
ಬೆಂಗಳೂರು: ಪ್ರೀತಿ ಅರಸಿ ಭಾರತಕ್ಕೆ ಬಂದಿದ್ದ ಮಹಿಳೆಯನ್ನು ಪೊಲೀಸರು ಮತ್ತೆ ಅಟರಿ ಬಾರ್ಡರ್ ಮೂಲಕ ವಾಪಸ್ ಕಳುಹಿಸಿದ್ದಾರೆ. ಇಕ್ರಾ ಜೀವನಿ (Iqra Jeewani) ಎಂಬ ಯುವತಿ ಆನ್‌ಲೈನ್‌ನಲ್ಲಿ ಲುಡೋ ಗೇಮ್ ಆಡುವ ಚಟ ಬೆಳೆಸಿಕೊಂಡಿದ್ದು, ಈ ಆಟ ಆಡುತ್ತಲೇ ಆಕೆಗೆ ಭಾರತದ ಉತ್ತರ ಪ್ರದೇಶ ಮೂಲದ 26 ವರ್ಷದ ಮುಲಾಯಂ ಸಿಂಗ್ ಎಂಬಾತನ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಆತನನ್ನು ಬಿಟ್ಟಿರಲಾರದಷ್ಟರ ಮಟ್ಟಿಗೆ ಹಚ್ಚಿಕೊಂಡ ಆಕೆ ಅದಕ್ಕಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬರುವುದಕ್ಕೆ ಮುಂದಾಗಿದ್ದಳು. ಆದರೆ ಬರುವುದು ಹೇಗೆ ಈಕೆಯ ಬಳಿ ಭಾರತ ವೀಸಾ ಇಲ್ಲ. ಹೀಗಿರುವಾಗ ಗೆಳೆಯ ಮುಲಾಯಂ ಆಕೆಗೆ ನೇಪಾಳಕ್ಕೆ ಹೋಗಿ ಅಲ್ಲಿಂದ ಸನೋಲಿ ಗಡಿ (Sanoli border) ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸುವಂತೆ ಸಲಹೆ ನೀಡಿದ್ದಾನೆ.
ಪ್ರಿಯಕರನ ಮಾತು ಕೇಳಿದ ಆಕೆ ಅದರಂತೆ ಪಾಕಿಸ್ಥಾನದಿಂದ ನೇಪಾಳಕ್ಕೆ ತೆರಳಿದ್ದಾಳೆ. ಸೆಪ್ಟೆಂಬರ್ 19 ರಂದು ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಇಕ್ರಾ ಜೀವನಿಯನ್ನು ಅಲ್ಲಿ ಮುಲಾಯಂ (Mulayam Singh) ಸ್ವಾಗತಿಸಿದ್ದಾನೆ. ಅಲ್ಲಿ ಇಬ್ಬರು ಮದುವೆಯಾಗಿದ್ದು, ಒಂದು ವಾರಗಳ ಕಾಲ ಇಬ್ಬರೂ ಅಲ್ಲೇ ಕಳೆದಿದ್ದಾರೆ. ನಂತರ ಇಬ್ಬರು ಇಂಡೋ ನೇಪಾಳ್ ಸನೋಲಿ ಬಾರ್ಡರ್ (Sanoli Border) ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ. ನಂತರ ಬೆಂಗಳೂರಿಗೆ ಬಂದ ಈ ಜೋಡಿ ಇಲ್ಲಿ ವಾಸ ಮಾಡಲು ಶುರು ಮಾಡಿದ್ದಾರೆ. ಇಕ್ರಾ ರವಾ ಎಂಬ ಹಿಂದೂ ಹೆಸರನ್ನು ಇರಿಸಿಕೊಂಡಿದ್ದು ಇಬ್ಬರು ಜೊತೆಯಾಗಿ ವಾಸ ಮಾಡಲು ಶುರು ಮಾಡಿದ್ದಾರೆ.
