India Gate ಚಳಿಗಾಲ ಅಧಿವೇಶನಕ್ಕೆ ಬ್ರೇಕ್, ತೆಲಂಗಾಣದಲ್ಲಿ ರಾಜಕೀಯ ತಳಮಳ!

By Suvarna NewsFirst Published Dec 22, 2022, 4:14 PM IST
Highlights

ಒಂದೆಡೆ ಚಳಿಗಾಳದ ಅಧಿವೇಶವನ್ನು ಬಹುಬೇಗನೆ ಅಂತ್ಯಗೊಳಿಸಲಾಗುತ್ತಿದೆ, ಇತ್ತ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷಕ್ಕೆ ಸೂರ್ಯೋದವಾಗಿದೆ. ಚುನಾವಣೆಯಲ್ಲಿ ಅಧಿಕಾರ ಕೈತಪ್ಪದಂತೆ ನೋಡಿಕೊಳ್ಳಲು ಹೊಸ ತಂತ್ರ ಹೆಣೆಯಲಾಗಿದೆ. ತೆಲಂಗಾಣದಲ್ಲಿ ಪಕ್ಷಾಂತರ ಪರ್ವದ ಮುನ್ಸೂಚನೆ ಸಿಗುತ್ತಿದೆ. ಇತ್ತ ಬಿಸಿಸಿಐ ಅಧಿಕಾರಿಗಳಿಗೂ ಫಿಫಾ ಜ್ವರ ಅಂಟಿಕೊಂಡಿತ್ತು. ಈ ಕುರಿತ ಸಂಪೂರ್ಣ ಮಾಹಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ.

ಕ್ರಿಸ್ಮಸ್, ಹೊಸ ವರ್ಷಕ್ಕಾಗಿ ಚಳಿಗಾಲದ ಅಧಿವೇಶನ ಬೇಗನೆ ಅಂತ್ಯ
ಸಂಸತ್ತಿನ ಅಧಿವೇಶನ ಈ ಬಾರಿ ಒಂದು ವಾರ ಮೊದಲೇ ಅಂತ್ಯಗೊಳ್ಳುತ್ತಿದೆ.  ಡಿಸೆಂಬರ್ 7 ರಂದು ಆರಂಭಗೊಂಡ ಚಳಿಗಾಲದ ಅಧಿವೇಶನ, ನಿಗದಿಯಂತೆ ಡಿಸೆಂಬರ್ 29ಕ್ಕೆ ಅಂತ್ಯವಾಗಬೇಕಿತ್ತು. ಆದರೆ ಡಿಸೆಂಬರ್ 23ಕ್ಕೆ ಕೊನೆಗೊಳ್ಳುತ್ತಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಕಾರಣ ಅಧಿವೇಶನ ಬೇಗನೆ ಅಂತ್ಯಗೊಳಿಸಲು ಸ್ವೀಕರ್ ಓಂ ಬಿರ್ಲಾಗೆ ವಿಪಕ್ಷದ ಹಲವು ನಾಯಕರು ಮನವಿ ಮಾಡಿದ್ದರ. ಇದರ ನಡುವೆ ಸಚಿವ ಸಂಪುಟ ಪುನರ್ ರಚನೆಯ ಮಾತುಗಳು ಕೇಳಿಬರುತ್ತಿದೆ. 

ಅದರಲ್ಲೂ ಪ್ರಮುಖವಾಗಿ ಇಬ್ಬರು ನಾಯಕರಿಗೆ ಸಂಪುಟದಿಂದ ಕೊಕ್ ನೀಡುವ ಸಾಧ್ಯತೆಗಳು ಗೋಚರಿಸುತ್ತಿದೆ.  ಅರವಿಂದ್ ಕೇಜ್ರಿವಾಲ್ ಅವರನ್ನು ಎದುರಿಸಲು ದೆಹಲಿ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಸಂಪುಟ ಸೇರಿಕೊಳ್ಳುವ ಸಾಧ್ಯತೆ ಇದೆ. ಇತ್ತ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿನ ವೈಫಲ್ಯಕ್ಕೆ ತಲೆದಂಡವಾಗಿ ಪ್ರಮುಖ ಸಚಿವರೊಬ್ಬರು ಸಂಪುಟದಿಂದ ಗೇಟ್ ಪಾಸ್ ಸಿಗುವ ಸಾಧ್ಯತೆ ಹೆಚ್ಚಿದೆ.   

