ಅಟಲ್ ಬಿಹಾರಿ ಪಾರ್ಕ್ ಇನ್ಮುಂದೆ ತೆಂಗಿನಕಾಯಿ ಉದ್ಯಾನವನ, ಬಿಹಾರ ಸರ್ಕಾರದಿಂದ ಮರುನಾಮಕರಣ!

Published : Aug 21, 2023, 04:35 PM ISTUpdated : Aug 21, 2023, 04:36 PM IST
ಅಟಲ್ ಬಿಹಾರಿ ಪಾರ್ಕ್ ಇನ್ಮುಂದೆ ತೆಂಗಿನಕಾಯಿ ಉದ್ಯಾನವನ, ಬಿಹಾರ ಸರ್ಕಾರದಿಂದ ಮರುನಾಮಕರಣ!

ಸಾರಾಂಶ

ಇತ್ತೀಚೆಗೆ ಕೇಂದ್ರ ಸರ್ಕಾರ ನೆಹರೂ ಮ್ಯೂಸಿಯಂನ್ನು ಪ್ರಧಾನಿ ಮ್ಯೂಸಿಯಂ ಎಂದು ಮನರುನಾಮಕರಣ ಮಾಡಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಆಕ್ರೋಶಕ್ಕೆ ತುತ್ತಾಗಿತ್ತು. ಇದೀಗ ಈ ನಡೆಗೆ ಬಿಹಾರ ಸರ್ಕಾರ ತಿರುಗೇಟು ನೀಡಿದೆ. ಅಟಲ್ ಬಿಹಾರಿ ವಾಜಪೇಯಿ ಪಾರ್ಕ್‌ನ್ನು ಇದೀಗ ಕೋಕನಟ್ ಪಾರ್ಕ್ ಎಂದು ಸರ್ಕಾರ ಮರುನಾಮಕರಣ ಮಾಡಿದೆ.   

ಪಾಟ್ನಾ(ಆ.21) ನಗರ, ಉದ್ಯಾನವನ, ಸೇರಿದಂತೆ ಕೆಲ ಕಟ್ಟಡಗಳ ಮರುನಾಮಕರಣ ರಾಜಕೀಯವಾಗಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ನೆಹರೂ ಮ್ಯೂಸಿಯಂನ್ನು ಪ್ರಧಾನಿ ಸಂಗ್ರಹಾಲಯ ಎಂದು ಮರುನಾಮಕರ ಮಾಡಿತ್ತು. ಇದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಬಿಹಾರದ ನಿತೀಶ್ ಕುಮಾರ್ ಸರ್ಕಾರದ ನಡೆ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಬಿಹಾರದ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್‌ನ್ನು ತೆಂಗಿನಕಾಯಿ ಉದ್ಯಾನವನ(ಕೋಕನಟ್ ಪಾರ್ಕ್) ಎಂದು ಮರುನಾಮಕರಣ ಮಾಡಿದೆ. ಈ ಕುರಿತು ಕೇಂದ್ರ ಸಚಿವ ನಿತ್ಯಾನಂದ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಟ್ನಾದ ಕಂಕಾರ್‌ಭಾಘ್‌ನಲ್ಲಿರುವ ಉದ್ಯಾನವನದ ಹೆಸರು ಇದೀಗ ಬದಲಾಗಿದೆ. ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮರನಾಮಕರಣ ಘೋಷಿಸಿದ್ದಾರೆ. ಬಿಹಾರ ಸರ್ಕಾರದ ಈ ನಡೆ ವಿರುದ್ದ  ಕೇಂದ್ರ ಸಚಿವ ನಿತ್ಯಾನಂದ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಹೆಸರಿನಲ್ಲಿದ್ದ ಉದ್ಯಾನವದ ಹೆಸರನ್ನು ತೇಜಸ್ವಿ ಯಾದವ್ ಬದಲಿಸಿದ್ದಾರೆ. ಶೀಘ್ರದಲ್ಲೇ ಸಿಎಂ ನಿತೀಶ್ ಕುಮಾರ್ ಮಧ್ಯಪ್ರವೇಶಿಸಿ ಇದನ್ನು ನಿಲ್ಲಿಸಬೇಕು ಎಂದು ನಿತ್ಯಾನಂದ ರೈ ಆಗ್ರಹಿಸಿದ್ದಾರೆ.

