ಆಪರೇಷನ್ ಸಿಂದೂರ್‌ಗಾಗಿ 5 ವರ್ಷದ ಸಂಬಳ ನೀಡಿದ ಪಂಚಾಯ್ತಿ ಸದಸ್ಯೆ

Published : May 10, 2025, 03:14 PM IST
ಆಪರೇಷನ್ ಸಿಂದೂರ್‌ಗಾಗಿ 5 ವರ್ಷದ ಸಂಬಳ ನೀಡಿದ ಪಂಚಾಯ್ತಿ ಸದಸ್ಯೆ

ಸಾರಾಂಶ

ಪಾಕಿಸ್ತಾನದ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆಗೆ ಬೆಂಬಲವಾಗಿ  ಪಂಚಾಯ್ತಿ ಸದಸ್ಯೆ ತಮ್ಮ ಐದು ವರ್ಷಗಳ ವೇತನವನ್ನು ದೇಣಿಗೆ ನೀಡಿದ್ದಾರೆ. ಈ ಮೂಲಕ ಸೇನೆಯ ಶೌರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಘ್ನ ಪರಿಸ್ಥಿತಿ ಉಂಟಾಗಿದೆ. ಪಾಕಿಸ್ತಾನದಿಂದ ಬರುತ್ತಿರುವ ಡ್ರೋನ್‌ಗಳನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸುತ್ತಿದೆ. ಅಪರೇಷನ್ ಸಿಂದೂರ್ ಮೂಲಕ ಉಗ್ರರ ಅಡಗುತಾಣಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಇದೀಗ ಕತ್ತಲೆಯಲ್ಲಿ ಪಾಕಿಸ್ತನ ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ಭಾರತದ ಮೇಳೆ ದಾಳಿ ಮಾಡುತ್ತಿದೆ. ಇದಕ್ಕೆ ಭಾರತೀಯ ಸೇನೆ ನೀಚ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡುತ್ತಿವೆ. ಪಾಕಿಸ್ತಾನದ ಕುತಂತ್ರಗಳಿಗೆ ತಕ್ಕ ಉತ್ತರ ನೀಡುತ್ತೀರುವ ಭಾರತೀಯ ಸೇನೆಯ ಶೌರ್ಯದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಪಂಚಾಯ್ತಿ ಸದಸ್ಯೆಯೊಬ್ಬರು ತಮ್ಮ ಐದು ವರ್ಷದ ವೇತನವನ್ನು ಸೇನೆಗೆ ನೀಡುವುದಾಗಿ ಘೋಷಿಸಿದ್ದಾರೆ.

ಹರಿಯಾಣದ ಬಹದ್ದೂರ್‌ಗಢದ ಪರ್ನಾಳ ಹಸನ್ಪುರ ಗ್ರಾಮದ ಪಂಚಾಯ್ತಿ ಸದಸ್ಯೆ ಮುಕೇಶ್‌ದೇವಿ ಅಶೋಕ್ ರಥಿ ಎಂಬವರು ಭಾರತೀಯ ಸೇನೆಗೆ ತಮ್ಮ ವೇತನವನ್ನು ದೇಣಿಗೆಯಾಗಿ  ನೀಡಿದ್ದಾರೆ. ತಾವು  ಐದು ವರ್ಷ ಸ್ವೀಕರಿಸುತ್ತಿರುವ ಗೌರವಧನವನ್ನು ಕೇಂದ್ರ ಸರ್ಕಾರದ ಪರಿಹಾರ ನಿಧಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಮುಕೇಶ್‌ದೇವಿ ಅಶೋಕ್ ರಥಿ ದೇಣಿಗೆ ನೀಡುವ ವಿಷಯ ತಿಳಿಸುತ್ತಿದ್ದಂತೆ ನೆರೆದಿದ್ದ ಜನರು ಭಾರತ್ ಮಾತಾ ಕೀ  ಜೈ, ಜೈ ಹಿಂದ್ ಎಂದು ಘೋಷಣೆಗಳನ್ನು ಕೂಗಲಾರಂಭಿಸಿದರು. 

