
ತೆಲಂಗಾಣ (ಜು.17): '26 ಭಾರತೀಯರನ್ನು ಕೊಂದ ಆ ನಾಲ್ವರು ಭಯೋತ್ಪಾದಕರನ್ನು ಹಿಡಿಯುವವರೆಗೂ ನಾವು ಸರ್ಕಾರವನ್ನು ಪ್ರಶ್ನಿಸುತ್ತೇವೆ' ಎನ್ನುವ ಮೂಲಕ AIMIM ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂದೂರ್' ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ತೆಲಂಗಾಣದ ಬೋಧನ್‌ನಲ್ಲಿ ಜುಲೈ 16, 2025 ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಂಸದ ಅಸಾದುದ್ದೀನ್ ಓವೈಸಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಮೋದಿ ಸರ್ಕಾರದ ಭದ್ರತಾ ವೈಫಲ್ಯದ ಜೀವಂತ ಉದಾಹರಣೆ ಎಂದು ಓವೈಸಿ ಟೀಕಿಸಿದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಘಟನೆಗೆ ಜವಾಬ್ದಾರಿ ಹೊತ್ತಿದ್ದಾರೆ ಎಂದು ಉಲ್ಲೇಖಿಸಿ, 'ಮೂರು ತಿಂಗಳ ನಂತರ ಜವಾಬ್ದಾರಿ ವಹಿಸಿಕೊಂಡರೆ, ಸಿನ್ಹಾ ರಾಜೀನಾಮೆ ನೀಡಬೇಕು' ಎಂದು ಓವೈಸಿ ಆಗ್ರಹಿಸಿದರು.
ಆಪರೇಷನ್ ಸಿಂದೂರ್‌ಗೆ ಬೆಂಬಲ:
ಭಾರತೀಯ ಸೇನೆಯ ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಪಿಒಕೆ ಮತ್ತು ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳನ್ನು ಯಶಸ್ವಿಯಾಗಿ ಧ್ವಂಸ ಮಾಡಲಾಗಿದೆ. ಈ ಕಾರ್ಯಾಚರಣೆಯನ್ನು ಮುಂದುವರಿಸಿ, ದಾಳಿಯ ಹಿಂದಿರುವ ಭಯೋತ್ಪಾದಕರನ್ನು ಶಿಕ್ಷಿಸಬೇಕೆಂದು ಓವೈಸಿ ಮನವಿ ಮಾಡಿದರು. ಈ ವೇಳೆ ಪಹಲ್ಗಾಮ್‌ಗೆ ಸೇಡು ತೀರಿಸಿಕೊಳ್ಳಲೇಬೇಕು ಎಂದು ಒತ್ತಾಯಿಸಿದರು.
ಬುಲ್ಡೋಜರ್ ಪಾಲಿಟಿಕ್ಸ್ ವಿರುದ್ಧ ಕಿಡಿ:
ಓವೈಸಿ, ಬಿಜೆಪಿ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆ ಮತ್ತು ವಕ್ಫ್ ತಿದ್ದುಪಡಿ ಮಸೂದೆಯನ್ನು 'Black law' ಎಂದು ಟೀಕಿಸಿದರು. ಚೀನಾ ಬಾಂಗ್ಲಾದೇಶದಲ್ಲಿ ಪ್ರಭಾವ ಹೆಚ್ಚಿಸುತ್ತಿದೆ, ಆದರೆ ಇಲ್ಲಿ ಮನೆಗಳನ್ನು ಕೆಡವುವ ಮತ್ತು ಮಸೀದಿಗಳ ವಿರುದ್ಧ ಕ್ರಮ ಕೈಗೊಳ್ಳುವ ಚರ್ಚೆ ನಡೆಯುತ್ತಿದೆ ಅದರ ಬದಲು ಪಾಕಿಸ್ತಾನ ಮತ್ತು ಚೀನಾದಿಂದ ಎದುರಾಗುವ ಬೆದರಿಕೆಗಳ ಮೇಲೆ ಗಮನಹರಿಸಿ ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.
ದೇಶದ ಭದ್ರತೆಗೆ ಆದ್ಯತೆ
ನಮಗೆ ಬೆದರಿಕೆಯಾಗಿರುವವರ ಮೇಲೆ ಕೇಂದ್ರ ಸರ್ಕಾರ ಗಮನ ಕೊಡಬೇಕು. ದೇಶದ ಒಳಗೆ ಧ್ವಂಸಕಾರಿ ಕಾರ್ಯಗಳಿಗಿಂತ ರಾಷ್ಟ್ರೀಯ ಭದ್ರತೆಗೆ ಒತ್ತು ನೀಡಿ ಎಂದು ಓವೈಸಿ ಒತ್ತಾಯಿಸಿದರು. ವಕ್ಫ್ ಮಸೂದೆಯ ವಿರುದ್ಧ ತಮ್ಮ ವಿರೋಧವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ ಅವರು, ಇದು ದೇಶದ ಒಗ್ಗಟ್ಟಿಗೆ ಹಾನಿಕಾರಕ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