UP Elections: ಇಂದು ಯುಪಿ ಮೊದಲ ಹಂತದ ಚುನಾವಣೆ

By Kannadaprabha NewsFirst Published Feb 10, 2022, 1:55 AM IST
Highlights

ದೇಶಾದ್ಯಂತ ಬಾರೀ ಕುತೂಹಲಕ್ಕೆ ಕಾರಣವಾಗಿರುವ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಫೆ.10ರ ಗುರುವಾರ ನಡೆಯಲಿದೆ. ಆಗ್ರಾ, ಮಥುರಾ, ಆಲಿಗಢ, ಬಾಘಪತ್‌, ಗೌತಮಬುದ್ಧ ನಗರ ಸೇರಿ 11 ಜಿಲ್ಲೆಗಳ 58 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಲಖನೌ (ಫೆ.10): ದೇಶಾದ್ಯಂತ ಬಾರೀ ಕುತೂಹಲಕ್ಕೆ ಕಾರಣವಾಗಿರುವ ಮತ್ತು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ (UP Elections) ಮೊದಲ ಹಂತದ ಮತದಾನ ಪ್ರಕ್ರಿಯೆ ಫೆ.10ರ ಗುರುವಾರ ನಡೆಯಲಿದೆ. ಆಗ್ರಾ, ಮಥುರಾ, ಆಲಿಗಢ, ಬಾಘಪತ್‌, ಗೌತಮಬುದ್ಧ ನಗರ ಸೇರಿ 11 ಜಿಲ್ಲೆಗಳ 58 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

58 ಕ್ಷೇತ್ರಗಳಲ್ಲಿ 623 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, 2.27 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನ ಪ್ರಕ್ರಿಯೆ ಬೆಳಗ್ಗೆ 7ರಿಂದ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಮೊದಲ ಹಂತದ ಚುನಾವಣೆಯಲ್ಲಿ ಶ್ರೀಕಾಂತ್‌ ಶರ್ಮಾ, ಸಂದೀಪ್‌ ಸಿಂಗ್‌, ಕಪಿಲ್‌ ದೇವ್‌ ಅಗರ್ವಾಲ್‌, ಅತುಲ್‌ ಗಾರ್ಗ್‌, ಚೌದರಿ ಲಕ್ಷ್ಮೇ ನಾರಾಯಣ್‌ ಮುಂತಾದ ಪ್ರಮುಖ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.

Latest Videos

ಅಲ್ಲದೆ ಮೊದಲ ಹಂತದ ಮತದಾನಕ್ಕೆ ಒಳಪಟ್ಟಿರುವ ಕ್ಷೇತ್ರಗಳು ಜಾಟರು ಪ್ರಧಾನವಾಗಿರುವ ಪಶ್ಚಿಮ ಉತ್ತರ ಪ್ರದೇಶವನ್ನು ಒಳಗೊಂಡಿದೆ. ಕೇಂದ್ರದ ಕೃಷಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಿಜೆಪಿಯ ವಿರುದ್ಧ ಮುನಿಸಿಕೊಂಡಿರುವ ಜಾಟ್‌ ಸಮುದಾಯ ಯಾರಿಗೆ ಮತ ಹಾಕಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

UP Elections: ಜಾಟ್ ಬಾಹುಳ್ಯದ 58 ಕ್ಷೇತ್ರಗಳಿಗೆ ಮತದಾನ, ಕೃಷಿ ಕಾಯಿದೆ ವಿಚಾರ ಪ್ರಭಾವ ಬೀರುತ್ತಾ?

ಯಾವ ಹಂತದಲ್ಲಿ, ಎಷ್ಟು ಸೀಟುಗಳು?: ಮೊದಲ ಹಂತದಲ್ಲಿ ಒಟ್ಟು 58 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಬಿಜೆಪಿ ಗರಿಷ್ಠ 40 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಎಸ್‌ಪಿ ಖಾತೆಗೆ 18 ಸ್ಥಾನಗಳು ಸೇರಲಿವೆ. ಈ ಹಂತದಲ್ಲಿ ಬೇರೆ ಯಾವ ಪಕ್ಷವೂ ಖಾತೆ ತೆರೆಯುತ್ತಿಲ್ಲ.

ಎರಡನೇ ಹಂತದಲ್ಲಿ ಒಟ್ಟು 55 ಸ್ಥಾನಗಳ ಪೈಕಿ ಬಿಜೆಪಿ 23 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಈ ಹಂತದಲ್ಲಿ ಎಸ್‌ಪಿ 32 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಅಂದರೆ, ಇಲ್ಲಿ ಎಸ್ಪಿ ಬಲಿಷ್ಠ. ಈ ಹಂತದಲ್ಲಿ ಕಾಂಗ್ರೆಸ್ ಮತ್ತು ಬಿಎಸ್‌ಪಿ ಶೂನ್ಯದಲ್ಲಿದೆ.

