ರಾತ್ರಿ ವೇಳೆ ಏಕಾಏಕಿ ಚಿರತೆಯೊಂದು ಮನೆ ಒಳಗೆ ನುಗ್ಗಿದೆ. ಆದರೆ ಸಾಕು ನಾಯಿ ಪ್ರಾಣದ ಹಂಗು ತೊರೆದು ಚಿರತೆ ಜೊತೆ ಹೋರಾಡಿ ಮನೆಯವರ ಪ್ರಾಣ ಉಳಿಸಿದೆ. ಈ ವಿಡಿಯೋ ವೈರಲ್ ಆಗಿದೆ.
ನೈನಿತಾಲ್(ಆ.01) ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಆಹಾರ ಹುಡುಕಿ ಗ್ರಾಮಕ್ಕೆ ಆಗಮಿಸುತ್ತಿರುವ ಘಟನೆಗಳು ಸಾಮಾನ್ಯವಾಗುತ್ತಿದೆ. ಹಲವು ಜೀವಗಳು ಈ ಪ್ರಾಣಿಗಳ ದಾಳಿಗೆ ಬಲಿಯಾಗಿದೆ.ಇದೀಗ ರಾತ್ರಿ ವೇಳೆ ಭಾರಿ ಗಾತ್ರದ ಚಿರತೆಯೊಂದು ಮನೆಯೊಳಗೆ ಏಕಾಏಕಿ ನುಗ್ಗಿದೆ. ಆದರೆ ಎರಡು ಸಾಕು ನಾಯಿಗಳು ಪ್ರಾಣದ ಹಂಗು ತೊರೆದು ಚಿರತೆ ಜೊತೆ ಹೋರಾಡಿದೆ. ಪರಿಣಾಮ ಮಾಲೀಕ ಸೇರಿದಂತೆ ಇಡೀ ಕುಟುಂಬ ಚಿರತೆ ದಾಳಿಯಿಂದ ಪಾರಾಗಿದೆ. ಆದರೆ ಈ ಹೋರಾಟದಲ್ಲಿ ನಾಯಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಖಂಡದ ನೈನಿತಾಲ್‌ಲ್ಲಿ ನಡೆದಿದೆ. ನಾಯಿ ಹಾಗೂ ಚಿರತೆ ಕಾದಾಟ ವಿಡಿಯೋ ವೈರಲ್ ಆಗಿದೆ.
ಕಾಡಿನ ಅಂಚಿನಲ್ಲಿರುವ ಗ್ರಾಮದ ಜನರು ಬಹು ಬೇಗನೆ ಕೆಲಸ ಕಾರ್ಯ ಮುಗಿಸಿ ಮನೆ ಸೇರಿಕೊಳ್ಳುತ್ತಾರೆ. ರಾತ್ರಿ ವೇಳೆ ಪ್ರಾಣಿಗಳ ದಾಳಿಗಳು ಸಾಮಾನ್ಯವಾಗಿರುವ ಕಾರಣ ಎಚ್ಚರಿಕೆ ವಹಿಸುತ್ತಾರೆ. ಹೀಗೆ ನೈನಿತಾಲ್ ಗ್ರಾಮದ ಜನರ ಮನೆ ಸೇರಿಕೊಂಡು ನಿದ್ದೆಗೆ ಜಾರಿದ್ದರು. ಈ ವೇಳೆ ಆಹಾರ ಹುಡುಕಿಕೊಂಡು ಬಂದ ಚಿರತೆ ಏಕಾಏಕಿ ಮನೆಗೆ ನುಗ್ಗಿದೆ. ಮನೆಯ ಬದಿಯಲ್ಲಿನ ದಾರಿ ಮೂಲಕ ಸಾಗಿ ಬಂದ ಚಿರತೆ ಏಕಾಏಕಿ ದಾಳಿ ಮಾಡಲು ಆರಂಭಿಸಿದೆ.
