ಭಾರತ- ಚೀನಾ ಸಂಘರ್ಷ: ಕುತೂಹಲ ಮೂಡಿಸಿದೆ ಪಿಎಂ ಮೋದಿ ನಡೆ!

By Suvarna NewsFirst Published Jun 17, 2020, 2:15 PM IST
Highlights

ಭಾರತ ಚೀನಾ ಗಡಿಯಲ್ಲಿ ಉದ್ವಿಘ್ನ ಪರಿಸ್ಥಿತಿ| ಭಾರತೀಯ ಯೋಧರನ್ನು ಕಲ್ಲಿನಿಂದ ಹೊಡೆದು ಹತ್ಯೆಗೈದ ಚೀನೀ ಯೋಧರು| ಚೀನಾ ಕುತಂತ್ರದ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ| ಕುತೂಹಲ ಮೂಡಿಸಿದೆ ಪಿಎಂ ಮೋದಿ ನಡೆ

ಲಡಾಖ್(ಜೂ.17): ಗಡಿಯಲ್ಲಿ ಚೀನಾ ಹಾಗೂ ಭಾರತ ನಡುವಿನ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ಭಾರತ ಇಪ್ಪತ್ತು ಸೈನಿಕರು ಹುತಾತ್ಮರಾಗಿದ್ದು, ಹತ್ತು ಸೈನಿಕರು ನಾಪತ್ತೆಯಾಗಿದ್ದಾರೆ. ಈ ಸಂದರ್ಭದಲ್ಲಿ ಚೀನಾದ 43 ಯೋಧರನ್ನು ಹತ್ಯೆಗೈದಿರುವುದಾಗಿ ಸೇನೆ ತಿಳಿಸಿದೆ. ಚೀನಾದ ಈ ನರಿ ಬುದ್ಧಿ ಸದ್ಯ ಎಲ್ಲರನ್ನೂ ಆಕ್ರೋಶಕ್ಕೀಡು ಮಾಡಿದ್ದು, ತಕ್ಕ ಪಾಠ ಕಲಿಸಬೇಕು ಎಂಬ ಕೂಗು ಎದ್ದಿದೆ.

'ಆತ ನನ್ನ ಒಬ್ಬನೇ ಮಗ, ದೇಶಕ್ಕೆ ಪ್ರಾಣ ಅರ್ಪಿಸಿದ್ದಾನೆ, ದುಃಖದಲ್ಲೂ ನನಗೆ ಹೆಮ್ಮೆ ಇದೆ'

ಇಂತಹ ಉದ್ವಿಘ್ನ ಪರಿಸ್ಥಿತಿಯಲ್ಲಿ ಸದ್ಯ ಇಡೀ ದೇಶದ ಚಿನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲಿದೆ. ಸದ್ಯ ಈ ಸಂಘರ್ಷದ ಬೆನ್ನಲ್ಲೇ ರಕ್ಷಣಾ ಸಚಿವ ರಾಜಣಾಥ್ ಸಿಂಗ್ ಜೊತೆ ತುರ್ತು ಸಭೆ ನಡೆಸಿರುವ ಪಿಎ ಮೋದಿ ದಾಳಿ ಸಂಬಂಧ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಶುಕ್ರವಾರ, ಜೂಣ್ 19ರಂದು ಸರ್ವ ಪಕ್ಷ ಸಭೆ ಕರೆದಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯುವ ಈ ಸಭೆಯಲ್ಲಿ ಪ್ರಧಾನಿ ಮೋದಿ ಚೀನಾ ಹಾಗೂ ಭಾರತದ ಈ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಲಿದ್ದಾರೆ.

ಸೋಮವಾರ ರಾತ್ರಿ ಗಡಿಯಲ್ಲಿ ನಡೆದಿದ್ದೇನು?

ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆ ಪ್ರದೇಶದಲ್ಲಿ ಭಾರತ- ಚೀನಾ ನಡುವೆ 5 ವಾರಗಳಿಂದ ಸೃಷ್ಟಿಯಾಗಿದ್ದ ಗಡಿ ಸಂಘರ್ಷ, ಸೋಮವಾರ ರಾತ್ರಿ50 ವರ್ಷಗಳಲ್ಲೇ ಭೀಕರ ಕಾಳಗಕ್ಕೆ ಕಾರಣವಾಗಿದೆ. ವಿವಾದಿತ ಪ್ರದೇಶದಿಂದ ಹಿಂದೆ ಸರಿಯುವಾಗ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ಕಲ್ಲು, ದೊಣ್ಣೆಗಳಿಂದ ತೀವ್ರ ರೀತಿಯ ದಾಳಿ ನಡೆಸಿದ್ದಾರೆ. ಈ ವೇಳೆ ಭಾರತೀಯ ಯೋಧರೂ ತಿರುಗಿಬಿದ್ದಿದ್ದಾರೆ. ರಾತ್ರಿ ಹಲವು ತಾಸು ನಡೆದ ಈ ಹೊಡೆದಾಟದ ವೇಳೆ 20 ಭಾರತೀಯ ಯೋಧರು ಹತರಾಗಿದ್ದರೆ, ಚೀನಾದ 43 ಯೋಧರು ಸಾವಿಗೀಡಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

ಕಲ್ಲು ರಾಡ್‌ಗಳಿಂದ ದಾಳಿ: ಚೀನಾ ಗಡಿಯಲ್ಲಿ ಗುಂಡಿನ ದಾಳಿ ಏಕೆ ನಡೆಯಲಿಲ್ಲ?

ಕಲ್ಲು ಹೊಡೆದು ಭಾರತೀಯರ ಹತ್ಯೆ:

ಸೋಮವಾರ ರಾತ್ರಿ ಗಲ್ವಾನ್‌ ಕಣಿವೆಯಿಂದ ಎರಡೂ ದೇಶಗಳ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿತ್ತು. ಆಗ ಪರಸ್ಪರರ ನಡುವೆ ದಿಢೀರ್‌ ಸಂಘರ್ಷ ಶುರುವಾಯಿತು. ಚೀನಾ ಯೋಧರು ಗುಂಡಿನ ದಾಳಿ ನಡೆಸಲಿಲ್ಲ. ಬದಲಿಗೆ ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟ ಹಾಗೂ ದೊಣ್ಣೆಗಳಿಂದ ನಡೆಸಿದರು. ಈ ವೇಳೆ ಭಾರತೀಯ ಯೋಧರು ತಿರುಗಿಬಿದ್ದರು. ಹಲವು ತಾಸುಗಳ ಕಾಲ ಉಭಯ ದೇಶಗಳ ಯೋಧರ ನಡುವೆ, ಕಲ್ಲು ಹಾಗೂ ಬಡಿಗೆಗಳಿಂದ ಹೊಡೆದಾಟ ನಡೆಯಿತು ಎಂದು ವರದಿಗಳು ತಿಳಿಸಿವೆ.

ಆದರೆ, ಭಾರತೀಯ ಯೋಧರೇ ತನ್ನ ಗಡಿಯೊಳಕ್ಕೆ ಪ್ರವೇಶಿಸಿ ಹಿಂಸಾಚಾರ ನಡೆಸಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ದೂರಿದೆ.

click me!