ಪಾಕಿಸ್ತಾನ ಪರಮಾಣು ಬಾಂಬ್ ಹಾಕಿದರೆ, ಭಾರತದ ಪ್ರತ್ಯುತ್ತರವೇನು? ಸಾವು-ನೋವು ತಡೆಗೆ ಅಸ್ತ್ರವೇನು?

Published : May 10, 2025, 02:50 PM IST
ಪಾಕಿಸ್ತಾನ ಪರಮಾಣು ಬಾಂಬ್ ಹಾಕಿದರೆ, ಭಾರತದ ಪ್ರತ್ಯುತ್ತರವೇನು? ಸಾವು-ನೋವು ತಡೆಗೆ ಅಸ್ತ್ರವೇನು?

ಸಾರಾಂಶ

ಪಾಕಿಸ್ತಾನದ NCA ಸಭೆಯ ಹಿನ್ನೆಲೆಯಲ್ಲಿ ಪರಮಾಣು ಯುದ್ಧದ ಭೀತಿ ಎದುರಾಗಿದೆ. ಭಾರತದ "ಮೊದಲು ಬಳಕೆ ಇಲ್ಲ" ನೀತಿಯಿದ್ದರೂ, ಪ್ರತಿದಾಳಿ ವಿನಾಶಕಾರಿ. S-400, ಬ್ರಹ್ಮೋಸ್, ಅಗ್ನಿ ಕ್ಷಿಪಣಿಗಳು, ಪರಮಾಣು ಜಲಾಂತರ್ಗಾಮಿಗಳು, DRDO-ISRO ತಂತ್ರಜ್ಞಾನ, ರಫೇಲ್-ತೇಜಸ್ ಯುದ್ಧವಿಮಾನಗಳು ಭಾರತದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿವೆ. ನಾಗರಿಕ ರಕ್ಷಣೆಗೂ ಸರ್ಕಾರ ಸಜ್ಜಾಗಿದೆ.

ಭಾರತ-ಪಾಕಿಸ್ತಾನ ಯುದ್ಧದ ಪರಿಸ್ಥಿತಿಯಲ್ಲಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ರಾಷ್ಟ್ರೀಯ ಕಮಾಂಡ್ ಪ್ರಾಧಿಕಾರದ (NCA) ತುರ್ತು ಸಭೆ ಕರೆದಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳ ಉತ್ಪಾದನೆ, ನಿಯಂತ್ರಣ, ಭದ್ರತೆ ಮತ್ತು ಬಳಕೆಯನ್ನು ಮೇಲ್ವಿಚಾರಣೆ ಮಾಡುವ ಅತ್ಯುನ್ನತ ಪ್ರಾಧಿಕಾರ ಇದಾಗಿದೆ. ಈ ಸುದ್ದಿಯ ನಂತರ, ಪರಮಾಣು ಯುದ್ಧದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪರಮಾಣು ಯುದ್ಧದಂತಹ ಅಪಾಯಕಾರಿ ಅಧ್ಯಾಯ ಪ್ರಾರಂಭವಾದರೆ ಭಾರತದ ಬಳಿ ಏನು ಉತ್ತರವಿದೆ? ನಮ್ಮ ಸಿದ್ಧತೆ ಏನು? ಭಾರತೀಯ ನಾಗರೀಕರ ರಕ್ಷಣೆ ಹೇಗೆ ಮಾಡಲಾಗುತ್ತದೆ? ಇದಕ್ಕೆ ಭಾರತದ ಮಿಲಿಟರಿ ಶಕ್ತಿಯ ಪ್ರತ್ಯುತ್ತರ ಏನಾಗಿರುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ...

