Narendra Modi Speech Highlights: ಭಾರತದ ಶಕ್ತಿಗೆ ವಿಶ್ವವೇ ನಿಬ್ಬೆರಗು: ಮೋದಿ ಮಾತು

By Suvarna NewsFirst Published Oct 22, 2021, 10:45 AM IST
Highlights

* ಕೊರೋನಾ ವಿರುದ್ಧದ ಹೋರಾಟ, ನೂರು ಕೋಟಿ ಲಸಿಕೆ ದಾಖಲೆ ಮಾಡಿದ ಭಾರತ

* ಭಾರತಕ್ಕೆ ಮೋದಿ ಅಭಿನಂದನೆ

* ಭಾರತದ ಒಗ್ಗಟ್ಟಿನ ಮಂತ್ರಕ್ಕೂ ಬೇಷ್ ಎಂದ ಮೋದಿ

* ಚಪ್ಪಾಳೆ ತಟ್ಟಿದ ವಿಚಾರ ಹಿಯಾಳಿಸಿದ್ದ ವಿಪಕ್ಷಗಳಿಗೂ ತಿರುಗೇಟು

ನವದೆಹಲಿ(ಅ.22): ಒಂದೆಡೆ ಭಾರತ ಕೊರೋನಾ(Covid 19) ಹೋರಾಟದಲ್ಲಿ ಮಹತ್ವದ ಸಾಧನೆ ಮಾಡಿದೆ. ಹೌದು ನೂರು ಕೋಟಿ ಲಸಿಕೆ(100 Crore Vaccines) ನೀಡಿ ದಾಖಲೆ ನಿರ್ಮಿಸಿರುವ ಭಾರತದಲ್ಲಿ ಸಂಭ್ರಮ ಮನೆ ಮಾಡಿದೆ. ಹೀಗಿರುವಾಗ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಇನ್ನು ಕಳೆದ 19 ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ 10ನೇ ಭಾಷಣ ಇದಾಗಿದೆ. 

ಮೋದಿ ಭಾಷಣದ ಮುಖ್ಯಾಂಶಗಳು

* ನಿನ್ನೆ 22 ಅಕ್ಟೋಬರ್‌ನಂದು ಭಾರತ ನೂರು ಕೋಟಿ ಲಸಿಕೆ ಡೋಸ್‌ಗಳ ಕಠಿಣ ಆದರೆ ಅಸಾಧಾರಣ ಗುರಿ ತಲುಪಿದೆ. ಈ ಸಾಧನೆ ಹಿಂದೆ 130 ಕೋಟಿ ದೇಶವಾಸಿಗರ ಕರ್ತವ್ಯ ಶಕ್ತಿ ಇದೆ. ಹೀಗಾಗಿ ಈ ಯಶಸ್ಸು ಭಾರತದ ಯಶಸ್ಸಾಗಿದೆ. ಪ್ರತಿಯೊಬ್ಬ ನಾಗರಿಕರ ಯಶಸ್ಸು. ಇದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನಮೆ.

* ನೂರು ಕೋಟಿ ಲಸಿಕೆ ಡೋಸ್‌ ಕೇವಲ ಒಂದು ಅಂಕಿ ಅಲ್ಲ. ಇದು ದೇಶದ ಸಾಮರ್ಥ್ಯದ ಪ್ರತಿಬಿಂಬವಾಗಿದೆ. ಇತಿಹಾಸದ ಹೊಸ ಅಧ್ಯಾಯದ ರಚನೆಯಾಗಿದೆ. ಕಠಿಣ ಗುರಿ ನಿರ್ಧರಿಸಿ ಅದನ್ನು ಪಡೆಯಲು ತಿಳಿದಿರುವ ಇದು ನವ ಭಾರತದ ರೂಪಕವಾಗಿದೆ. ತನ್ನ ಸಂಕಲ್ಪ ಸಾಧನೆಗೆ ಪರಿಶ್ರಮ ಮಾಡುವ ನವ ಭಾರತದ ರೂಪಕವಾಗಿದೆ.

