ನಾಯಿಯನ್ನು ಉಳಿಸಲು ಹೋಗಿ ಜೀವ ಕಳೆದುಕೊಂಡ 28 ವರ್ಷದ ಯುವಕ

Published : Feb 20, 2023, 11:43 AM IST
ನಾಯಿಯನ್ನು ಉಳಿಸಲು ಹೋಗಿ ಜೀವ ಕಳೆದುಕೊಂಡ 28 ವರ್ಷದ ಯುವಕ

ಸಾರಾಂಶ

 ನಾಯಿಮರಿಯನ್ನು ಉಳಿಸಲು ಹೋಗಿ ವ್ಯಕ್ತಿಯೊಬ್ಬ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡ ಘಟನೆ ತಮಿಳುನಾಡಿನ ಅಂಬತ್ತೂರು ಬಳಿ ಶನಿವಾರ ರಾತ್ರಿ ನಡೆದಿದೆ.

ಚೆನ್ನೈ:  ನಾಯಿಮರಿಯನ್ನು ಉಳಿಸಲು ಹೋಗಿ ವ್ಯಕ್ತಿಯೊಬ್ಬ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡ ಘಟನೆ ತಮಿಳುನಾಡಿನ ಅಂಬತ್ತೂರು ಬಳಿ ಶನಿವಾರ ರಾತ್ರಿ ನಡೆದಿದೆ. ಮನೆಯಲ್ಲಿದ್ದ ತನ್ನ ಮಕ್ಕಳಿಬ್ಬರು ಮನೆಗೊಂದು ನಾಯಿಮರಿ ತರಬೇಕು ಎಂದು ಅಪ್ಪನಲ್ಲಿ ದಿನ ಹಠ ಮಾಡುತ್ತಿದ್ದರು. ಅದರಂತೆ ಅಪ್ಪ ನಾಯಿಮರಿಯನ್ನು ತೆಗೆದುಕೊಂಡು ಮನೆಗೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. 28 ವರ್ಷ ಪ್ರಾಯದ ದೀಪನ್ ಮೃತ ವ್ಯಕ್ತಿ. 

ಆಟೋ ಚಾಲಕರಾಗಿ (Auto driver) ಕಾರ್ಯನಿರ್ವಹಿಸುತ್ತಿದ್ದ ಇವರು ಶನಿವಾರ ತನ್ನಿಬ್ಬರು ಪುಟ್ಟ ಮಕ್ಕಳ ಆಸೆ ಈಡೇರಿಸುವ ಸಲುವಾಗಿ ನಾಯಿಮರಿಯನ್ನು ತಮ್ಮ ಸ್ಕೂಟರ್ ಮುಂಭಾಗದಲ್ಲಿ ಇರಿಸಿಕೊಂಡು ಬರುತ್ತಿದ್ದರು.  ಈ ವೇಳೆ ನಾಯಿಮರಿ ಸ್ಕೂಟರ್‌ನಿಂದ (Scooter) ವಾಲಿದ್ದು, ರಸ್ತೆಗೆ ಬೀಳುವ ಹಾಗಿತ್ತು. ಹೀಗಾಗಿ ಇವರು ಸ್ಕೂಟರ್ ನಿಲ್ಲಿಸದೇ ಬಾಗಿ ನಾಯಿಮರಿಯನ್ನು(Puppy) ಬೀಳದಂತೆ ರಕ್ಷಿಸಲು ನೋಡಿದ್ದಾರೆ. ಈ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದಿದ್ದು,  ಪರಿಣಾಮ್ ದೀಪನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಗಂಭೀರ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇತ್ತ ನಾಯಿಮರಿ ಘಟನಾ ಸ್ಥಳದಿಂದ ಪರಾರಿಯಾಗಿದೆ. 

ಉಡುಪಿ: ನಾಯಿಮರಿಯನ್ನು ಬರ್ಬರವಾಗಿ ಹೊಡೆದು ಕೊಂದ ಕಾಲೇಜ್ ವಾರ್ಡನ್!

ದೀಪನ್ ಕವನಗರೈನ ಅಂಬಟೂರು ನಿವಾಸಿಯಾಗಿದ್ದು,  ಇವರು ತಮ್ಮ ಪತ್ನಿ 24 ವರ್ಷದ ಭವಾನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.  ಒರಗಾಡಮ್‌ ಬಳಿ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ ದೀಪನ್ ಅಲ್ಲಿ ನಾಯಿಮರಿಯನ್ನು ನೋಡಿದ್ದು, ಮಕ್ಕಳ ಆಸೆಯಂತೆ ನಾಯಿಮರಿಯನ್ನು ಮನೆಗೆ ತರಲು ಮುಂದಾಗಿ ಸ್ಕೂಟರ್‌ನಲ್ಲಿಟ್ಟು ಕರೆ ತರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಇತ್ತ ಮಕ್ಕಳ ಆಸೆಯಂತೆ ನಾಯಿಮರಿ ತರಲು ಹೋದ ಅಪ್ಪ ಬಾರದ ಲೋಕ ಸೇರಿದ್ದು, ಮಕ್ಕಳು ಹಾಗೂ ಕುಟುಂಬವನ್ನು ಕಂಗೆಡುವಂತೆ ಮಾಡಿದೆ. 

