ಆಪರೇಶನ್‌ ಸಿಂದೂರ ಭಾಗ-2: ಪಾಕಿಸ್ತಾನದ ಆಕ್ರಮಣಕ್ಕೆ ಭಾರತ ಪ್ರತೀಕಾರ

Published : May 09, 2025, 07:43 AM IST
ಆಪರೇಶನ್‌ ಸಿಂದೂರ ಭಾಗ-2: ಪಾಕಿಸ್ತಾನದ ಆಕ್ರಮಣಕ್ಕೆ ಭಾರತ ಪ್ರತೀಕಾರ

ಸಾರಾಂಶ

ಭಾರತದ ಆಪರೇಶನ್ ಸಿಂದೂರದಿಂದ ತನ್ನ ಉಗ್ರ ನೆಲೆಗಳನ್ನು ಕಳೆದುಕೊಂಡು ತೀವ್ರ ಮುಖಭಂಗಕ್ಕೊಳಗಾರಿರುವ ಪಾಕಿಸ್ತಾನವು ಬುಧವಾರ ರಾತ್ರಿಯಿಂದೀಚೆಗೆ ಭಾರತದ 15 ನಗರಗಳ ಮಿಲಿಟರಿ ನೆಲೆಗಳ ಮೇಲೆ ರಾಕೆಟ್‌ ಮತ್ತು ಆತ್ಮಾಹುತಿ ಡ್ರೋನ್‌ಗಳನ್ನು ಬಳಸಿ ಪ್ರತಿದಾಳಿ ನಡೆಸುವ ವಿಫಲ ಯತ್ನ ನಡೆಸಿದೆ. 

ನವದೆಹಲಿ (ಮೇ.09): ಭಾರತದ ಆಪರೇಶನ್ ಸಿಂದೂರದಿಂದ ತನ್ನ ಉಗ್ರ ನೆಲೆಗಳನ್ನು ಕಳೆದುಕೊಂಡು ತೀವ್ರ ಮುಖಭಂಗಕ್ಕೊಳಗಾರಿರುವ ಪಾಕಿಸ್ತಾನವು ಬುಧವಾರ ರಾತ್ರಿಯಿಂದೀಚೆಗೆ ಭಾರತದ 15 ನಗರಗಳ ಮಿಲಿಟರಿ ನೆಲೆಗಳ ಮೇಲೆ ರಾಕೆಟ್‌ ಮತ್ತು ಆತ್ಮಾಹುತಿ ಡ್ರೋನ್‌ಗಳನ್ನು ಬಳಸಿ ಪ್ರತಿದಾಳಿ ನಡೆಸುವ ವಿಫಲ ಯತ್ನ ನಡೆಸಿದೆ. ಪಾಕಿಸ್ತಾನದ ಈ ದುಸ್ಸಾಹಸಕ್ಕೆ ಭಾರತ ಸೂಕ್ತ ಪ್ರತ್ಯುತ್ತರ ನೀಡಿದ್ದು, ಅವುಗಳನ್ನು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ತಟಸ್ಥಗೊಳಿಸಿದೆ ಹಾಗೂ ಕೆಲವು ಪಾಕಿಸ್ತಾನದ ಪ್ರಮುಖ ವಾಯುರಕ್ಷಣಾ ಘಟಕಗಳನ್ನು ನಾಶ ಮಾಡಿದೆ.

ಭಾರತವು ಕರಾಚಿ, ಸಿಯಾಲ್‌ ಕೋಟ್‌ ಸೇರಿ ನೆರೆಯ ದೇಶದ 3 ನಗರದಲ್ಲಿರುವ ಚೀನಾ ಅಭಿವೃದ್ಧಿಪಡಿಸಿದ ಎಚ್‌ಕ್ಯು-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಹಾನಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ‘ಆಪರೇಶನ್‌ ಸಿಂದೂರ ಭಾಗ-2’ ಎಂದು ಪರಿಗಣಿಸಲಾಗಿದೆ. ‘ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದರೆ ನಾವೂ ಅದಕ್ಕೆ ಪ್ರತೀಕಾರ ಕೈಗೊಳ್ಳುತ್ತೇವೆ’ ಎಂದು ಭಾರತ ಹೇಳಿತ್ತು. ಈಗ ಅದಕ್ಕೆ ಅನುಗುಣವಾಗಿ ತನ್ನ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಯತ್ನಿಸಿದ್ದಕ್ಕೆ ಭಾರತ ಕೂಡ ಪಾಕ್‌ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ. ಭಾರತ ಹೀಗೆ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ.