Addressing the nation. Watch LIVE. https://t.co/eFdmyTnQZi

— Narendra Modi (@narendramodi)

* ಇಂದು ಹಲವಾರು ಮಂದಿ ಭಾರತದ ಲಸಿಕಾ ಅಭಿಯಾನವನ್ನು ವಿಶ್ವದ ಇತರ ರಾಷ್ಟ್ರಗಳ ಜೊತೆ ಹೋಲಿಸುತ್ತಿದ್ದಾರೆ. ಭಾರತ ಎಷ್ಟು ವೇಗವಾಗಿ ಈ ನೂರು ಕೋಟಿ ಗುರಿ ಸಾಧಿಸಿದೆಯೋ ಅದಕ್ಕೆ ಪ್ರಶಂಸೆಯೂ ವ್ಯಕ್ತವಾಗುತ್ತಿದೆ. ಆದರೆ ಈ ವಿಶ್ಲೇಷಣೆ ಮಧ್ಯೆ ನಾವು ಇದನ್ನು ಎಲ್ಲಿಂದ ಆರಂಭಿಸಿದೆವು ಎಂಬ ವಿಚಾರ ಬಿಟ್ಟು ಹೋಗುತ್ತದೆ. 

* ವಿಶ್ವದ ಇತರ ದೊಡ್ಡ ದೇಶಗಳಿಗೆ ಲಸಿಕೆ ವಿಚಾರವಾಗಿ ಸಂಶೋಧನೆ ನಡೆಸುವುದು, ಆವಿಷ್ಕಾರ ಮಾಡುವುದು ಇದರಲ್ಲಿ ಅವರಿಗೆ ಬಹಳಷ್ಟು ನೈಪುಣ್ಯತೆ ಇದೆ. ಬೇಕಾದ ಎಲ್ಲಾ ಸೌಲಭ್ಯ ಇದೆ. ಹೀಗಾಗಿ ಇದಕ್ಕೂ ಮುನ್ನ ಭಾರತ ಇಂತಹ ದೇಶಗಳು ಉತ್ಪಾದಿಸುತ್ತಿದ್ದ ಲಸಿಕೆಯನ್ನೇ ಅವಲಂಭಿಸಿಕೊಂಡಿರುತ್ತಿತ್ತು. ನಾವು ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದೆವು. 

"

* ಇದೇ ಕಾರಣದಿಂದ ಶತಮಾನದ ಅತೀ ದೊಡ್ಡ ಸಾಂಕ್ರಾಮಿಕ ರೋಗ ಬಂದಾಗ ಭಾರತ ಅನೇಕ ಸವಾಲುಗಳನ್ನೆದುರಿಸಿತು. ಭಾರತ ಈ ಸೋಂಕಿನ ವಿರುದ್ಧ ಹೋರಾಡುತ್ತಾ? ಭಾರತ ಬೇರೆ ರಾಷ್ಟ್ರಗಳಿಂದ ಇಚಷ್ಟೊಂದು ಲಸಿಕೆ ಖರೀದಿಸಲು ಹಣ ಎಲ್ಲಿಂದ ತರುತ್ತದೆ? ಭಾರತಕ್ಕೆ ಲಸಿಕೆ ಯಾವಾಗ ಸಿಗುತ್ತೆ? ಭಾರತೀಯರಿಗೆ ಲಸಿಕೆ ಸಿಗುತ್ತಾ, ಇಲ್ಲವಾ? ಭಾರತ ಈ ಸೋಂಕು ತಡೆಯುವಷ್ಟು ಮಟ್ಟಕ್ಕೆ ಜನರಿಗೆ ಲಸಿಕೆ ಹಾಕಿಸುತ್ತಾ? ಎಂಬಿತ್ಯಾದಿ ಪ್ರಶ್ನೆಗಳು ಎದ್ದಿದ್ದವು. ಆದರೆ ಇಂದು ಈ ನೂರು ಕೊಟಿ ಲಸಿಕೆ ಡೋಸ್‌ಗಳು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಿದೆ.

* ಭಾರತ ತನ್ನ ನಾಗರಿಕರಿಗೆ ನೂರು ಕೋಟಿ ಲಸಿಕೆಗಳನ್ನು ಹಾಕಿದೆ ಹಾಗೂ ಅದು ಕೂಡಾ ಉಚಿತವಾಗಿ, ಹಣ ಪಡೆಯದೆ ಕೊಟ್ಟಿದೆ. ನೂರು ಕೋಟಿ ಲಸಿಕೆ ಡೋಸ್‌ಗಳಿಂದ ವಿಶ್ವ ಈಗ ಭಾರತವೇ ಕೊರೋನಾದಿಂದ ಹೆಚ್ಚು ಸುರಕ್ಷಿತ ಎಂದು ಒಪ್ಪಿಕೊಳ್ಳುತ್ತದೆ.  

* ಫಾರ್ಮಾ ಹಬ್‌ ರೂಪದಲ್ಲಿ ಭಾರತಕ್ಕೆ ಸಿಕ್ಕ ಗುರುತು ಇದಕ್ಕೆ ಮತ್ತಷ್ಟು ಬಲ ಸಿಗಲಿದೆ. ಇಡೀ ವಿಶ್ವವೇ ಇಂದು ಭಾರತದ ಈ ತಾಕತ್ತನ್ನು ನೋಡುತ್ತಿದೆ. 

* ಭಾರತದ ಲಸಿಕಾ ಅಭಿಯಾನ 'ಸಬ್ಕಾ ಸಾಥ್, ಸಬ್ಕಾ ವಿಕಾಸ್‌, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್' ಇದರ ಅತ್ಯಂತ ಸೂಕ್ತ ಉದಾಹರಣೆಯಾಗಿದೆ. 

* ಕೊರೋನಾ ಸೋಂಕು ಆವರಿಸಿದ್ದ ಆರಂಭದಲ್ಲಿ ಭಾರತದಂತಹ ರಾಷ್ಟ್ರದಲ್ಲಿ ಈ ಸೋಂಕಿನ ವಿರುದ್ಧ ಹೋರಾಡುವುದು ಬಹಳ ಕಷ್ಟವಾಗಬಹುದೆಂಬ ಅಂದಾಜು ಮಾಡಲಾಗಿತ್ತು. ಭಾರತಕ್ಕೆ ಹಾಗೂ ಇಲ್ಲಿನ ಜನರಿಗೆ ಇಷ್ಟು ಸಂಯಮ, ಇಷ್ಟು ಶಿಸ್ತು ಇಲ್ಲಿ ಹೇಗೆ ಅಳವಡಿಸಲು ಸಾಧ್ಯ ಎಂಬ ಪ್ರಶ್ನೆಗಳನ್ನೂ ಕೇಳಲಾಗಿತ್ತು. ಆದರೆ ನಮ್ಮ ಪಾಲಿಗೆ ಪ್ರಜಾಪ್ರಭುತ್ವ ಎಂದರೆ 'ಸಬ್‌ ಕಾ ಸಾಥ್'.

