ಪಾಕಿಸ್ತಾನ ಸೇನೆಯ ಅಗ್ರ ಲೀಡರ್‌ ಮೂಲತಃ ಭಯೋತ್ಪಾದಕನ ಮಗ!

Published : May 10, 2025, 03:42 PM ISTUpdated : May 10, 2025, 03:43 PM IST
ಪಾಕಿಸ್ತಾನ ಸೇನೆಯ ಅಗ್ರ ಲೀಡರ್‌ ಮೂಲತಃ ಭಯೋತ್ಪಾದಕನ ಮಗ!

ಸಾರಾಂಶ

ಪಾಕಿಸ್ತಾನದ ಐಎಸ್‌ಪಿಆರ್‌ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ವಿಶ್ವಸಂಸ್ಥೆ ಘೋಷಿತ ಭಯೋತ್ಪಾದಕ ಸುಲ್ತಾನ್ ಬಶೀರುದ್ದೀನ್ ಮಹಮದ್‌ನ ಪುತ್ರ. ಮಹಮದ್, ಅಲ್-ಖೈದಾ ಮತ್ತು ಒಸಾಮಾ ಬಿನ್ ಲಾಡೆನ್‌ಗೆ ಪರಮಾಣು ಮಾಹಿತಿ ನೀಡಿದ್ದಕ್ಕಾಗಿ ೨೦೦೧ರಲ್ಲಿ ಭಯೋತ್ಪಾದಕ ಎಂದು ಪಟ್ಟಿ ಮಾಡಲ್ಪಟ್ಟಿದ್ದರು. ಚೌಧರಿ ಈಗ ಪಾಕಿಸ್ತಾನವನ್ನು ಭಯೋತ್ಪಾದನೆಯ ಬಲಿಪಶು ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ.

ನವದೆಹಲಿ (ಮೇ.10): ಪಾಕಿಸ್ತಾನದ ಸೇನೆಗೂ ಹಾಗೂ ಟೆರರಿಸ್ಟ್‌ಗಳಿಗೂ ಅಳಿಸಲಾಗದಂಥ ನಂಟಿದೆ ಅನ್ನೋದಕ್ಕೆ ಒಂದು ಪ್ರಮುಖ ಉದಾಹರಣೆ ಎನ್ನುವಂತೆ ಇರುವುದು ಪಾಕ್‌ನ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕರಾದ ತ್ರೀ-ಸ್ಟಾರ್ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ. ಭಾರತ-ಪಾಕಿಸ್ತಾನ ಮಿಲಿಟರಿ ಬಿಕ್ಕಟ್ಟಿನ ಬಗ್ಗೆ ಜಗತ್ತಿಗೆ ಸುಳ್ಳು ಮಾಹಿತಿಯನ್ನು ಸವಿಸ್ತಾರವಾಗಿ ಹಂಚಿಕೊಳ್ಳುತ್ತಿರುವ ಚೌಧರಿ, ಮೂಲತಃ ಭಯೋತ್ಪಾದಕನ ಮಗ. ಭಯೋತ್ಪಾದಕನ ಮಗ ಸೇನೆಯಲ್ಲಿ ಸೇವೆ ಸಲ್ಲಿಸುವುದು ಬಹುಶಃ ಪಾಕಿಸ್ತಾನದ ಮಿಲಿಟರಿಯಲ್ಲಿ ಮಾತ್ರವೇ ಸಾಧ್ಯವಾಗುವಂಥ ವಿಚಾರ. ಹೌದು, ಅಹ್ಮದ್‌ ಷರೀಫ್‌ ಚೌಧರಿ, ವಿಶ್ವಸಂಸ್ಥೆ ಘೋಷಿತ ಭಯೋತ್ಪಾದಕ ಸುಲ್ತಾನ್ ಬಶೀರುದ್ದೀನ್ ಮಹಮದ್‌ನ ಮಗ. ಚೌಧರಿಯ ಅಪ್ಪ ಬಶೀರುದ್ದೀನ್‌, ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅವರ ಸಹಾಯಕನಾಗಿ ಕೆಲಸ ಮಾಡಿದ್ದ.