ಭಾರತದ ದಾಳಿಗೆ ಲಾಹೋರ್‌, ಕರಾಚಿ ತತ್ತರ: ಪಾಕ್‌ನಾದ್ಯಂತ ಯುದ್ಧದ ಕಾರ್ಮೋಡ

ಆಪರೇಶನ್‌ ಸಿಂದೂರ ಭಾಗ-2: ಪ್ರತೀಕಾರಕ್ಕೆ ಹಾತೊರೆಯುತ್ತಿರುವ ಪಾಕಿಸ್ತಾನ ಗುರುವಾರ ಶ್ರೀನಗರ, ಚಂಡೀಗಢ ಸೇರಿ ಉತ್ತರ ಹಾಗೂ ಪಶ್ಚಿಮ ಭಾರತದ 15 ನಗರಗಳ ಮಿಲಿಟರಿ ನೆಲೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಹಲವು ಕ್ಷಿಪಣಿ ಮತ್ತು ಆತ್ಮಾಹುತಿ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಲು ಯತ್ನಿಸಿದೆ. ಪಾಕಿಸ್ತಾನದ ಈ ದಾಳಿಗೆ ಮೊದಲೇ ಸಿದ್ಧವಾಗಿದ್ದ ಭಾರತವು ಗಡಿದಾಟಿ ಬಂದ ಎಲ್ಲ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಿತು. ಇದಕ್ಕಾಗಿ ರಷ್ಯಾನಿರ್ಮಿತ ಎಸ್‌-400 ಏರ್‌ ಡಿಫೆನ್ಸ್‌ ಸಿಸ್ಟಮ್‌ ಬಳಸಿಕೊಂಡಿತು. ಬಳಿಕ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ/ಘಟಕಗಳನ್ನು ನಾಶಮಾಡಲು ಹಾರ್ಪಿ ಡ್ರೋನ್‌ಗಳನ್ನು ಬಳಸಿತು ಎಂದು ಮೂಲಗಳು ಹೇಳಿವೆ.

ರಕ್ಷಣಾ ಸಚಿವಾಲಯ ಹೇಳಿದ್ದೇನು?: ಭಾರತಸ ರಕ್ಷಣಾ ಸಚಿವಾಲಯ ಕೂಡ ಈ ಬಗ್ಗೆ ಹೇಳಿಕೆ ನೀಡಿದೆ. ’ಅವಂತಿಪುರ, ಶ್ರೀನಗರ, ಜಮ್ಮು, ಪಠಾನ್‌ಕೋಟ್‌, ಅಮೃತ್‌ಸರ, ಕಪುರ್ತಾಲ, ಜಲಂದರ್‌, ಲುಧಿಯಾನ, ಅದಾಂಪುರ, ಭಟಿಂಡ, ಚಂಡೀಗಢ, ನಾಲ್‌, ಫಲೋಡಿ, ಉತ್ತರಾಲಿ ಮತ್ತು ಭುಜ್‌ನಗರಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗ್ಗೆ ಹಲವು ರಾಕೆಟ್‌ ಮತ್ತು ಆತ್ಮಾಹುತಿ ಡ್ರೋನ್‌ಗಳನ್ನು ಹಾರಿಬಿಟ್ಟಿತ್ತು. ಇವುಗಳನ್ನು ಇಂಟಿಗ್ರೇಟೆಡ್‌ ಕೌಂಟರ್‌ ಅನ್‌ಮ್ಯಾನ್‌ಡ್‌ ಏರ್‌ಕ್ರಾಫ್ಟ್‌ ಸಿಸ್ಟಮ್ಸ್‌ ಬಳಸಿ ಹೊಡೆದು ಹಾಕಲಾಗಿದೆ’ ಎಂದು ಮಾಹಿತಿ ನೀಡಿದೆ. ಭಾರತದ ಪ್ರತಿದಾಳಿಗೆ ಪತನವಾದ ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್‌ಗಳ ಬಿಡಿಭಾಗಗಳು ಹಲವೆಡೆ ಪತ್ತೆಯಾಗಿವೆ.

