
ಚೆನ್ನೈ (ಜು.17) ಮಕ್ಕಳ ಆರೈಕೆ ಅತೀ ಸೂಕ್ಷ್ಮ. ಇನ್ನು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಬೇಕು. ಜೊತೆಗೆ ಅನಾರೋಗ್ಯಕ್ಕೆ ಸೂಕ್ತ ಮಕ್ಕಳ ವೈದ್ಯರ ಸಂಪರ್ಕಿಸಿ ಚಿಕಿತ್ಸೆ ಅಥವಾ ಔಷಧಿ ಪಡೆಯಬೇಕು. ಆದರೆ ಇಲ್ಲೊಂದು ಕುಟುಂಬ ಇದೀಗ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಒಂದು ಸಣ್ಣ ತಪ್ಪು ಅತೀ ದೊಡ್ಡ ದುರಂತಕ್ಕೆ ಕಾರಣವಾಗಿದೆ. ಅದು 8 ತಿಂಗಳ ಕಂದಮ್ಮ. ಮಗುವಿಗೆ ಕೆಲ ದಿನಗಳಿಂದ ಶೀತ ಶುರುವಾಗಿದೆ. ಮೂಗು ಕಟ್ಟುತ್ತಿದೆ. ಪೋಷಕರು ವೈದ್ಯರ ಸಂಪರ್ಕಿಸಲು ಮುಂದಾಗಿದ್ದರೆ, ಇತ್ತ ಕುಟುಂಬಸ್ಥರ ಮಾತು ಕೇಳಿ ಮನೆ ಮದ್ದು ಮಾಡಿದ್ದಾರೆ. ಮಗುವಿನ ಶೀತಕ್ಕೆ ವಿಕ್ಸ್ ಹಾಗೂ ಕರ್ಪೂರದ ಮನೆ ಮದ್ದು ಮಾಡಿದ್ದಾರೆ. ದುರಂತದ ಅಂದರೆ ಮಗು ಮೃತಪಟ್ಟ ಘಟನೆ ಚೆನ್ನೈನ ವಲ್ಲವನ್ ನಗರದಲ್ಲಿ ನಡೆದಿದೆ.
ವಿಕ್ಸ್ ಕರ್ಪೂರ ಮಿಕ್ಸ್ ಮಾಡಿ ಮನೆ ಮದ್ದು
8 ತಿಂಗಳ ಕಂದ. ಮಗುವಿನ ಶೀತ ಕಡಿಮೆ ಮಾಡಲು ವೈದ್ಯರ ಸಂಪರ್ಕಿಸಬೇಕಿತ್ತು. ಆದರೆ ಕುಟುಂಬಸ್ಥರು, ಆಪ್ತರ ಸಲಹೆಗಳನ್ನು ಪಡೆದ ಪೋಷಕರು ಮನೆ ಮದ್ದಿನಲ್ಲಿ ಗುಣಪಡಿಸಲು ಮುಂದಾಗಿದ್ದಾರೆ. ಮಗುವಿನ ಮೂಗು ಕಟ್ಟುತ್ತಿದ್ದ ಕಾರಣ ವಿಕ್ಸ್ ಹಾಗೂ ಕರ್ಪೂರ ಪುಡಿಯನ್ನು ಮಿಕ್ಸ್ ಮಾಡಿ ಮಗುವಿನ ಮೂಗಿಗೆ ಸವರಿದ್ದಾರೆ. ದುರಂತ ಅಂದರೆ ಅರ್ಧ ಅರ್ಧ ಗಂಟೆಗೂ ತಯಾರಿಸಿಟ್ಟಿದ್ದ ಈ ವಿಕ್ಸ್ ಕರ್ಪೂರ ಮಿಕ್ಸ್ ಸವರಿದ್ದಾರೆ. ಬಳಿಕ ಇದು ಶೀತಕ್ಕೆ ಅತ್ಯುತ್ತಮ, ನಮ್ಮ ಮಕ್ಕಳಿಗೆ ಇದೇ ಕೊಡುತ್ತಿದ್ದೇವು. ಆಗ ಆಸ್ಪತ್ರೆ ಎಲ್ಲಿತ್ತು? ಔಷಧಿ ಏನಿತ್ತು ಎಂದು ಪ್ರಶ್ನಿಸುತ್ತಾ ಮನೆ ಮದ್ದು ಒಂದೇ ದಿನದಲ್ಲಿ ಎಲ್ಲವನ್ನು ಗುಣಪಡಿಸುತ್ತೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಹಲವರು ಇದೇ ಮನೆ ಮದ್ದು ಸೂಚಿಸಿದ ಕಾರಣ ಪೋಷಕರು ಕೊಂಚ ನಿರಾಳರಾಗಿದ್ದಾರೆ. ಜುಲೈ 13ರಂದು ಮಗುವಿನ ಮೂಗಿಗೆ ಈ ಮಿಕ್ಸ್ ಸವರಲಾಗಿದೆ. ಅದೇ ದಿನ ಸಂಜೆಯಾಗುತ್ತಿದ್ದಂತೆ ಮಗು ತೀವ್ರ ಅಸ್ವಸ್ಥಗೊಂಡಿದೆ. ಉಸಿರಾಟದ ಸಮಸ್ಯೆ ಎದುರಿಸಿದೆ. ಹೀಗಾಗಿ ಪೋಷಕರು ಆತಂಕಗೊಂಡಿದ್ದಾರೆ. ಚೆನ್ನೈನ ಎಗ್ಮೋರ್ ಮಕ್ಕಳ ಆಸ್ಪತ್ಪೆ ಮಗುವನ್ನು ಕರೆದೊಯ್ದಿದ್ದಾರೆ.
