PM Covid 19 Meeting ಪ್ರಧಾನಿ ಅಧ್ಯಕ್ಷತೆಯಲ್ಲಿ ಕೋವಿಡ್ 19 ಉನ್ನತ ಮಟ್ಟದ ಸಭೆ ಅಂತ್ಯ, ಮಹತ್ವದ ಸೂಚನೆ ನೀಡಿದ ಮೋದಿ!

By Suvarna News  |  First Published Jan 9, 2022, 8:21 PM IST
  • ಪ್ರಧಾನಿ ಮೋದಿ ನೇತೃತ್ವದಲ್ಲಿ ಕೊರೋನಾ ಸಭೆ
  • ವಿಡಿಯೋ ಕಾನ್ಫೆರನ್ಸ್ ಮೂಲಕ ನಡೆದ ಮಹತ್ವದ ಸಭೆ
  • ಕೋವಿಡ್ ನಿಯಂತ್ರಣಕ್ಕೆ ಮಹತ್ವದ ಸೂಚನೆ ನೀಡಿದ ಮೋದಿ
     

ನವದೆಹಲಿ(ಜ.09): ಕೊರೋನಾ ವೈರಸ್(Coronavirus) ಹಾಗೂ ಒಮಿಕ್ರಾನ್(Omicron) ಪ್ರಕರಣ ಹೆಚ್ಚಾಗುತ್ತಿರುವ ಕಾರಣ ದೇಶ ಈ ಸಾಂಕ್ರಾಮಿಕ ಸಮಸ್ಯೆ ಎದುರಿಸಲು ಮತ್ತಷ್ಟು ತಯಾರಿ ಮಾಡಿಕೊಳ್ಳಬೇಕು. ಎಲ್ಲಾ ಜಿಲ್ಲೆಗಳ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಆರೋಗ್ಯ ಸೌಕರ್ಯ, ಸೂಕ್ತ ಚಿಕಿತ್ಸೆಗೆ ಎಲ್ಲಾ ಸೌಕರ್ಯ ಒದಗಿಸಲು ಪ್ರಧಾನಿ ನರೇಂದ್ರ ಮೋದಿ(PM Narendra Modi) ಸೂಚಿಸಿದ್ದಾರೆ. ಕೊರೋನಾ ಹೆಚ್ಚಾಗುತ್ತಿರುವ ಆತಂಕದ ಬೆನ್ನಲ್ಲೇ  ಇಂದು(ಜ.09) ನಡೆದ ಕೋವಿಡ್ 19 ಪರಿಶೀಲನಾ ಸಭೆಯಲ್ಲಿ(COVID 19 review meeting) ಮೋದಿ ಹಲವು ಮಹತ್ವದ ಸೂಚನೆ ನೀಡಿದ್ದಾರೆ. 

ಕೊರೋನಾ 3ನೇ ಅಲೆ ನಿಯಂತ್ರಿಸಲು ಹಾಗೂ ಸದ್ಯ ಎದುರಾಗಿರುವ ಪರಿಸ್ಥಿತಿಯನ್ನು  ನಿಭಾಯಿಸಲು ಭಾರತ ಮತ್ತಷ್ಚು ಪರಿಣಾಮಕಾರಿಯಾಗಿ ತಯಾರಿ ಆಗಬೇಕಿದೆ. ಲಸಿಕೆ(Vaccination Drive) ಅಭಿಯಾನಕ್ಕೆ ಮತ್ತಷ್ಟು ಚುರುಕು ನೀಡಬೇಕು. ಎರಡನೇ ಡೋಸ್ ಪಡೆಯವರಿಗೆ ಡೋಸ್ ನೀಡುವಲ್ಲಿ ಯಶಸ್ವಿಯಾಗಬೇಕು. ಇದರ ಜೊತೆಗೆ ಕೋವಿಡ್ ಕುರಿತು ಸಂಶೋಧನೆ, ಲಸಿಕೆ ಅಭಿವೃದ್ಧಿ, ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ಸೇರಿದಂತೆ ಹಲವು ಆಯಾಮಗಳಲ್ಲಿ ಭಾರತ ಸರ್ವಸನ್ನದ್ಧವಾಗಬೇಕಿದೆ ಎಂದು ಮೋದಿ ಕೊರೋನಾ ಸ್ಥಿತಿಗತಿ ಪರಿಶೀಲನಾ ಸಭೆಯಲ್ಲಿ ಹೇಳಿದ್ದಾರೆ. 