ಭಾರತದ ನೀತಿ ಮೊದಲು ದಾಳಿ ಮಾಡುವುದು ಅಲ್ಲ, ಆದರೆ ಉತ್ತರ ಮಾರಕ:
ಪರಮಾಣು ಬಾಂಬ್ ಅನ್ನು ಬಳಸುವಲ್ಲಿ ಭಾರತವು 'ಮೊದಲ ಬಳಕೆ ಇಲ್ಲ' ಎಂಬ ನೀತಿಯನ್ನು ಅನುಸರಿಸುತ್ತದೆ. ಅಂದರೆ, ನಾವು ಎಂದಿಗೂ ಮೊದಲು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ. ಆದರೆ ನಮ್ಮ ದೇಶದ ಮೇಲೆ ದಾಳಿ ನಡೆದರೆ, ನಮ್ಮ ಪ್ರತಿಕ್ರಿಯೆ ಸಂಪೂರ್ಣವಾಗಿ ವಿನಾಶಕಾರಿಯಾಗಿ ಇರುತ್ತದೆ. ಈ ನೀತಿಯು ಭಾರತವನ್ನು ಸಂಯಮದಿಂದ ವರ್ತಿಸುವ ಹಾಗೂ ಶಕ್ತಿಶಾಲಿ ದೇಶವೆಂದು ತೋರಿಸುವ ಎರಡೂ ಕಾರ್ಯಗಳನ್ನು ಮಾಡುತ್ತದೆ.

ಪರಮಾಣು ಯುದ್ಧದ ಸಂದರ್ಭದಲ್ಲಿ ಭಾರತದ ಸಿದ್ಧತೆಗಳು: 

400 ಕಿಮೀ ದೂರದಿಂದಲೇ ಶತ್ರು ಕ್ಷಿಪಣಿ ನಾಶ: ಭಾರತವು ರಷ್ಯಾದಿಂದ ಪಡೆದ S-400 ವ್ಯವಸ್ಥೆಯು ಭಾರತದ ಮೊದಲ ಗುರಾಣಿಯಾಗಿದೆ. ಈಗಲೂ ಅದು ನೂರಾರು ಪಾಕಿಸ್ತಾನಿ ಡ್ರೋನ್‌ಗಳು ಮತ್ತು ಅನೇಕ ಕ್ಷಿಪಣಿಗಳನ್ನು ಗಾಳಿಯಲ್ಲಿ ಹೊಡೆದುರುಳಿಸಿದೆ. ಈ ಕ್ಷಿಪಣಿ ಪತ್ತೆ ಮತ್ತು ವಿನಾಶದಲ್ಲಿ ಎಷ್ಟು ಮುಂದುವರಿದಿದೆಯೆಂದರೆ, ಶತ್ರು ಕ್ಷಿಪಣಿಯನ್ನು ಗಾಳಿಯಲ್ಲಿಯೇ ಹೊಡೆದುರುಳಿಸುವಲ್ಲಿ ಇದು ನಿಪುಣವಾಗಿದೆ. ಭಾರತ ಇದನ್ನು ಚೀನಾ ಮತ್ತು ಪಾಕಿಸ್ತಾನ ಎರಡೂ ಗಡಿಗಳಲ್ಲಿ ನಿಯೋಜಿಸಿದೆ. ಈ ಮೂಲಕ ಶತ್ರು ದೇಶಗಳಿಂದ ಗಡಿಯೊಳಗೆ ಬರುವ ಅಕ್ರಮ ಡ್ರೋನ್, ಕ್ಷಿಪಣಿಗಳನ್ನು ಗಾಳಿಯಲ್ಲಿಯೇ ಹೊಡೆದು ಹಾಕುತ್ತದೆ. ಪರಮಾಣು ಬಾಂಬ್ ಹೊತ್ತುಬಂದ ಕ್ಷಿಪಣಿಗಳು ಭಾರತದ ಗಡಿಯೊಳಗೆ ಪ್ರವೇಶಕ್ಕೆ ಅವಕಾಶ ಇಲ್ಲದಂತೆ ಪ್ರತಿದಾಳಿ ಮಾಡಲಿದೆ. ಆದ್ದರಿಂದ ಭಾರತದ ಜನರು ತುಸು ನಿರಾತಂಕದಿಂದ ಇರಬಹುದು.

