4 ವರ್ಷದ ಹಿಂದೆ ಸತ್ತವ ಬದುಕಿ ಬಂದ: ಅಂತ್ಯಸಂಸ್ಕಾರ ಮಾಡಿದ ಕುಟುಂಬದವರಿಗೆ ಶಾಕ್

By Anusha KbFirst Published Aug 1, 2024, 6:00 PM IST
Highlights

4 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಮರಳಿ ಬಂದಿದ್ದು, ಇದರಿಂದ ಅವರ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 

ಚಿತ್ತೂರು: ಸತ್ತೋಗಿದ್ದಾರೆ ಎಂದು ತಿಳಿದು ಅಂತ್ಯಸಂಸ್ಕಾರದ ನಂತರವೂ ವ್ಯಕ್ತಿಯೊಬ್ಬ ಮರಳಿ ಬಂದರೆ ಹೇಗಿರುತ್ತದೆ? ಕುಟುಂಬಸ್ಥರಿಗೆ ಆತ ಬದುಕಿ ಬಂದಿದ್ದಾನೆ ಎಂದು ಖುಷಿ ಪಡಬೇಕೋ ಅಥವಾ ಅಂತ್ಯಸಂಸ್ಕಾರ ಮಾಡಿದ್ದಕ್ಕೆ ವ್ಯಥೆ ಪಡಬೇಕೋ ಎಂದು ಗೊತ್ತಾಗದೇ ಇರಿಸುಮುರಿಸುಪಡುವಂತಾಗುತ್ತದೆ. ಅಂತಹಾ ವಿಚಿತ್ರ ಘಟನೆಯೊಂದು ಆಂಧ್ರದಲ್ಲಿ ನಡೆದಿದ್ದು, ಮರಳಿ ಬಂದ ವ್ಯಕ್ತಿ ನಾನು ಜೀವಂತವಾಗಿದ್ದೇನೆ ಎಂದು ಹೇಳಿ ಜಿಲ್ಲಾಧಿಕಾರಿ ಕಚೇರಿ ಕದ ತಟ್ಟುವಂತಾಗಿದೆ. 

4 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬರು ಮರಳಿ ಬಂದಿದ್ದು, ಇದರಿಂದ ಅವರ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಚಿತ್ತೂರಿನ ಪೈಮಘಮ್‌  ಜಿಲ್ಲೆಯ ಆಂಜನೇಯ  ಶೆಟ್ಟಿ ಎಂಬುವವರು ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದು 2019ರಲ್ಲಿ ನಾಪತ್ತೆಯಾಗಿದ್ದರು. ಇವರು ಕಾಣೆಯಾದ ನಂತರ ಇವರ ಕುಟುಂಬದವರು ಇವರಿಗಾಗಿ ಇನ್ನಿಲ್ಲದಂತೆ ಹುಡುಕಿದ್ದಾರೆ. ಇಂದಲ್ಲ ನಾಳೆ ಆಂಜನೇಯ ಸಿಗಬಹುದು ಎಂಬ ಭರವಸೆಯ ಮೇರೆಗೆ 2019ರಿಂದ 2020ರವರೆಗೂ  ಆಂಜನೇಯ ಶೆಟ್ಟಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಅಂಜನೇಯನ ಪತ್ತೆ ಇಲ್ಲ, ಆದರೆ 2020ರಲ್ಲಿ ಬೆಂಗಳೂರಿನಲ್ಲಿ ಅಪರಿಚಿತ ಮೃತದೇಹವೊಂದು ಸಿಕ್ಕಿದ್ದು, ಅದು ಆಂಜನೇಯನನ್ನೇ ಹೋಲುತ್ತಿತ್ತು. ಹೀಗಾಗಿ ಕುಟುಂಬದವರು ಅದು  ಆಂಜನೇಯನೇ ಇರಬಹುದು ಎಂದು ಭಾವಿಸಿ ತಮ್ಮ ಸಮುದಾಯದ ಸಂಪ್ರದಾಯದಂತೆ ಎಲ್ಲಾ ಅಂತಿಮ ವಿಧಿವಿಧಾನಗಳನ್ನು ನಡೆಸಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಅಲ್ಲದೇ ಆತನ ಮರಣಪತ್ರವನ್ನು ಕೂಡ ಮಾಡಿದ್ದಾರೆ. ಡೆತ್ ಸರ್ಟಿಫಿಕೇಟ್ ಮಾಡಿದ ನಂತರ ಸ್ಥಳೀಯಾಡಳಿತದವರು ಆತನ ಆಧಾರ್ ಕಾರ್ಡನ್ನು ಕ್ಯಾನ್ಸಲ್ ಮಾಡಿದ್ದಾರೆ. ಅಲ್ಲದೇ ನಂತರ ರೇಷನ್ ಕಾರ್ಡ್‌ನಿಂದಲೂ ಈತನ ಹೆಸರು ತೆಗೆಸಲಾಗಿದೆ. 

Latest Videos

ಅನಾರೋಗ್ಯದ ಕಾರಣ ಆಸ್ಪತ್ರೆಗೆ ತೆರಳಿ ಬರೋಬ್ಬರಿ 2 ದಿನ ಲಿಫ್ಟ್ ನಲ್ಲಿ ಸಿಲುಕಿಕೊಂಡ ವ್ಯಕ್ತಿ!

ಆದರೆ 4 ವರ್ಷದ ನಂತರ ಆಂಜನೇಯ ವಾಪಸ್ ತನ್ನ ಮನೆಗೆ ವಾಪಸ್ ಬಂದಿದ್ದಾನೆ. ಈತನ ಮನೆಯವರು ಈತ ಸುರಕ್ಷಿತವಾಗಿ ಮನೆಗೆ ಮರಳಿ ಬಂದಿರುವುದಕ್ಕೆ ಖುಷಿ ಪಟ್ಟರೆ ಜೊತೆಗೆ ಪಕ್ಕದ ಮನೆಯವರು, ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಎಲ್ಲಾ ದಾಖಲೆಗಳಲ್ಲಿ ಆಂಜನೇಯ ಸಾವನ್ನಪ್ಪಿದ್ದಾನೆ ಎಂದು ದಾಖಲಾಗಿರುವುದರಿಂದ ಆಂಜನೇಯನಿಗೆ ಹೊಸ ಸಂಕಷ್ಟ ಎದುರಾಗಿದೆ. ತನ್ನ ಹೆಸರಿನ ಮರಣಪತ್ರವೂ ಹೊರಬಂದಿರುವುದರಿಂದ ತಾನು ಸತ್ತಿಲ್ಲ ಜೀವಂತವಾಗಿದ್ದೇನೆ ಎಂದು ಆಡಳಿತ ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ. ಅಲ್ಲದೇ ಮರಣಪತ್ರವನ್ನು ರದ್ದುಮಾಡಿ, ಮರಳಿ ತನ್ನ ಎಲ್ಲಾ ದಾಖಲೆಗಳನ್ನು ಸರಿಪಡಿಸುವಂತೆ ಕೇಳಿದ್ದಾನೆ. ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂಜನೇಯ  ಶೆಟ್ಟಿ ಚಿತ್ತೂರು ಜಿಲ್ಲಾಧಿಕಾರಿಗೂ ದೂರು ನೀಡಿದ್ದಾನೆ.ಇದಾದ ನಂತರವಷ್ಟೇ ಈ ಪ್ರಕರಣ ಬೆಳಕಿಗೆ ಬಂದಿದೆ.

ಮಂಗಳೂರಿನಲ್ಲಿ ಕಾಣೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಜೊತೆ ಪತ್ತೆ, ಯುವಕನ ಹಿನ್ನೆಲೆ ಕೇಳಿ ಶಾಕ್!

click me!