ಪಾಕಿಸ್ತಾನದ ಮಿಲಿಟರಿ,  ಭಾರತದ ಟೆರರ್‌ ವಿರುದ್ಧದ ಹೋರಾಟದ ವಿರುದ್ಧ ತಪ್ಪು ಮಾಹಿತಿಯನ್ನು ಹರಡಲು ಕೆಲಸ ಮಾಡುತ್ತಿದ್ದರೆ, ಲೆಫ್ಟಿನೆಂಟ್ ಜನರಲ್ ಚೌಧರಿ ಅವರ ಡಿಎನ್‌ಎ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್-ಖೈದಾ ನಿರ್ಬಂಧ ಸಮಿತಿಯ ಪಟ್ಟಿಯಲ್ಲಿ ಕಾಣಿಸಿಕೊಂಡ ಭಯೋತ್ಪಾದಕನ ಡಿಎನ್‌ಎ ಎನ್ನುವುದನ್ನು ಜಗತ್ತು ನೆನಪಿನಲ್ಲಿಟ್ಟುಕೊಳ್ಳಬೇಕು. ಹೌದು, ಪಾಕಿಸ್ತಾನವನ್ನು "ಭಯೋತ್ಪಾದನೆಯ ಅಸಹಾಯಕ ಬಲಿಪಶು" ಎಂದು ಬಿಂಬಿಸಲು ಪ್ರಯತ್ನಿಸುತ್ತಾ, ಪದೇ ಪದೇ ಪ್ರಪಂಚದ ಮುಂದೆ ಕಾಣಿಸಿಕೊಳ್ಳುತ್ತಿರುವುದು ಅದೇ ಲೆಫ್ಟಿನೆಂಟ್ ಜನರಲ್ ಚೌಧರಿ.

ISPR ನ DG ಆಗಿ ಲೆಫ್ಟಿನೆಂಟ್ ಜನರಲ್ ಚೌಧರಿ ಪಾಕಿಸ್ತಾನದ ಉನ್ನತ ಮಿಲಿಟರಿ ಅಧಿಕಾರಿಗಳಲ್ಲಿ ಒಬ್ಬರು. ಪಾಕಿಸ್ತಾನಿ ಸೇನೆಯಲ್ಲಿ ಜಿಹಾದಿ ಮಿಶ್ರಣದ ಮತ್ತೊಂದು ಉದಾಹರಣೆಯೆಂದರೆ ಅದರ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್. ಮುನೀರ್ ಅವರ ತಂದೆ ಶಿಕ್ಷಕ-ಪಾದ್ರಿಯಾಗಿದ್ದರೆ, ಚೌಧರಿ ಅವರ ತಂದೆ ಪರಮಾಣು ವಿಜ್ಞಾನಿ. ನಂತರ ಜಿಹಾದಿ ಮೈಂಡ್‌ಸೆಟ್‌ಗೆ ಒಳಗಾದ ಆತ ಇಡೀ ಪಶ್ಚಿಮದ ದೇಶಗಳಿಗೆ ನಡುಕ ಹುಟ್ಟಿಸುವ ಕೆಲಸ ಮಾಡಿದ್ದ.

ಅಬ್ದುಲ್ ಖದೀರ್ ಖಾನ್ ಪಾಕಿಸ್ತಾನದ ಪರಮಾಣು ಕಾರ್ಯಕ್ರಮದ ಪಿತಾಮಹ ಎಂದು ಪ್ರಸಿದ್ಧರಾದರೆ, ಲೆಫ್ಟಿನೆಂಟ್ ಜನರಲ್ ಚೌಧರಿ ಅವರ ತಂದೆ ಸುಲ್ತಾನ್ ಬಶೀರುದ್ದೀನ್ ಮಹಮೂದ್ ಇಸ್ಲಾಮಿಕ್ ಗಣರಾಜ್ಯದ "ಡರ್ಟಿ ಬಾಂಬ್" ಅನ್ನು ಅಭಿವೃದ್ಧಿಪಡಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದ.

