ಪುದುಚೇರಿಯಿಂದ ಬಿಜೆಪಿಗೆ ಮೊದಲ ರಾಜ್ಯಸಭಾ MP; ಹೆಮ್ಮೆಯ ವಿಚಾರ ಎಂದ ಪ್ರಧಾನಿ ಮೋದಿ!

Published : Sep 28, 2021, 07:54 PM IST
ಪುದುಚೇರಿಯಿಂದ ಬಿಜೆಪಿಗೆ ಮೊದಲ ರಾಜ್ಯಸಭಾ MP; ಹೆಮ್ಮೆಯ ವಿಚಾರ ಎಂದ ಪ್ರಧಾನಿ ಮೋದಿ!

ಸಾರಾಂಶ

ಪುದುಚೇರಿ ರಾಜ್ಯಸಭೆಯಿಂದ ಸೆಲ್ವಗಣಬತಿ ಆಯ್ಕೆ ಇದೇ ಮೊದಲ ಬಾರಿಗೆ ಪುದುಚೇರಿಯಿಂದ ಬಿಜೆಪಿ ಅಭ್ಯರ್ಥಿಗೆ ಗೆಲುವು ಇತಿಹಾಸ ರಚಿಸಿದ ಸೆಲ್ವಗಣಬತಿಗೆ, ಬಿಜೆಪಿ ಕಾರ್ಯಕರ್ತರಿಗೆ ಮೋದಿ ಅಭಿನಂದನೆ ಐತಿಹಾಸಿಕ ಗೆಲುವು ಸಂಭ್ರಮಿಸಿದ ಬಿಜೆಪಿ

ನವದೆಹಲಿ(ಸೆ.28): ದಕ್ಷಿಣ ಭಾರತದಲ್ಲಿ ಬಲವಾರಿ ಬೇರೂರಲು ಹವಣಿಸುತ್ತಿರುವ ಬಿಜೆಪಿಗೆ(BJP) ಇದೀಗ ಅತೀ ದೊಡ್ಡ ಗೆಲುವು ಸಿಕ್ಕಿದೆ. ಇದೇ ಮೊದಲ ಬಾರಿಗೆ ಪುದುಚೇರಿ(puducherry) ರಾಜ್ಯಸಭೆ ಬಿಜೆಪಿ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ಇದೇ ಮೊದಲ ಬಾರಿಗೆ ಪುದುಚೇರಿ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಗೆಲುವನ್ನು ಪ್ರಧಾನಿ ಮೋದಿ(Narendra Modi) ಸೇರಿ ಬಿಜೆಪಿ ಪಕ್ಷ ಸಂಭ್ರಮಿಸಿದೆ.

ರಾಜ್ಯಸಭೆಯ ಬಿಜೆಪಿ ನಾಯಕರಾಗಿ ಪಿಯೂಷ್ ಗೋಯೆಲ್ ಆಯ್ಕೆ!

ಪುದುಚೇರಿ ರಾಜ್ಯಸಭೆಯಿಂದ(puducherry Rajya sabha) ಇದೇ ಮೊದಲ ಬಾರಿಗೆ ಬಿಜೆಪಿ ಸಂಸದರಾಗಿ ಆಯ್ಕೆಯಾದ ಎಸ್ ಸೆಲ್ವಗಣಬತಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಬಿಜೆಪಿ ಪಕ್ಷದ ಕಾರ್ಯಕರ್ತರು, ನಾಯಕರಿಗೆ ಅತೀವ ಸಂತಸ ಹಾಗೂ ಹೆಮ್ಮೆಯ ದಿನವಾಗಿದೆ. ಬಿಜೆಪಿ ಇದೇ ಮೊದಲ ಬಾರಿಗೆ ಪುದುಚೇರಿ ರಾಜ್ಯಸಭೆ ಸಂಸದರನ್ನು ಪಡೆದಿದೆ. ಪುದುಚೇರಿ ಜನ ನಮ್ಮ ಮೇಲಿಟ್ಟಿರುವ ನಂಬಿಕೆಗೆ ತಕ್ಕ ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಇದೇ ವೇಳೆ ಅಸ್ಸಾನಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನ್ವಾಲ್ ಹಾಗೂ ಮಧ್ಯಪ್ರದೇಶದಿಂದ ಆಯ್ಕೆಯಾದ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಎಲ್ ಮುರುಗನ್ ಅವರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

 

ಆಯುಷ್ ಕಾಲೇಜಿಗೆ ಬಂಪರ್ ಕೊಡುಗೆ; ಆರ್ಥಿಕ ಸಹಾಯವನ್ನು 9 ರಿಂದ 70 ಕೋಟಿ ರೂ.ಗೆ ಹೆಚ್ಚಳ!

ತಮಿಳುನಾಡು, ಕೇರಳದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಬಿಜೆಪಿಗೆ ಸೆಲ್ವಗಣಬತಿ ಆಯ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಪುದುಚೇರಿ ರಾಜ್ಯಸಭೆ ಸೆಲ್ವಗಣಬತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಪುದುಚೇರಿಯಲ್ಲಿ ಬಿಜೆಪಿ AINRC ಜೊತೆ ಮೈತ್ರಿ ಮಾಡಿಕೊಂಡಿದೆ.

ಹೊಸ ಸಂಸತ್ ನಿರ್ಮಾಣ ಕಾರ್ಮಿಕರಿಗೆ ಲಸಿಕೆ, ಮಾಸಿಕ ಆರೋಗ್ಯ ತಪಾಸಣೆ ಕಡ್ಡಾಯ; ಪ್ರಧಾನಿ ಮೋದಿ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ನೂತನವಾಗಿ ಆಯ್ಕೆಯಾದ ರಾಜ್ಯಸಭಾ ಸಂಸದರಿಗೆ ಶುಭಕೋರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!