ನೆಹರು ಸ್ಮಾರಕ ಮ್ಯೂಸಿಯಂ ಇನ್ನು ಪ್ರಧಾನ ಮಂತ್ರಿ ಮ್ಯೂಸಿಯಂ, ಅಧಿಕೃತವಾಗಿ ಮರುನಾಮಕರಣ!

ಬಿಹಾರ ಸರ್ಕಾರ ತಪ್ಪು ಹೆಜ್ಜೆ ಇಡುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಸಮಸ್ತ ಭಾರತೀಯರ ಹೃದಯ ಗೆದ್ದ ನಾಯಕ. ವಿಶೇಷವಾಗಿ ಬಿಹಾರಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಉದ್ಯಾನವ ಹೆಸರನ್ನು ಬದಲಿಸಿರುವುದು ಉತ್ತಮ ನಡೆಯಲ್ಲ. ತೇಜಸ್ವಿ ಯಾದವ್ ನಡೆ ವಿಪತ್ತಿಗೆ ಕಾರಣವಾಗಲಿದೆ. ಸದ್ದಿಲ್ಲದೆ ನಿತೀಶ್ ಕುಮಾರ್ ಹೆಸರೂ ಕೂಡ ಬದಲಿಸುತ್ತಾರೆ ಎಂದು ನಿತ್ಯಾನಂದ ಪೈ ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ ದೆಹಲಿಯ ತೀನ್‌​ಮೂರ್ತಿ ಭವ​ನದ ‘ನೆ​ಹರು ಮ್ಯೂಸಿಯಂ ಹಾಗೂ ಲೈಬ್ರರಿ ಸೊಸೈಟಿ’ ಹೆಸ​ರನ್ನು ಬದ​ಲಿ​ಸಿದೆ. ಮ್ಯೂಸಿ​ಯಂಗೆ ‘ಪ್ರಧಾ​ನ​ಮಂತ್ರಿ ಮ್ಯೂಸಿಯಂ ಹಾಗೂ ಗ್ರಂಥಾ​ಲಯ ಸೊಸೈಟಿ’ ಎಂದು ಮರು​ನಾ​ಮ​ಕ​ರಣ ಮಾಡಿ​ತ್ತು. ಕಳೆದ ವರ್ಷ​ವಷ್ಟೆಇದೇ ತೀನ್‌​ಮೂರ್ತಿ ಭವನ ಆವ​ರ​ಣ​ದಲ್ಲಿ ಕೇಂದ್ರ ಸರ್ಕಾರ, ‘ಪ್ರ​ಧಾನ ಮಂತ್ರಿ ಸಂಗ್ರ​ಹಾ​ಲ​ಯ’ ಸ್ಥಾಪಿ​ಸಿತ್ತು. ಅದರ ಬೆನ್ನಲ್ಲೇ ಈ ವಿದ್ಯ​ಮಾನ ನಡೆ​ದಿದೆ. ತೀನ್‌​ಮೂರ್ತಿ ಭವ​ನವು ಭಾರ​ತದ ಮೊದಲ ಪ್ರಧಾನಿ ಪಂ. ಜವಾ​ಹ​ರ​ಲಾಲ್‌ ನೆಹರು ಅವರ ಅಧಿ​ಕೃತ ನಿವಾ​ಸ​ವಾ​ಗಿ​ತ್ತು.

ಸ್ವಾತಂತ್ರ್ಯ ದಿನಾಚರಣೆಗೆ ಕೆಂಪುಕೋಟೆಯಲ್ಲಿ ಗರಿಷ್ಠ ಧ್ವಜಾರೋಹಣ ಮಾಡಿದ ಪ್ರಧಾನಿ ಯಾರು?

ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಪ್ರಧಾನ ಮಂತ್ರಿಗಳ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಎಂದು ಬದಲಿ ಮಾಡಿದ್ದಕ್ಕೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಅಕ್ಷೇಪಿಸಿದ್ದಾರೆ. ಇದು ನೆಹರು ಪರಂಪರೆ ಅಳಿಸುವ ಯತ್ನ ಹಾಗೂ ಮೋದಿ ಸರ್ಕಾರದ ಸಣ್ಣತನ ಎಂದು ಕಿಡಿಕಾರಿದ್ದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!