
ಅಹಮದಾಬಾದ್(ಆ.06): ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 5 ರಂದು ಭವ್ಯ ರಾಮ ಮಂದಿರಕ್ಕಾಗಿ ಭೂಮಿಪೂಜೆ ಹಾಗೂ ಶಿಲಾನ್ಯಾಸ ನೆರವೇರಿಸಿದ್ದಾರೆ. ಹೀಗಿರುವಾಗ ಪಿಎಂ ಮೋದಿ ತಾಯಿ ಹೀರಾಬೆನ್ ಗಾಂಧೀನಗರದ ತಮ್ಮ ನಿವಾಸದಲ್ಲಿ ಟಿವಿ ಮೂಲಕ ಈ ಇಡೀ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಇಡೀ ಕಾರ್ಯಕ್ರಮವನ್ನು ಕೈಮುಗಿದುಕೊಂಡೇ ವೀಕ್ಷಿಸಿದ್ದಾರೆನ್ನಲಾಗಿದೆ.
ರಾಮನೆದೆಯಲ್ಲಿ ತಲೆಇಟ್ಟ ಹನುಮ..! ಇದು ನಟ ಬ್ರಹ್ಮಾನಂದಂ ಕೈಯಲ್ಲಿ ಮೂಡಿದ ಚಿತ್ರ
ಸದ್ಯ ಮೋದಿ ತಾಯಿ ಹೀರಾಬೆನ್ ಕಾರ್ಯಕ್ರಮವನ್ನು ಟಿವಿ ಮೂಲಕ ವೀಕ್ಷಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗಳಲ್ಲೂ ಅವರು ಹನುಮಾನ್ ಗಢಿಯಲ್ಲಿ ಪಿಎಂ ಮೋದಿ ವಿಶೇಷ ಪೂಜೆ ನೆರವೇರಿಸುತ್ತಿರುವ ಹಾಗೂ ಭೂಮಿ ಪೂಜೆ ನಡೆಸುತ್ತಿರುವಾಗ ಭಕ್ತಿಯಿಂದ ಕೈಮುಗಿದು ಕುಳಿತು ವೀಕ್ಷಿಸುತ್ತಿರುವುದನ್ನು ನೋಡಬಹುದಾಗಿದೆ. ಹೀರಾಬೆನ್ ತಮ್ಮ ಕಿರಿಯ ಪುತ್ರ ಪಂಕಜ್ ಮೋದಿ ಜೊತೆಗಿದ್ದಾರೆ.
ನಾನು ಕೆತ್ತಿದ ಮೂರ್ತಿ ಮೋದಿ ಕೈಲಿ ನೋಡಿ ಕಣ್ಣೀರು ಬಂತು!
ಇನ್ನು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಸುವ ಮೂಲಕ ಮೂರು ದಾಖಲೆಗಳನ್ನು ಬರೆದಿದ್ದಾರೆ.
* ಮೊದಲನೆಯದಾಗಿ 10ನೇ ಶತಮಾನದ ಹನುಮಾನ್ ಗಡಿ ದೇಗುಲಕ್ಕೆ ತೆರಳಿದ ಮೊದಲ ಪ್ರಧಾನಿ
* ರಾಮ ಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡಿದ ಮೊದಲ ಪ್ರಧಾನಿ.
* ದೇವಾಲಯವೊಂದರ ಭೂಮಿ ಪೂಜೆನೆರವೇರಿಸಿದ ಮೊದಲ ಪ್ರಧಾನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