ರಾಗಿ, ಜೋಳದ ರೊಟ್ಟಿ ಊಟ ಸವಿದ ಸಂಸದರು, ಪ್ರಧಾನಿ

ಬಿಸಿಸಿಐಗೂ ಫಿಫಾ ಜ್ವರ!
ಇತ್ತೀಚೆಗೆ ಅಂತ್ಯಗೊಂಡ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ತಂಡ ಮಣಿಸಿದ ಅರ್ಜೆಂಟೀನಾ ಟ್ರೋಫಿ ಗೆದ್ದುಕೊಂಡಿದೆ. ಈ ರೋಚಕ ಪಂದ್ಯ ವೀಕ್ಷಿಸಲು ಬಿಸಿಸಿಐ ಉನ್ನತ ಅಧಿಕಾರಿಗಳ ತಂಡ ಖತಾರ್‌ನ ದೋಹಾಗೆ ತೆರಳಿದ್ದರು. ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಬಿಸಿಸಿಐ ಅಧಿಕಾರಿಗಳು ಫೈನಲ್ ಪಂದ್ಯ ಆನಂದಿಸಿದ್ದಾರೆ. ಆದರೆ ಬಿಸಿಸಿಐ ಅಧಿಕಾರಿಗಳು ಕ್ರೀಡಾಂಗಣಕ್ಕೆ ತೆರಳಿ ಫುಟ್ಬಾಲ್ ಫೈನಲ್ ಪಂದ್ಯ ವೀಕ್ಷಿಸಲು ಇತರ ಕೆಲ ಕಾರಣಗಳು ಇವೆ. ಫಿಫಾ ವಿಶ್ವಕಪ್ ವಿಶ್ವದರ್ಜೆಯ ಕ್ರೀಡಾಕೂಟವನ್ನು ಹೇಗೆ ಆಯೋಜಿಸಲಾಗಿದೆ? ವ್ಯವಸ್ಥೆಗಳು, ಕ್ರೀಡಾಪಟುಗಳ ಆತಿಥ್ಯ, ವೀಕ್ಷಕರ ನಿರ್ವಹಣೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ತಿಳಿದುಕೊಳ್ಳಲು ಬಿಸಿಸಿಐ ಕ್ರೀಡಾಂಗಣದಲ್ಲಿ ಹಾಜರಾಗಿತ್ತು. 

ವಿಶ್ವಕಪ್, ಐಪಿಎಲ್ ಸೇರಿದಂತೆ ಕ್ರಿಕೆಟ್‌ನ ಅತೀ ದೊಡ್ಡ ಟೂರ್ನಿಗಳನ್ನು ಆಯೋಜಿಸುವ ಬಿಸಿಸಿಐಗೆ ಫುಟ್ಬಾಲ್ ಟೂರ್ನಿಯ ವ್ಯವಸ್ಥೆ, ಆಯೋಜನೆ ನೋಡಲು ಖತಾರ್‌ಗೆ ಹೋಗಲಾಗಿದೆಯಾ ಅನ್ನೋ ಅನುಮಾನಗಳನ್ನು ಮೂರನೇ ಅಂಪೈರ್‌ಗೆ ಕೊಡಲಾಗಿದೆ.

ತಮಿಳುನಾಡಿನಲ್ಲಿ ಪುತ್ರನ ದರ್ಬಾರು
ತಮಿಳುನಾಡು ರಾಜಕೀಯದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆ ತೀವ್ರ ಕುತೂಹಲದ ಜೊತೆಗೆ ಮುಂಬರುವ ಚುನಾವಣಾ ದಿಕ್ಸೂಚಿ ಬದಲಿಸುವ ಸೂಚನೆಗಳನ್ನು ನೀಡಿದೆ. ತಮಿಳುನಾಡಿನಲ್ಲಿ ಅಣ್ಣಾಮಲೈ ನೇತೃತ್ವದ ಬಿಜೆಪಿ ಯುವ ಸಮುದಾಯವನ್ನು ಭರ್ಜರಿಯಾಗಿ ಸೆಳೆಯುತ್ತಿದೆ. ಇದಕ್ಕೆ ಕೌಂಟರ್ ನೀಡಲು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪುತ್ರ, ಚಿತ್ರನಟ ಉದಯನಿಧಿ ಸ್ಟಾಲಿನ್ ಸಂಪುಟ ಸೇರಿಕೊಂಡಿದ್ದಾರೆ. 2024ರ ಲೋಕಸಭಾ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಡಿಎಂಕೆ ಈಗಲೇ ರಂಗ ಸಜ್ಜು ಮಾಡಿಕೊಳ್ಳುತ್ತಿದೆ. 