ಪಾಕಿಸ್ತಾನದ ವಂಚಕ ವಿಜ್ಞಾನಿಗಳ ಮೇಲೆ ನಿಗಾ ಇಟ್ಟಿದ್ದ ಅಮೆರಿಕದ ಗುಪ್ತಚರ ವ್ಯವಸ್ಥೆ, ಪರಮಾಣು ವಿಜ್ಞಾನಿಯೊಬ್ಬ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‌ನನ್ನು ಭೇಟಿಯಾಗಿದ್ದ ವಿಚಾರ ತಿಳಿದು ಗಾಬರಿಗೊಂಡಿತ್ತು. ಅಮೆರಿಕಕ್ಕೆ ಬೇಕಾಗಿದ್ದ ಕೊನೆಯ ವಿಷಯವೆಂದರೆ ಅಲ್-ಖೈದಾ ಅಥವಾ ಅದರ ಸಹಚರರು ಪರಮಾಣು ಬಾಂಬ್ ಹೊಂದಿದ್ದಾರೆಯೇ ಎನ್ನುವುದಾಗಿತ್ತು.

2001 ರ ಯುಎಸ್ ಮೇಲಿನ ದಾಳಿಗಳು ಸೆಪ್ಟೆಂಬರ್‌ನಲ್ಲಿ ನಡೆದರೆ, ಆ ವರ್ಷದ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಸಮಿತಿಯು ಮಹಮೂದ್‌ನನ್ನು ಅಧಿಕೃತವಾಗಿ ಭಯೋತ್ಪಾದಕ ಎಂದು ಘೋಷಿಸಿತು. UNSC ಯ ಅಲ್-ಖೈದಾ ನಿರ್ಬಂಧಗಳ ಸಮಿತಿಯ ಪುಟವು ಲೆಫ್ಟಿನೆಂಟ್ ಜನರಲ್ ಚೌಧರಿಯ ತಂದೆಯನ್ನು "ಮಹಮೂದ್ ಸುಲ್ತಾನ್ ಬಶೀರ್-ಉದ್-ದಿನ್" ಎಂದು ಪಟ್ಟಿಮಾಡಿದೆ. ಅಲ್-ಖೈದಾ, ಅದರ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಮತ್ತು ತಾಲಿಬಾನ್ ಜೊತೆಗಿನ ಸಂಬಂಧಕ್ಕಾಗಿ ಮಹಮೂದ್‌ನನ್ನು 2001ರ ಡಿಸೆಂಬರ್ 24ರಂದು UNSC ಯ ನಿರ್ಬಂಧ ಸಮಿತಿಯು ಭಯೋತ್ಪಾದಕರ ಪಟ್ಟಿಗೆ ಸೇರಿಸಿತು. ಆತನ ವಿರುದ್ಧ ಮಾಡಿದ್ದ ಆರೋಪಗಳು ಬಹಳ ಗಂಭೀರವಾಗಿದ್ದಾಗಿತ್ತು.

