'ಆತ ನನ್ನ ಒಬ್ಬನೇ ಮಗ, ದೇಶಕ್ಕೆ ಪ್ರಾಣ ಅರ್ಪಿಸಿದ್ದಾನೆ, ದುಃಖದಲ್ಲೂ ನನಗೆ ಹೆಮ್ಮೆ ಇದೆ'

Published : Jun 17, 2020, 01:29 PM ISTUpdated : Jun 17, 2020, 04:10 PM IST
'ಆತ ನನ್ನ ಒಬ್ಬನೇ ಮಗ, ದೇಶಕ್ಕೆ ಪ್ರಾಣ ಅರ್ಪಿಸಿದ್ದಾನೆ, ದುಃಖದಲ್ಲೂ ನನಗೆ ಹೆಮ್ಮೆ  ಇದೆ'

ಸಾರಾಂಶ

ಚೀನಾ ಯೋಧರ ದಾಳಿಗೆ ಬಲಿಯಾದ ಕರ್ನಲ್‌ ಸಂತೋಷ್‌ ಬಾಬು | ದುಃಖದಲ್ಲೂ ನನಗೆ ಹೆಮ್ಮೆ ಇದೆ: ಸಂತೋಷ್‌ ತಾಯಿ| ಆತ ನನ್ನ ಒಬ್ಬನೇ ಮಗ, ದೇಶಕ್ಕೆ ಪ್ರಾಣ ಅರ್ಪಿಸಿದ್ದಾನೆ

ಹೈದರಾಬಾದ್‌(ಜೂ.17): ‘ನನಗೆ ಇದ್ದದ್ದು ಒಬ್ಬನೇ ಮಗ. ಆತನನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ. ಆದರೆ ನನ್ನ ಮಗ ದೇಶಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡಿದ್ದಕ್ಕೆ ಹೆಮ್ಮೆ ಇದೆ’ ಎಂದು ಗಲ್ವಾನ್‌ನಲ್ಲಿ ಚೀನಾ ಯೋಧರ ದಾಳಿಗೆ ಬಲಿಯಾದ ಕರ್ನಲ್‌ ಸಂತೋಷ್‌ ಬಾಬು ತಾಯಿ ಮಂಜುಳಾ ಹೇಳಿದ್ದಾರೆ.

ಕತ್ತಲಾಗುತ್ತಿದ್ದಂತೆ ಚೀನಿಯರಿಂದ ಕಲ್ಲು, ಬಡಿಗೆಯಿಂದ ಭಾರತೀಯರ ಸೈನಿಕರ ಕಗ್ಗೊಲೆ!

ಸುದ್ದಿಗಾರರ ಜತೆ ಮಾತನಾಡಿದ ಅವರು, ಭಾನುವಾರವಷ್ಟೇ ನನ್ನ ಜತೆ ಫೋನ್‌ನಲ್ಲಿ ಮಾತನಾಡಿದ್ದ. ಗಡಿ ವಿವಾದ ಕುರಿತು ಮಾಧ್ಯಮದಲ್ಲಿ ಬರುವುದಕ್ಕೂ ವಾಸ್ತವಕ್ಕೂ ವ್ಯತ್ಯಾಸವಿದೆ ಎಂದಿದ್ದ. ಹೈದರಾಬಾದ್‌ಗೆ ಆತ ವರ್ಗವಾಗಿದ್ದ. ಆದರೆ ಲಾಕ್‌ಡೌನ್‌ ಕಾರಣ ವರ್ಗ ತಡವಾಯಿತು. ಮುಂದಿನ ತಿಂಗಳು ಬರುವುದಾಗಿ ಹೇಳಿದ್ದ ಎಂದು ಕಣ್ಣೀರಿಟ್ಟರು.

ಇದೇ ವೇಳೆ ಮಾತನಾಡಿದ ಸಂತೋಷ್‌ ತಂದೆ ಉಪೇಂದ್ರ, ನಾನು ಯೋಧ ಆಗಬೇಕು ಎಂದುಕೊಂಡಿದ್ದೆ. ಆದರೆ ಆಗಲಿಲ್ಲ. ನಮ್ಮ ಮಗ ಸೇನೆ ಸೇರುವ ತನ್ನ ಕನಸು ಈಡೇರಿಸಿಕೊಂಡಿದ್ದ. ಆತ ಯಾವಾಗಲೂ ಚಿನ್ನದ ಪದಕ ಗೆಲ್ಲುತ್ತಿದ್ದ. ತನಗೆ ಏನಾದರೂ ಆದರೆ ಅದನ್ನು ಅರಗಿಸಿಕೊಳ್ಳುವ ಶಕ್ತಿ ತಂದುಕೊಳ್ಳಿ ಎಂದು ಮಗ ಹೇಳುತ್ತಿದ್ದ. ಆತ ಇನ್ನಷ್ಟು ಎತ್ತರಕ್ಕೇರಬೇಕು ಎಂದು ಕನಸು ಕಂಡಿದ್ದೆವು. ಆದರೆ ಇಂದು ಆತ ಹುತಾತ್ಮನಾಗಿದ್ದಾನೆ ಎಂದು ನೋವು ತೋಡಿಕೊಂಡರು.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!