ಭಾರತದಿಂದಲೂ ಪ್ರತಿದಾಳಿ: ಏತನ್ಮಧ್ಯೆ, ಗುರುವಾರ ಬೆಳಗ್ಗೆ ಭಾರತವು ಪಾಕಿಸ್ತಾನದ ಏರ್‌ಡಿಫೆನ್ಸ್‌ ಸಿಸ್ಟಂ ಅನ್ನು ಗುರಿಯಾಗಿಟ್ಟುಕೊಂಡು 10ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಭಾರೀ ಹಾನಿ ಮಾಡಿದೆ. ‘ಪಾಕಿಸ್ತಾನವು ಯಾವ ಗುರಿ, ಯಾವ ಉದ್ದೇಶವನ್ನಿಟ್ಟುಕೊಂಡು, ಯಾವ ತೀವ್ರತೆಯಲ್ಲಿ ದಾಳಿ ನಡೆಸಿತ್ತೋ ಅದೇ ಗುರಿ, ಅದೇ ಉದ್ದೇಶ, ಅದೇ ತೀವ್ರತೆಯಲ್ಲಿ ಭಾರತವೂ ಪ್ರತಿ ದಾಳಿ ನಡೆಸಿದೆ’ ಎಂದು ಸೇನೆ ಸ್ಪಷ್ಟಪಡಿಸಿದೆ.

ಪಾಕ್‌ ಪಾಲಿಗೆ ರಷ್ಯಾದ ಎಸ್‌-400 ‘ಸುದರ್ಶನ ಚಕ್ರ’: ಭಾರತವು ಅಳವಡಿಸಿಕೊಂಡಿರುವ ರಷ್ಯಾದ ಎಸ್‌-400 ಏರ್‌ಡಿಫೆನ್ಸ್‌ ಸಿಸ್ಟಮ್ಸ್‌ ಪಾಕಿಸ್ತಾನದ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದೆ. ಭಾರತದ 15 ನಗರಗಳ ಮಿಲಿಟರಿ ಮತ್ತು ರೇಡಾರ್‌ ವ್ಯವಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಕ್ಷಿಪಣಿ, ಡ್ರೋನ್‌ ದಾಳಿ ನಡೆಸಿದರೂ ಅವುಗಳನ್ನೆಲ್ಲ ಆಗಸದಲ್ಲೇ ಕರಾರುವಕ್ಕಾಗಿ ಹೊಡೆದುರುಳಿಸುವಲ್ಲಿ ಈ ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿದೆ. ಇದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವನ್ನುಂಟುಮಾಡಿದೆ. 'ಸುದರ್ಶನ ಚಕ್ರ' ಎಂದೇ ಕರೆಯಲ್ಪಡುವ ಈ ಏರ್‌ಡಿಫೆನ್ಸ್‌ ಸಿಸ್ಟಮ್‌ ಭಾರತದ ಪಾಲಿನ ರಕ್ಷಾ ಕವಚವಾಗಿದೆ. ವಿಶ್ವದಲ್ಲೇ ಅತ್ಯಾಧುನಿಕ ಎನ್ನಲಾದ ಈ ರಕ್ಷಣಾ ವ್ಯವಸ್ಥೆ 600 ಕಿ.ಮೀ.ದೂರದಿಂದಲೇ ತನ್ನನ್ನ ಬರುವ ಗುರಿಯನ್ನು ಗುರುತಿಸಿ, 400 ಕಿ.ಮೀ.ದ ದೂರದಲ್ಲೇ ಅವುಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಭಾರತ ಇಂಥ ನಾಲ್ಕು ಎಸ್‌-400 ಡಿಫೆನ್ಸ್‌ ಸಿಸ್ಟಮ್ ಅನ್ನು ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ರಾಜಸ್ಥಾನ ಮತ್ತು ಗುಜರಾತ್‌ನ ರಕ್ಷಣೆಗಾಗಿ ನಿಯೋಜಿಸಿದೆ.

ಆಪರೇಷನ್‌ ಸಿಂದೂರ ಮುಗಿದಿಲ್ಲ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

ಲಾಹೋರ್‌ನಲ್ಲಿ ಭಾರತದ ಶೆಲ್‌ ಪತ್ತೆ?: ಆಪರೇಷನ್ ಸಿಂದೂರಕ್ಕೆ ಪ್ರತಿಕಾರವಾಗಿ ಪಾಕಿಸ್ತಾನವು ಪಂಜಾಬ್‌ ಮತ್ತು ಕಾಶ್ಮೀರ ಗಡಿಯಲ್ಲಿ ಅಪ್ರಚೋದಿತ ಶೆಲ್‌ ಮತ್ತು ಮೋರ್ಟಾರ್‌ ದಾಳಿ ತೀವ್ರಗೊಳಿಸಿದ್ದು, ಇದಕ್ಕೆ ಭಾರತ ಕೂಡ ತಕ್ಕ ಉತ್ತರ ನೀಡುತ್ತಿದೆ. ಭಾರತದ ಹಾರಿಸಿದ ಶೆಲ್‌ನ ಬಿಡಿಭಾಗಗಳು ಲಾಹೋರ್‌ನಲ್ಲೂ ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