ತೀವ್ರ ಅಸ್ವಸ್ಥಗೊಂಡ ಮಗು ಆಸ್ಪತ್ರೆ ದಾಖಲು
ಮಗುವನ್ನು ತಪಾಸಣೆ ನಡೆಸಿದ ವೈದ್ಯರು ತಕ್ಷಣವೇ ಐಸಿಯುವಿಗೆ ದಾಖಲಿಸಲು ಸೂಚಿಸಿದ್ದಾರೆ. ಮಗು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲಿದೆ. ಜುಲೈ 16ರಂದು ಚಿಕಿತ್ಸೆ ಫಲಕಾರಿಯಾಗಿ ಮಗು ಮೃತಪಟ್ಟಿದೆ. ಇತ್ತ ವೈದ್ಯರು ಪೋಷಕರು ಹಾಗೂ ಕುಟುಂಬಸ್ಥರನ್ನು ತರಾಟೆಗಗೆ ತೆಗೆದುಕೊಂಡಿದ್ದಾರೆ. ಸೂಕ್ತ ಮಾಹಿತಿ ಇಲ್ಲದೆ, ಸಿಕ್ಕ ಸಿಕ್ಕ ಮನೆ ಮದ್ದುಗಳನ್ನು ಮಗುವಿನ ಮೇಲೆ ಪ್ರಯೋಗ ಮಾಡಬೇಡಿ ಎಂದು ಆಕ್ರೋಶಗೊಂಡಿದ್ದಾರೆ.
ಕುಟುಂಬಸ್ಥರ ಮೇಲೆ ಕೇಸ್ ದಾಖಲು
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆಸ್ಪತ್ಪೆಗೆ ಆಗಮಿಸಿದ್ದಾರೆ. ಇಡೀ ಕುಟುಂಬದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮರಣತ್ತೋತರ ಪರೀಕ್ಷೆ ಬಳಿಕ ತನಿಖೆ ಮುಂದುವರಿಯಲಿದೆ. ಮಗುವಿನ ಸಾವಿಗೆ ಶೀತದಿಂದ ಆದ ಉಸಿರಾಟದ ಸಮಸ್ಯೆಯೇ, ವಿಕ್ಸ್ ಹಾಗೂ ಕರ್ಪೂ ಮಿಕ್ಸ್‌ನಿಂದ ಆದ ಸಮಸ್ಯೆ ಅಥವಾ ಪೋಷಕರು ಅತೀಯಾಗಿ ಮನೆ ಮದ್ದುವನ್ನು ನಂಬಿ ಮಗುವಿನ ಆರೋಗ್ಯ ನಿರ್ಲಕ್ಷಿಸಿದರೆ ಅನ್ನೋದು ತನಿಖೆ ನಡೆಯುತ್ತಿದೆ.
ಮನೆ ಮದ್ದು ಕುರಿತು ವೈದ್ಯರ ಎಚ್ಚರ
ಮಕ್ಕಳ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ವೈದ್ಯರು ಹೇಳಿದ್ದಾರೆ. ಪ್ರತಿಯೊಂದು ಮಗುವಿನ ಆರೋಗ್ಯ ಹಾಗೂ ಅದರ ಸಮಸ್ಯೆಗಳು ಭಿನ್ನವಾಗಿರುತ್ತದೆ. ಹೀಗಾಗಿ ಸರಿಯಾಗಿ ಗೊತ್ತಿಲ್ಲದ, ತಪ್ಪು ಮಾಹಿತಿಗಳ ಮನೆ ಮದ್ದು ಪ್ರಯೋಗ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೆಲವರಿಗೆ ಗುಣವಾಗಿರುವ ಮನೆ ಮದ್ದು ಮತ್ತೊಬ್ಬರಿಗೆ ಆಗದೇ ಇರಬಹುದು. ಹೀಗಾಗಿ ಮೊದಲು ಮಕ್ಕಳ ವೈದ್ಯರ ಸಂಪರ್ಕಿಸಿ. ಅನಾರೋಗ್ಯಕ್ಕೆ ಸೂಕ್ತ ಕಾರಣ ತಿಳಿದುಕೊಳ್ಳಿ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