ನಾಗರಿಕ ರಕ್ಷಣೆಗೆ ಸಿದ್ಧತೆ: ಒಂದು ವೇಳೆ ಪರಮಾಣು ಯುದ್ಧ ಸಂಭವಿಸುವ ಸಾಧ್ಯತೆ ಏನಾದರೂ ಬಂದಲ್ಲಿ ಭಾರತ ಸರ್ಕಾರವು ನಾಗರಿಕ ರಕ್ಷಣಾ ಕಾರ್ಯತಂತ್ರವನ್ನು ಸಹ ಹೊಂದಿದೆ. ದೇಶದ ಎಲ್ಲ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಿದೆ. ಆ ಜಾಗದಲ್ಲಿ ಸುಸಜ್ಜಿತ ಆಶ್ರಯ ಮತ್ತು ಅಗತ್ಯ ಸರಬರಾಜುಗಳನ್ನು ಒದಗಿಸುವ ಅತ್ಯುತ್ತಮ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇದರ ಹೊರತಾಗಿ, ಇನ್ನೂ ಅನೇಕ ಹೈಟೆಕ್ ಮತ್ತು ಮುಂದುವರಿದ ಶಸ್ತ್ರಾಸ್ತ್ರಗಳು ನಮ್ಮ ಭಾರತದಲ್ಲಿವೆ.

ಬ್ರಹ್ಮೋಸ್ ಕ್ಷಿಪಣಿ, ಕಣ್ಣು ಮಿಟುಕಿಸುವುದರೊಳಗೆ ದಾಳಿ:
ಇನ್ನು ಬ್ರಹ್ಮೋಸ್ ಭಾರತ-ರಷ್ಯಾದ ಜಂಟಿ ಕ್ಷಿಪಣಿಯಾಗಿದ್ದು, ಇದು ಶಬ್ದಕ್ಕಿಂತ 3 ಪಟ್ಟು ವೇಗವಾಗಿ ಚಲಿಸುತ್ತದೆ. ಆರಂಭದಲ್ಲಿ ಬ್ರಹ್ಮೋಸ್‌ನ ವ್ಯಾಪ್ತಿ 290 ಕಿಲೋಮೀಟರ್‌ಗಳಷ್ಟಿತ್ತು. 2017 ರಲ್ಲಿ 490 ಕಿಲೋಮೀಟರ್ ವ್ಯಾಪ್ತಿಯನ್ನು ಪರೀಕ್ಷಿಸಲಾಯಿತು. ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಇದರ ಮುಂದಿನ ಆವೃತ್ತಿಯು 1500 ಕಿ.ಮೀ.ಗಳಿಗಿಂತ ಹೆಚ್ಚು ದೂರದಲ್ಲಿರುವ ಪ್ರದೇಶವನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರ ವಿಶೇಷ ಶಕ್ತಿ ಎಂದರೆ, ಕಡಿಮೆ ಸಮಯದಲ್ಲಿ ಶತ್ರುಗಳ ಹೆಚ್ಚಿನ ಪ್ರದೇಶ ಹಾನಿ ಮಾಡುತ್ತದೆ.

ಅಗ್ನಿ ಕ್ಷಿಪಣಿ: ಭಾರತವು ಅಗ್ನಿ-1 ರಿಂದ ಅಗ್ನಿ-5 ರವರೆಗೆ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ಹೊಂದಿದೆ. ಅಗ್ನಿ-5 ರ ವ್ಯಾಪ್ತಿಯು 5,000 ಕಿ.ಮೀ. ವರೆಗೆ ಇರುತ್ತದೆ. ಅಂದರೆ ಪಾಕಿಸ್ತಾನದ ಯಾವುದೇ ಮೂಲೆ ಮಾತ್ರವಲ್ಲದೆ ಚೀನಾದ ಗಡಿಗಳು ಸಹ ಅದರ ಗುರಿಯಾಗಿವೆ. ಇದನ್ನು ಬಳಸಿದಲ್ಲಿ ಶತ್ರುಗಳು ಯಾವುದೇ ಮೂಲೆಯಲ್ಲಿದ್ದರೂ ಅವರನ್ನು ಹುಟ್ಟಡಗಿಸಬಹುದು.