* ಹೀಗಾಗಿ ಎಲ್ಲರನ್ನೂ ಒಟ್ಟಿಗೆ ಸೇರಿಸಿ ದೇಶ ಎಲ್ಲರಿಗೂ ಲಸಿಕೆ, ಉಚಿತ ಲಸಿಕಾ ಅಭಿಯಾನ ಆರಂಭಿಸಿತು. ಬಡವರು, ಶ್ರೀಮಂತರು, ನಗರ, ಹಳ್ಳಿ ಹೀಗೆ ಎಲ್ಲರಿಗೂ ಲಸಿಕೆ ನಿಡಲಾಯಿತು. ರೋಗ ಯಾವುದೇ ಬೇದ ಭಾವ ಮಾಡುವುದಿಲ್ಲ ಎಂದ ಮೇಲೆ ಲಸಿಕೆಯಲ್ಲೂ ಈ ಯಾವುದೇ ಬೇದ ಭಾವ ಇರಬಾರದು ಎಂಬುವುದಷ್ಟೇ ನಮ್ಮ ಧ್ಯೇಯವಾಗಿತ್ತು. ಹೀಗಾಗಿ ಲಸಿಕೆ ಅಭಿಯಾನದಲ್ಲಿ ವಿಐಪಿ ಸಂಸ್ಕೃತಿ ಸೇರಬಾರದು ಎಂಬುವುದನ್ನು ಖಾತ್ರಿಪಡಿಸಿಕೊಂಡೆವು. ಯಾರು ಅದೆಷ್ಟೇ ದಿಒಡ್ಡ ಹುದ್ದೆಯಲ್ಲಿರಲಿ, ಎಷ್ಟೇ ದೊಡ್ಡ ಶ್ರೀಮಂತರಾಗಿರಲಿ ಅವರಿಗೆ ಲಸಿಕೆ ಸಾಮಾನ್ಯರಂತೇ ಕೊಟ್ಟಿದ್ದೇವೆ.

* ನಮ್ಮ ದೇಶದ ಬಗ್ಗೆ ಇಲ್ಲಿ ಹೆಚ್ಚಿನ ಮಂದಿ ಲಸಿಕೆ ಹಾಕಿಸಲು ಬರುವುದಿಲ್ಲ ಎಂದೇ ಹೇಳಲಾಗಿತ್ತು. ವಿಶ್ವದ ಅನೇಕ ದೊಡ್ಡ ರಾಷ್ಟ್ರಗಳಲ್ಲಿ ಇಂದಿಗೂ ಲಸಿಕೆ ಹಾಕಿಸಲು ಇರುವ ಭಯ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ ಭಾರತದ ಜನರು ನೂರು ಕೋಟಿ ಲಸಿಕೆ ಪಡೆದು ಇಂತಹ ಜನರ ಬಾಯಿ ಮುಚ್ಚಿಸಿದ್ದಾರೆ. 

* ಯಾವುದೇ ಅಭಿಯಾನವಿರಲಿ, ಎಲ್ಲರ ಶ್ರಮ ಸೇರಿದಾಗ ಅದರ ಪರಿಣಾಮ ಅದ್ಭುತವಾಗಿರುತ್ತದೆ. ನಾವು ಮಹಾಮಾರಿ ವಿರುದ್ಧ ದೇಶದ ಹೋರಾಟದಲ್ಲಿ ಜನರ ಪಾಲುದಾರಿಕೆಯನ್ನು ನಮ್ಮ ಮೊದಲ ಶಕ್ತಿಯನ್ನಾಗಿಸಿದ್ದೇವೆ. ದೇಶ ತನ್ನ ಒಗ್ಗಟ್ಟು ತೋರಿಸಲು ಚಪ್ಪಾಳೆ ತಟ್ಟಿದ್ರು, ದೀಪ ಹಚ್ಚಿದ್ರು. ಆಗ ಕೆಲವರು ಇದರಿಂದ ಸೋಂಕು ಓಡಿ ಹೋಗುತ್ತಾ ಎಂದು ತಮಾಷೆ ಮಾಡಿದ್ರು. ಆದರೆ ನಮಗೆಲ್ಲರಿಗೂ ಅದರಲ್ಲಿ ದೇಶದ ಒಗ್ಗಟ್ಟು ಕಾಣಿಸಿತು. ಸಾಮೂಹಿಕ ಶಕ್ತಿ ಕಾಣಿಸಿತು. ಇದೇ ಶಕ್ತಿ ಲಸಿಕಾ ಅಭಿಯಾನದಲ್ಲಿ ದೇಶಕ್ಕೆ ಇಷ್ಟು ಕಡಿಮೆ ಸಮಯದಲ್ಲಿ ನೂರು ಕೋಟಿ ಗುರಿ ತಲುಪಿಸಿದೆ. 

