
ಚೆನ್ನೈ: ನಾಮಪತ್ರದಲ್ಲಿ ಹಲವು ಅಂಶಗಳನ್ನು ಮುಚ್ಚಿಟ್ಟಿದ್ದ ಆರೋಪದನ್ವಯ ತಮಿಳುನಾಡಿನ ಎಐಡಿಎಂಕೆ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಒ ಪನ್ನೀರಸೆಲ್ವಂ ಪುತ್ರ ಒ.ಪಿ ರವೀಂದ್ರನಾಥ್ 2019ರ ಲೋಕಸಭಾ ಚುನಾವಣೆಯಲ್ಲಿ ಥೇಣಿ ಕ್ಷೇತ್ರದಿಂದ ಸಾಧಿಸಿದ್ದ ಗೆಲುವನ್ನು ಮದ್ರಾಸ್ ಹೈಕೋರ್ಟ್ ಅಸಿಂಧುಗೊಳಿಸಿದೆ. ಇದೇ ವೇಳೆ ಥೇಣಿ ಕ್ಷೇತ್ರ ತೆರವಾಗಿದೆ ಎಂದು ನ್ಯಾಯಾಲಯ ಘೋಷಿಸಿದೆ. ಅದಾಗ್ಯೂ ರವೀಂದ್ರನಾಥ್ ಪರ ವಕೀಲರ ಮನವಿ ಆಧಾರದ ಮೇಲೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡಿರುವ ಕೋರ್ಟ್ ಒಂದು ತಿಂಗಳ ಕಾಲ ತನ್ನ ಆದೇಶವನ್ನು ತಡೆಹಿಡಿದಿದೆ. ರವೀಂದ್ರನಾಥ್ ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಸ್ಥಿರ ಮತ್ತು ಚರಾಸ್ತಿ ಸೇರಿದಂತೆ ಕುಟುಂಬ ಸದಸ್ಯರ ಕುರಿತ ಮಾಹಿತಿಗಳನ್ನು ದಾಖಲಿಸದೆ ಮುಚ್ಚಿಟ್ಟಿದ್ದಾರೆ ಎಂದು ಥೇಣಿ ಕ್ಷೇತ್ರದ ಮತದಾರ ಪಿ. ಮಿಲಾನಿ ಅರ್ಜಿ ಸಲ್ಲಿಸಿದ್ದರು. ಅರ್ಜಿಗೆ ಕೋರ್ಟ್ ಮಾನ್ಯತೆ ನೀಡಿದೆ.
Karnataka Budget 2023 Live Updates | ಕರ್ನಾಟಕ ಬಜೆಟ್...
ಅಣ್ಣಾ ಡಿಎಂಕೆಗೆ ಎಡಪ್ಪಾಡಿ ಪಳನಿಸ್ವಾಮಿಯೇ ಬಾಸ್, ಒಪಿಎಸ್‌ಗೆ ಭಾರಿ ಹಿನ್ನಡೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