71 ವರ್ಷದಲ್ಲಿ ಸಿಗದೇ ಇದ್ದದ್ದು, ಕಳೆದೊಂದು ವರ್ಷದಲ್ಲಿ ಸಿಕ್ಕಿದೆ; ಲಡಾಖ್ ಸಂಸದ ಜಮ್ಯಾಂಗ್!

By Suvarna NewsFirst Published Aug 6, 2020, 12:44 PM IST
Highlights

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಹಕ್ಕು ಆರ್ಟಿಕಲ್ 370 ರದ್ದು ಹಾಗೂ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ ಒಂದು ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ ಕೇಂದ್ರಾಡಳಿತ ಲಡಾಖ್ ಪ್ರದೇಶದಲ್ಲಿ ಸಂಭ್ರಮ ಮನೆ ಮಾಡಿದ. ಲಡಾಖ್ ಸಂಸದ, ಯುವ ಬಿಜೆಪಿ ನಾಯಕ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ತಮ್ಮ ಪ್ರಖರ ಮಾತುಗಳಿಂದ ಮತ್ತೆ ಎಲ್ಲರ ಗಮನಸೆಳೆದಿದ್ದಾರೆ.

ಲಡಾಖ್(ಆ.06): ಆರ್ಟಿಕಲ್ 370 ಹಾಗೂ 35-A ರದ್ದು ಮಾಡಿ ಒಂದು ವರ್ಷ ಸಂದಿದೆ. ಜಮ್ಮ ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನ ಮಾನ ತೆಗೆದುಹಾಕಿದ ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತು. ಈ ಐತಿಹಾಸಿಕ ನಿರ್ಧಾರಕ್ಕೆ ಭಾರಿ ಬೆಂಬಲ ವ್ಯಕ್ತವವಾಗಿತ್ತು. ಅಷ್ಟೇ ವಿರೋಧವೂ ಕೇಳಿ ಬಂದಿತ್ತು. ಆರ್ಟಿಕಲ್ 370 ರದ್ದು ಮಾಡಿ ಇದೀಗ ಒಂದು ವರ್ಷ ಕಳೆದಿದೆ. ಈ ಹಿನ್ನಲೆಯಲ್ಲಿ ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಸಂಭ್ರಮ ಮನೆ ಮಾಡಿದೆ. ಈ ಕುರಿತು ಲಡಾಖ್ ಸಂಸದ,  ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಕಳೆದೊಂದು ವರ್ಷದಲ್ಲಿ ಲಡಾಖ್ ಅಭಿವೃದ್ಧಿ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕನ್ನಡ ಕಲಿತ ಲಡಾಖ್ ಯುವ ಎಂಪಿಗೆ ಅತ್ಯುನ್ನತ ಸ್ಥಾನ ಕೊಟ್ಟ ಬಿಜೆಪಿ

ಕಳೆದ 71 ವರ್ಷಗಳಲ್ಲಿ ಲಡಾಖ್ ಪ್ರಾಂತ್ಯಕ್ಕೆ ಸಿಗದಿದ್ದ ಸೌಲಭ್ಯ, ಮೂಲ ಸೌಕರ್ಯ, ಸ್ಥಾನಮಾನ ಕಳೆದೊಂದು ವರ್ಷದಲ್ಲಿ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಲಡಾಖ್ ಅಭಿವೃದ್ಧಿಯತ್ತ ಸಾಗುತ್ತಿದೆ. 7 ದಶಕಗಳಿಂದ ಕತ್ತಲಲ್ಲಿ ಸಾಗಿದ್ದ ಲಡಾಖ್‌ನ ಎಲ್ಲೆಡೆ ಬೆಳಕು ಚೆಲ್ಲಿದೆ ಎಂದು ಜಮ್ಯಾಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಮಾತು: ಬಿಜೆಪಿ ಸೇರುವಂತೆ ಡಿಕೆ ಸುರೇಶ್‌ಗೆ ಆಹ್ವಾನ..!

ಲಡಾಖ್ ಪ್ರಾಂತ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಒಂದು ವರ್ಷ ಸಂದಿದೆ. ಹೀಗಾಗಿ ಸಂಭ್ರಮ ಆಚರಿಸಲಾಗುತ್ತಿದೆ. ಕೊರೋನಾ ವೈರಸ್ ಕಾರಣ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ. ಜಿಲ್ಲಾದಿಕಾರಿಗಳಿಂದ ಸಂಭ್ರಮಾಚರಣೆಗೆ ಪರವಾನಗೆ ಪಡೆದಿದ್ದೇವೆ ಎಂದು ಜಮ್ಯಾಂಗ್ ಹೇಳಿದ್ದಾರೆ.

ಕಳೆದ ವರ್ಷ ಹಾಗೂ ಪ್ರಸಕ್ತ ಬಜೆಟ್‌  ಮೂಲಕ ಒಟ್ಟು ಲಡಾಖ್ ಪ್ರಾಂತ್ಯಕ್ಕೆ 11,000 ಕೋಟಿ ರೂಪಾಯಿ ಸಿಕ್ಕಿದೆ. ವಿಶೇಷ ಅಭಿವೃದ್ಧಿ ಪ್ಯಾಕೇಜ್ ಯೋಜನೆಯಡಿ ಈ ಹಣ ಬಿಡುಗಡೆ ಮಾಡಲಾಗಿದೆ.  ಲೆಹ್ ಅಭಿವೃದ್ಧಿಗೆ 250 ಕೋಟಿ ರೂಪಾಯಿ ಹಾಗೂ ಕಾರ್ಗಿಲ್ ಅಭಿವೃದ್ಧಿಗೆ 250 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇನ್ನು ಮೆಡಿಲಕ್ ಕಾಲೇಜು, ವಿಶ್ವಿ ವಿದ್ಯಾಲಯ, ಹೊಟೆಲ್ ಮ್ಯಾನೇಜ್ಮೆಂಟ್ ಸೇರಿದಂತ ಪ್ರತಿ ಕ್ಷೇತ್ರಗಳು ಅಭಿವೃದ್ಧಿಯತ್ತ ಮುಖ ಮಾಡಿದೆ ಎಂದು ಜಮ್ಯಾಂಗ್ ಹೇಳಿದ್ದಾರೆ.

click me!