* ಎಷ್ಟೋ ಬಾರಿ ನಮ್ಮ ದೇಶ ಒಂದೇ ದಿನದಲ್ಲಿ ಒಂದು ಕೋಟಿ ಲಸಿಕೆಯ ಅಂಕಿ ಅಂಶ ದಾಟಿದೆ. ಇದು ಬಹುದೊಡ್ಡ ಸಾಮರ್ಥ್ಯವಾಗಿದೆ. ತಂತ್ರಜ್ಞಾನದ ಉತ್ತಮ ಬಳಕೆಯಾಗಿದೆ. ಇಂದಿಗೆ ಇದು ದೊಡ್ಡ ದೊಡ್ಡ ರಾಷ್ಟ್ರಗಳ ಬಳಿಯೂ ಇಲ್ಲ 

* ಭಾರತದ ಇಡೀ ಲಸಿಕಾ ಕಾರ್ಯಕ್ರ,ಮ ವಿಜ್ಞಾನದ ಗರ್ಭದಿಂದ ಜನಿಸಿದೆ. ವೈಜ್ಞಾನಿಕ ಆಧಾರದಲ್ಲಿ ಬೆಳೆದಿದೆ. ವೈಜ್ಞಾನಿಕವಾಗಿ ನಾಲ್ಕೂ ದಿಕ್ಕಿಗೆ ತಲುಪಿದೆ. ಭಾರತದ ಇಡೀ ಲಸಿಕಾ ಅಭಿಯಾನ Science Born, Science Driven And Science Based ಆಗಿದೆ. ಲಸಿಕೆ ಉತ್ಪಾದಿಸುವುದರಿಂದ ಲಸಿಕೆ ಹಾಕುವವರೆಗೆ ಇಡೀ ಅಭಿಯಾನದಲ್ಲಿ ಪ್ರತಿಯೊಂದು ಕಡೆ ವಿಜ್ಞಾನ ಹಾಗೂ ವೈಜ್ಞಾನಿಕ ನಡೆ ಇತ್ತು. 

* ನಮ್ಮೆದುರು ಲಸಿಕೆ ಉತ್ಪಾದನೆ ಬಗ್ಗೆಯೂ ಸವಾಲಿತ್ತು. ಈ ಲಸಿಕೆಯ ಉತ್ಪಾದನೆ ಹೆಚ್ಚಿಸುವ ಚಾಲೆಂಜ್ ಕೂಡಾ ಇತ್ತು. ಇಷ್ಟು ದೊಡ್ಡ ದೇಶ, ಇಷ್ಟು ದೊಡ್ಡ ಜನಸಂಖ್ಯೆ ಇದಾದ ಬಳಿಕ ವಿವಿಧ ರಾಜ್ಯಗಳಲ್ಲಿ, ಕುಗ್ರಾಮಗಳಿಗೆ ಸೂಕ್ತ ಸಮಯದಲ್ಲಿ ಲಸಿಕೆ ತಲುಪಿಸುವುದು ಕೂಡಾ ಭಗೀರಥನಿಗಿಂತ ಕಡಿಮೆ ಇರಲಿಲ್ಲ. ಇದು ಬಹಳ ಹೆಮ್ಮೆಯ ವಿಚಾರ. 

* ಆದರೆ ವೈಜ್ಞಾನಿಕ ಕ್ರಮ ಹಾಗೂ ನೂತನ ತಂತ್ರಜ್ಞಾನ, ಆವಿಷ್ಕಾರಗಳಿಂದ ದೇಶ ಈ ಸವಾಲಿಗೆ ಪರಿಹಾರ ಹುಡುಕಿತು. ತಂತ್ರಜ್ಞಾನ ಬಳಸಲಾಯ್ತು. ಯಾವ ರಾಜ್ಯಕ್ಕೆ ಎಷ್ಟು ಲಸಿಕೆ? ಯಾವಾಗ ತಲುಪಬೇಕು? ಯಾವ ಕ್ಷೇತ್ರಕ್ಕೆ ಎಷ್ಟು ಲಸಿಕೆ ಕೊಡಬೇಕು ಇದಕ್ಕೂ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಲಾಯ್ತು.