ಸದಸ್ಯೆಯ ನಿರ್ಧಾರಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ
ಪಂಚಾಯ್ತಿ ಸದಸ್ಯೆಯಾಗಿರು ಮುಕೇಶ್ ಅಶೋಕ್ ರಥಿ ಅವರ ತೆಗೆದುಕೊಳ್ಳುತ್ತಿರುವ ನಿರ್ಧಾರದ ಬಗ್ಗೆ ಗ್ರಾಮದಲ್ಲಿ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಗ್ರಾಮದ ಬಹುತೇಕ ಜನರು ಭಾಗಿಯಾಗಿದ್ದರು. ಮುಕೇಶ್‌ದೇವಿಯವರ ಪತಿ ಅಶೋಕ್ ರಥಿ ಪಂಚಾಯ್ತಿ ಅಸೋಷಿಯೇಷನ್ ಅಧ್ಯಕ್ಷರಾಗಿದ್ದಾರೆ. ಈ ಸಭೆಯಲ್ಲಿ ಅಶೋಕ್ ಸಹ ಭಾಗಿಯಾಗಿದ್ದರು. ಸಭೆಯ ಬಳಿಕ ಮುಕೇಶ್ ದೇವಿ ತಮ್ಮ ನಿರ್ಧಾರವನ್ನು ಎಲ್ಲರ  ಮುಂದೆ ಅಧಿಕೃತವಾಗಿ ಘೋಷಿಸಿದರು. ಭಾರತ್ ಮಾತಾ ಕೀ ಜೈ ಎಂದು ಹೇಳುವ ಮೂಲಕ ಸಭೆಯಲ್ಲಿದ್ದವರೆಲ್ಲರೂ ಮುಕೇಶ್‌ದೇವಿ ಅವರ ನಿರ್ಧಾರವನ್ನು ಸ್ವಾಗತಿಸಿ ಮೆಚ್ಚುಗೆ ಸೂಚಿಸಿದರು. 

ಇದನ್ನೂ ಓದಿ: ಆಪರೇಷನ್‌ ಸಿಂದೂರ್‌ ದಾಳಿಯಲ್ಲಿ 5 ಮೋಸ್ಟ್‌ ವಾಂಟೆಂಡ್‌ ಉಗ್ರರ ಫಿನಿಶ್‌ ಮಾಡಿದ ಭಾರತ!

ಒಟ್ಟು 3 ಲಕ್ಷ ರೂಪಾಯಿ ದೇಣಿಗೆ
ಸಭೆಯ ಬಳಿಕ ಗ್ರಾಮದ ಜನರನ್ನು ಉದ್ದೇಶಿಸಿ ಮಾತನಾಡಿದ ಅಶೋಕ್ ರಥಿ, ಪಂಚಾಯ್ತಿ ಸದಸ್ಯರು ಹರಿಯಾಣ ಸರ್ಕಾರದಿಂದ ಪ್ರತಿ ತಿಂಗಳು 5,000 ರೂಪಾಯಿ ಸ್ವೀಕರಿಸುತ್ತಾರೆ. ಈ ಮೊತ್ತ ಐದು ವರ್ಷಗಳಲ್ಲಿ 3 ಲಕ್ಷ ರೂಪಾಯಿ ಆಗುತ್ತದೆ. ಮುಕೇಶ್‌ದೇವಿ ಅವರು ಈ ಮೊತ್ತವನ್ನು ಆಪರೇಷನ್ ಸಿಂದೂರ್ ಯಶಸ್ವಿ ಕಾರ್ಯಚರಣೆಗೆ ನೀಡಲು ನಿರ್ಧರಿಸಿದ್ದಾರೆ. ಈ ಹಣವನ್ನು ಕೇಂದ್ರ ಸರ್ಕಾರದ ಪರಿಹಾರ ನಿಧಿಗೆ ನೀಡಲಾಗುವುದು. ಭಯೋತ್ಪಾದನೆ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು ಎಂದು ಹೇಳಿದರು.

ಸೇನಾ ಮುಖ್ಯಸ್ಥರ ಜೊತೆಗೆ ಪ್ರಧಾನಿ ಮೋದಿ ಚರ್ಚೆ
ಪಾಕ್ ಜೊತೆಗಿನ ಸಂಘರ್ಷ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮೂರು ಸೇನಾ ಮುಖ್ಯಸ್ಥರನ್ನು ಭೇಟಿಯಾದರು. ಇದೇ ವೇಳೆ ಸೇನಾ ಪಡೆಯ ಮಾಜಿ ಮುಖ್ಯಸ್ಥರು ಮತ್ತು ಸೈನಿಕರ ಜೊತೆಗೆ ಸಂವಾದ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರು ನೌಕಾ ಸೇನೆ, ವಾಯು ಸೇನೆ ಮತ್ತು ಸಶಸ್ತ್ರ ಸೇನೆಯ ಮುಖ್ಯಸ್ಥರನ್ನು ಭೇಟಿಯಾಗಿ ಪರಿಸ್ಥಿತಿ ಬಗ್ಗೆ ಚರ್ಚಿಸಿದರು ಅವಲೋಕಿಸಿದರು. ಆ ಬಳಿಕ ಪ್ರಧಾನಿ ಸಶಸ್ತ್ರ ಪಡೆ, ವಾಯು ಸೇನೆ ಮತ್ತು ನೌಕಾ ಸೇನೆಯ ಮಾಜಿ ಮುಖ್ಯಸ್ಥರು, ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಯೋಧರ ಜೊತೆಗೆ ಸಂವಾದ ನಡೆಸಿದರು.

ಇದನ್ನೂ ಓದಿ:  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