ರಂಜಾನ್‌ನ ಕೊನೆಯ ಶುಕ್ರವಾದ ನಮಾಜ್ ಪ್ರಾರ್ಥನೆಯನ್ನು ರಸ್ತೆಯಲ್ಲಿ ಮಾಡಿದರೆ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ರದ್ದುಗೊಳಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
ಮೀರತ್(ಮಾ.28) ರಂಜಾನ್ ತಿಂಗಳ ಕೊನೆಯ ಶುಕ್ರವಾರ ನಮಾಜ್ ಪ್ರಾರ್ಥನೆಯನ್ನು ಹತ್ತಿರದ ಮಸೀದಿ, ನಿಗದಿತ ಈದ್ಗಾ ಮೈದಾನಗಳಲ್ಲಿ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ. ಯಾರಾದರೂ ರಸ್ತೆಯಲ್ಲಿ ನಮಾಜ್ ಮಾಡಿದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ರಸ್ತೆಯಲ್ಲಿ ನಮಾಜ್ ಮಾಡಿದರ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ರದ್ದು ಮಾಡುವುದಾಗಿ ಉತ್ತರ ಪ್ರದೇಶದ ಮೀರತ್ ಪೊಲೀಸರು ವಾರ್ನಿಂಗ್ ನೀಡಿದ್ದಾರೆ. ನಮಾಜ್ ಪ್ರಾರ್ಥನೆಗೆ ಮಸೀದಿ ಹಾಗೂ ನಿಗದಿತ ಈದ್ಗಾ ಮೈದಾನಗಳಲ್ಲಿ ಮಾಡಬೇಕು. ನಿಗದಿತ ಸ್ಥಳಗಳಲ್ಲಿ ಮುಸ್ಲಿಮ್ ಸಮದಾಯಕ್ಕೆ ಎಲ್ಲಾ ಸೌಲಭ್ಯದ ಜೊತೆ ಭದ್ರತೆ ನೀಡಲಾಗುತ್ತದೆ. ಆದರೆ ರಸ್ತೆಯಲ್ಲಿ ನಮಾಜ್ ಮಾಡಿದರೆ ಕ್ರಮ ಖಚಿತ ಎಂದು ಮೀರತ್ ಸೂಪರಿಡೆಂಟ್ ಆಫರ್ ಪೊಲೀಸ್ ಆಯುಷ್ ವಿಕ್ರಮ್ ಸಿಂಗ್ ಎಚ್ಚರಿಸಿದ್ದಾರೆ.
ಮೀರತ್ ಪೊಲೀಸರು ಎಲ್ಲಾ ಜಿಲ್ಲಾ, ಹಾಗೂ ತಾಲೂಕು ಕೇಂದ್ರಗಳ ಪೊಲೀಸರು ಜೊತೆ ಸಭೆ ನಡೆಸಿದ್ದಾರೆ. ರಂಜಾನ್ ಹಬ್ಬ ಆಚರಣೆಗೆ ಮುಸ್ಲಿಮ್ ಸಮುದಾಯಕ್ಕೆ ಯಾವುದೇ ಅಡಚಣೆಯಾಗಬಾರದು. ಅವರು ಸ್ವತಂತ್ರವಾಗಿ ಹಾಗೂ ಸಂಭ್ರಮದಿಂದ ತಮ್ಮ ತಮ್ಮ ಮಸೀದಿಗಳಲ್ಲಿ, ಈದ್ಗಾ ಮೈದಾನಗಳಲ್ಲಿ ರಂಜಾನ್ ಆಚರಣೆ ನಮಾಜ್ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮೀರತ್ ಎಸ್‌ಪಿ ಸೂಚಿಸಿದ್ದಾರೆ. ಇದೇ ವೇಳೆ ಯಾರಾದರೂ ರಸ್ತೆಯಲ್ಲಿ ನಮಾಜ್ ಮಾಡಿದರೆ, ರಸ್ತೆ ತಡೆದು ನಮಾಜ್ ಮಾಡುವ ಪ್ರಯತ್ನ ಮಾಡಿದರೆ ಅವರ ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಸೂಚಿಸಿದ್ದಾರೆ. ಇದೇ ವೇಳೆ ಡ್ರೈವಿಂಗ್ ಲೈಸೆನ್ಸ್ ಅಥವಾ ಪಾಸ್‌ಪೋರ್ಟ್ ಇಲ್ಲದವರ ವಿರುದ್ದ ಬೇರೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಮುಸ್ಲಿಮರು ಬೀದಿಗಳಲ್ಲಿ ಏಕೆ ನಮಾಜ್ ಮಾಡ್ತಾರೆ? ಎಸ್‌ಪಿ ಶಾಸಕ ಅಬು ಅಜ್ಮಿ ಹೇಳಿದ ಕಾರಣ ಏನು ಗೊತ್ತಾ?
ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲೂ ಮೀರತ್ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಯಾರೇ ಆದರೂ ಕೋಮು ಸೌಹಾರ್ಧ ಕದಡುವ ಪ್ರಯತ್ನ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಯಾರೂ ಕೂಡ ಯಾವುದೇ ಧರ್ಮ, ಪಂಥವನ್ನು ಅವಹೇಳನ ಮಾಡುವ ಪ್ರಯತ್ನ ಮಾಡದಂತೆ ಎಚ್ಚರಿಸಿದ್ದಾರೆ. ಮೀರತ್ ಜಿಲ್ಲೆಯಲ್ಲಿ ಪಿಎಸಿ ಪಡೆ, ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಪಡೆಗಳನ್ನು ನಿಯೋಜಿಸಲಾಗಿದೆ. ಪೊಲೀಸರು ಈಗಾಗಲೇ ಫ್ಲಾಗ್ ಮಾರ್ಚ್ ನಡೆಸಿದ್ದಾರೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಇದರ ನಡುವೆ ಯಾರೇ ಅಹಿತಕರ ಘಟನೆಗೆ ಪ್ರಯತ್ನಿಸಿದರೆ ಪರಿಣಾಮ ಗಂಭೀರವಾಗಿರಲಿದೆ ಎಂದು ಮೀರತ್ ಪೊಲೀಸರು ಎಚ್ಚರಿಸಿದ್ದಾರೆ.
ಸುಳ್ಳು ಸುದ್ದಿ, ನಕಲಿ ಸುದ್ದಿ ಹರಡಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಊಹಗೆ ನಿಲುಕದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೀರತ್ ಪೊಲೀಸರು ಎಚ್ಚರಿಸಿದ್ದಾರೆ. ಎಲ್ಲಾ ಮುಖಂಡರ ಜೊತೆ ಮಾತುಕತೆ ನಡೆಸಿರುವ ಪೊಲೀಸರು ಶಾಂತಿ ಸೌಹಾರ್ಧತೆ ಕಾಪಾಡುವಂತೆ ಮನವಿ ಮಾಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ ಎಂದು ಮೀರತ್ ಪೊಲೀಸರು ಹೇಳಿದ್ದಾರೆ.
ಈ ಬಾರಿ ಮೀರತ್ ಪೊಲೀಸರು ಹೆಚ್ಚುವರಿ ಡ್ರೋನ್ ಬಳಸಿಕೊಂಡಿದ್ದಾರೆ. ಡ್ರೋನ್ ಮೂಲಕ ಹಲವು ಪ್ರದೇಶಗಳ ಕಣ್ಗಾವಲು ಮಾಡಲಿದ್ದಾರೆ.
88 ವರ್ಷಗಳ ನಂತರ ಶುಕ್ರವಾರದ ನಮಾಜ್ ಬ್ರೇಕ್ ನಿಲ್ಲಿಸಿದ ಅಸ್ಸಾಂ ಸರ್ಕಾರ!