ಮನೆ ಬಾಗಿಲಿಗೆ ಬಂದ ಚಿರತೆಯನ್ನು ಬೀದಿ ನಾಯಿಯಂತೆ ಓಡಿಸಿದ ಮಹಿಳೆ
ಆದರೆ ಮುಂಭಾಗದಲ್ಲಿ ನಾಯಿ ಪ್ರತಿ ದಾಳಿ ನಡೆಸಿದೆ. ಇದೇ ವೇಳೆ ಮತ್ತೊಂದು ಸಾಕು ನಾಯಿ ಸೇರಿಕೊಂಡು ಚಿರತೆ ಮೇಲೆ ದಾಳಿ ಮಾಡಿದೆ. ಭಯದಿಂದ ಓಡಿದ ಚಿರತೆಯನ್ನು ನಾಯಿ ಬೆನ್ನಟ್ಟಿದೆ. ಈ ವೇಳೆ ಮತ್ತೆ ಚಿರತೆ ಮನೆಯೊಳಗೆ ವಾಪಸ್ ದಾಳಿಗೆ ಆಗಮಿಸಿದೆ. ನಾಯಿಯನ್ನು ಓಡಿಸಿಕೊಂಡು ಬಂದ ಚಿರತೆ ದಾಳಿ ಮುಂದುವರಿಸಿದೆ. ಆದರೆ ಪ್ರಾಣದ ಹಂಗು ತೊರೆದ ನಾಯಿ ಸತತವಾಗಿ ಚಿರತೆ ಜೊತೆ ಹೋರಾಡಿದೆ.
ಎರಡು ನಾಯಿಗಳ ದಾಳಿಯಿಂದ ಚಿರತೆ ಭಯಗೊಂಡು ಹೊರಗೆ ಓಡಿದೆ.ಇತ್ತ ಮನೆಯೊಳಗಿದ್ದ ಕುಟುಂಬ ಕಿರುಚಾಡಿದೆ. ಶಬ್ಧ ಮಾಡಿ ಚಿರತೆ ಓಡಿಸಲು ಮುಂದಾಗಿದ್ದಾರೆ. ನಾಯಿಯ ಸತತ ಹೋರಾಟದಿಂದ ಚಿರತೆ ಓಡಿ ಹೋಗಿದೆ. ಇತ್ತ ಎರಡು ನಾಯಿ ಚಿರತೆಯನ್ನು ಬೆನ್ನಟ್ಟಿ ಓಡಿಸಿದೆ. ಈ ಹೋರಾಟದಲ್ಲಿ ಒಂದು ನಾಯಿ ಕುತ್ತಿಗೆ ಬಳಿ ತೀವ್ರಗಾಯಗೊಂಡಿದೆ. ಚಿರತೆ ಕುತ್ತಿಗೆ ಕಚ್ಚಿ ಎಳೆದೊಯ್ಯುವ ಪ್ರಯತ್ನ ಮಾಡಿತ್ತು. ಆದರೆ ಪ್ರತಿ ದಾಳಿಯಿಂದ ನಾಯಿ ಪ್ರಾಣ ಉಳಿದಿದೆ. ಸದ್ಯ ನಾಯಿಗೆ ಚಿಕಿತ್ಸೆ ನೀಡಲಾಗಿದೆ.
कुत्तों के सामने जंगल का राजा जान बचाकर भागा।
देखिए... pic.twitter.com/AONrSZkmLP
ನಾಯಿ ದಾಳಿಯಿಂದ ಓಡಿ ಹೋದ ಚಿರತೆ ಸಾಲ್ತೆವಾಡಿ ಗ್ರಾಮಕ್ಕೆ ನುಗ್ಗಿ ನಾಯಿಯೊಂದನ್ನು ಎಳೆದೊಯ್ದಿದೆ. ನಾಯಿಯ ಹೋರಾಟದಿಂದ ಕುಟುಂಬಸ್ಥರು ಪ್ರಾಣ ಉಳಿದೆ. ಈ ಭೀಕರ ಕಾಳಗ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೂವರ ಮೇಲೆ ದಾಳಿ ನಡೆಸಿದ್ದ ಚಿರತೆ; ಕಂಡ ಕ್ಷಣವೇ ಅಟ್ಟಾಡಿಸಿ ಕೊಚ್ಚಿ ಕೊಂದ ಗ್ರಾಮಸ್ಥರು!