-ಲಸಿಕಾಕರಣದಲ್ಲಿ ಭಾರತ ವಿಶ್ವ ದಾಖಲೆ!
- ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ Profile Picture ಬದಲಿಸಿದ ಪ್ರಧಾನಿ
-Congratulations India ಎಂದ ನಾಯಕ ನರೇಂದ್ರ ಮೋದಿ
ನವದೆಹಲಿ (ಅ. 22): ಭಾರತ 100 ಕೋಟಿ ಕೊರೋನಾ ಲಸಿಕೆ (Vaccine) ಪೂರೈಸಿದ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಟ್ವಿಟರ್ (Twitter) ಮತ್ತು ಫೇಸ್ಬುಕ್ (Facebook) ಖಾತೆಗಳ ಪ್ರೊಫೈಲ್ ಫೋಟೋ ಬದಲಾಯಿಸಿದ್ದಾರೆ. ಕೊರೋನಾ ವೈರಸ್(Coronavirus) ವಿರುದ್ಧದ ಹೋರಾಟದಲ್ಲಿ ಭಾರತವು ಅಕ್ಟೋಬರ್ 21 ರಂದು ಐತಿಹಾಸಿಕ ಸಾಧನೆಗೈದಿದೆ. ಭಾರತವು 100 ಕೋಟಿ ಲಸಿಕೆ ಹಾಕಿ ಹೊಸತೊಂದು ಅಧ್ಯಾಯ ಸೃಷ್ಟಿಸಿದೆ. ಗುರುವಾರ ಬೆಳಗ್ಗೆ 9.45 ಕ್ಕೆ ಈ ಮೈಲಿಗಲ್ಲು ಸಾಧಿಸಲಾಗಿದ್ದು, ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವೀಯಾ(Dr Mansukh Mandaviya) ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದ್ದರು.
ಹೊಸ Profile Pictureನಲ್ಲಿ ಏನಿದೆ?
ಪ್ರಧಾನಿಯವರ ಹೊಸ ಪ್ರೊಫೈಲ್ ಫೋಟೋನಲ್ಲಿ (Profile Picture) ಲಸಿಕೆಯ ಡೋಸ್ ಹೊಂದಿರುವ ಬಾಟಲಿಯ ಚಿತ್ರವಿದ್ದು, 'congratulations India 100 crore Covid-19 vaccine doses administerd'ಎಂದು ಬರೆಯಲಾಗಿದೆ. ಭಾರತ 100 ಕೋಟಿ ಕೊರೋನಾ ಲಸಿಕೆ ಪೂರೈಸಿದ್ದಕ್ಕಾಗಿ ಶುಭಕೋರಿರುವ ಪ್ರೊಫೈಲ್ ಫೋಟೋ ಇದಾಗಿದೆ. ಈ ಚಿತ್ರವು ಕೇಸರಿ, ಹಸಿರು ಮತ್ತು ಬಿಳಿ ಬಣ್ಣಗಳಿಂದ ಕಂಗೊಳಿಸುತ್ತಿದ್ದು ಹಿಂಭಾಗದಲ್ಲಿ ಕೊರೊನಾ ವಾರಿಯರ್ಸ್ ಸೇರಿದಂತೆ ಲಸಿಕೆ ಪಡೆಯುತ್ತಿರುವ ಜನರ ಹಲವಾರು ಚಿತ್ರಗಳನ್ನು ಸೇರಿಸಲಾಗಿದೆ. ಫೇಸ್ಬುಕ್ನಲ್ಲಿ ಈ ಹೊಸ ಪ್ರೊಫೈಲ್ ಫೋಟೋಗೆ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಹಾಗೂ ಏಳು ಸಾವಿರಕ್ಕೂ ಹೆಚ್ಚು ಕಮೆಂಟ್ಸ್ಗಳು ಬಂದಿವೆ.
ಅಭಿನಂದನೆಗಳು ಭಾರತ: 100 ಕೋಟಿ ಲಸಿಕೆ ದಾಖಲೆ, RML ಆಸ್ಪತ್ರೆಗೆ ಪಿಎಂ ಮೋದಿ ಭೇಟಿ!
ಇದೇ ಸಂಭ್ರಮದಲ್ಲಿ ಪ್ರಧಾನಿ ಮೋದಿ ನಿನ್ನೆ ಟ್ವೀಟ್ ಮಾಡಿ ಜನರನ್ನು ಅಭಿನಂದಿಸಿದ್ದರು. ಮೋದಿ ತಮ್ಮ ಟ್ವೀಟ್ನಲ್ಲಿ ' ಭಾರತೀಯ ವಿಜ್ಞಾನ, ಉದ್ಯಮ ಮತ್ತು ಸಾಮೂಹಿಕ ಮನೋಭಾವದ ವಿಜಯಕ್ಕೆ 130 ಕೋಟಿ ಭಾರತೀಯರು ಸಾಕ್ಷಿಯಾಗುತ್ತಿದ್ದೇವೆ. 100 ಕೋಟಿ ಲಸಿಕೆಗಳನ್ನು ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಮತ್ತು ಈ ಸಾಧನೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದರು.
India scripts history.
We are witnessing the triumph of Indian science, enterprise and collective spirit of 130 crore Indians.
Congrats India on crossing 100 crore vaccinations. Gratitude to our doctors, nurses and all those who worked to achieve this feat.
ದೇಶಾದ್ಯಂತ ಸಂಭ್ರಮ!
100 ಕೋಟಿ ಲಸಿಕೆಗಳನ್ನು ಪೂರ್ಣಗೊಳಿಸಿದ ಹಿನ್ನೆಲೆ, ಕೇಂದ್ರ ಸರ್ಕಾರವು ವಿವಿಧ ಕಾರ್ಯಕ್ರಮಗಳಿಗೆ ವಿಶೇಷ ಸಿದ್ಧತೆಗಳನ್ನು ಮಾಡಿದೆ. ಈ ಸಾಧನೆಯನ್ನು ವಿಮಾನಗಳು, ಹಡಗುಗಳು, ಬಂದರುಗಳು, ಮೆಟ್ರೋ ರೈಲುಗಳು, ರೈಲ್ವೇ ನಿಲ್ದಾಣಗಳು, ಬಸ್ ನಿಲ್ದಾಣಗಳಲ್ಲಿ ಧ್ವನಿವರ್ಧಕಗಳ ಮೂಲಕ ಘೋಷಿಸಲಾಗುತ್ತಿದೆ. ಕಡಲತೀರಗಳಲ್ಲಿ ಮತ್ತು ಹಡಗಿನಲ್ಲಿ ಈವೆಂಟ್ಗಳು ಕೂಡಾ ಏರ್ಪಡಿಸಲಾಗಿದೆ.
ಕರ್ನಾಟಕದಲ್ಲಿ 6 ಕೋಟಿ ಡೋಸ್ ಲಸಿಕೆ ವಿತರಣೆ: ಅಭಿಯಾನದಲ್ಲಿ ಕರ್ನಾಟಕ ಗೆದ್ದಿದ್ದು ಹೇಗೆ?
ಆರೋಗ್ಯ ಕಾರ್ಯಕರ್ತರ ಮೇಲೆ ಹೂಮಳೆ
ಈ ಸಾಧನೆಯ ಹಿನ್ನೆಲೆ, ಆರೋಗ್ಯ ಕಾರ್ಯಕರ್ತರ ಮೇಲೆ ಆರೋಗ್ಯ ಕೇಂದ್ರಗಳಲ್ಲಿ ಹೂವಿನ ಮಳೆಗರೆಯುವುದರ ಮೂಲಕ ಅಭಿನಂದಿಸಲಾಗಿದೆ. ವಿಮಾನಯಾನ ಕಂಪನಿ ಸ್ಪೈಸ್ ಜೆಟ್ ತನ್ನ ವಿಮಾನಗಳಲ್ಲಿ 100 ಕೋಟಿ ಲಸಿಕೆಗಳು ಮತ್ತು ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ಪೋಸ್ಟರ್ ಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಫೋಟೋಗಳೊಂದಿಗೆ ಹಾಕುವುದಾಗಿ ಘೋಷಿಸಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಸ್ಪೈಸ್ ಜೆಟ್ ಸಿಎಂಡಿ ಅಜಯ್ ಸಿಂಗ್ ಭಾಗವಹಿಸಿದ್ದರು.