ಬೀದಿ ನಾಯಿಗಳಿಂದ ನಾಯಿಮರಿ ರಕ್ಷಿಸಿ ಮಗುವಂತೆ ಸಲಹುವ ಕೋತಿ 

ಮನೆ ದೋಚುವ ಜೊತೆ ನಾಯಿಮರಿಯನ್ನು ಹೊತ್ತೊಯ್ದ ಕಳ್ಳರು

ಮನೆಗೆ ಬಂದ ಕಳ್ಳರು ಐಷಾರಾಮಿ ವಸ್ತುಗಳೊಂದಿಗೆ ಮನೆಯಲ್ಲಿದ್ದ 5 ವಾರದ ನಾಯಿಮರಿಯನ್ನೂ ಹೊತ್ತೊಯ್ದಿರುವ ವಿಚಿತ್ರ ಘಟನೆ ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿ ನಡೆದಿದೆ. ಮನೆಗೆ ಬಂದ ಮೂವರು ಕಳ್ಳರು ಮಾಲೀಕನಿಗೆ ಹೊಡೆದು ಮನೆಯಲ್ಲಿದ್ದ ಎರಡು ಐಫೋನ್‌ಗಳು, ವಜ್ರದ ಕಿವಿಯೋಲೆ, ಡಜನ್‌ಗಟ್ಟಲೆ ಶೂ, ಬಟ್ಟೆ, ಚಿನ್ನವನ್ನು ಮಾತ್ರವಲ್ಲದೇ ಡೀಮೋ ಎಂಬ ಹೆಸರಿನ ಅಮೇರಿಕನ್‌ ಬುಲ್‌ಡಾಗ್‌ ಜಾತಿಯ ಪುಟ್ಟನಾಯಿ ಮರಿಯನ್ನೂ ಕದ್ದು ಒಯ್ದಿದ್ದಾರೆ. ಇದು ನಾಯಿ ಸಾಕಿದವರನ್ನು ಚಿಂತೆಗೆ ದೂಡಿದೆ.

ಮನೆಗೆ ಬಂದ ಕಳ್ಳರು ಅಮೂಲ್ಯವಾದ ಆಭರಣ ವಸ್ತುಗಳನ್ನು ದೋಚುವುದು ಮಾಮೂಲಿ ಆದರೆ ಅಮೆರಿಕಾದಲ್ಲಿ(America) ಕಳ್ಳರು, ಮನೆಯಲ್ಲಿದ್ದ ನಾಯಿಮರಿಯನ್ನು (Puppy) ಕೂಡ ಹೊತ್ತೊಯ್ದಿದ್ದಾರೆ. ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಈ ಘಟನೆ ನಡೆದಿದೆ. ಮನೆ ದರೋಡೆಗೆ (Burglary) ಬಂದ ಶಸ್ತ್ರಾಸ್ತ್ರಧಾರಿ ಕಳ್ಳರು ಮನೆಯಲ್ಲಿದ್ದ ಐದು ವಾರಗಳ ಪ್ರಾಯದ ಅಮೆರಿಕನ್ ಬುಲ್‌ಡಾಗ್ ನಾಯಿಮರಿಯನ್ನು ಕದ್ದೊಯ್ದಿದ್ದಾರೆ ಎಂದು ಮೆಟ್ರೋ ಪಾಲಿಟನ್ ಪೊಲೀಸ್ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ. 

ಮೈ ಮೇಲೆ ಕಂದು ಬಣ್ಣದ ಪ್ಯಾಚ್ ಹೊಂದಿದ್ದ ಈ ಶ್ವಾನದ ಜೊತೆ ಕಳ್ಳರು  ಸಾವಿರ ಡಾಲರ್ ಬೆಲೆ ಬಾಳುವ ವಸ್ತುಗಳು, ಎರಡು ಐಫೋನ್‌ಗಳು, ಎರಡು ಗೇಮ್ ಪ್ಲೇಯರ್‌ಗಳು (Playstations), ಒಂದು ಜೊತೆ ಕನ್ನಡಕ, ವಜ್ರದ ಕಿವಿಯೋಲೆ ಹಾಗೂ ಚಿನ್ನದ ಉಂಗುರವನ್ನು ಎಗರಿಸಿದ್ದಾರೆ. ಇದರ ಜೊತೆಗೆ ಹ್ಯಾಟ್ (hats), ಜಾಕೆಟ್ (jackets), ಕೋಟ್, ಪ್ಯಾಂಟ್  ಹಾಗೂ ಡಜನ್‌ನಷ್ಟು ಜೊತೆ ಶೂಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಮನೆ ಮಾಲೀಕನ ಮೇಲೆ ದರೋಡೆಕೋರರು ಹಲ್ಲೆ ಮಾಡಿದ್ದರಿಂದ ಸಣ್ಣ ಪುಟ್ಟ ಗಾಯಗಳಾಗಿವೆ. ದರೋಡೆಕೋರರ ಚಲನವಲನಗಳು ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಎಲ್ಲಾ ದರೋಡೆಕೋರರು ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ಧರಿಸಿದ್ದರು. ಟೋಪಿ ಇರುವ ಟೀಶರ್ಟ್ ಹಾಗೂ ನೈಕಿ ಶೂ ಧರಿಸಿದ್ದರು ಎಂದು ತಿಳಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indigo Crisis: ಮಗಳಿಗೆ ರಕ್ತ ಸೋರ್ತಿದೆ, ಸ್ಯಾನಿಟರಿ ಪ್ಯಾಡ್​ ಕೊಡಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ತಂದೆಯ ಕಣ್ಣೀರು
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್