ಪಶ್ಚಿಮ ದೇಶಗಳು ಮಾತ್ರವಲ್ಲ, ಮಹಮೂದ್ ಈ ಹಿಂದೆ ಪಾಕಿಸ್ತಾನದಲ್ಲಿರುವ ತನ್ನ ಸಹೋದ್ಯೋಗಿಗಳನ್ನು ಭಯಭೀತಗೊಳಿಸಿದ್ದರು. ಅವರ "ಧಾರ್ಮಿಕ ತೀವ್ರತೆ, ಇಸ್ಲಾಮಿಕ್ ಉಗ್ರವಾದದ ಬಗ್ಗೆ ಅವರ ಸಹಾನುಭೂತಿಯೊಂದಿಗೆ ಸೇರಿಕೊಂಡು, ಅವರ ಸಹೋದ್ಯೋಗಿಗಳನ್ನು ಹೆದರಿಸಿತ್ತು" ಎಂದು 2009 ರ ನ್ಯೂಯಾರ್ಕ್ ಟೈಮ್ಸ್ ಮ್ಯಾಗಜೀನ್ ವರದಿ ಮಾಡಿದೆ. ಅವರು ಬೇಗನೆ ನಿವೃತ್ತಿ ಹೊಂದುವಂತೆ ಒತ್ತಾಯಿಸಲಾಯಿತು.

ಸುಲ್ತಾನ್ ಬಶೀರುದ್ದೀನ್ ಮಹಮೂದ್, ಎಲ್‌ಎಂಎಸ್‌, ನಂತರ ಲಾಭರಹಿತ ಸಂಸ್ಥೆಯಾಗಿ ಮುಸುಕು ಹಾಕಲಾದ ಉಮ್ಮಾ ತಮೀರ್ ಇ-ನೌ (UTN) ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕರಾದರು. ಯುಎನ್ ಅಲ್-ಖೈದಾ ನಿರ್ಬಂಧ ಸಮಿತಿಯ ವರದಿಯ ಪ್ರಕಾರ, ಯುಟಿಎನ್ ಒಸಾಮಾ ಬಿನ್ ಲಾಡೆನ್ ಮತ್ತು ತಾಲಿಬಾನ್‌ಗೆ ರಾಸಾಯನಿಕ, ಜೈವಿಕ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ಒದಗಿಸಿತು.

"ಯುಟಿಎನ್ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಬಶೀರ್-ಉದ್-ದಿನ್ ಬಿನ್ ಲಾಡೆನ್ ಮತ್ತು ಅಲ್-ಖೈದಾ ನಾಯಕರನ್ನು ಭೇಟಿಯಾಗಿ ಪರಮಾಣು, ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳ ಕುರಿತು ಚರ್ಚಿಸಿದರು" ಎಂದು ಅದು ಹೇಳುತ್ತದೆ. 2001 ರಲ್ಲಿ, ಸುಲ್ತಾನ್ ಬಶೀರುದ್ದೀನ್ ಮಹಮೂದ್ ಅವರು ಆಗಿನ ತಾಲಿಬಾನ್ ಮುಖ್ಯಸ್ಥ ಮುಲ್ಲಾ ಒಮರ್ ಅವರನ್ನು ಭೇಟಿಯಾಗಿದ್ದರು. ನಂತರದ ಸಭೆಯಲ್ಲಿ, ಒಸಾಮಾ ಬಿನ್ ಲಾಡೆನ್‌ನ ಸಹಚರನೊಬ್ಬ ತನ್ನ ಬಳಿ ಪರಮಾಣು ಸಾಮಗ್ರಿ ಇದೆ ಮತ್ತು ಅದನ್ನು ಬಳಸಿಕೊಂಡು ಆಯುಧವನ್ನು ಹೇಗೆ ತಯಾರಿಸಬೇಕೆಂದು ತಿಳಿಯಲು ಬಯಸಿದ್ದಾನೆ ಎಂದು ಸೂಚಿಸಿದ್ದ. ಮಹಮೂದ್‌ನನ್ನು 2001 ರಲ್ಲಿ ಬಂಧಿಸಲಾಯಿತು ಮತ್ತು ಎಫ್‌ಬಿಐ ಆದೇಶದ ಮೇರೆಗೆ ತನಿಖೆ ನಡೆಸಲಾಗಿತ್ತು. ಈ ವೇಳೆ ಒಸಾಮಾ ಬಿನ್ ಲಾಡೆನ್‌ನನ್ನು ಭೇಟಿಯಾಗಿದ್ದಾಗಿ ಒಪ್ಪಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು