ಐಶ್ವರ್ಯಾ ರೈನಂತೆ ಕಣ್ಣುಗಳನ್ನ ಪಡೆಯಲು ನೀವು ಹೀಗೆ ಮಾಡಿ: ಸಚಿವರ ಐಡಿಯಾ ಸಿಕ್ಕಾಪಟ್ಟೆ ವೈರಲ್..!

By BK Ashwin  |  First Published Aug 21, 2023, 8:03 PM IST

ಪ್ರತಿದಿನ ಮೀನು ಸೇವಿಸಿದ್ರೆ ನಟಿ ಐಶ್ವರ್ಯಾ ರೈ ಅವರ ಕಣ್ಣುಗಳಷ್ಟು ಸುಂದರವಾದ ಕಣ್ಣುಗಳನ್ನು ಪಡೆಯಬಹುದು ಎಂದು ಮಹಾರಾಷ್ಟ್ರದ ಬಿಜೆಪಿ ಸಚಿವ ವಿಜಯ್‌ಕುಮಾರ್ ಗವಿತ್ ಹೇಳಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 


ಮುಂಬೈ (ಆಗಸ್ಟ್‌ 21, 2023):  ನಟಿ ಐಶ್ವರ್ಯಾ ರೈ ಅವರ ಕಣ್ಣುಗಳಷ್ಟು ಸುಂದರವಾದ ಕಣ್ಣುಗಳನ್ನು ಪಡೆಯಲು ಮಹಾರಾಷ್ಟ್ರದ ಬಿಜೆಪಿ ಸಚಿವರೊಬ್ಬರು ಕೊಟ್ಟ ಐಡಿಯಾ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಉತ್ತರ ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ರಾಜ್ಯ ಬುಡಕಟ್ಟು ಸಚಿವ ವಿಜಯ್‌ಕುಮಾರ್ ಗವಿತ್ ಅವರ ಹೇಳಿಕೆಗಳ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಪ್ರತಿದಿನ ಮೀನು ಸೇವಿಸಿದ್ರೆ ನಟಿ ಐಶ್ವರ್ಯಾ ರೈ ಅವರ ಕಣ್ಣುಗಳಷ್ಟು ಸುಂದರವಾದ ಕಣ್ಣುಗಳನ್ನು ಪಡೆಯಬಹುದು ಎಂದು ಮಹಾರಾಷ್ಟ್ರದ ಬಿಜೆಪಿ ಸಚಿವ ವಿಜಯ್‌ಕುಮಾರ್ ಗವಿತ್ ಹೇಳಿದ್ದು, ವಿವಾದ ಹುಟ್ಟು ಹಾಕಿದೆ. "ಪ್ರತಿನಿತ್ಯ ಮೀನು ಸೇವಿಸುವ ಜನರು ನಯವಾದ ಚರ್ಮವನ್ನು ಪಡೆಯುತ್ತಾರೆ ಮತ್ತು ಅವರ ಕಣ್ಣುಗಳು ಹೊಳೆಯುತ್ತವೆ. ಯಾರಾದರೂ ನಿಮ್ಮನ್ನು ನೋಡಿದರೆ, ವ್ಯಕ್ತಿಯು (ನಿಮ್ಮ ಕಡೆಗೆ) ಆಕರ್ಷಿತರಾಗುತ್ತಾರೆ" ಎಂದೂ ಅವರು ಹೇಳಿದರು.

Tap to resize

Latest Videos

ಇದನ್ನು ಓದಿ: Gadar - 2 ಗೂ ಮುನ್ನ ಅಮೀಷಾ ಪಟೇಲ್‌ ನೀಡಿದ್ದ ಹಿಟ್‌ ಚಿತ್ರಗಳ ವಿವರ ಹೀಗಿದೆ..

"ನಾನು ಐಶ್ವರ್ಯಾ ರೈ ಬಗ್ಗೆ ಹೇಳಿದ್ದೇನೆಯೇ? ಅವರು ಮಂಗಳೂರಿನ ಸಮುದ್ರ ತೀರದಲ್ಲಿ ವಾಸಿಸುತ್ತಿದ್ರು. ಅವರು ಪ್ರತಿದಿನ ಮೀನು ಸೇವಿಸುತ್ತಿದ್ದರು. ಅವರ ಕಣ್ಣುಗಳನ್ನು ನೀವು ನೋಡಿದ್ದೀರಾ? ಅವರಂಯೇ ನಿಮಗೂ ಕಣ್ಣುಗಳು ಇರುತ್ತವೆ" ಎಂದು ಸಚಿವರು ಹೇಳುತ್ತಿರುವುದು ಕೇಳಿಬರುತ್ತಿದೆ. "ಮೀನಿನಲ್ಲಿ ಕೆಲವು ಎಣ್ಣೆಗಳಿವೆ, ಅದು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ" ಎಂದೂ 68 ವರ್ಷ ವಯಸ್ಸಿನ ಸಚಿವ ವಿಜಯ್‌ಕುಮಾರ್ ಗವಿತ್ ಹೇಳಿದ್ದಾರೆ. ಅವರ ಪುತ್ರಿ ಹೀನಾ ಗವಿತ್ ಬಿಜೆಪಿಯ ಲೋಕಸಭಾ ಸದಸ್ಯರಾಗಿದ್ದಾರೆ.

ಇನ್ನು, ಸಚಿವರು ಇಂತಹ "ಕ್ಷುಲ್ಲಕ" ಕಾಮೆಂಟ್‌ಗಳನ್ನು ಮಾಡುವ ಬದಲು ಬುಡಕಟ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂದು ಎನ್‌ಸಿಪಿ ಶಾಸಕ ಅಮೋಲ್ ಮಿಟ್ಕರಿ ಟೀಕಿಸಿದ್ದಾರೆ. ಈ ಮಧ್ಯೆ, ಬಿಜೆಪಿ ಶಾಸಕ ನಿತೇಶ್ ರಾಣೆ, "ನಾನು ಪ್ರತಿನಿತ್ಯ ಮೀನು ತಿನ್ನುತ್ತೇನೆ. ನನ್ನ ಕಣ್ಣುಗಳು (ಐಶ್ವರ್ಯಾ ರೈ ಅವರಂತೆ) ಆಗಬೇಕಿತ್ತು. ಈ ಬಗ್ಗೆ ಏನಾದರೂ ಸಂಶೋಧನೆ ಇದ್ದರೆ, ನಾನು ಗವಿತ್ ಸಾಹಿಬ್ ಅವರನ್ನು ಕೇಳುತ್ತೇನೆ" ಎಂದೂ ಹೇಳಿದರು.

ಇದನ್ನೂ ಓದಿ: ಬ್ರೇಕಪ್‌ ಆಗ್ತಿದ್ದಾರಾ ಬಾಲಿವುಡ್‌ ಹಾಟ್‌ ನಟಿ ಮಲೈಕಾ ಅರೋರಾ - ಅರ್ಜುನ್ ಕಪೂರ್? 5 ವರ್ಷದ ಸಂಬಂಧಕ್ಕೆ ಫುಲ್‌ಸ್ಟಾಪ್?

click me!