Bengaluru: ಹಿಂದು ಎಂದು ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಮಹಿಳೆ ಸೆರೆ
ಈ ಮಧ್ಯೆ ಹಿಂದೂಗಳೆಂದು ಹೇಳಿಕೊಂಡು ಮನೆಯಲ್ಲಿ ನಮಾಜ್ (Namaz) ಮಾಡುತ್ತಿದ್ದಿದ್ದನ್ನು ನೋಡಿದ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಇವರು ವಾಸವಿದ್ದ ಮನೆ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದಾಗ ಅಲ್ಲಿ ಇಕ್ರಾ ಹಾಗೂ ಆಕೆಯ ಪಾಕಿಸ್ಥಾನಿ ಪಾಸ್‌ಪೋರ್ಟ್ ಪೊಲೀಸರಿಗೆ ಸಿಕ್ಕಿದೆ. ನಂತರ ಆಕೆಯನ್ನು ಬಂಧಿಸಿ ಕರೆತಂದ ಪೊಲೀಸರು, ಅಮೃತಸರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯನ್ನು ಅಟರಿ ಬಾರ್ಡರ್ (Attari Border)ಮೂಲಕ ವಾಪಸ್ ಪಾಕಿಸ್ಥಾನಕ್ಕೆ ಕಳುಹಿಸಿ ಕೊಟ್ಟಿದ್ದಾರೆ.
ಇವರು ನೇಪಾಳದಿಂದ ಸೀದಾ ಬೆಂಗಳೂರಿಗೆ ಬಂದು ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ವಾಸವಾಗಿದ್ದರು. ಈ ಮಧ್ಯೆ ತಾಯಿಯನ್ನ ಸಂಪರ್ಕ ಮಾಡಲು ಇಕ್ರಾ ಜೀವನಿ ಯತ್ನಿಸಿದ್ದು, ಈ ಸಂಗತಿಯನ್ನು ಪತ್ತೆ ಮಾಡಿದ್ದ ಕೇಂದ್ರ ಗುಪ್ತಚರ ಇಲಾಖೆ, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಇಕ್ರಾ ಜೀವನಿ ಹಾಗೂ ಮುಲಾಯಂ ಸಿಂಗ್‌ನನ್ನು ಜನವರಿ 23 ರಂದು ಪೊಲೀಸರು ಬಂಧಿಸಿದ್ದರು. ನಂತರ ಯುವತಿಯನ್ನು ವಿಚಾರಣೆ ನಡೆಸಿದಾಗ ರಾವಾ ಯಾದವ್ ಎಂಬ ಹೆಸರು ಬದಲಾಯಿಸಿಕೊಂಡು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದ ಸಂಗತಿ ತಿಳಿದಿತ್ತು. ಇನ್ನು ಬಂಧಿತ ಯುವತಿಯ ಬಗ್ಗೆ ಎಫ್‌ಆರ್‌ಆರ್‌ಓ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದರು. ಒಟ್ಟಿನಲ್ಲಿ ಪ್ರೀತಿ ಅರಸಿ ಗಡಿ ದಾಟಿ ಬಂದ ಯುವತಿ ಮತ್ತೆ ತನ್ನ ತಾಯ್ನಾಡಿಗೆ ಹೋಗುವಂತಾಗಿದೆ.
10 ವರ್ಷ ಭಾರತದಲ್ಲಿದ್ದ ಅಕ್ರಮವಾಗಿ ನೆಲೆಸಿದ್ದ ಯುವಕ; ಇದೀಗ ತಾಲಿಬಾನ್ ಜೊತೆ ಪ್ರತ್ಯಕ್ಷ!
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯನ್ನು ವಾಪಸ್ ಕಳುಹಿಸಿರೋದಕ್ಕೆ ಜನ ಬೇಸರ ವ್ಯಕ್ತಪಡಿಸಿದ್ದಾರೆ, ಅಲ್ಲಿ ಆಕೆಯ ಸ್ಥಿತಿ ಹೇಗಿರುವುದೋ ಏನೋ? ಅದು ಆಕೆ ಭಾರತದ ಅದರಲ್ಲೂ ಹಿಂದೂ ಯುವಕನ ಜೊತೆ ಓಡಿ ಬಂದಿದ್ದಾಳೆ ಎಂದು ತಿಳಿದರೆ ಅವರು ಆಕೆಯನ್ನು ಹತ್ಯೆ ಮಾಡುವುದು ಪಕ್ಕಾ. ಆಕೆಯ ಬಗ್ಗೆ ಮಾನವೀಯ ನೆಲೆಯಲ್ಲಿ ಯೋಚಿಸಿ ಇಲ್ಲಿ ಉಳಿಯಲು ಆಕೆಗೆ ಆಶ್ರಯ ನೀಡಬೇಕಿತ್ತು ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