರಕ್ಷಣೆಗಾಗಿ 11 ಕೋಟಿ ಮಣ್ಣಿನ ಆರೋಗ್ಯ ಕಾರ್ಡ್ ಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ರೈತರಿಗೆ ನೀರಿನ ಭದ್ರತೆ ಒದಗಿಸಲು ಬಾಕಿ ಇರುವ ಸುಮಾರು 100 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಅಭಿಯಾನ, ರೋಗಗಳಿಂದ ಬೆಳೆಗಳನ್ನು ರಕ್ಷಿಸಲು ರೈತರಿಗೆ ಹೊಸ ರೀತಿಯ ಬೀಜಗಳನ್ನು ಒದಗಿಸುವುದೇ ಮುಂತಾದ ಸರ್ಕಾರದ ರೈತ ಸ್ನೇಹಿ ಉಪಕ್ರಮಗಳನ್ನು ಪ್ರಧಾನಮಂತ್ರಿ ಪಟ್ಟಿ ಮಾಡಿದರು. ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವುದರ ಜೊತೆಗೆ, ಖರೀದಿ ಪ್ರಕ್ರಿಯೆಯನ್ನು ಸಹ ಸುಧಾರಿಸಲಾಗಿದೆ, ಇದರಿಂದ ಹೆಚ್ಚು ಹೆಚ್ಚು ರೈತರು ಪ್ರಯೋಜನವನ್ನು ಪಡೆಯಬಹುದು ಎಂದು ಅವರು ಹೇಳಿದರು. ಹಿಂಗಾರು ಹಂಗಾಮಿನಲ್ಲಿ 430 ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚು ಗೋಧಿಯನ್ನು ಖರೀದಿಸಲಾಗಿದೆ ಮತ್ತು ರೈತರಿಗೆ 85 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಪಾವತಿಸಲಾಗಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಗೋಧಿ ಖರೀದಿ ಕೇಂದ್ರಗಳನ್ನು  ಮೂರು ಪಟ್ಟು ಹೆಚ್ಚು ಹೆಚ್ಚಿಸಲಾಯಿತು ಎಂದೂ ತಿಳಿಸಿದರು.

ಅಮೆರಿಕಾದಲ್ಲಿ ಮೋದಿ ಮೋಡಿ, ಭಾರತ - ಅಮೆರಿಕಾ ಸ್ನೇಹ ನೋಡಿ ಪಾಕ್‌-ಚೀನಾಗೆ ಉರಿ!

ರೈತರನ್ನು ತಂತ್ರಜ್ಞಾನದೊಂದಿಗೆ ಸಂಪರ್ಕಿಸುವುದರ ಜೊತೆಗೆ, ಬ್ಯಾಂಕುಗಳಿಂದ ಸಹಾಯ ಪಡೆಯುವುದನ್ನು ನಾವು ಸುಲಭಗೊಳಿಸಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ರೈತರು ಹವಾಮಾನ ಮಾಹಿತಿಯನ್ನು ಉತ್ತಮ ರೀತಿಯಲ್ಲಿ ಪಡೆಯುತ್ತಿದ್ದಾರೆ. ಇತ್ತೀಚೆಗೆ 2 ಕೋಟಿಗೂ ಹೆಚ್ಚು ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗಿದೆ ಎಂದರು.