ಜಡ್ಜ್‌ ನೇಮಕ ಪ್ರಕ್ರಿಯೆ ಬಗ್ಗೆ ಮತ್ತೆ ರಿಜಿಜು ಅತೃಪ್ತಿ!

ಶೀಘ್ರದಲ್ಲೇ ಪುತ್ರನನ್ನು ಉಪಮುಖ್ಯಮಂತ್ರಿ ಮಾಡಲು ಎಂಕೆ ಸ್ಟಾಲಿನ್ ಒಲವು ತೋರಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಸ್ಟಾಲಿನ್ ಈ ಘೋಷಣೆ ಮಾಡುವ ಸಾಧ್ಯತೆ ಇದೆ. ಇದೀಗ ಯುವ ರಾಜಕುಮಾರ ಉದಯನಿಧಿ ಸ್ಟಾಲಿನ್ ತಮಿಳುನಾಡು ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದ್ದಾರೆ. ತಮಿಳುನಾಡು ಹಣಕಾಸು ಸಚಿವರು ಹಾಲು ಹಾಗೂ ವಿದ್ಯುತ್ ದರ ಹೆಚ್ಚಿಸಲು ಮುಂದಾಗಿದ್ದರು. ಆದರೆ ಸಿಎಂ ಸ್ಟಾಲಿನ್ ಹಿಂದೇಟು ಹಾಕಿದ್ದರು. ಇದೇ ವೇಳೆ ಉದಯನಿಧಿ ಸ್ಟಾಲಿನ್ ಒಪ್ಪಿಗೆ ಪಡೆದು ಸರ್ಕಾರ ದರ ಹೆಚ್ಚಳ ಮಾಡಿದೆ. 

ತೆಲಂಗಾಣದಲ್ಲಿ ರಾಜಕೀಯ ತಳಮಳ
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಇದೀಗ ರಾಷ್ಟ್ರೀಯ ನಾಯಕನಾಗಲು ಟೊಂಕ ಕಟ್ಟಿ ನಿಂತಿದ್ದಾರೆ. ತೆಲಂಗಾಣ ರಾಷ್ಟ್ರ ಸಮತಿ ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿ ಪಕ್ಷವಾಗಿ ಮಾಡಿದ್ದಾರೆ. ಇದೀಗ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಭಾರತ್ ರಾಷ್ಟ್ರ ಸಮಿತಿ ಪಕ್ಷದ ಹೊಸ ಕಚೇರಿ ತೆರೆಯಲಾಗಿದೆ. 

ಇದೀಗ ಭಾರತ್ ರಾಷ್ಟ್ರ ಸಮಿತಿ ಪಕ್ಷ ಪ್ರಮುಖ ನಾಯಕರನ್ನು ಸೆಳೆಯುತ್ತಿದೆ. ಇದರ ಅಂಗವಾಗಿ ಕಾಂಗ್ರೆಸ್‌ನಿಂದ ಎರಡು ಬಾರಿ ಸಂಸದನಾಗಿ ಆಯ್ಕೆಯಾಗಿರುವ ವುಂಡವಳ್ಳಿ ಅರುಣ್ ಕುಮಾರ್ ಇದೀಗ ಭಾರತ್ ರಾಷ್ಟ್ರ ಸಮಿತಿ ಪಕ್ಷ ಸೇರಿಕೊಳ್ಳಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಅರುಣ್ ಕುಮಾರ್ ಹಾಗೂ ಚಂದ್ರಶೇಖರ್ ರಾವ್ ಸರಣಿ ಸಭೆಗಳ ಬಳಿಕ ಪಕ್ಷ ಸೇರ್ಪಡೆ ಗುಮಾನಿ ಹೆಚ್ಚಾಗಿ ಕೇಳಿಬರುತ್ತಿದೆ. ಅರುಣ್ ಕುಮಾರ್, ದಿವಂಗತ ವೈಎಸ್ ರಾಜಶೇಖರ್ ರೆಡ್ಡಿ ಆಪ್ತರಾಗಿದ್ದಾರೆ. ರಾಜಶೇಖರ ರೆಡ್ಡಿ ಪುತ್ರ ಜಗನ್‌ಮೋಹನ್ ರೆಡ್ಡಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ. 
 

click me!