ಪರಮಾಣು ಜಲಾಂತರ್ಗಾಮಿ, ಸಮುದ್ರದಿಂದಲೂ ದಾಳಿ:
ಐಎನ್ಎಸ್ ಅರಿಹಂತ್ ನಂತಹ ಜಲಾಂತರ್ಗಾಮಿ ನೌಕೆಗಳು ಭಾರತವನ್ನು ರಕ್ಷಣಾ ಕ್ಷೇತ್ರದಲ್ಲಿ ಅತ್ಯಂತ ಶಕ್ತಿಶಾಲಿಯನ್ನಾಗಿ ಮಾಡುತ್ತವೆ. ಈ ಜಲಾಂತರ್ಗಾಮಿ ನೌಕೆಗಳು ನೀರಿನೊಳಗಿನಿಂದ ಪರಮಾಣು ಕ್ಷಿಪಣಿಗಳನ್ನು ಹಾರಿಸಬಲ್ಲವು. ಜೊತೆಗೆ, ಈ ಜಲಾಂತರ್ಗಾಮಿ ನೌಕೆಯಿಂದ ಉಡಾವಣೆ ಮಾಡಿದ ಪರಮಾಣು ಕ್ಷಿಪಣು ರಾಡಾರ್‌ನಲ್ಲಿಯೂ ಕಾಣಿಸುವುದಿಲ್ಲ ಎಂಬುದು ಇದರ ಮತ್ತೊಂದು ವಿಶೇಷತೆಯಾಗಿದೆ.

DRDO-ISRO ತಂತ್ರಜ್ಞಾನ, ನೈಜ ಸಮಯದ ಎಚ್ಚರಿಕೆ: ಇಸ್ರೋ ಮತ್ತು ಡಿಆರ್‌ಡಿಒಗಳು ಅದ್ಭುತ ತಂತ್ರಜ್ಞಾನವನ್ನು ಹೊಂದಿದ್ದು, ಅವು ನೈಜ ಸಮಯದ ದತ್ತಾಂಶ ಮತ್ತು ಉಪಗ್ರಹಗಳಿಂದ ದಾಳಿಯ ನಿಖರವಾದ ವಿವರಗಳನ್ನು ಒದಗಿಸುತ್ತವೆ. ಈ ಮೂಲಕ ಶತ್ರು ರಾಷ್ಟ್ರಗಳ ಕ್ಷಿಪಣಿಗಳು ನಮ್ಮ ದೇಶದ ವಾಯು ನೆಲೆಯೊಳಗೆ ಬಂದ ತಕ್ಷಣವೇ ಬಹಳ ಬೇಗನೆ ಪ್ರತಿದಾಳಿ ಮಾಡಲು ಅನುವು ಮಾಡಿಕೊಡುತ್ತದೆ.

ರಫೇಲ್ ಮತ್ತು ತೇಜಸ್‌ನಿಂದ ವಾಯುದಾಳಿ: ಭಾರತೀಯ ವಾಯುಪಡೆಯು ರಫೇಲ್‌ನಂತಹ ಜಗತ್ತಿನಲ್ಲಿಯೇ ಅತ್ಯಂತ ಮುಂದುವರಿದ ಯುದ್ಧ ವಿಮಾನಗಳನ್ನು ಹೊಂದಿದೆ. ಅವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಮತ್ತು ಹಾರಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಯುದ್ಧ ವಿಮಾನಗಳು 360 ಡಿಗ್ರಿ ಕೋನದಲ್ಲಿ ದಾಳಿ ಮಾಡಬಲ್ಲವು. ಈ ಯುದ್ಧ ವಿಮಾನ ಖರೀದಿ ಮಾಡದಂತೆ ಆಮೇರಿಕಾ ಭಾರತಕ್ಕೆ ಒತ್ತಡ ಹೇರಿದರೂ ರಕ್ಷಣಾ ದೃಷ್ಟಿಯಿಂದ ನಾವು ಖರೀದಿ ಮಾಡುವುದಾಗಿ ಸೆಡ್ಡು ಹೊಡೆದು ಈ ಯುದ್ಧ ವಿಮಾನಗಳನ್ನು ಖರೀದಿ ಮಾಡಿ ಶಕ್ತಿಶಾಲಿ ಸೇನೆ ಎಂದು ಕರೆಸಿಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್