* ನಮ್ಮ ದೇಶ ರೂಪಿಸಿದ ಕೋವಿನ್‌ ವ್ಯವಸ್ಥೆ ಕೂಡಾ ವಿಶ್ವದಲ್ಲಿ ಆಕರ್ಷಣೆಯ ಕೆಂದ್ರವಾಯ್ತು. ಭಾರತ ನಿರ್ಮಿಸಿದ Cowin ಪ್ಲಾಟ್‌ಫಾರಂ ಕೇವಲ ಸಾಮಾನ್ಯರಿಗೆ ಸಹಾಯ ಮಾಡಿದ್ದು ಮಾತ್ರವಲ್ಲ, ನಮ್ಮ ವೈದ್ಯಕೀಯ ಸಿಬ್ಬಂದಿಗಳ ಕೆಲಸವನ್ನೂ ಸುಲಭ ಮಾಡಿತು.

* ಇಂದು ನಾಲ್ಕೂ ದಿಕ್ಕಿನಲ್ಲಿ ಒಂದು ಬಗೆಯ ವಿಶ್ವಾಸ, ಉತ್ಸಾಹವಿದೆ., ಸಮಾಜದಿಂದ ಆರ್ಥಿಕತೆವರೆಗೆ ಎಲ್ಲಾ ಕಡೆ ಧನಾತ್ಮಕತೆ ಇದೆ. ತಜ್ಞರು ಹಾಗೂ ದೇಶ ವಿದೇಶದ ಅನೇಕ ಏಜೆನ್ಸಿಗಳು ಭಾರತದ ಆರ್ಥಿಕ ವ್ಯವಸ್ಥೆ ಬಗ್ಗೆ ಅಕಾರಾತ್ಮಕ ನಿಲುವು ನೀಡಿದ್ದಾರೆ. ಇಂದು ಭಾರತೀಯ ಕಂಪನಿಗಳಲ್ಲಿ ಕೇವಲ ದಾಖಲೆಯ ಹೂಡಿಕೆ ಮಾತ್ರವಲ್ಲ, ಯುವಕರಿಗೆ ಉದ್ಯೋಗದ ಹೊಸ ಅವಕಾಶಗಳೂ ಹುಟ್ಟಿಕೊಳ್ಳುತ್ತಿವೆ. 

* ಸ್ಟಾರ್ಟಪ್‌ಗಳಲ್ಲಿ ದಾಖಲೆಯ ಹೂಡಿಕೆ ಇದೆ. ಹೌಂಸಿಂಗ್ ಸೆಕ್ಟರ್‌ನಲ್ಲೂ ಹೊಸ ಹುಮ್ಮಸ್ಸು ಕಾಣುತ್ತಿದೆ. ಕಳೆದ ತಿಂಗಳು ಮಾಡಿದ ಅನೇಕ ಸುಧಾರಣೆಗಳು, ಅನೇಕ ಇನಿಶಿಯೇಟಿವ್ಸ್ ಭಾರತದ ಅರ್ರತ ವ್ಯವಸ್ಥೆಯನ್ನು ಮತ್ತಷ್ಟು ವೇಗವಾಗಿ ಮುಂದುವರೆಯಲು ಶಕ್ತಿ ಕೊಡಲಿವೆ.

* ಕೊರೋನಾ ಕಾಲದಲ್ಲಿ ಕೃಷಿ ಕ್ಷೇತ್ರ ನಮ್ಮ ಅರ್ಥ ವ್ಯವಸ್ಥೆಯನ್ನು ಗಟ್ಟಿಯಾಗಿರುವಂತೆ ನೊಡಿಕೊಂಡಿತು. ಇಂದು ದಾಖಲೆ ಮಟ್ಟದಲ್ಲಿ ಸರ್ಕಾರ ಅಕ್ಕಿ ಖರೀದಿಸುತ್ತಿದೆ. ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ತಲುಪುತ್ತಿದೆ. ಲಸಿಕೆ ಪ್ರಮಾಣ ಹೆಚ್ಚುತ್ತಿರುವಂತೆ ಆರ್ಥಿಕ, ಸಾಮಾಜಿಕ ಕಾರ್ಯಗಳು, ಪ್ರವಾಸೋದ್ಯಮ, ಕ್ರೀಡೆ, ಮನರಂಜನೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಕಾರಾತ್ಮಕ ಕಾರ್ಯಗಳು ಹೆಚ್ಚಾಗುತ್ತಿವೆ. ಮುಂದೆ ಬರಲಿರುವ ಹಬ್ಬಗಳ ವಾತಾವರಣ ಇದಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ.   