Latest Videos

undefined

Weekend Curfew: ಆನೇಕಲ್‌ನ ಚಂದಾಪುರ ಚಿಕಿತ್ಸಾ ಕೇಂದ್ರದಲ್ಲಿ ವ್ಯಾಕ್ಸಿನ್‌ಗಾಗಿ ಮುಗಿಬಿದ್ದ ಜನ

ಸಭೆಯ ಆರಂಭದಲ್ಲಿ ಪ್ರಧಾನಿ ಮೋದಿ ಅಧಿಕಾರಿಗಳಿಂದ ಕೊರೋನಾ ಸ್ಫೋಟಗೊಂಡಿರುವ ರಾಜ್ಯಗಳು, ಜಿಲ್ಲೆಗಳ ಮಾಹಿತಿ ಪಡೆದುಕೊಂಡರು. ದೇಶದಲ್ಲಿನ ಹೊಸ ಕೊರೋನಾ ಪ್ರಕರಣ ಸಂಖ್ಯೆ, ಓಮಿಕ್ರಾನ್ ಸಂಖ್ಯೆ, ಕೊರೋನಾ ಹಾಗೂ ಜಿನೋಮ್ ಸೀಕ್ವೆನ್ಸ್ ಟೆಸ್ಟ್ ಮಾಹಿತಿ ಪಡೆದುಕೊಂಡರು. ಇದೇ ವೇಳೆ 15 ರಿಂದ 18 ವರ್ಷದ ಮಕ್ಕಳ ಲಸಿಕೆ ಕುರಿತ ಮಾಹಿತಿಯನ್ನು ಪ್ರಧಾನಿಗೆ ನೀಡಲಾಯಿತು. ಕಳೆದ 7 ದಿನಗಳಲ್ಲಿ ಶೇಕಡಾ 31 ರಷ್ಟು ಮೊದಲ ಡೋಸ್ ನೀಡಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದರು. 

ಕೊರೋನಾ ಹೆಚ್ಚಾಗುತ್ತಿರುವ ರಾಜ್ಯ ಹಾಗೂ ಜಿಲ್ಲೆಗಳು ಹೆಚ್ಚಿನ ಮುಂಜಾಗ್ರತೆ ವಹಿಸಲು ಮೋದಿ ಸೂಚಿಸಿದ್ದಾರೆ. ಇದೇ ವೇಳೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಅನಗತ್ಯ ಪ್ರಯಾಣ, ಪ್ರವಾಸ ಮಾಡದಂತೆ ಜನರಿಗೆ ತಿಳಿಸಲು ಸೂಚಿಸಿದ್ದಾರೆ. ಇದೇ ವೇಳೆ ರಾಜ್ಯಗಳು ಹೆಚ್ಚು ಪರೀಕ್ಷೆ ಮಾಡಿ ಪ್ರಕರಣ ಪತ್ತೆ ಹಚ್ಚಬೇಕು. ಬಳಿಕ ಮೂಲದಲ್ಲಿಯೇ ಕೊರೋನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದಿದ್ದಾರೆ.

Omicron Threat: ರಾಜ್ಯದಲ್ಲಿ ಕೊರೋನಾ ಸ್ಫೋಟ: ನಿಯಂತ್ರಣ ಮಟ್ಟಮೀರಿದ ಸೋಂಕು

ಇದೇ ವೇಳೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡಸಲಾಗುವುದು ಎಂದಿದ್ದಾರೆ. ರಾಜ್ಯಗಳಿಗೆ ಬೇಕಿರುವ ಅಗತ್ಯ ನೆರವನ್ನು ಕೇಂದ್ರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಕೋವಿಡ್ ವಿರುದ್ಧ ಸತತ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವರ್ಕಸ್ ಸೇವೆಗೆ ಮೋದಿ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಎಲ್ಲಾ ಆರೋಗ್ಯ ಕಾರ್ಯಕರ್ತರು ಬೂಸ್ಟರ್ ಡೋಸ್ ಪಡೆದುಕೊಳ್ಳಲು ಮನವಿ ಮಾಡಿದ್ದಾರೆ. ಕೋವಿಡ್ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮಾನ್ಸುಕ್ ಮಾಂಡವಿಯಾ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. 

Corona Cases ಸುಪ್ರೀಂ ಕೋರ್ಟ್ ನಾಲ್ವರು ಜಡ್ಜ್‌ಗೆ ಕೊರೋನಾ ದೃಢ!