ಮೂರನೇ ಹಂತದಲ್ಲಿ ಒಟ್ಟು 59 ಸ್ಥಾನಗಳ ಪೈಕಿ 40 ಸ್ಥಾನಗಳು ಬಿಜೆಪಿ ಖಾತೆಗೆ ಸೇರುತ್ತಿದ್ದು, ಎಸ್‌ಪಿ ಮತ್ತೆ 18 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಈ ಹಂತದಲ್ಲಿ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಖಾತೆ ತೆರೆಯಬಹುದು. ಈ ಹಂತದಲ್ಲಿಯೂ ಬಿಎಸ್‌ಪಿ ಹಿನ್ನಡೆಯಾಗುವ ಸಾಧ್ಯತೆ ಇದೆ.

ನಾಲ್ಕನೇ ಹಂತದಲ್ಲಿ ಒಟ್ಟು 60 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಬಿಜೆಪಿ 40 ಸ್ಥಾನಗಳನ್ನು ಗೆಲ್ಲಬಹುದು. ಈ ಹಂತದಲ್ಲಿ ಬಿಎಸ್‌ಪಿ ಎರಡು ಸ್ಥಾನಗಳನ್ನು ಗೆಲ್ಲಲಿದೆ. ಉಳಿದ 18 ಸ್ಥಾನಗಳು ಎಸ್‌ಪಿ ಖಾತೆಗೆ ಸೇರಬಹುದು.

ಐದನೇ ಹಂತದಲ್ಲಿ 61 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಬಿಜೆಪಿ 35 ಸ್ಥಾನಗಳನ್ನು ಗೆಲ್ಲಬಹುದು. 21 ಸ್ಥಾನಗಳು ಎಸ್‌ಪಿ ಖಾತೆಗೆ ಮತ್ತು 2 ಸ್ಥಾನಗಳು ಬಿಎಸ್‌ಪಿ ಖಾತೆಗೆ ಸೇರಲಿವೆ. ಈ ಹಂತದಲ್ಲಿ, ಕಾಂಗ್ರೆಸ್ 1 ಮತ್ತು ಸ್ವತಂತ್ರರು/ಇತರರು 2 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಆರನೇ ಹಂತದ 57 ಸ್ಥಾನಗಳಲ್ಲಿ ಬಿಜೆಪಿ 32 ಸ್ಥಾನಗಳಲ್ಲಿ ಭಾರಿ ಪೈಪೋಟಿ ಹೊಂದಿದೆ. ಎಸ್‌ಪಿ 22 ಮತ್ತು ಬಿಎಸ್‌ಪಿ 2 ಸ್ಥಾನಗಳನ್ನು ಪಡೆಯಬಹುದು. ಈ ಹಂತದಲ್ಲಿ ಒಂದು ಸೀಟು ಇತರರ ಖಾತೆಗೂ ಹೋಗಬಹುದು.

UP Election ಲವ್ ಜಿಹಾದ್‌ಗೆ 10 ವರ್ಷ ಜೈಲು, ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್; ಯುಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆ!

ಏಳನೇ ಮತ್ತು ಅಂತಿಮ ಹಂತದಲ್ಲಿ ಬಿಜೆಪಿ 23 ಸ್ಥಾನಗಳನ್ನು ಗೆಲ್ಲಬಹುದು. ಈ ಹಂತದಲ್ಲಿ ಒಟ್ಟು 53 ಸ್ಥಾನಗಳಿಗೆ ಮತದಾನ ನಡೆಯಲಿದೆ. ಎಸ್‌ಪಿ 29 ಸ್ಥಾನಗಳನ್ನು ಎದುರು ನೋಡುತ್ತಿದ್ದು, ಒಂದು ಸ್ಥಾನ ಇತರರ ಖಾತೆಗೆ ಸೇರಬಹುದು.

18 ಸಾವಿರ ಜನರ ಅಭಿಪ್ರಾಯ: ಅಭಿಪ್ರಾಯ ಸಂಗ್ರಹಕ್ಕಾಗಿ ಈ ಸಮೀಕ್ಷೆಯನ್ನು ಜನವರಿ 31 ಮತ್ತು ಫೆಬ್ರವರಿ 5, 2022 ರ ನಡುವೆ ನಡೆಸಲಾಗಿದೆ. ಇದರಲ್ಲಿ 18 ಸಾವಿರ ಜನರೊಂದಿಗೆ ಮಾತುಕತೆ ನಡೆಸಲಾಗಿದೆ. 18ರಿಂದ 35ರ ವಯೋಮಾನದ ಶೇ.30ರಷ್ಟು ಮಂದಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರೆ, 35ರಿಂದ 45ರ ವಯೋಮಾನದ ಶೇ.45ರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 45 ವರ್ಷ ಮೇಲ್ಪಟ್ಟ ಶೇ.25ರಷ್ಟು ಜನರ ಅಭಿಪ್ರಾಯವನ್ನೂ ಸಮೀಕ್ಷೆಯಲ್ಲಿ ಸೇರಿಸಲಾಗಿದೆ.

click me!