* ಒಂದು ಕಾಲದಲ್ಲಿ ಬೇರೆ ರಾಷ್ಟ್ರಗಳ ಉತ್ಪನ್ನಗಳೇ ಸದ್ದು ಮಾಡುತ್ತಿದ್ದವು, ಬಹಳಷ್ಟು ಕ್ರೇಜ್ ಇತ್ತು. ಆದರೆ ಇಂದು ಪ್ರತಿಯೊಬ್ಬ ಭಾರತೀಯ ಮೇಡ್‌ ಇನ್ ಇಂಡಿಯಾದ ತಾಕತ್ತು ಬಹಳ ದೊಡ್ಡದಿದೆ ಎಂಬುವುದನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಇಂದು ನಿಮ್ಮ ಬಳಿ ಮತ್ತೊಮ್ಮೆ ನೀವು ಖರೀದಿಸುವ ಚಿಕ್ಕ ಪುಟ್ಟ ವಸ್ತುಗಳು ಮೇಡ್‌ ಇಂಡಿಯಾ ಆಗಿರಲಿ. ಇದನ್ನು ತಯಾರಿಸಲು ಓರ್ವ ಭಾರತೀಯನ ಬೆವರು ಹರಿಸಿರಲಿ. ಅದನ್ನು ಖರೀದಿಸಲು ಹೆಚ್ಚು ಒತ್ತು ನೀಡಿ. ಇದು ಎಲ್ಲರ ಶ್ರಮದಿಂದಷ್ಟೇ ಯಶಸ್ವಿಯಾಗಲಿದೆ.

* ಸ್ವಚ್ಛ ಭಾರತ ಅಭಿಯಾನ ಹೇಗೆ ಒಂದು ಜನಾಂದೋಲನವೋ ಹಾಗೆಯೇ ಮೇಡ್ ಇನ್ ಇಂಡಿಯಾ ವಸ್ತು ಖರೀದಿಸುವುದೂ, ಭಾರತೀಯರು ಮಾಡಿದ ವಸ್ತು ಖರೀದಿಸುವುದು, ವೋಕಲ್ ಫಾರ್ ಲೋಕಲ್ ಇದನ್ನು ನಾವು ಜಾರಿಗೊಳಿಸಲೇ ಬೇಕು. ಎಲ್ಲರ ಪ್ರಯತ್ನದಿಂದ ಇದನ್ನೂ ಸಾಧ್ಯವಾಗಿಸುತ್ತೇವೆ ಎಂಬ ಭರವಸೆ ನನಗಿದೆ. 

* ಕಳೆದ ವರ್ಷದ ದೀಪಾವಳಿ ವೇಳೆ ಪ್ರತಿಯೊಬ್ಬನಲ್ಲೂ ಒಂದು ರೀತಿಯ ಆತಂಕವಿತ್ತು. ಆದರೆ ಈ ದೀಪಾವಳಿ ನೂರು ಕೋಟಿ ಲಸಿಕೆಯಿಂದಾಗಿ ಒಂದು ವಿಶ್ವಾಸ ಹುಟ್ಟಿಸಿದೆ. ನನ್ನ ದೇಶದ ಲಸಿಕೆ ನನಗೆ ಸುರಕ್ಷತೆ ನಿಡುತ್ತದೆ ಎಂದರೆ, ನನ್ನ ದೇಶದ ಉತ್ಪಾದನೆ, ನನ್ನ ದೇಶದಲ್ಲಿ ಮಾಡಿದ ವಸ್ತು ನನ್ನ ದೀಪಾವಳಿಯನ್ನು ಮತ್ತಷ್ಟು ಭವ್ಯ ಮಾಡಲಿದೆ ಎಂಬುವುದು ಸತ್ಯ.

