2017ರಲ್ಲಿ ನಮ್ಮ ಅಣ್ಣ ಬಿ.ಟೆಕ್ ಪದವಿ ಪಡೆದ ಬಳಿಕ ಆತನಿಗೆ 25 ಲಕ್ಷ ಪ್ಯಾಕೇಜ್ ಸಂಬಳದ ಕೆಲಸ ಸಹ ಸಿಕ್ಕಿತ್ತು. ಆದ್ರೆ ಯುಪಿಎಸ್‌ಸಿ ಮಾಡಬೇಕೆಂಬ ಉದ್ದೇಶದಿಂದ ಲಕ್ಷಾಂತರ ಸಂಬಳದ ಕೆಲಸ ತೊರೆದು ಓದಿನತ್ತ ಗಮನ ಹರಿಸಿದ್ದನು
ಲಕ್ನೋ: 25 ಲಕ್ಷ ಸಂಬಳ ಬರುತ್ತಿದ್ದ ಕೆಲಸ ಬಿಟ್ಟಿದ್ದ ಯುವಕ ಯುಪಿಎಸ್‌ಸಿ ಪರೀಕ್ಷೆ ನಡೆಸಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಹದಿಹರೆಯದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೆಲಸ ಬಿಟ್ಟಿದ್ದ ಯುವಕ, ಯುಪಿಎಸ್‌ಸಿ ಪ್ರಿಲಿಮಸ್ ಮತ್ತು ಮೇನ್ಸ್ ಕ್ಲಿಯರ್ ಮಾಡಿಕೊಂಡಿದ್ದನು. ಆದ್ರೆ ಫೈನಲ್‌ನಲ್ಲಿ ಯುವಕನ ಹೆಸರು ಬಂದಿರಲಿಲ್ಲ. ಹೀಗಾಗಿ ಯುವಕನ ಮಾನಸಿಕವಾಗಿ ನೊಂದಿದ್ದನು. ಇದೇ ಕಾರಣದಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು, ಕುಟುಂಬಸ್ಥರು ಹಾಗೂ ಯುವಕನ ಸ್ನೇಹಿತರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಪುತ್ರನ ಸಾವಿನ ಸುದ್ದಿ ಕೇಳಿದ ತಾಯಿ ಕಣ್ಣೀರು ಹಾಕಿ ಆಸ್ವಸ್ಥರಾಗಿದ್ದಾರೆ.
ಮೃತ ಯುವಕನನ್ನು 29 ವರ್ಷದ ಕುಲದೀಪ್ ಸಿಂಗ್ ಸೋಲಂಕಿ ಎಂದು ಗುರುತಿಸಲಾಗಿದೆ. ಕುಲದೀಪ್ ಉತ್ತರ ಪ್ರದೇಶದ ಕಾಸಗಂಜ್ ಭುಜಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಪುರ ಗ್ರಾಮದ ನಿವಾಸಿಯಾಗಿದ್ದು, ಬಿಟೆಕ್ ಪದವಿ ಪಡೆದುಕೊಂಡಿದ್ದನು. ಕಳೆದ ಎರಡೂವರೆ ವರ್ಷದಿಂದ ತುಳಸಿ ವಿವಾರದಲ್ಲಿರುವ ವಸತಿ ನಿಲಯದಲ್ಲಿ ಉಳಿದುಕೊಂಡಿದ್ದ ಕುಲದೀಪ್ ಯುಪಿಎಸ್‌ಸಿ ತಯಾರಿ ನಡೆಸಿದ್ದನು. ಕಠಿಣ ಪರಿಶ್ರಮದಿಂದ ಓದಿದ್ದ ಕುಲದೀಪ್, ಪ್ರಿಲಿಮ್ಸ್, ಮೇನ್ಸ್ ಕ್ಲಿಯರ್ ಮಾಡಿಕೊಂಡಿದ್ದನು.
ಫೈನಲ್ ಪಟ್ಟಿಯಲ್ಲಿ ತನ್ನ ಹೆಸರು ಬರದ ಹಿನ್ನೆಲೆ ಕುಲದೀಪ್ ಮಾನಸಿಕವಾಗಿ ನೊಂದಿದ್ದನು. ಇದೇ ನೋವಿನಲ್ಲಿದ್ದ ಕುಲದೀಪ್ ವಿಷ ಸೇವಿಸಿದ್ದಾನೆ. ವಿಷ ಸೇವಿಸಿದ್ದ ಕುಲದೀಪ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಯುವಕ ಮೃತಪಟ್ಟಿರೋದನ್ನು ದೃಢಪಡಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಬ್ಲೂಫಿಲಂ ನೋಡೋರ ಮಧ್ಯೆ ಫ್ರೀ ವೈಫೈ ಬಳಸಿ UPSC ಪಾಸಾದ ಕೂಲಿ ಕಾರ್ಮಿಕ
ಕುಲದೀಪ್ ಮನೆಯಲ್ಲಿ ಆತನ ತಾಯಿ ಮತ್ತು ತಮ್ಮನಿದ್ದಾನೆ. ಹಲವು ವರ್ಷಗಳ ಹಿಂದೆಯೇ ಕುಲದೀಪ್ ತಂದೆ ನಿಧನರಾಗಿದ್ದಾರೆ. ಸೋದರನ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಸಂದೀಪ್ ಸಿಂಗ್ ಸೋಲಂಕಿ, 2017ರಲ್ಲಿ ನಮ್ಮ ಅಣ್ಣ ಬಿ.ಟೆಕ್ ಪದವಿ ಪಡೆದ ಬಳಿಕ ಆತನಿಗೆ 25 ಲಕ್ಷ ಪ್ಯಾಕೇಜ್ ಸಂಬಳದ ಕೆಲಸ ಸಹ ಸಿಕ್ಕಿತ್ತು. ಆದ್ರೆ ಯುಪಿಎಸ್‌ಸಿ ಮಾಡಬೇಕೆಂಬ ಉದ್ದೇಶದಿಂದ ಲಕ್ಷಾಂತರ ಸಂಬಳದ ಕೆಲಸ ತೊರೆದು ಓದಿನತ್ತ ಗಮನ ಹರಿಸಿದ್ದನು ಎಂದು ಹೇಳಿದ್ದಾನೆ.
ಯುಪಿಎಸ್‌ಸಿ ಮಾಡಬೇಕೆಂಬ ಎಂಬ ಉದ್ದೇಶದಿಂದ ವಿದೇಶಿ ಕಂಪನಿಗಳಿಂದ ಬಂದ ಆಫರ್‌ಗಳನ್ನು ಸಹ ತಿರಸ್ಕರಿಸಿದ್ದನು. ಏನೇ ಆದ್ರೆ ತಾನೋರ್ವ ಐಎಎಸ್ ಅಧಿಕಾರಿ ಆಗಬೇಕೆಂದು ಸತತವಾಗಿ ಓದುತ್ತಿದ್ದನು. ಎಷ್ಟೇ ಒಳ್ಳೆಯ ಆಫರ್‌ಗಳು ಬಂದ್ರೂ ಯಾವುದಕ್ಕೂ ಹೋಗಿರಲಿಲ್ಲ. ಫೈನಲ್ ಲಿಸ್ಟ್‌ನಲ್ಲಿ ತನ್ನ ಹೆಸರು ಬರದಿದ್ದಾಗ ಸೋದರ ತೀವ್ರವಾಗಿ ನೊಂದಿದ್ದನು ಎಂಬ ವಿಷಯವನ್ನು ಸಂದೀಪ್ ಸೋಲಂಕಿ ಹಂಚಿಕೊಂಡಿದ್ದಾರೆ.