ಅತೀ ನಂಬಿಕೆಯೇ ಜೀವಕ್ಕೆ ಎರವಾಯ್ತು: ನೂರಾರು ಹಾವು ರಕ್ಷಿಸಿದ್ದ ವ್ಯಕ್ತಿಗೆ ಹಾವಿನಿಂದಲೇ ಸಾವು

Published : Jul 17, 2025, 05:26 PM ISTUpdated : Jul 17, 2025, 05:37 PM IST
Snake Catcher killed by snake bite

ಸಾರಾಂಶ

Snake Rescuer Tragic End: ನೂರಾರು ಹಾವುಗಳನ್ನು ರಕ್ಷಿಸಿದ್ದ ವ್ಯಕ್ತಿ ಹಾವು ಕಚ್ಚಿ(Snake bite) ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದಲ್ಲಿ(Madhya Pradesh) ನಡೆದಿದೆ.

ಕೆಲವೊಮ್ಮೆ ಅತೀಯಾದ ಆತ್ಮವಿಶ್ವಾಸವೇ ದೊಡ್ಡ ಅನಾಹುತವನ್ನು ತಂದಿಡಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ. ಹಾವು ರಕ್ಷಣೆಗೆ ಫೇಮಸ್ ಆಗಿದ್ದ ಹಾವು ಪ್ರೇಮಿಯೊಬ್ಬ ಹಾವಿನಿಂದಲೇ ತನ್ನ ಬದುಕು ಅಂತ್ಯ ಮಾಡಿಕೊಂಡಿದ್ದಾನೆ. ಹೌದು, ಆ ಊರಿನಲ್ಲಿ ಯಾರದೇ ಮನೆಗೆ ಹಾವು ಬರಲಿ ಮೊದಲು ಈತನಿಗೆ ಕರೆ ಬರುತ್ತಿತ್ತು, ಹೀಗೆ ಹಾವಿದ್ದಲ್ಲಿಗೆ ಹೋಗುತ್ತಿದ್ದ ಆತ ಹಾವುಗಳನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರುತ್ತಿದ್ದ. ಮನೆ ಅಂಗಡಿ, ವಸತಿ ಪ್ರದೇಶಗಳು ಹೀಗೆ ಹಾವು ನುಸುಳಿದ ಯಾವುದೇ ಪ್ರದೇಶವಿರಲಿ ಅಲ್ಲಿಗೆ ಹೋಗಿ ಆತ ಹಾವುಗಳನ್ನು ರಕ್ಷಿಸುತ್ತಿದ್ದ. ಆದರೆ ಹೀಗೆ ಹಾವುಗಳನ್ನು ರಕ್ಷಿಸುತ್ತಿದ್ದ ಈತ ಹಾವಿನ ಬಗ್ಗೆ ಸ್ವಲ್ಪ ಅತಿ ಎನಿಸುವ ನಿರ್ಲಕ್ಷ್ಯವನ್ನೇ ತೋರಿದ್ದು ಹಾವಿನಿಂದಲೇ ಕಚ್ಚಿಸಿಕೊಂಡು ಪ್ರಾಣ ಬಿಟ್ಟಿದ್ದಾನೆ.

ಅಂದಹಾಗೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ರಾಘೋಗಢದ ಕತ್ರಾ ಮೊಹಲ್ಲಾದಲ್ಲಿ, ಇಲ್ಲಿನ ನಿವಾಸಿ ದೀಪಕ್ ಮಹಾಬರ್ ಸ್ವಯಂಪ್ರೇರಣೆಯಿಂದಲೇ ನೂರಾರು ಹಾವುಗಳನ್ನು ರಕ್ಷಣೆ ಮಾಡಿದ್ದರು. ಈತನಿಗೆ ವರ್ಷದಲ್ಲಿ ಕಡಿಮೆ ಎಂದರೂ ನೂರಕ್ಕೂ ಹೆಚ್ಚು ಕರೆಗಳು ಹಾವು ರಕ್ಷಣೆಗಾಗಿ ಬರುತ್ತಿದ್ದವು. ಅದೇ ರೀತಿ ಕಳೆದ ಸೋಮವಾರ ಮಧ್ಯಾಹ್ನದ ನಂತರ ಅವರಿಗೆ ರಾಘೋಗಢದ ಬರ್ಬತ್‌ಪುರ್‌ ನಿವಾಸಿಯೊಬ್ಬರು ಕರೆ ಮಾಡಿ ಮನೆಗೆ ಹಾವು ಬಂದಿದೆ. ಬಂದು ಅದನ್ನು ಹೊರತೆಗೆಯುವಂತೆ ಕರೆ ಮಾಡಿದ್ದಾರೆ.

ಹೀಗಾಗಿ ಅವರು ಕೂಡಲೇ ಹಾವಿನ ರಕ್ಷಣೆಗಾಗಿ ಆ ಸ್ಥಳಕ್ಕೆ ತೆರಳಿದ್ದು, ಹಾವನ್ನು ರಕ್ಷಣೆ ಕೂಡ ಮಾಡಿದ್ದಾರೆ, ಇದೇ ಸಮಯದಲ್ಲಿ ಅವರಿಗೆ ತಮ್ಮ ಮಗನ ಶಾಲೆ ಅವಧಿ ಮುಗಿದಿದ್ದು, ನೆನಪಾಗಿ ತಾವು ರಕ್ಷಿಸಿದ ಹಾವನ್ನು ಚೀಲದಲ್ಲಿ ತುಂಬಿಸಿ ಬೇರೆಡೆ ಬಿಡುವ ಬದಲು ತಮ್ಮ ಕೊರಳಿಗೆ ಮಾಲೆಯಂತೆ ಹಾಕಿಕೊಂಡು ಅವರು ತಮ್ಮ ಬೈಕ್‌ನಲ್ಲಿ ಮಗನನ್ನು ಕರೆದುಕೊಂಡು ಬರಲು ಹೋಗಿದ್ದಾರೆ. ಹಾಗೂ ಮಗನನ್ನು ಕರೆದುಕೊಂಡು ಮನೆಗೆ ಬಂದಿದ್ದಾರೆ. ಆಗಲೂ ಹಾವು ಇವರ ಕೊರಳಲ್ಲೇ ಇದ್ದು,ಅವರ ಕೈಗೆ ಕಚ್ಚಿದೆ. ಮರುದಿನ ಬೆಳಗ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ದೀಪಕ್ ಮಹಾಬರ್ ಸಾವನ್ನಪ್ಪಿದ್ದಾರೆ.