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಲವು ರಾಜ್ಯಗಳು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಶಾಲೆಗಳನ್ನು ಮುಚ್ಚಿದೆ. ಹೊಟೆಲ್‌, ಪಬ್ ಬಾರ್ ಸೇರಿದಂತೆ ಹಲವು ಉದ್ಯಮಕ್ಕೆ ಕಠಿಣ ನಿರ್ಬಂಧ ವಿಧಿಸಿದೆ. ಇಂದು(ಜ.09) ಭಾರತದಲ್ಲಿ ಹೊಸ ಕೊರೋನಾ ಸಂಖ್ಯೆ 1,59,632ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದ ಒಟ್ಟು ಕೊರೋನಾ ಸಂಖ್ಯೆ 3.5 ಕೋಟಿಗೆ ಏರಿಕೆಯಾಗಿದೆ. ಇನ್ನು ಇಂದು ಪತ್ತೆಯಾದ 1.5 ಲಕ್ಷ ಕೊರೋನಾ ಪ್ರಕರಣಗಳಲ್ಲಿ 3,623  ಪ್ರಕರಣ ಒಮಿಕ್ರಾನ್ ವರದಿಯಾಗಿದೆ. ಒಮಿಕ್ರಾನ್ ಇದೀಗ ದೇಶದ 27 ರಾಜ್ಯಗಳಿಗೆ ಹರಡಿದೆ. ಕರ್ನಾಟಕದಲ್ಲಿಂದು 12,000 ಕೊರೋನಾ ಹೊಸ ಕೇಸ್ ದಾಖಲಾಗಿದೆ. ನಿನ್ನೆಗೆ(ಜ.08) ಹೋಲಿಸಿದರೆ ಬರೋಬ್ಬರಿ 4,000 ಕೇಸ್ ಹೆಚ್ಚಾಗಿದೆ. ಕರ್ನಾಟಕದ ಕೊರೋನಾ ಸಂಖ್ಯೆ ಆತಂಕಕ್ಕೆ ಕಾರಣಾಗಿದೆ. ದಿನದಿಂದ ದಿನಕ್ಕೆ ದುಪ್ಪಟ್ಟು ಏರಿಕೆಯಾಗುತ್ತಿದೆ. 

ಡಿಸೆಂಬರ್ 23 ರಂದು ಪ್ರಧಾನಿ ಮೋದಿ ಈ ಹಿಂದಿನ ಕೋವಿಡ್ ಪರಿಶೀಲನಾ ಸಭೆ ನಡೆಸಿದ್ದರು. ಈ ವೇಳೆ ಮೂರನೇ ಅಲೆಯಿಂದ ದೇಶವನ್ನು ಕಾಪಾಡಲು ಪ್ರಧಾನಿ ಮಹತ್ವದ ಸಲಹೆ ನೀಡಿದ್ದರು. ಕೊರೋನಾ  ವಿರುದ್ಧದ ಹೋರಾಟ ಅಂತ್ಯಗೊಂಡಿಲ್ಲ. ಎಚ್ಚರಿಕೆ, ಮುಂಜಾಗ್ರತೆ  ವಹಿಸಬೇಕು. ಎರಡೂ ಡೋಸ್ ಹಾಕಿಸಿಕೊಳ್ಳಬೇಕು. ಎಲ್ಲರೂ ಡೋಸ್ ಹಾಕಿಸಿಕೊಳ್ಳುವಂತೆ ಆಯಾ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಆರೋಗ್ಯ ಕೇಂದ್ರ ನೋಡಿಕೊಳ್ಳಬೇಕು. ಕೊರೋನಾ ಹೊಸ ರೂಪಾಂತರವಾಗಿ ದಾಳಿ ಮಾಡುತ್ತಿದೆ. ಹೀಗಾಗಿ ಕಟ್ಟು ನಿಟ್ಟಿನ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಮೋದಿ ಕಳೆದ ಕೋವಿಡ್ ಸಭೆಯಲ್ಲಿ ಸೂಚಿಸಿದ್ದರು.

ನಾಳೆಯಿಂದ(ಜ.10) ದೇಶದಲ್ಲಿ ಬೂಸ್ಟರ್ ಡೋಸ್(Booster Dose) ನೀಡಲಾಗುತ್ತದೆ. ಫ್ರಂಟ್‌ಲೈನ್ ವರ್ಕಸ್, ಹೆಲ್ತ್‌ಕೇರ್ ವರ್ಕಸ್ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟು ಆರೋಗ್ಯ ಸಮಸ್ಸೆ ಎದುರಿಸುತ್ತಿರುವವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಜನವರಿ 3 ರಿಂದ ದೇಶದ 15 ರಿಂದ 18 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ

click me!