* ದೀಪಾವಳಿ ಸಂದರ್ಭದ ಮಾರಾಟ ಒಂದು ಭಾಗವಾದರೆ ಹಾಗೂ ಉಳಿದ ಸಮಯದ ಮಾರಾಟ ಮತ್ತೊಂದು ಭಾಗವಾಗಿರುತ್ತದೆ. ನಮ್ಮಲ್ಲಿ ದೀಪಾವಳಿ ವೇಳೆ, ಹಬ್ಬದ ಸಂದರ್ಭದಲ್ಲಿ ಮಾರಾಟ ಭಾರೀ ಹೆಚ್ಚುತ್ತದೆ. ನೂರು ಕೊಟಿ ಲಸಿಕೆ ಡೋಸ್ ನಮ್ಮ ಚಿಕ್ಕ, ಪುಟ್ಟ ವ್ಯಾಪಾರಸ್ಥರು ಹಾಗೂ ಉದ್ಯಮಿಗಳು ಎಲ್ಲರ ಪಾಲಿಗೆ ಒಂದು ಆಶಾಕಿರಣ

* ಅಮೃತ ಮಹೋತ್ಸವ ಸಂದರ್ಭದಲ್ಲಿ ನಮ್ಮ ಈ ಯಶಸ್ಸು ನಮಗೆ ಒಂದು ಹೊಸ ಆತ್ಮವಿಶ್ವಾಸ ಕೊಡುತ್ತದೆ. ನಾವು ಇಂದು ದೇಶ ದೊಡ್ಡ ಗುರಿಯನ್ನು ನಿರ್ಧರಿಸಿ ಅದನ್ನು ಸಾಧಿಸುವುದನ್ನೆ ಚೆನ್ನಾಗಿ ತಿಳಿದಿದೆ ಎಂಬುವುದನ್ನು ನೆನಪಿಸುತ್ತದೆ. ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದರೆ ಇದಕ್ಕೆ ನಾವು ಹೆಚ್ಚು ಎಚ್ಚರಿಕೆ ವಹಿಸಬೇಕು. ನಾವು ಅಜಾಗರೂಕರಾಗಬಾರದು. ಕವಚ ಅದೆಷ್ಟೇ ಉತ್ತಮವಾಗಿದ್ದರೂ, ಆಧುನಿಕವಾಗಿದ್ದರೂ ಯುದ್ಧ ಆಗುವವರೆಗೆ ಅಸ್ತ್ರ ಕೆಳಗೆ ಹಾಕಬಾರದು.

* ಹೀಗಾಗಿ ನಾವು ಈ ಹಬ್ಬಗಳನ್ನು ಎಚ್ಚರಿಕೆಯಿಂದ ಆಚರಿಸಬೇಕೆಂದು ಆಗ್ರಹಿಸುತ್ತೇನೆ. ಹೇಗೆ ಹೊರಗೆ ಹೀಗುವಾಗ ಚಪ್ಪಲಿ ಧರಿಸಿಕೊಂಡೇ ಹೋಗುತ್ತೇವೆ, ಹಾಗೆಯೇ ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಅಗತ್ಯ. ಈವರೆಗೆ ಲಸಿಕೆ ಪಡೆಯದವರು ಮಾಸ್ಕ್‌ಗೆ ಅತೀ ಹೆಚ್ಚು ಮಹತ್ವ ನೀಡಿ. ನಾವೆಲ್ಲರೂ ಸೇರಿ ಶ್ರಮ ಹಾಕಿದರೆ ಕೊರೋನಾವನ್ನು ಇನ್ನಷ್ಟು ಬೇಗ ಹೊಡೆದೋಡಿಸಬಹುದು. 

click me!