ಹವಾಮಾನ ಬದಲಾವಣೆಯಿಂದಾಗಿ ಹೊಸ ರೀತಿಯ ಕೀಟಗಳು, ಹೊಸ ರೋಗಗಳು, ಸಾಂಕ್ರಾಮಿಕ ರೋಗಗಳು ಹೊರಹೊಮ್ಮುತ್ತಿವೆ, ಇದರಿಂದಾಗಿ ಮಾನವರು ಮತ್ತು ಜಾನುವಾರುಗಳ ಆರೋಗ್ಯಕ್ಕೆ ದೊಡ್ಡ ಅಪಾಯವಿದೆ ಮತ್ತು ಬೆಳೆಗಳ ಮೇಲೂ ಸಹ ಪರಿಣಾಮ ಬೀರುತ್ತಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಈ ಅಂಶಗಳ ಬಗ್ಗೆ ತೀವ್ರ ನಿರಂತರ ಸಂಶೋಧನೆ ಅಗತ್ಯ. ವಿಜ್ಞಾನ, ಸರ್ಕಾರ ಮತ್ತು ಸಮಾಜ ಒಟ್ಟಾಗಿ ಶ್ರಮಿಸಿದಾಗ, ಫಲಿತಾಂಶಗಳು ಉತ್ತಮವಾಗಿರುತ್ತವೆ ಎಂದು ಅವರು ಹೇಳಿದರು. ರೈತರು ಮತ್ತು ವಿಜ್ಞಾನಿಗಳ ಇಂತಹ ಮೈತ್ರಿಯು ಹೊಸ ಸವಾಲುಗಳನ್ನು ಎದುರಿಸುವಲ್ಲಿ ದೇಶವನ್ನು ಬಲಪಡಿಸುತ್ತದೆ ಎಂದೂ ತಿಳಿಸಿದರು.

ಮನ್‌ ಕಿ ಬಾತ್: ನದಿಗಳ ಮಹತ್ವ ತಿಳಿಸಿದ ಮೋದಿ, ಖಾದಿ ಬಳಕೆಗೂ ಕರೆ!

ಬೆಳೆ ಆಧಾರಿತ ಆದಾಯ ವ್ಯವಸ್ಥೆಯಿಂದ ರೈತನನ್ನು ಹೊರತಂದು ಮೌಲ್ಯವರ್ಧನೆ ಮತ್ತು ಇತರ ಕೃಷಿ ಆಯ್ಕೆಗಳಿಗೆ ಪ್ರೋತ್ಸಾಹಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಜ್ಞಾನ ಮತ್ತು ಸಂಶೋಧನೆಯ ಪರಿಹಾರಗಳೊಂದಿಗೆ ಸಿರಿಧಾನ್ಯಗಳು ಮತ್ತು ಇತರ ಧಾನ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ದೇಶದ ವಿವಿಧ ಭಾಗಗಳಲ್ಲಿ ಬೆಳೆಯಬಹುದು ಎಂಬುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.  ವಿಶ್ವಸಂಸ್ಥೆ ಮುಂದಿನ ವರ್ಷವನ್ನು ಸಿರಿಧಾನ್ಯ ವರ್ಷವೆಂದು ಘೋಷಿಸುವುದರಿಂದ ದೊರಕುವ ಅವಕಾಶಗಳನ್ನು ಬಳಸಿಕೊಳ್ಳಲು ಜನರು ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.

ನಮ್ಮ ಪ್ರಾಚೀನ ಕೃಷಿ ಸಂಪ್ರದಾಯಗಳ ಜೊತೆಗೆ ಭವಿಷ್ಯದತ್ತ ಹೆಜ್ಜೆಯಿಡುವುದೂ ಅಷ್ಟೇ ಮುಖ್ಯ ಎಂದು ಪ್ರಧಾನಮಂತ್ರಿಯವರು ಹೇಳಿದರು. ಆಧುನಿಕ ತಂತ್ರಜ್ಞಾನ ಮತ್ತು ಹೊಸ ಕೃಷಿ ಸಾಧನಗಳು ಭವಿಷ್ಯದ ಕೃಷಿಯ ತಿರುಳಾಗಿದೆ ಎಂದು ಅವರು ಹೇಳಿದರು. "ಆಧುನಿಕ ಕೃಷಿ ಯಂತ್ರಗಳು ಮತ್ತು ಸಲಕರಣೆಗಳನ್ನು ಉತ್ತೇಜಿಸುವ ಪ್ರಯತ್ನಗಳು ಇಂದು ಫಲ ನೀಡುತ್ತಿವೆ" ಎಂದು ಅವರು ಹೇಳಿದರು.
 

click me!