Operation Sindoor: ಅಣಕು ಡ್ರಿಲ್‌ ನೆಪದಲ್ಲಿ ಪಾಕ್‌ ದಿಕ್ಕು ತಪ್ಪಿಸಿದ ಪ್ರಧಾನಿ ಮೋದಿ

Published : May 08, 2025, 05:56 AM IST
Operation Sindoor: ಅಣಕು ಡ್ರಿಲ್‌ ನೆಪದಲ್ಲಿ ಪಾಕ್‌ ದಿಕ್ಕು ತಪ್ಪಿಸಿದ ಪ್ರಧಾನಿ ಮೋದಿ

ಸಾರಾಂಶ

ಏ.22 ರಂದು ಪಹಲ್ಗಾಂನಲ್ಲಿ ಭಾರತೀಯ ಮಹಿಳೆಯರ ಸಿಂಧೂರವನ್ನು ಅಪವಿತ್ರಗೊಳಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತವು 12 ದಿನಗಳ ಅತ್ಯಂತ ಯೋಜಿತ ಲೆಕ್ಕಾಚಾರ ಹಾಕಿ ದಾಳಿ ಮಾಡಿದ್ದು ಈಗ ಸಾಬೀತಾಗಿದೆ.

ನವದೆಹಲಿ (ಮೇ.08): ಏ.22 ರಂದು ಪಹಲ್ಗಾಂನಲ್ಲಿ ಭಾರತೀಯ ಮಹಿಳೆಯರ ಸಿಂಧೂರವನ್ನು ಅಪವಿತ್ರಗೊಳಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತವು 12 ದಿನಗಳ ಅತ್ಯಂತ ಯೋಜಿತ ಲೆಕ್ಕಾಚಾರ ಹಾಕಿ ದಾಳಿ ಮಾಡಿದ್ದು ಈಗ ಸಾಬೀತಾಗಿದೆ. ಅಲ್ಲದೆ, ಮೇ 7ರಂದು ಭಾರತದಲ್ಲಿ ಅಣಕು ಯುದ್ಧದ ತಾಲೀಮು ನಡೆಸುವ ಘೋಷಣೆ ಮಾಡಿದ್ದ ಮೋದಿ, ಇದೇ ನೆಪದಲ್ಲಿ ಪಾಕಿಸ್ತಾನದ ಹಾದಿ ತಪ್ಪಿಸಿದ್ದು ಸಾಬೀತಾಗಿದೆ.

‘ಆಪರೇಷನ್ ಸಿಂದೂರ್ ಅನ್ನು ರೂಪಿಸಲು ಸುಮಾರು 8–9 ದಿನಗಳು ಬೇಕಾಯಿತು, ಅದೇ ಕಾರ್ಯಾಚರಣೆಯ ಅಡಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಘಟಕಗಳು ಮತ್ತು ಶಿಬಿರಗಳನ್ನು ಗುರಿಯಾಗಿಸುವ ಕಾರ್ಯತಂತ್ರವನ್ನು ಪರಿಷ್ಕರಿಸಲು ಇನ್ನೂ 3-4 ದಿನ ಬೇಕಾಯಿತು. ಅತ್ಯಂತ ಗುಪ್ತವಾಗಿ ಈ ಕಾರ್ಯಾಚರಣೆ ನಡೆಸಬೇಕೆಂಬ ಉದ್ದೇಶ ಇರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಸತತ 12 ದಿನಗಳ ಕಾಲ ಉನ್ನತ ರಕ್ಷಣಾ ಅಧಿಕಾರಿಗಳು ಹಾಗೂ ಕೇಂದ್ರ ಸಚಿವರ ಜತೆ ಸಭೆ ನಡೆಸಿದರು’ ಎಂದು ಮೂಲಗಳು ಹೇಳಿವೆ.‘

ಶತ್ರುಗಳು ಮತ್ತು ಅದರ ಗುಪ್ತಚರ ಜಾಲಗಳನ್ನು ಸಂಪೂರ್ಣ ಗೊಂದಲದ ಸ್ಥಿತಿಯಲ್ಲಿಡಲು ಭಾರತ ನಿರಂತರವಾಗಿ ತನ್ನ ಕಾರ್ಯತಂತ್ರ ರೂಪಿಸಿತು. ಮೇ 7ರಂದು ಯುದ್ಧತಾಲೀಮು ನಡೆಸುವುದಾಗಿ ಘೋಷಿಸಿತು. ಆಗ ಪಾಕಿಸ್ತಾನವು ಯುದ್ಧತಾಲೀಮು ಮುಗಿವವರೆಗೆ ತನ್ನ ಮೇಲೆ ದಾಳಿ ಆಗದು ಎಂದು ಭಾವಿಸಿತ್ತು. ಆದರೆ ಯುದ್ಧತಾಲೀಮಿಗೆ 1 ದಿನ ಮುನ್ನವೇ ತಡರಾತ್ರಿ ಏಕಾಏಕಿ ಪಾಕ್‌ ಉಗ್ರ ತಾಣಗಳ ಮೇಳೆ ಭಾರತ ವಾಯುದಾಳಿ ಮಾಡಿತು. ಪಾಕಿಸ್ತಾನವು ನಿರೀಕ್ಷೆಯೇ ಮಾಡದಿದ್ದ ಪೆಟ್ಟು ನೀಡಿತು. ಇದು ಮೋದಿ ತಂತ್ರಗಾರಿಕೆ ಆಗಿತ್ತು. 

‘ಆಪರೇಷನ್‌ ಸಿಂದೂರ’ ಭಯೋತ್ಪಾದನೆ ಬೆಂಬಲಿಸುವ ದೇಶಗಳಿಗೆ ಪಾಠ: ಖಾದರ್‌

ಈ ಹಿಂದೆ ಬಾಲಾಕೋಟ್‌ ದಾಳಿ ವೇಳೆಯೂ ಮೋದಿ ಇದೇ ರೀತಿ ಪಾಕ್‌ ಗಮನವನ್ನು ಬೇರೆಡೆ ಸೆಳೆದು ದಾಳಿ ಕೈಗೊಂಡಿದ್ದರು’ ಎಂದು ಮೂಲಗಳು ಹೇಳಿವೆ. ‘ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ಅತ್ಯಂತ ಗಮನಾರ್ಹವಾದ ಸಂಗತಿಯೆಂದರೆ, ಪ್ರಧಾನಿ ನರೇಂದ್ರ ಮೋದಿ ಈ ಎಲ್ಲಾ ಕಾರ್ಯಾಚರಣೆಗಳ ಸಮಯದಲ್ಲಿ ರಾತ್ರಿಯಿಡೀ ಮೇಲ್ವಿಚಾರಣೆ ನಡೆಸುತ್ತಿದ್ದರು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು ದೃಢನಿಶ್ಚಯ ಹೊಂದಿದ್ದರು’ ಎಂದು ಅವು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು