ಧರ್ಮನಿಂದಿಸಿದ ಮಹಿಳಾ ಪ್ರಿನ್ಸಿಪಾಲ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ನ್ಯಾಯಾಲಯ!

Published : Sep 28, 2021, 08:24 PM IST
ಧರ್ಮನಿಂದಿಸಿದ ಮಹಿಳಾ ಪ್ರಿನ್ಸಿಪಾಲ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ನ್ಯಾಯಾಲಯ!

ಸಾರಾಂಶ

ಧರ್ಮನಿಂದನೆ ಮಾಡಿದ ಪಾಕಿಸ್ತಾನ ಖಾಸಗಿ ಕಾಲೇಜಿನ ಮಹಿಳಾ ಪ್ರಾಂಶುಪಾಲೆ ಆರೋಪ  ತನ್ವೀರ್‌ಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಾಂಶುಪಾಲೆ

ಲಾಹೋರ್(ಸೆ.28): ಧರ್ಮ ನಿಂದನೆ(blasphemy), ದೇಶಕ್ಕೆ ಅವಮಾನ ಮಾಡುವುದು, ದೇಶದ ವಿರುದ್ಧ ಹೇಳಿಕೆ ನೀಡುವುದು  ಅಪರಾಧ. ಅದರಲ್ಲೂ ಪಾಕಿಸ್ತಾನದಲ್ಲಿ(Pakistan) ಈ ಅಪರಾಧಕ್ಕೆ ಶಿಕ್ಷೆ ಕೂಡ ಅಷ್ಟೇ ಕಠಿಣ. ಇದೀಗ ಪ್ರವಾದಿ ಮಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದಾರೆ ಅನ್ನೋ ಕಾರಣಕ್ಕೆ ಖಾಸಗಿ ಕಾಲೇಜಿನ ಮಹಿಳಾ ಪ್ರಾಂಶುಪಾಲೆಗೆ(woman principal) ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. 

ಧರ್ಮ ನಿಂದನೆ ಪೋಸ್ಟ್: ಪಾಕ್ ಪ್ರೋಫೆಸರ್‌ಗೆ ಗಲ್ಲು!

ಖಾಸಗಿ ಕಾಲೇಜಿನ ಮಹಿಳಾ ಪ್ರಿನ್ಸಿಪಾಲ್ ಪ್ರವಾದಿ ಮಹಮ್ಮದ್‌ರನ್ನು ನಿಂದಿಸಿದ್ದಾರೆ ಎಂದು ಲಾಹೋರ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ(Lahore court) ಮನ್ಸೂರ್ ಅಹಮ್ಮದ್ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಇನ್ನು 5,000 ಪಾಕಿಸ್ತಾನ ರೂಪಾಯಿ ದಂಡ ವಿಧಿಸಲಾಗಿದೆ.

ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣ: ಉಗ್ರ ಆರಿಝ್ ಖಾನ್‌ಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್!

2013ರ ಪ್ರಕರಣದ ಅಂತಿಮ ತೀರ್ಪು ಹೊರಬಿದ್ದಿದೆ. ಸ್ಥಳೀಯ ಪಾದ್ರಿ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ತನ್ವೀರ್ ಬಂಧನ ಮಾಡಲಾಗಿತ್ತು. ಪಾಕಿಸ್ತಾನ ದಂಡ ಸಂಹಿತೆ 295 ಸಿ ಅಡಿಯಲ್ಲಿ ಲಾಹೋರ್ ಪೊಲೀಸರು ಪ್ರಕರಣ ದಾಖಲಿಸಿದ್ದರು.  ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಜನರಲ್ಲಿ ಅವಿಶ್ವಾಸ ಮೂಡಿಸಿದ ಪ್ರಕರಣ ತನ್ವೀರ್ ಮೇಲೆ ದಾಖಾಗಿತ್ತು.

ತನ್ವೀರ್ ಪರ ವಕೀಲ ಮಾನಸಿಕ ಆರೋಗ್ಯ ಸ್ಥಿಮಿತ ಆಧಾರದಲ್ಲಿ ಜಾಮೀನು ನೀಡಲು ವಾದಿಸಿದರು. ಆದರೆ ನ್ಯಾಯಾಲದ ಈ ವಾದನ್ನು ತಳ್ಳಿಹಾಕಿತು. ಬಳಿಕ ಗಲ್ಲು ಶಿಕ್ಷೆ ವಿಧಿಸಿತು. ಇದೀಗ ಈ ತೀರ್ಪು ಪಾಕಿಸ್ತಾನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಪ್ರಾ​ಪ್ತೆಯ ಅಪ​ಹ​ರಿಸಿ ಅತ್ಯಾ​ಚಾ​ರ : 26 ದಿನ​ದಲ್ಲಿ ಗಲ್ಲು ಶಿಕ್ಷೆ

ಪಾಕಿಸ್ತಾನದ ಧರ್ಮನಿಂದನೆ ಕಾನೂನು ಪುರಾತನವಾಗಿದ್ದು, ಶಿಕ್ಷೆ ಕೂಡ ಅತ್ಯಂತ ಕಠಿಣವಾಗಿದೆ. ಹೀಗಾಗಿ ಈ ಕುರಿತು ಕಳೆದ ಹಲವು ದಶಕಗಳಿಂದ ಕೆಲ ಸಂಘಟನೆಗಳು ಹೋರಾಟ ನಡೆಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?