ಹಾವು ಅವರಿಗೆ ಕಚ್ಚುವ ಮೊದಲು ಹಾವನ್ನು ಅವರು ಕೊರಳಿಗೆ ಸುತ್ತಿಕೊಂಡು ಬೈಕ್‌ನಲ್ಲಿ ಕುಳಿತಿರುವ ದೃಶ್ಯವನ್ನು ಅವರ ಸ್ನೇಹಿತ ಮಾಧ್ಯಮವೊಂದಕ್ಕೆ ತೋರಿಸಿದ್ದಾರೆ. ಹಾವು ಕಡಿದ ಕೂಡಲೇ ಮಹಾಬರ್ ಅವರು ತಮ್ಮ ಸ್ನೇಹಿತನಿಗೆ ಕರೆ ಮಾಡಿದ್ದಾರೆ. ಬಳಿಕ ಸ್ನೇಹಿತ ಅವರನ್ನು ರಾಘೊಗಢದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಗುನಾದ ಜಿಲ್ಲಾಸ್ಪತ್ರೆಗೆ ಅವರನ್ನು ಕರೆದೊಯ್ದು ದಾಖಲಿಸಲಾಗಿದೆ. ಸಂಜೆಯ ವೇಳೆಗೆ ಅವರ ಪರಿಸ್ಥಿತಿ ಸುಧಾರಿಸಿದಂತೆ ಕಂಡಿದ್ದು, ಅಲ್ಲಿಂದ ಎದ್ದು ಅವರು ಮನೆಗೆ ಬಂದಿದ್ದಾರೆ.

ಆದರೆ ಅಮದು ರಾತ್ರಿ ಅವರ ಆರೋಗ್ಯ ಹಠಾತ್ ಆಗಿ ಕೆಟ್ಟಿದ್ದು, ಕೂಡಲೇ ಅವರ ಕುಟುಂಬ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ 4 ಗಂಟೆಗೆ ಅವರು ಸಾವನ್ನಪ್ಪಿದ್ದಾರೆ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಕೊಡಲಾಗಿದೆ.

ದೀಪಕ್ ಮಹಾಬರ್ ಅವರು ಜೆಪಿ ವಿಶ್ವವಿದ್ಯಾಲಯದಲ್ಲಿ ಹಾವು ಹಿಡಿಯುವವರಾಗಿ ಕೆಲಸ ಮಾಡುತ್ತಿದ್ದರು ಮತ್ತು ಸಂಕಷ್ಟದ ಕರೆಗಳಿಗೆ ಸ್ವಯಂಪ್ರೇರಣೆಯಿಂದ ಸ್ಪಂದಿಸುವ ಮೂಲಕ ಆ ಪ್ರದೇಶದಲ್ಲಿ ವ್ಯಾಪಕವಾಗಿ ಹೆಸರುವಾಸಿಯಾಗಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ, ಅವರು ನೂರಾರು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದು, ತಮ್ಮ ಈ ಕೆಲಸಗಳಿಗೆ ಅವರು ಯಾವುದೇ ಪ್ರತಿಫಲವನ್ನು ಸ್ವೀಕರಿಸುತ್ತಿರಲಿಲ್ಲ.

ಯಾರಾದರೂ ಹಾವಿನ ಬಗ್ಗೆ ಕರೆ ಮಾಡಿದಾಗ ಅವರು ಕೂಡಲೇ ಪ್ರತಿಕ್ರಿಯಿಸುತ್ತಿದ್ದರು, ಈ ಬಾರಿಯೂ ಹಾಗೆಯೇ ಅವನು ಹೋಗಿ, ಹಾವನ್ನು ಹಿಡಿದು, ಮನೆಗೆ ಹಿಂದಿರುಗುತ್ತಿದ್ದರು. ಆದರೆ ಚಲಿಸುವ ಬೈಕ್‌ನಲ್ಲಿ ಹಾವು ಅವನಿಗೆ ಕಚ್ಚಿತು. ಚಿಕಿತ್ಸೆಯ ನಂತರ ಸಂಜೆ ಅವನ ಸ್ಥಿತಿ ಸುಧಾರಿಸಿತ್ತು. ಆದರೆ ನಂತರ ರಾತ್ರಿಯ ಸಮಯದಲ್ಲಿ ಮತ್ತೆ ಆರೋಗ್ಯ ಹದಗೆಟ್ಟಿತು ಮಧ್ಯಾಹ್ನ 12 ರಿಂದ 1 ಗಂಟೆಯ ನಡುವೆ ಹಾವು ಅವನನ್ನು ಕಚ್ಚಿದ್ದು, ಮುಂಜಾನೆ 4 ಗಂಟೆಯ ಸುಮಾರಿಗೆ ಆತ ಮೃತಪಟ್ಟಿದ್ದಾನೆ ಎಂದು ಅವರ ಸ್ನೇಹಿತ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